Advertisement

Tag: ನಾಗರಾಜ್‌ ಹೆತ್ತೂರು

ಕುಪ್ಪಳ್ಳಿಯಲ್ಲಿ ಕೆಟಿಎಸ್ ಜೊತೆ…

ಪೂರ್ಣಚಂದ್ರರ ಆತ್ಮೀಯರಲ್ಲೊಬ್ಬರಾದ ಕೆ.ಟಿ. ಅವರ ಖಾಸಾ ಗೆಳೆಯ ಕೂಡ. ವಿಪರ್ಯಾಸ ಎಂದರೆ ಇದೇ ನೋಡಿ, ಕುವೆಂಪು ತೀರಿಕೊಂಡಾಗ ಇದೇ ತೇಜಸ್ವಿ ಜತೆಗೂಡಿ ಕವಿಶೈಲದ ಕುವೆಂಪು ಸ್ಮಾರಕ ಕಲ್ಪನೆಯನ್ನು ಸಾಕಾರಗೊಳಿಸಿದ್ದವರು ಕೆ.ಟಿ. ಮುಂದೆ ತೇಜಸ್ವಿಯ ಸ್ಮಾರಕವನ್ನೂ ಸ್ವತಃ ಕೆ.ಟಿ. ನಿರ್ಮಾಣ ಮಾಡುತ್ತಾರೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ದುರಾದೃಷ್ಠವಶಾತ್ ತೇಜಸ್ವಿ ಸಾವು ಅವರ ಸ್ಮಾರಕ ಕಲ್ಪನೆಯನ್ನೂ ಕೆ.ಟಿ.ಯೇ ಮಾಡುವಂತಾಗಿದ್ದು ವಿಪರ್ಯಾಸ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಭದ್ರಾ ದಂಡೆಯಲ್ಲಿ ತೇಜಸ್ವಿಯೊಂದಿಗೆ ಮೀನು ಹಿಡಿದಿದ್ದು…

ಹೀಗೆ ತೇಜಸ್ವಿ ಮನೆ ಕಟ್ಟುವಾಗ ಪ್ರೊಫೆಸರ್ ಬಂದಿದ್ದರು. ತೇಜಸ್ವಿ ಹಕ್ಕಿಗಳನ್ನು ವೀಕ್ಷಿಸಲು ಬೈನಾಕುಲರ್ ಇಟ್ಟುಕೊಂಡಿದ್ದರು. ಹೀಗೆ ಒಂದು ದಿನ ಕಾರಿನಲ್ಲಿ ಎಲ್ಲರೂ ಹೋಗುತ್ತಿದ್ದೆವು. ಪ್ರೊಫೆಸರ್ ಬೈನಾಕ್ಯೂಲರನ್ನು ತೇಜಸ್ವಿಯಿಂದ ಪಡೆದುಕೊಂಡು ಪಕ್ಷಿ ನೋಡುತ್ತೇನೆ ಎಂದು ಪಡೆದುಕೊಂಡರು. ಸಾಕಷ್ಟು ಏನೇನೋ ಮಾಡಿದರೂ ಹಕ್ಕಿಗಳು ಪ್ರೊಫೆಸರ್‌ಗೆ ಹತ್ತಿರದಿಂದ ಕಾಣಿಸಲಿಲ್ಲ. ಇದರಿಂದ ಬೇಸತ್ತ ಪ್ರೊಫೆಸರ್. ‘ಇದ್ರಲ್ಲಿ ಏನೂ ಕಾಣೋದೆ ಇಲ್ವಲ್ರಿ’ ಎಂದು ತೇಜಸ್ವಿ ಕೈಗೆ ಕೊಟ್ಟರು. ತೇಜಸ್ವಿ ತೆಗೆದುಕೊಂಡು ಒಮ್ಮ ಕಾರಿನಿಂದ ಆಚೆ ವೀಕ್ಷಿಸಿ ‘ರೀ ಪ್ರೊಫೆಸರ್ ನಿಮ್ಗೆ ತಿ.. ಕಡಿಯುತ್ತಾ..ʼ ಎಂದರು. ನನಗೋ ನಗು ತಡೆದುಕೊಳ್ಳಲಾಗಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಮನೆ ಕಟ್ಟುವಾಗ ‘ಸೆಂಟರ್ ಲೈನ್’

ಮನೆ ಕಟ್ಟುವ ಕಾರ್ಯಕ್ರಮ ಪ್ರಾರಂಭವಾಯಿತು. ಒಂದು ದಿನ ಮೇಸ್ತ್ರಿ ಬಂದವನೇ, ‘ಸೆಂಟರ್ ಲೈನ್’ ಕೊಡಿ ಎಂದ.
ನನಗೋ ಹಾಗಂದರೆ ಏನು ಎಂದು ಗೊತ್ತಿಲ್ಲ. ತೇಜಸ್ವಿಯವರನ್ನು ಕೇಳಿದೆ. ‘ನನಗೂ ಗೊತ್ತಿಲ್ಲ ಶಿವ’ ಎಂದರು. ಬೇರೆಯವರನ್ನು ಕೇಳಿದರೆ ಎಲ್ಲಿ ಏನಂದುಕೊಳ್ಳುತ್ತಾರೋ ಎಂಬ ನಾಚಿಕೆ. ಮೇಸ್ತ್ರಿಯನ್ನು ಕರೆದು ಕೂರಿಸಿಕೊಂಡು ಒಂದು ವಾರ ತಡೆಯಿರಿ ಎಂದೆ. ಸಾಕಷ್ಟು ಪುಸ್ತಕ ರೆಫರ್ ಮಾಡಿಕೊಂಡೆ. ನಾನು ಕೂಡ ಎಂಜಿನಿಯರ್ ಓದಿದ್ದರಿಂದ ಬೇಗ ಕಂಡು ಹಿಡಿದುಕೊಂಡೆ. ಅವರ ಕಲ್ಪನೆಯಂತೆ ಮನೆ ಶುರು ಮಾಡಿ ಬೇಗವೇ ಮುಗಿಸಿದೆವು.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ತೇಜಸ್ವಿಯ ಫೋಟೋ ತೆಗೆಯಲಿಲ್ಲ…

ಹೀಗೆ ಮಾತನಾಡುತ್ತಿದ್ದಾಗ, ‘ಈ ಸರಣಿಗೆ ತೇಜಸ್ವಿ ಫೋಟೋ ಹಾಕಿಕೊಳ್ಳಬೇಕು, ಕತೆಗಾರ ಅಬ್ದುಲ್ ರಶೀದ್ ಸಾರ್, ನೀವು ತೆಗೆದಿರುವ ತೇಜಸ್ವಿ ಫೋಟೋ ಕೇಳುತ್ತಿದ್ದಾರೆ ಯಾವುದಾದರೂ ಕೊಡಿ’ ಎಂದೆ. ಅದಕ್ಕವರು ಒಂದು ಕ್ಷಣ ಯೋಚಿಸಿ ನಕ್ಕರು. ‘ಏಕೆ ಸಾರ್ ತೆಗೆದಿಲ್ಲವಾ….?’ ಎಂದು ಮತ್ತೆ ಕೇಳಿದೆ. ‘ಏ ಇಲ್ಲಾ ಕಣೋ ತೇಜಸ್ವಿ ಸಾವಿರಾರು ಫೋಟೋ ತೆಗೆದಿದ್ದಾರೆ. ನಾನೂ ಕೂಡ ತೆಗೆದಿದ್ದೇನೆ. ಎಂತೆಂಥಹವರ ಫೋಟೋ ತೆಗೆದಿದ್ದೇವೆ. ಆದರೆ ಎಂದೂ ನಮ್ಮ ನಮ್ಮ ಫೋಟೋಗಳನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More

ಕೆಟಿಎಸ್‌-ತೇಜಸ್ವಿ ಸ್ನೇಹಕ್ಕೆ ಕಾರಣರಾದವರು ಪ್ರೊಫೆಸರ್ ನಂಜುಂಡಸ್ವಾಮಿ

ತೇಜಸ್ವಿ ಜತೆ ಮಾತನಾಡುವುದೇ ಒಂದು ನವೀನ ಅನುಭವ. ಮತ್ತು ತನಗೆ ಗೊತ್ತಿಲ್ಲದ ಒಂದು ವಿಚಾರ ನೋಡಿದರೆ ಅಥವಾ ಗಮನಿಸಿದರೆ ಅವರು ಪಡುತ್ತಿದ್ದ ಅಚ್ಚರಿ, ಅಗಾಧತೆಯನ್ನು ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಹೊಸ ವಿಚಾರವನ್ನು ಕಾತರ, ಕುತೂಹಲದಿಂದ ನೋಡುವ ಅವರ ಕೌತುಕವೇ ಅವರನ್ನು ದೊಡ್ಡ ಮನುಷ್ಯನನ್ನಾಗಿಸಿತು. ಹೊಸತನ್ನು ಕಂಡಿದ್ದೇ ‘ಏ ನೋಡೋ ಶಿವ ಹೇಗಿದೆ!’ ಎಂದು ಅಚ್ಚರಿಯಿಂದ ನೋಡುವ ಆ ನೋಟವನ್ನು ನೆನಪಿಸಿಕೊಂಡರೇ ಅವರ ಜೀವನ ಪ್ರೀತಿಯ ಬಗ್ಗೆ ಕೌತುಕ ಹುಟ್ಟಿಸುತ್ತದೆ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್‌ ಹೆತ್ತೂರು ಕೃತಿ “ಶಿವ ಮೇಡ್‌ ಬೈ ತೇಜಸ್ವಿ”ಯ ಆಯ್ದ ಭಾಗ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ