Advertisement

Tag: ಡಾ. ಚಂದ್ರಮತಿ ಸೋಂದಾ

ಮದುವೆ ಎನ್ನುವ ಊರ ಸಂಭ್ರಮ: ಚಂದ್ರಮತಿ ಸೋಂದಾ ಸರಣಿ

ಈಗಿನಂತೆ ಅವರಪಾಡಿಗೆ ಅವರು ಮದುವೆಗೆ ಹೋಗುವ ರಿವಾಜಿರಲಿಲ್ಲ. ಎಲ್ಲರನ್ನೂ ಒಳಗೊಂಡು ಹೋಗುವುದಿತ್ತು. ಹೋಗುವಾಗ ಬರುವಾಗ ಹಾಡುಗಳ ಸ್ಪರ್ಧೆ ಇರುತ್ತಿತ್ತು. ಯಾರು ಎಷ್ಟು ಹಾಡನ್ನು ಹೇಳುತ್ತಾರೆ ಅಂತ. ಹೆಣ್ಣುಮಕ್ಕಳು ತಮ್ಮ ಹಾಡಿನ ಸಾಮರ್ಥ್ಯವನ್ನು ಒರೆಹಚ್ಚುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಮದುಮಗನನ್ನು ಎದುರುಗೊಳ್ಳುವುದಿರಲಿ, ಸಭಾಪೂಜೆಯೋ, ವರಪೂಜೆ ಅಥವಾ ಧಾರೆ ಯಾವುದೇ ಸನ್ನಿವೇಶವನ್ನು ಬಿಡದೆ ಹಾಡುತ್ತಿದ್ದರು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಸೊಪ್ಪು-ತರಕಾರಿ ಎನ್ನುವ  ಕಿರುವೈದ್ಯ: ಚಂದ್ರಮತಿ ಸೋಂದಾ ಸರಣಿ

ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

Read More

ಹೂವೆಂಬ ವಿಸ್ಮಯ: ಚಂದ್ರಮತಿ ಸೋಂದಾ ಸರಣಿ

ಅದು ಸಂಜೆಯಲ್ಲಿ ಬಿರಿಯುವ ಹೂವು. ಬೆಳಗ್ಗೆವರೆಗೆ ಬಿಟ್ಟರೆ ಪೂರ್ತಿಯಾಗಿ ಅರಳುತ್ತದೆ. ಅರಳಿದ ಮೇಲೆ ಕಟ್ಟಿದರೆ ಹೂವಿನ ಎಸಳು ಉದುರುತ್ತದೆ. ಹಾಗಾಗಿ, ರಾತ್ರಿ ಹೊತ್ತಿನಲ್ಲಿ ದೀಪದ ಬೆಳಕಿನಲ್ಲಿ ಕಟ್ಟಬೇಕಿತ್ತು. ಹೀಗೆ ಕಟ್ಟಿದ ಮಾಲೆಯನ್ನು ಮಾರನೆಯ ಬೆಳಗ್ಗೆ ಮುಡಿಯಬೇಕು/ದೇವರಿಗೆ ಅರ್ಪಿಸಬೇಕು ಇಲ್ಲವೆ ಬಿಸಿಲಿನಲ್ಲಿ ಬತ್ತದ ಹುಲ್ಲಿನ ಮೇಲೆ ಒಣಗಿಸಿ ಅದನ್ನು ಕಾಪಿಡಬೇಕು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಬೇಸಿಗೆಯ ಬೇಗೆಗೆ ನೆನಪುಗಳ ಸಿಂಚನ: ಚಂದ್ರಮತಿ ಸೋಂದಾ ಸರಣಿ

ವಸಂತ ಋತುಗಳನ್ನು ಎಲ್ಲ ಕಾಲಕ್ಕೂ ಕವಿಗಳು ಹಾಡಿಹೊಗಳುತ್ತ ಬಂದಿದ್ದಾರೆ. ಮಾವಿನ ಚಿಗುರು, ಕೋಗಿಲೆಯ ಕುಕಿಲು, ಮುಂಗಾರಿನ ಆರ್ಭಟ ಎಲ್ಲವೂ ಅವರ ವರ್ಣನೆಗೆ ಕಾರಣವಾಗಿವೆ. ಅದೇಕೋ ಬಿರುಬೇಸಗೆಯ, ಸುಡುಬಿಸಿಲಿನ ಅನಭವಗಳು ಅವರನ್ನು ಕಾಡಿದಂತೆ ಕಾಣುತ್ತಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭೂಮಿಯ ದಗೆಯನ್ನು ಮೀರಿಸುವಂತೆ ಚುನಾವಣೆಯ ಕಾವು ಏರುತ್ತಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ದುಪಡಿ; ಬಂಧುತ್ವದ ಹೆಣಿಗೆ: ಡಾ. ಗೀತಾ ವಸಂತ ಮುನ್ನುಡಿ

ಅಚ್ಚಿಯ ಬನವಾಸಿ ಅಕ್ಕಯ್ಯ ನಾಗವೇಣಿಯ ಬದುಕು ಬಂಜೆಯೆಂಬ ಕಾರಣಕ್ಕೆ ಭಗ್ನವಾದ ರೀತಿ ಹೆಣ್ಣಿನ ಅಸ್ತಿತ್ವದ ಕುರಿತು ಹಲವು ಪ್ರಶ್ನೆಗಳನ್ನೆಬ್ಬಿಸುತ್ತದೆ. ಹೆಣ್ಣು ಅಂದರೆ ತಾಯಿ. ಅದೇ ಅಸ್ತಿತ್ವ. ತಾಯಿಯಾಗದ ನಾಗವೇಣಿ ತನ್ನೊಳಗೇ ತಾನು ಖಾಲಿಯಾಗುತ್ತ ಹೋಗುವುದು, ಹಾಗೆಯೇ ಇಡೀ ಕುಟುಂಬ ಅವಳನ್ನು ಕಡೆಗಣಿಸುವುದು, ಅವಳ ಖಿನ್ನತೆ ಉನ್ಮಾದಕ್ಕೆ ತಿರುಗುವುದು ಇದೆಲ್ಲ ಅವಳ ಮನೋಲೋಕಕಕ್ಕೆ ಪಾತಾಳಗರಡಿ ಹಾಕಿದಂತಿದೆ.
ಡಾ. ಚಂದ್ರಮತಿ ಸೋಂದಾ ಕಾದಂಬರಿ “ದುಪಡಿ”ಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ