Advertisement

Tag: ಡಾ.ವಿನತೆ ಶರ್ಮ

ಮಾಂತ್ರಿಕ ಫುಟ್ಬಾಲ್ ಹುಟ್ಟಿಸಿದ ಕನಸುಗಳು: ವಿನತೆ ಶರ್ಮ ಅಂಕಣ

ಪಂದ್ಯದ ಎರಡನೇ ಅರ್ಧದಲ್ಲಿ ಆಸ್ಟ್ರೇಲಿಯಾ ತಂಡವು ಸೋಲುವುದು ಖಚಿತವಾಗಿತ್ತು. ಆದರೆ ನಮ್ಮ ಮಟಿಲ್ಡಾಸ್ ಬಗ್ಗೆ ಇದ್ದ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅದರ ಜೊತೆಗೆ ಇಂಗ್ಲಿಷ್ ಪಟುಗಳು ಆಡಿದ ವೈಖರಿಗೆ, ಅವರ ಅಚ್ಚುಕಟ್ಟಾದ ಆಟದ ಶೈಲಿಗೆ ಎಲ್ಲರೂ ಮನಸೋತಿದ್ದರು. ಎರಡು ಬಾರಿ ಸ್ಯಾಮ್ ಕೆರ್ ತಮ್ಮ ಬಳಿಗೆ ಬೀಸಿಬಂದ ಫುಟ್ಬಾಲನ್ನು ತಲೆಯಿಂದ ಡಿಕ್ಕಿಕೊಟ್ಟು ಅದನ್ನು ಗೋಲ್ ನೆಟ್ ಕಡೆಗೆ ಚಿಮ್ಮಿಸಿದಾಗ ಅರೆಕ್ಷಣ ಎಲ್ಲರ ಹೃದಯ ಬಾಯಿಗೆ ಬಂದಿತ್ತು. ಆದರೆ ಗೋಲ್ ಆಗದೇ ನೆಟ್ ತಲೆಯಮೇಲೆ ಬಾಲ್ ಹಾರಿಹೋಗಿತ್ತು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಪುನರಪಿ ಜನನಂ….: ವಿನತೆ ಶರ್ಮ ಅಂಕಣ

ಮೂಲನಿವಾಸಿಗಳಾದ ಅವರ ಸ್ಥಳ-ನಾಮ, ಸಂಸ್ಕೃತಿ, ಭಾಷೆಗಳ ಮೇಲೆ ಅಧಿಕಾರ ಮತ್ತು ನಿಯಂತ್ರಣ ಸಾಧಿಸುವ ಬ್ರಿಟಿಷರ ಪ್ರಯತ್ನಗಳಿಗೆ ಕೊನೆಯಿಲ್ಲವಾಗಿತ್ತು. ಮೂಲನಿವಾಸಿಗಳ ಮಕ್ಕಳನ್ನು ಬಲವಂತವಾಗಿ ಅವರ ಕುಟುಂಬಗಳಿಂದ, ಸಮುದಾಯಗಳಿಂದ ಬೇರ್ಪಡಿಸಿ ಅವರಿಗೆ ಇಂಗ್ಲಿಷ್ ಭಾಷೆ ಕಲಿಸುತ್ತಾ, ಬ್ರಿಟಿಷ್ ಜೀವನ ರೀತಿಗಳಿಗೆ ಒಗ್ಗುವಂತೆ ಮಾಡಲಾಗಿತ್ತು. ಅವರ ಹೆಸರುಗಳ ಜೊತೆ ಅವರ ನೆಲೆಗಳ ಹೆಸರುಗಳೂ ಮರೆಯಾದವು.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಆಸ್ಟ್ರೇಲಿಯಾದಲ್ಲಿ ಮಹಿಳಾ ಫುಟ್ಬಾಲ್ ವಿಶ್ವಕಪ್ 2023: ವಿನತೆ ಶರ್ಮ ಅಂಕಣ

ಪ್ರಾಪಂಚಿಕ ಮಟ್ಟದಲ್ಲಿ ನಡೆಯುವ ಮಹಿಳಾ ಫುಟ್ಬಾಲ್ ಈ ಬಾರಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳ ಮಡಿಲು ಸೇರಿದೆ. ವಿಶ್ವ ಕಪ್ ಗೆಲ್ಲಲು ಬರೋಬ್ಬರಿ ೩೨ ತಂಡಗಳು ಸೆಣಸಾಡುತ್ತಿವೆ. ದೇಶದ ಮುಖ್ಯ ರಾಜಧಾನಿ ನಗರಗಳಾದ ಅಡಿಲೈಡ್, ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಪರ್ತ್ ಗಳಲ್ಲಿ ವಿವಿಧ ಗುಂಪುಗಳು ತಮ್ಮ ಕಾಲ್-ಚಳಕ ತೋರಲಿವೆ. ಇದಲ್ಲದೆ ನ್ಯೂಝಿಲ್ಯಾಂಡ್ ದೇಶದ ನಾಲ್ಕು ಕಡೆ ಪಂದ್ಯಗಳು ನಡೆಯಲಿವೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಗ್ಲೋಬಲ್-ಲೋಕಲ್ ಊರುಗಳ ಉಪಕಥೆಗಳು: ವಿನತೆ ಶರ್ಮ ಅಂಕಣ

ಇವೆಲ್ಲವನ್ನು ಹಿಂದಿನ, ಎಂದಿನ ಕುತೂಹಲದಿಂದ ನೋಡುತ್ತಾ ನಿಲ್ಲುವ ನನ್ನನ್ನು ಅನುಮಾನದಿಂದ ನೋಡುವ ಜನರು ಜಾಸ್ತಿಯಾಗಿರುವುದು ಗಮನಕ್ಕೆ ಬರುತ್ತದೆ. ಯಾರು ನೀವು, ಇಲ್ಲಿ ಯಾಕೆ ನಿಂತು ನಮ್ಮನ್ನು ನೋಡುತ್ತಿದ್ದೀರಿ, ನಿಮ್ಮಷ್ಟಕ್ಕೆ ನೀವು ನಿಮ್ಮ ಕೆಲಸ ನೋಡಿಕೊಂಡು ಮುಂದೆ ಸಾಗಿ, ಎಂದು ಕೆಲವರು ಕೇಳುವಾಗ ಜನಜೀವನದ ಮನಸ್ಸುಗಳ ಬೇರುಗಳಿಗೆ ಅಂಟಿಕೊಂಡಿರುವ ಮಣ್ಣು ಸಡಿಲವಾಗಿರುವುದು ಕಾಣುತ್ತದೆ. ನಮ್ಮಷ್ಟಕ್ಕೆ ನಾವು, ನಿಮ್ಮಷ್ಟಕ್ಕೆ ನೀವು ಎನ್ನುವ ಮಾತನ್ನು ಕೇಳಿದಾಗ ಯಾಕೋ ಮುಂದುವರೆದ ಪಾಶ್ಚಾತ್ಯ ದೇಶ-ಸಮಾಜಗಳ ಬಂಡವಾಳಶಾಹಿ ಧೋರಣೆ ನೆನಪಾಗುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಬ್ರಿಸ್ಬೇನ್ – ಬೆಂಗಳೂರು ಕೊಂಡಿ ಕಥೆಗಳು: ವಿನತೆ ಶರ್ಮ ಅಂಕಣ

ಇಲ್ಲಿ ಕಾಣುವುದು ಹಳತೊಂದು ಸಮಾಜದ ಹೆಗ್ಗುರುತಾದ ಕಸುಬುಗಾರಿಕೆಗಳ ಮುಂದುವರಿಕೆ. ಇಪ್ಪತ್ತೊಂದನೇ ಶತಮಾನದ ಮಾಲ್, ಸೂಪರ್ ಮಾರ್ಕೆಟ್ ಮತ್ತು ಮೆಟ್ರೋಗಳ ಪ್ರಪಂಚದಲ್ಲಿ ಐಟಿ ಮತ್ತು ಗ್ಲೋಬಲ್ ಕಾರ್ಪೊರೇಟ್ ಪೈಪೋಟಿಗಳ ನಡುವೆ ಬದುಕುತ್ತಾ ಇನ್ನೂ ಕಂಗೊಳಿಸುತ್ತಿರುವ ಅಂಕುಡೊಂಕು ಪೇಟೆ ಬೀದಿಗಳಲ್ಲಿ ಕಾರ್ಯತತ್ಪರರಾಗಿರುವ ಸಾವಿರಾರು ಕಸುಬುದಾರರನ್ನು ನೋಡಿದರೆ ಕ್ಯಾಪಿಟಲಿಸ್ಟ್ ಪ್ರಪಂಚದ ಟೊಳ್ಳು, ಭ್ರಮೆ ಮನಸ್ಸಿಗೆ ತಟ್ಟುತ್ತದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ