ಸ್ಯಾಂಕಿ ಟ್ಯಾಂಕ್ ಎಂಬ ಬೆಂಗಳೂರಿಗರ ಕಾಶಿ!: ದೀಪಾ ಫಡ್ಕೆ ಬರಹ
ಸ್ಯಾಂಕಿಯ ಇನ್ನೊಂದು ಮೂಲೆಗೆ ತಲುಪುವ ಹೊತ್ತಿಗೆ ನೀರಿನಲ್ಲಿರುವ ತುಂಡು ಮರದ ಮೇಲೆ ಈ ನೀರುಕಾಗೆಗಳದು ಸನ್ ಬೇದಿಂಗ್ ನಡೆಯುತ್ತಿರುತ್ತದೆ. ಎರಡೂ ರೆಕ್ಕೆಗಳನ್ನು ಇಷ್ಟಗಲಕ್ಕೆ ಬಿಡಿಸಿಕೊಂಡು ತಿರುಗುವ ಟೇಬಲ್ ಫ್ಯಾನಿನಂತೇ ಸೂರ್ಯನ ಮುಂದೆ ಮೈಯೊಣಗಿಸಿಕೊಂಡು ನಿಂತಿರುತ್ತದೆ. ಇಲ್ಲಿರುವ ಮರಗಳ ಮೇಲಿನ ಸಂಸಾರದ ಕತೆಯೂ ವಿಶಿಷ್ಟವೇ. ಗೂಬೆಗಳ, ಮಿಂಚುಳ್ಳಿಗಳ ಸಂಸಾರ ಬೆಳೆಯುವುದನ್ನು ಕಂಡಿದ್ದೇವೆ. ಒಂದೇ ಒಂದು ಸಾರಿ ಅಚ್ಚ ಹಳದಿ ಬಣ್ಣದ ಗೋಲ್ಡನ್ ಓರಿಯಲ್ ನೋಡಿದ ಧನ್ಯತೆ ನಮ್ಮದು.
ಬೆಂಗಳೂರಿನ ಸುಪ್ರಸಿದ್ಧ ಸ್ಯಾಂಕಿ ಕೆರೆಯ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ