ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಬೇಲೂರು ರಘುನಂದನ್ ಬರೆದ ಕಥೆ
ಶರಾಬು ಪಾಕೀಟು ಸಿಗೋದು ಶೆಟ್ರು ತೋಟದಿಂದ ಬರೋಬ್ಬರಿ ಐದು ಮೈಲಿ ದೂರ. ಮಳೆ ಬೇರೆ. ನಡ್ಕಂಡು ಹೋಗಿ ಇವಳು ಶರಾಬು ಕುಡ್ದು ಏಡಿ ಹಿಡಿದು ತರೋ ಹೊತ್ಗೆ ಕತ್ತಲು ಕವಿದಿರುತ್ತೆ. ಹಂಗಾದ್ರೆ ರಾತ್ರಿ ಮಿಣಕ ಮಿಣಕ ಅನ್ನೊ ದೀಪದ ಬೆಳಕಲ್ಲಿ ಒಲೆ ಮುಂದೆ ಹೋಗೋದು ಸಾಧ್ಯವಿಲ್ಲ ಅಂತ ಎಣಿಸಿ ಶೆಟ್ರ ಹೆಂಡ್ತಿ ಬರ ಬರ ಒಳಗೋದ್ಲು. ಅಟ್ಟದ ಮೇಲಿಟ್ಟಿದ್ದ ಶೆಟ್ರ ಬಾಟ್ಲಿಲಿ ಅರ್ಧ ಇನ್ನೊಂದು ಬಾಟ್ಲಿಗೆ ಸುರ್ಕಂಡು ಅಮ್ಮಯ್ಯಂಗೆ ತಂದುಕೊಟ್ಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೇಲೂರು ರಘುನಂದನ್ ಬರೆದ ಕತೆ ‘ಏಡಿ ಅಮ್ಮಯ್ಯ’