Advertisement

Tag: ಮಾರುತಿ ಗೋಪಿಕುಂಟೆ

ಸಾಕುಪ್ರಾಣಿಗಳ ಒಡನಾಟದ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಒಂದು ಸಾರಿ ಅವರ ಮನೆಗೆ ಹಬ್ಬಕ್ಕೆಂದು ಹೋದಾಗ ಹಠಮಾಡಿ ಎರಡು ಪಾರಿವಾಳವನ್ನು ತಂದೆ. ನಮ್ಮ ಮನೆಯ ಹೊರಭಾಗದಲ್ಲಿ ನಾಲ್ಕು ಗೋಡೆಯನ್ನಷ್ಟೆ ಕಟ್ಟಿ ಬಚ್ಚಲು ಮನೆ ಎಂದು ಕರೆಸಿಕೊಳ್ಳುತ್ತಿದ್ದ ಬಚ್ಚಲು ಮನೆಯ ಮೂಲೆಯಲ್ಲಿ ಕಲ್ಲುಗಳಿಂದಲೆ ಗೂಡೊಂದನ್ನು ಕಟ್ಟಿ ಅದರಲ್ಲಿ ಎರಡು ಪಕ್ಷಿಗಳನ್ನು ಬಿಟ್ಟು ಸಾಕವುದೆಂದು ತೀರ್ಮಾನಿಸಿದೆ. ಆದರೆ ಅವು ಗುಂಪಿನಲ್ಲಿ ವಾಸವಾಗಿದ್ದರಿಂದ ಒಂದು ವಾರದಲ್ಲೆ ಒಂದು ಪಕ್ಷಿ ಸತ್ತೆಹೋಯಿತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹತ್ತೊಂಭತ್ತನೆಯ ಕಂತು

Read More

ಅಲ್ಪ ಕಾಲದ ಗೆಳೆಯರು: ಮಾರುತಿ ಗೋಪಿಕುಂಟೆ ಸರಣಿ

ಅವನು ಎರಡೂ ಬ್ಯಾಟುಗಳನ್ನು ನನಗೆ ಕೊಟ್ಟ. ಆ ಬ್ಯಾಟುಗಳೊಂದಿಗೆ ಮನೆಯಲ್ಲಿ ತಮ್ಮನೊಂದಿಗೆ ಆಡುತ್ತಿದ್ದೆ. ಹದಿನೈದು ದಿನವಾದರೂ ಶಾಲೆಗೆ ಆತ ಬರಲಿಲ್ಲ. ಹೊಸದುರ್ಗದ ಕಡೆ ಯಾವುದೊ ಊರಿಗೆ ಹೋದರು ಅಂತ ಗೊತ್ತಾಯ್ತು. ಅಲ್ಲಿನ ಶಾಲೆಗೆ ನೇರವಾಗಿ ವರ್ಗಾವಣೆ ಪತ್ರವನ್ನು ತರಿಸಿಕೊಂಡಿದ್ದರು. ಅಯ್ಯೋ ಆತನ ಪೂರ್ಣ ವಿಳಾಸವು ಇರಲಿಲ್ಲ. ಶಾಲೆಯಲ್ಲಿ ಕೇರಾಫ್‌ ವಿಳಾಸವನ್ನೆ ಕೊಟ್ಟಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೆಂಟನೆಯ ಕಂತು

Read More

ಕಷ್ಟಕ್ಕಾಗದ ಸಂಬಂಧಗಳ ನೆನೆದು: ಮಾರುತಿ ಗೋಪಿಕುಂಟೆ ಸರಣಿ

ದೊಡ್ಡಮ್ಮನ ಮಗನನ್ನು ನಮ್ಮ ಊರಿನವರಿಗೆ ಹೇಳಿ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಕಳಿಸಲಾಯಿತು. ಅಲ್ಲಿ ಆತ ಬೇರೆ ಬೇರೆ ಕೆಲಸಗಳನ್ನು ಕಲಿತ ಚುರುಕಾದ. ಯಾವ ಅದೃಷ್ಟ ಆತನನ್ನು ಕೈ ಹಿಡಿಯಿತೊ ಮೂರ್ನಾಲ್ಕು ವರ್ಷಗಳಲ್ಲಿ ಆತ ಒಳ್ಳೆಯ ಹಣವಂತನಾದ. ಮದುವೆಯಾದ. ಅದಾದ ಮೇಲೆ ಒಂದಿಷ್ಟು ದಿನ ನಮ್ಮ ಕಷ್ಟಗಳಿಗೆ ಸ್ಪಂದಿಸಿದನಾದರೂ ಅದು ತೋರಿಕೆಯದಾಗಿತ್ತು. ಆಮೇಲೆ ಆತ ಅದನ್ನು ಮರೆತ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೇಳನೆಯ ಕಂತು

Read More

ಅಂಗಿ, ಮತ್ತದರ ಪ್ರಸಂಗಗಳು…: ಮಾರುತಿ ಗೋಪಿಕುಂಟೆ ಸರಣಿ

ಊರಿನ ಹುಡುಗರೆಲ್ಲ ನೋಡಿ ಹೇಗೆ ಹರಳೆಣ್ಣೆ ಹಚ್ಕೊಂಡು ಓಡಾಡ್ತ ಇದ್ದಾರೆ. ನಿಮಗೆ ಹಬ್ಬ ಬ್ಯಾಡ್ವ ಎಂದು ಅಜ್ಜಿ ಗದರಿದ್ದಳು. ನಾವೇನು ಹೊಸಬಟ್ಟೆ ಹಾಕ್ಕೋಳಲ್ಲ. ನಾವ್ಯಾಕೆ ಹರಳೆಣ್ಣೆ ಹಚ್ಕೊಬೇಕು ಎಂದು ಸುಮ್ಮನಾದೆವು. ಅಪ್ಪ ಬಂದು ಗದರಿದ. ನಾವು ವಿಧಿಯಿಲ್ಲದೆ ಅದಕ್ಕೆ ಸಿದ್ಧರಾದೆವು. ಎಣ್ಣೆಸ್ನಾನ ಆದಮೇಲೆ ಇದ್ದಕ್ಕಿದ್ದಂತೆ ಹೊಸ ಬಟ್ಟೆ ಕಾಣಿಸಿದವು. ಅವು ರೆಡಿಮೇಡ್ ಬಟ್ಟೆಗಳಾಗಿದ್ದವು. ಬುಟ್ಟಿ ತೋಳಿನ ರಬ್ಬರ್‌ನ ಎಳೆಯ ಅಲ್ಲಲ್ಲಿ ಮಿಂಚು ಕಾಣಿಸುವ ಇಂಗ್ಲೀಷ್ ಅಕ್ಷರದ ಉಲ್ಟಾ ಸೀದಾ ಅಡ್ಡ ಹೀಗೆ ನಾನಾ ರೀತಿ ಕಾಣುವ ಪ್ರಿಂಟೆಡ್ ಅಕ್ಷರಗಳ ಆ ‘ಅಂಗಿ’ ಆಧುನಿಕತೆಯ ‘ಟೀ ಶರ್ಟ್’ ಆಗಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನಾರನೆಯ ಕಂತು

Read More

ಅವಮಾನ, ಕೀಳರಿಮೆ ಮತ್ತು ಸಂವೇದನೆ: ಮಾರುತಿ ಗೋಪಿಕುಂಟೆ ಸರಣಿ

ಬಹಳ ಪ್ರೀತಿಯಿಂದ ಸಾಕಿದ ಕುರಿಯೊಂದನ್ನು ನನಗೆ ಗೊತ್ತಿಲ್ಲದೆ ಹಬ್ಬಕ್ಕೆಂದು ಅಪ್ಪ ಮಾರಿಬಿಟ್ಟಿದ್ದ. ನನಗೆ ವಿಪರೀತ ದುಃಖವಾಗಿ ಒಂದು ದಿನ ಊಟವನ್ನೆ ಬಿಟ್ಟಿದ್ದೆ. ಬರುಬರುತ್ತಾ ಪ್ರಾಣಿಗಳನ್ನು ಸಾಕುವುದನ್ನೆ ಬಿಟ್ಟುಬಿಟ್ಟೆ. ಇವೆಲ್ಲವುಗಳ ನನ್ನೊಳಗೊಂದು ಸಂವೇದನೆಯನ್ನು ಹುಟ್ಟಿಹಾಕಿದವು. ಪ್ರಾಣಿಗಳು ಎಷ್ಟು ಅಲ್ಪಾಯುಗಳು ಅಲ್ಲವೆ? ಇನ್ನೊಬ್ಬರಿಗೆ ಆಹಾರವಾಗಲೊ, ಹರಕೆ ತೀರಿಸಲು ಬದುಕುವ ಈ ಪ್ರಾಣಿಗಳನ್ನು ಕುರಿತು ಬಸವಣ್ಣನವರ ವಚನ ನೆನಪಾಗುತ್ತದೆ; “ಹಬ್ಬಕ್ಕೆ ತಂದ ಹರಕೆಯ ಕುರಿ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ