Advertisement

Tag: ನಾಗರೇಖಾ ಗಾಂವಕರ

ಸಕೀನಾಳ ಮುತ್ತು: ರಮ್ಯತೆಯ ಹಿಂದಿನ ಅಸಂಗತತೆ

ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ.
ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ

Read More

ಸಿನೆಮಾ ಜಗತ್ತಿನ ಒಳಹೊರಗು…

ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.
ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ

Read More

ಪ್ರೀತಿ, ಕ್ರಾಂತಿ, ಸಾಹಿತ್ಯಕ್ಕೆ ಅಂತಃಕರಣವೇ ಅಂತರ್ಜಲ

ಕಥಾ ಪ್ರಕಾರದಲ್ಲಿ ನಾಗರೇಖ ಪ್ರಯೋಗಶೀಲರು ಎಂಬುದಕ್ಕೆ ‘ಸ್ಟಾಕ್ ಹೋಮ್ ಸಿಂಡ್ರೋಮ್’ನ್ನು ಹೆಸರಿಸಬಹುದು. ಕಥೆಗೆ ಮನಃಶಾಸ್ತ್ರದ ಹಿನ್ನೆಲೆ ಇದೆ. ನೋಯಿಸಿದವರನ್ನು ನಿಷ್ಠುರವಾಗಿ ನಿರಾಕರಿಸಲಾರದ ಅಸಹಾಯಕತೆಯಲ್ಲಿ ಅವರ ಬಾಂಧವ್ಯಕ್ಕೆ ಅಂಟಿಕೊಳ್ಳುವ ವಿಚಿತ್ರ ಮನೋವ್ಯಾಕುಲತೆಯಿದು. ಸಂಪ್ರೀತ, ಸಾತಮ್ಮ ಮತ್ತು ಡಾ. ಸುದತಿಯರ ಮನೋಮಾರ್ಗದ ಮೂಲಕ ಚಲಿಸುವ ಕಥಾ ರಥದ ನಿರೂಪಣೆ ವಿಶಿಷ್ಟವಾಗಿದೆ. ಡಾ. ಸುದತಿ ತನ್ನಂತೆಯೇ ಗಂಡನ ವ್ಯಗ್ರತೆಯನ್ನು ಪ್ರೀತಿಸುವ ಸಾತಮ್ಮನನ್ನು ವಿಷಾದದ ಕನ್ನಡಿಯಲ್ಲಿ ನೋಡುತ್ತಾಳೆ. ಸಿದ್ಧಾಂತವೊಂದರ ಅಳತೆಗೆ ಕಥೆಯನ್ನು ಹೊಲಿಯುವ ತಂತ್ರ ಹೊಸತನ್ನು ಹೇಳಲಾರದು.
ನಾಗರೇಖಾ ಗಾಂವಕರ ಹೊಸ ಕಥಾ ಸಂಕಲನ “ಮೌನದೊಳಗೊಂದು ಅಂತರ್ಧಾನ” ಕ್ಕೆ ಶ್ರೀಧರ ಬಳಗಾರ ಬರೆದ ಮುನ್ನುಡಿ

Read More

ಸ್ವಾನುಭವದ ಸುಂದರ ಹೆಣಿಗೆ

ಕಾವ್ಯವನ್ನು ಸ್ಮಿತಾ ಭಾವಾಭಿವ್ಯಕ್ತಿಗೆ ಮಾಧ್ಯಮವಾಗಿ ಮಾತ್ರ ಬಳಸಿಕೊಂಡಿಲ್ಲ. ಬದುಕಿನ ಎಲ್ಲ ವಿಷಮತೆಗಳ ನಡುವೆಯೂ ಜೀವಚೈತನ್ಯದ ರಸವನ್ನಾಗಿ ಉಳಿಸಿಕೊಂಡಿದ್ದಾರೆ. ಇಲ್ಲಿಯ ಬಹುತೇಕ ಕವಿತೆಗಳು ಹೆಣ್ತನದ ಸೀಮಿತ ನೆಲೆಯಲ್ಲೇ ಮೂಡಿದೆ. ಜಗತ್ತಿನ ಅರ್ಧದಷ್ಟಿರುವ ಸ್ತ್ರೀ ಸಮೂಹದ ಅನುಭವಗಳಿಗೆ ಸೀಮಿತದ ಚೌಕಟ್ಟು ಹಾಕುವುದುಂಟು.  ಆದರೆ ಸ್ತ್ರೀ ಲೋಕ  ಈ ಎಲ್ಲ ಚೌಕಟ್ಟಿಗೂ ಮೀರಿ ಬೃಹತ್ ಆಲದ ಮರದಂತೆ ಬೀಳಲು ಬಿಟ್ಟು ತನ್ನೊಡಲೊಳಗೆ ಚಿಗುರುವ ಆಶ್ರಯ ಬಯಸುವ ಚೈತನ್ಯಗಳಿಗೆ ಆವಾಸವಾಗುತ್ತದೆ. ಸ್ಮಿತಾ ಅಮೃತರಾಜ್ ಅವರ ‘ಮಾತು ಮೀಟಿ ಹೋಗುವ ಹೊತ್ತು’ ಕವನ ಸಂಕಲನದ ಕುರಿತು ನಾಗರೇಖಾ ಗಾಂವಕರ ಬರಹ. 

Read More

ಬಿ.ಆರ್.ಎಲ್. ಪುಸ್ತಕದ ಕುರಿತು ನಾಗರೇಖಾ ಗಾಂವಕರ ಬರಹ

“ಬದುಕಿನ ಹಲವು ಹಂತಗಳ ನಿಭಾಯಿಸಿಯೂ, ಮನುಷ್ಯನಾಗಿ ಬದುಕುವ ಆ ನೆಲೆಯಲ್ಲಿ ಕಾಲವಲ್ಲದ ಕಾಲದ ಬಯಕೆ ಎಂದು ಜಗತ್ತು ಜರೆಯುವ ಸಮಯದಲ್ಲೂ ತುಡಿಯುವ ಭಾವಗಳ ಕುರಿತು ಮೂಗುಮುರಿಯದೇ ಅಸಂಗತವೆಂದು ಅನಾದರಿಸದೇ ನವೋನ್ಮೇಷವೆಂದು ಕೊಂಡಾಡುವ ನಾಟಕೀಯತೆ, ಸೋಗುಗಳನ್ನು ತೋರದೇ ಸಹಜವಾಗಿ ಸಂವಾದಿಸುವ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ