Advertisement

Tag: ಕೆಂಡಸಂಪಿಗೆ

ನಾನಾ… ಸನ್ಯಾಸಿನಾ…!: ಎಚ್. ಗೋಪಾಲಕೃಷ್ಣ ಸರಣಿ

ಖಾದಿ ಬೋರ್ಡ್‌ಗೆ ಹೋಗೋದು, ಅಲ್ಲಿಂದ ಈ ಕೇಸರಿ ಅಥವಾ ಕಾವಿ ದಟ್ಟಿ ತರೋದು ಅದನ್ನು ಮೂರೂ ಹೊತ್ತು ಸುತ್ತಿಕೊಂಡು ಓಡಾಡೋದು. ಇದು ನಮ್ಮ ಅಮ್ಮನಿಗೆ ಇಷ್ಟ ಇಲ್ಲ. ಕಾರಣ ಇವನು ರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದ, ಅಲ್ಲಿ ಪ್ರಭಾವ ಇವನೂ ಸನ್ಯಾಸಿ ಆಗಿಬಿಡ್ತಾನೆ ಎನ್ನುವ ಭಯ. ಇದನ್ನು ಅಮ್ಮ ನನ್ನ ಮದುವೆ ಆದ ಎಷ್ಟೋ ವರ್ಷದ ನಂತರ ತನ್ನ ಸೊಸೆಗೆ ಅಂದರೆ ನನ್ನ ಹೆಂಡತಿಗೆ ಹೇಳಬೇಕಾದರೆ ನನ್ನ ಕಿವಿಗೆ ಬಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಶುರು….

ಅಮ್ಮ ‘ಬೆಳಗಾರುತಿ ಬೆಳಗಾರತಿ ದತ್ತಾತ್ರೇಯನಿಗೆ’ ಎಂದು ಹಾಡುತ್ತಿದ್ದರೆ ಅದಕ್ಕೆಷ್ಟು ಅರ್ಥವಾಗಿತ್ತೋ… ಒಳಗೆ ಬರಲೊಲ್ಲೆ ಎಂಬಂತೆ ಹೊಸ್ತಿಲಿಗೆ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದ ಅದರ ಬಲಗಾಲನ್ನು ಎತ್ತಿ ಒಳಗೆ ಇಡಿಸಿದ್ದೆವು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಅದು ಮನೆಯೊಳಗೆ ಓಡಾಡುವಾಗ ಅದನ್ನು ಎಷ್ಟು ನೋಡಿದರೂ ಸಾಲದು. ನಾವು ಕರೆದರೂ ಹತ್ತಿರ ಬರದೇ ಕುರ್ಚಿಯ ಅಡಿಗೆ ಹೋಗಿ‌ ಮಲಗುತ್ತಿತ್ತು.
ತಮ್ಮ ಮುದ್ದು ನಾಯಿಯ ಕುರಿತು ಸಂಜೋತಾ ಪುರೋಹಿತ ಬರೆಯುವ ಹೊಸ ಸರಣಿ “ಕೂರಾಪುರಾಣ”

Read More

ಸಾವೆಂಬ ಸಂಕೀರ್ಣ ರಹಸ್ಯ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

ಪರ್ವತದ ಉತ್ತರ ಭಾಗದಲ್ಲಿ ಮಲ್ಲೋರಿಯ ಅವಶೇಷಗಳು ಪರ್ವತಾರೋಹಿಗಳ ತಂಡವೊಂದಕ್ಕೆ ಕಾಣಸಿಕ್ಕಿದೆ. ಮತ್ತೊಂದು ದೇಹವನ್ನು ಇದೇ ಪ್ರದೇಶದಲ್ಲಿ ನೋಡಿದ್ದೇವೆಂದು ಕೆಲವು ಪರ್ವತಾರೋಹಿಗಳು ಹೇಳಿಕೊಂಡಿದ್ದಾರೆ. ಅವರಿಬ್ಬರೂ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಬಳಿಕವೂ ಬದುಕಿ ಉಳಿದಿದ್ದಾರೆ. ಆದರೆ ಪರ್ವತದಿಂದ ಇಳಿಯುವಾಗ ಮರಣ ಹೊಂದಿರಬಹುದು ಎಂದು ಈ ವಿದ್ಯಮಾನದ ಕುರಿತು ಅಧ್ಯಯನ ನಡೆಸಿದ ತಜ್ಞರು ಊಹಿಸಿದ್ದಾರೆ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ

Read More

ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ

ತಲೆಗೆ ಮಂಕು ಬಡಿದಂತಾಯಿತು, ಆದರೂ ಚೇತರಿಸಿಕೊಂಡು ಮನೆ ತಲುಪಿದೆ. ಶಶಿ, ಮಕ್ಳು ಕಾಯ್ತಾ ಇದಾರೆ, ಆಗ್ಲೇ ತುಂಬಾ ಹೊತ್ತಾಯ್ತು, ಟೈಮ್ ನೋಡಿ ೧೦:೩೦, ನಂಗು ಜೋರಾಗಿ ನಿದ್ದೆ ಬರ್ತಾ ಇದೆ. ಬೇಗ ಬನ್ನಿ ಊಟ ಮಾಡೋಣವೆಂದಳು ನಿಶಾ. ನಾನು ಏನು ಮಾತಾಡದೆ ಕೈಯಲ್ಲಿದ್ದ ಪೇಪರ್ ಬ್ಯಾಗ್ ಅನ್ನು ಅವಳ ಕೈಗೆ ನೀಡಿದೆ. ಬಿರಿಯಾನಿ ತಿನ್ನಲು ಶುರು ಮಾಡಿದೆವು. ಯಾಕೆ ಶಶಿ ಏನು ಮಾತಾಡುತ್ತಿಲ್ಲ?
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ “ಕಬಾಬ್ ಮೆ ಹಡ್ಡಿ”

Read More

ಅಮೆರಿಕಾದ ಸ್ವಾತಂತ್ರೋತ್ಸವ: ಎಂ.ವಿ. ಶಶಿಭೂಷಣ ರಾಜು ಅಂಕಣ

ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ಈ ವರುಷದ ಸ್ವಾತಂತ್ರ್ಯ ದಿನವನ್ನು ಸುಮಾರು ಹನ್ನೊಂದು ಸಾವಿರ ಜನರಿಗೆ ಅಮೆರಿಕದ ಪೌರತ್ವ ಕೊಟ್ಟು ವಿಶೇಷವಾಗಿ ಆಚರಿಸುತ್ತಿದೆ. ಅಮೆರಿಕಾದ ಜನ ಸ್ವತಂತ್ರ ಪಡೆದು ತುಂಬಾ ಮುಂದೆ ಹೋಗಿದ್ದಾರೆ. ಪ್ರಪಂಚದ ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಬಹುತೇಕ ಎಲ್ಲಾ ವಲಯಗಳಲ್ಲೂ ಬಲಾಢ್ಯ ದೇಶವಾಗಿ ಅಮೆರಿಕಾ ಹೊರಹೊಮ್ಮಿದೆ. ಪ್ರಪಂಚದ ಇತರ ದೇಶಗಳ ತನ್ನ ಪ್ರಭಾವ ಬೀರುವಷ್ಟು ಬೆಳೆದಿದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ