ಸೀರೆ ಎನ್ನುವ ಬೆರಗು: ಚಂದ್ರಮತಿ ಸೋಂದಾ ಸರಣಿ
ಜಗಳಕ್ಕೂ ಸೀರೆಗೂ ಏನು ಸಂಬಂಧ? ಸೀರೆಯ ಪ್ರಸ್ತಾಪ ಯಾಕಾಗಿ ಆಗುತ್ತದೆ? ಅವರಿಬ್ಬರ ಜಗಳಕ್ಕೆ ಮಾತ್ರ ಸೀರೆಯ ಪ್ರಸ್ತಾಪ ಸೀಮಿತವಲ್ಲ. ಕೆಲವೊಮ್ಮೆ ರಾಜಕಾರಣಿಗಳೂ ಹೀಗೆ ʻನಾನೇನು ಸೀರೆಯುಟ್ಟಿಲ್ಲʼ ಎಂದು ಹೇಳುವುದಿದೆ. ಹಾಗಾದರೆ ಸೀರೆ ಉಡುವುದು ಅವಮಾನವೇ? ಸೀರೆಗೂ ಪೌರುಷಕ್ಕೂ ಪರಸ್ಪರ ವಿರೋಧವೇ?
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೈದನೆಯ ಕಂತಿನಲ್ಲಿ ಸೀರೆಯ ಕುರಿತ ಬರಹ ನಿಮ್ಮ ಓದಿಗೆ