ಕನಸು ಸಾಕಿಕೊಂಡವರ ಕಣ್ಣ ದೀಪದೆದುರು…
ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ.
ಮಂಡಲಗಿರಿ ಪ್ರಸನ್ನ ಅವರ “ನಿದಿರೆ ಇರದ ಇರುಳು” ಗಜಲ್ ಸಂಕಲನಕ್ಕೆ ಡಾ. ರಮೇಶ ಅರೋಲಿ ಬರೆದ ಮುನ್ನುಡಿ