Advertisement

Tag: ಕೆಂಡಸಂಪಿಗೆ

ಕಲೆ ಮತ್ತು ಭ್ರಾಮಕ ವಾಸ್ತವ: ಚಿತ್ರಾ ವೆಂಕಟರಾಜು ಸರಣಿ

ಪ್ರತಿ ಕಲಾಭ್ಯಾಸಿಗೂ ತಾನು ಯಾವಾಗ ರಂಗದ ಮೇಲೆ ಪ್ರದರ್ಶನ ನೀಡುತ್ತೇನೋ ಎನ್ನುವ ಕಾತರ ಇರುತ್ತದೆ. ಇರಬೇಕು ಕೂಡಾ‌. ಒಮ್ಮೆ ನಾವು ರಂಗದಲ್ಲಿ ಪೂರ್ಣಪ್ರಮಾಣದ ಪ್ರದರ್ಶನ ನೀಡಿದೆವೋ ನಮ್ಮೊಳಗಿನ ಆ ಚಡಪಡಿಕೆ ಆ ಕ್ಷಣಕ್ಕೆ ಥಟ್ಟನೆ ಕಡಿಮೆ ಆಗುತ್ತದೆ. ನಮ್ಮೊಳಗೆ ಹುದುಗಿದ್ದ ಅಪಾರವಾದ ಆಸೆ, ಕಾವನ್ನು ಆ ಒಂದು ಪ್ರದರ್ಶನ ತಣಿಸಿರುತ್ತದೆ. ಮತ್ತೆ ನಮ್ಮನ್ನು ನಾವು ಅಭ್ಯಾಸಕ್ಕೆ ನಮ್ಮ ಮನಸ್ಸು ದೇಹವನ್ನು ಹುರಿಗೊಳಿಸಿಕೊಳ್ಳಲು ಕೆಲವು ಸಮಯವೇ ಬೇಕಾಗುತ್ತದೆ. ಹೀಗೆ ಒಂದು ಪ್ರದರ್ಶನ ದ ಹಿಂದೆ ಮತ್ತು ಪ್ರದರ್ಶನ ನಂತರ ಒಬ್ಬ ಕಲಾವಿದನ ಮನಸಿನಲ್ಲಿ ಇಷ್ಟೆಲ್ಲಾ ಕೆಲಸಗಳು ನಡೆದಿರುತ್ತದೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಸಾಧನೆಯೇ ಮಾತಾಗಬೇಕು!: ಬಸವನಗೌಡ ಹೆಬ್ಬಳಗೆರೆ ಸರಣಿ

ಕೆಲವೊಂದರಲ್ಲಿ ಇಡೀ ಕರ್ನಾಟಕಕ್ಕೆ ನಮ್ಮ ಕಂಪೆನಿಯಲ್ಲಿ ಟಾಪರ್ ಆಗೋವಷ್ಟು ಸೇಲ್ ಮಾಡಿದ್ದೆ. ಆದರೆ ಹಲ್ಲು ನೋವಿಗೆ ಬಳಸುವ ಟೂಥ್ ಪೇಸ್ಟ್ ಒಂದರ ಸೇಲ್‌ನಲ್ಲಿ ತುಂಬಾ ಕಮ್ಮಿ ಸಾಧನೆ ಮಾಡಿದ್ದೆ. ಇದುವರೆಗೂ ಹೊಗಳಿದವರು ಈ ವಿಷಯ ಬಂದಾಗ ನನ್ನನ್ನು ಹಿಗ್ಗಾ ಮುಗ್ಗಾ ಬಯ್ದರು. ನಾನು ತುಂಬಾ ಸೆನ್ಸಿಟೀವ್ ಆಗಿ ಇದ್ದುದ್ದರಿಂದ ಅಂದು ಅವರು ನೀಡಿದ್ದ ಸುಗ್ರಾಸ ಭೋಜನವನ್ನು ಸೇವಿಸಲು ಮನಸ್ಸಾಗಲಿಲ್ಲ… ಆಗ ಬೇರೆ ಮೆಡಿಕಲ್ ರೆಪ್‌ಗಳು ಬಂದು ಇಲ್ಲೆಲ್ಲಾ ಬಯ್ಯೋದು, ಬಯ್ಸಿಕೊಳ್ಳೋದು ಕಾಮನ್. ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು ಎಂದಾಗ ನನಗೆ ಮನಸ್ಸಿಗೆ ಸಮಾಧಾನ ಎನ್ನಿಸಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ವಚನಗಳಲ್ಲಿ ಮೌಢ್ಯಗಳ ನಿರಾಕರಣೆ: ಜಯಲಕ್ಷ್ಮಿ ಪಾಟೀಲ್ ಅಂಕಣ

ಸಾಕಷ್ಟು ಜನ ಉದಹರಿಸುವ ಜೇಡರ ದಾಸಿಮಯ್ಯನವರ, ‘ಮೊಲೆ ಮೂಡಿ ಬಂದರೆ ಹೆಣ್ಣೆಂಬರುʼ, ಅಲ್ಲಮಪ್ರಭುದೇವರ, ‘ಹೊನ್ನು ಮಾಯೆ ಎಂಬರು’ ವಚನಗಳಲ್ಲದೇ ಇನ್ನೂ ಕೆಲವು ವಚನಗಳಿವೆ. ಕೇವಲ ಶರಣರ ವಚನಗಳಲ್ಲಿ ಮಾತ್ರವಲ್ಲ, ಶರಣೆಯರ ವಚನಗಳಲ್ಲೂ ನೋಡಬೇಕಿರುವುದು ಅವಶ್ಯಕ. ಶರಣೆಯರ ಅಂಥ ವಚನಗಳನ್ನು ಓದುತ್ತಿದ್ದರೆ ಅಬ್ಬಾ ಎನಿಸುತ್ತದೆ! ಕ್ರಾಂತಿಯ ದೊಂದಿಯನ್ನು ನಂದಿಸಲು ದುಷ್ಟ ವ್ಯವಸ್ಥೆ ಯಾಕೆ ಹಪಹಪಿಸಿತು ಎನ್ನುವುದು ನಿಚ್ಚಳವಾಗುತ್ತದೆ. ಕೇವಲ ಗಂಡಸರು ಮಾತ್ರ ಬಂಡೇಳಲಿಲ್ಲ ಆಗ, ಹೆಂಗಸರೂ ವ್ಯವಸ್ಥೆಯನ್ನು ಮುಲಾಜಿಲ್ಲದೆ ಪ್ರಶ್ನಿಸಿದ್ದು, ಗಂಡು ಹೆಣ್ಣೆಂಬುದರಾಚೆ ನಿಂತು ಮಾತಾಡಿದ್ದು, ತಮ್ಮ ಅಸ್ಮಿತೆಯನ್ನು ಸ್ಪಷ್ಟಪಡಿಸಿದ್ದು ನುಂಗಲಾರದ ತುತ್ತಾಗಿರಬೇಕು.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನೌಕರಿ ಸೇರಿದ ಹೊಸದರಲ್ಲಿ ಅಪ್ಪನ ಉಮೇದಿಗೆ ಕಡಿಮೆ ಇರಲಿಲ್ಲ. ಸಾಯುವವರೆಗೂ ಮನೆಯ ಜವಾಬ್ದಾರಿ ನಿಭಾಯಿಸುತ್ತಾ ಬದುಕಿದ ಜೀವ ತನ್ನಪ್ಪ. ಸಾಯುವ ಹಿಂದಿನ ದಿನವೂ “ಅಪ್ಪಾ!! ಸುಸ್ತಾಗಿದೆ ನಿಂಗೆ. ಮನಿಕಾ” ಎಂದು ಹಾಸಿಗೆ ಜಾಡಿಸಿ ತಲೆದಿಂಬು ಸರಿ ಮಾಡಿಕೊಟ್ಟರೆ “ಮಾಬ್ಲೂ ಮಲಗುಲಾ ಮನೇ!! ಆ ಹಾಳೆ ಕಟ್ಟು ತಕಂಡ ಬಾ!!” ಎಂದು ತಮ್ಮ ಲೆಕ್ಕದ ಪುಸ್ತಕ ತರಿಸಿಕೊಂಡು ಆ ವರ್ಷದ ಖರ್ಚು ವೆಚ್ಚ ಬರೆದುದನ್ನು ಮತ್ತೊಮ್ಮೆ ಚೆಕ್ ಮಾಡಿದ್ದರು. “ಮಾಬ್ಲು ಗಿಡವಕ್ಕೆ ಈ ಸಲ ಗೊಬ್ಬರ ಹಾಕಬೇಕಾಗತ. ಯಾರಿಗರೂ ಹೇಳ.
ನಾಗರೇಖಾ ಗಾಂವಕರ ಬರೆದ ಕತೆ “ಸೋಡಿನಾಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಅಂದುಕೊಂಡಿದ್ದು ಆಗೇಹೋಯಿತು!: ಜುಲೇಖಾ ಬೇಗಂ ಜೀವನ ವೃತ್ತಾಂತ

ಜುಬೇದಾಬಾಯಿ ಅವರನ್ನು ಮಾಕನೂರು ಭರಮಣ್ಣ ಅವರು ಅಪಹರಿಸಲು ಸಾಧ್ಯವಿರಲಿಲ್ಲ. ಅವರು ಪಾತ್ರಕ್ಕಾಗಿ ಹುಡುಕಾಡುತ್ತಿದ್ದರು; ನಾನೂ ಕಾಯುತ್ತಿದ್ದೆ. ರೋಗಿ ಬಯಸುವುದಕ್ಕೂ ವೈದ್ಯ ಹೇಳುವುದಕ್ಕೂ ಸರಿ ಹೋದರೆ ಇನ್ನೇನು? ಖುಷಿಯಿಂದ ಕುಪ್ಪಳಿಸಿದೆ. ಎರಡು ನಿಮಿಷ ಭೂಮಿಕೆಯಲ್ಲಿ ಇರುತ್ತಿದ್ದೆನೊ ಇಲ್ಲವೊ, ಆದರೆ ಆನಂದಿಸಿದೆ. ಮಾತಿಲ್ಲದ ಮುಖ್ಯ ಪಾತ್ರ ನನಗೆ ಸಿಕ್ಕಿತಲ್ಲಾ ಎಂಬ ಸಂಭ್ರಮ. ಉಳಿದವರೆಲ್ಲ, ‘ನಿಂಗೆ ಕೊಂಬು ಬರಬಾರದವ್ವಾ’ ಎಂದು ಛೇಡಿಸುತ್ತಾ, ನಗಿಸುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಹನ್ನೆರಡನೆಯ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ