Advertisement

Tag: Childhood

ಹಬ್ಬದ ಆಚರಣೆಗಳು ಹಾಗೂ ಬೆಣ್ಣೆ ಕದ್ದು ತಿಂದದ್ದು…: ಬಸವನಗೌಡ ಹೆಬ್ಬಳಗೆರೆ ಸರಣಿ

ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಅಡುಗೆ ಕೋಣೆಗೆ ಊಟ ಮಾಡೋಕೆ ಒಬ್ಬನೇ ಹೋದಾಗ ತುಪ್ಪವನ್ನು ಸುರಿದುಕೊಂಡು ತಿನ್ನುತ್ತಿದ್ದೆ. ಕೆಲವೊಮ್ಮೆ ನಮ್ಮತ್ತೆ ಬಂದಾಗ ತಕ್ಷಣ ಹಾಕಿಕೊಂಡ ತುಪ್ಪದ ಮೇಲೆ ಅನ್ನವನ್ನು ಹಾಕಿಕೊಂಡು ತುಪ್ಪವನ್ನು ಹಾಕಿಕೊಂಡಿಲ್ಲವೆಂಬಂತೆ ನಟಿಸುತ್ತಿದ್ದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಖರ್ಚಿಲ್ಲದ ಆಟಿಕೆಗಳು, ಸರ್ಕಸ್ ಕಂಪೆನಿ… ಆ ನೆನಪುಗಳು..: ಬಸವನಗೌಡ ಹೆಬ್ಬಳಗೆರೆ ಸರಣಿ

ಏಳನೇ ತರಗತಿಗೆ ಹೋಗುವ ವೇಳೆಗೆ ನಾನು ಓದುವುದರಲ್ಲಿ ತರಗತಿಗೇ ಮೊದಲಿಗನಾಗಿದ್ದೆ. ಅದರಲ್ಲೂ 7 ನೇ ತರಗತಿಯಲ್ಲಿ ಬುಡೇನ್ ಸಾಬ್ ಮೇಷ್ಟ್ರು ಗಣಿತ ತೆಗೆದುಕೊಂಡ ಮೇಲೆ ನನಗೆ ಗಣಿತ ತುಂಬಾ ಇಷ್ಟದ ವಿಷಯವಾಯಿತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

Read More

ಒಂಟಿತನ, ಖೋಖೋ, ಕಪ್ಪುಬಿಳುಪಿನ ಗಾಂಧಿ ಚಿತ್ರ: ಮಾರುತಿ ಗೋಪಿಕುಂಟೆ ಸರಣಿ

ಮೊದಮೊದಲು ಮೂವತ್ತು ನಲವತ್ತು ಸೆಕೆಂಡ್‌ಗಳಲ್ಲಿ ಔಟಾಗುತ್ತಿದ್ದ ನಾನು ಕ್ರಮೇಣ ಆಟದ ಪಟ್ಟುಗಳನ್ನು ತಿಳಿದುಕೊಂಡು ಒಂದೊಂದೆ ಕಲಿಯುತ್ತಾ ಹೋದೆ. ದಿನಕಳೆದಂತೆ ಎರಡು ನಿಮಿಷ ಓಡುವಷ್ಟರ ಮಟ್ಟಿಗೆ ತರಬೇತಾದೆ. ಹಂತ ಹಂತವಾಗಿ ಆಡುತ್ತಾ ಮೊದಲನೆ ಬ್ಯಾಚ್‌ಗೆ ಶಿಫ್ಟಾದೆ. ಕೊನೆಗೆ ಗಂಡು ಮಕ್ಕಳ ಖೊಖೋ ಪಂದ್ಯಕ್ಕೆ ಕ್ಯಾಪ್ಟನ್ ಆಗುವಷ್ಟರಮಟ್ಟಿಗೆ ಪ್ರಾವೀಣ್ಯತೆ ಪಡೆದೆ.
ಮಾರುತಿ ಗೋಪಿಕುಂಟೆ ಬರೆಯುವ ಸರಣಿ

Read More

ಆಕ್ಸಿಡೆಂಟೂ… ಅಜ್ಜಿಯ ಆರೈಕೆಯೂ: ಸುಮಾವೀಣಾ ಸರಣಿ

ಅಲ್ಲೇ ರಸ್ತೇ ಬದಿಯಲ್ಲಿ ಚಿಕ್ಕ ಟವಲ್ ಹಾಕಿ ನನ್ನನ್ನು ಕೂರಿಸಿ ತಾನೂ ಛತ್ರಿ ಬಿಡಿಸಿ ಕುಳಿತುಕೊಂಡು ಬಿಟ್ಟಳು. ನನಗೋ ಕೋಪವೆಂದರೆ ಕೋಪ. “ನಾನು ಪಾಯಸ ಕುಡಿದಿದ್ದೇನೆ’’ ಅಂದರೆ ಕೇಳಲೇ ಇಲ್ಲ. ಗಲ್ಲ ಸವರಿ, ತಲೆ ಸವರಿ “ಊಟ ವೇಸ್ಟ್ ಮಾಡಬಾರದು….!” ಎನ್ನುತ್ತಾ ತಿನ್ನಿಸಲು ಬಂದರೆ ನಾನು ತಿನ್ನುತ್ತೇನೆಯೇ? ಸಾಧ್ಯನಾ? ತುತ್ತನ್ನಷ್ಟೇ ತಿಂದೆ ಕೋಪದಿಂದ. ತನ್ನ ಕೈಯ್ಯಲ್ಲೇ ನನ್ನ ಬಾಯೊರೆಸಿ “ಜಾಗ್ರತೆ ಈಗ್ ಹೋಗು ಸಂಜೆ ಬೇಗ ಸೈಡಲ್ಲಿ ಬಾ” ಎಂದು ಟಾಟಾ ಹೇಳಿಬಿಟ್ಟಳು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ನೆನಪುಗಳ ಬುತ್ತಿ “ನನ್ನ ಮನೆ”: ಮಾರುತಿ ಗೋಪಿಕುಂಟೆ ಸರಣಿ

ಮನೆ ನೆನೆದರೆ ಸಾಕು ಬಾಲ್ಯದ ಸಿಹಿ ಕಹಿ ಘಟನೆಗಳೆಲ್ಲ ನಮ್ಮ ಕಣ್ಣ ಮುಂದೆ ಹಾದುಹೋಗುತ್ತವೆ. ನಮ್ಮದು ಹಳೆಯ ಕಾಲದ ನಮ್ಮ ತಾತ ಕಟ್ಟಿಸಿದ ಜಂತಿಮನೆ ಮೊದಮೊದಲು ಅದು ಸಗಣಿಯಿಂದ ಶೃಂಗಾರವಾಗುತ್ತಿದ್ದದ್ದು ಕ್ರಮೇಣ ಅದಕ್ಕೆ ಗಾರೆ ಹಾಕಲಾಯಿತು. ಮರಳು ಮತ್ತು ಸುಣ್ಣವನ್ನು ಒಟ್ಟಿಗೆ ಅರೆದು ಕಲಸಿ ಅದನ್ನು ಹಾಸುನೆಲಕ್ಕೆ ನುಣುಪಾದ ಕಲ್ಲಿನಿಂದ ಉಜ್ಜಿ ಉಜ್ಜಿ ನೆಲಕ್ಕೆ ಅಂಟುವಂತೆ ಮಾಡುತ್ತಿದ್ದರು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More
  • 1
  • 2

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…

Read More

ಬರಹ ಭಂಡಾರ