Advertisement

Tag: H Gopalakrishna

ಬೆಂಗಳೂರ “ಶೌಚಾಲಯ”ದ ಇತಿಹಾಸ: ಎಚ್. ಗೋಪಾಲಕೃಷ್ಣ ಸರಣಿ

ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಅವರ ಸಚಿವ ಮಂಡಳಿಯಲ್ಲಿ ಬಸವ ಲಿಂಗಪ್ಪ ಅವರು ನಗರಾಡಳಿತ ಸಚಿವರು. ಅರಸು ಅವರ ಹಾಗೆಯೇ ಇವರದು ಸಹ ಕೆಲವು ಕ್ರಾಂತಿಕಾರಿ ಯೋಜನೆಗಳಿದ್ದವು. ಅವುಗಳಲ್ಲಿ ಒಂದು ಮಲ ಹೊರುವ ಪದ್ಧತಿಯನ್ನು ನಿಲ್ಲಿಸುವುದು. ಇವರ ಆಡಳಿತ ಅವಧಿಯಲ್ಲಿಯೇ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧ ಆಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

“ಗುಳುಂ” ಆದ ಕೆರೆಗಳ ಕಥಾನಕ: ಎಚ್. ಗೋಪಾಲಕೃಷ್ಣ ಸರಣಿ

ಇನ್ನೇನು ಪ್ರಗತಿ ಮೈದಾನ ಬಂದೇ ಬಿಟ್ಟಿತು, ದೆಹಲಿಗೆ ತುಂಬಾ ಹತ್ತಿರ ಆದೆವು ಅನಿಸುವಷ್ಟರಲ್ಲಿ ಮುಖ್ಯ ಮಂತ್ರಿಗಳಿಗೆ ಇದರಿಂದ ಆಗುವ ಪರಿಸರ ಎಡವಟ್ಟಿನ ಬಗ್ಗೆ ಮತ್ತು ಬೆಂಗಳೂರಿಗೆ ಆಗುವ ಹಾನಿಯನ್ನು ಕುರಿತು ಯಾರೋ ಮಹಾನುಭಾವರು ಅರಿವು ಮೂಡಿಸಿದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಗ್ರಹಣವೆಂದವರ “ಗ್ರಹಚಾರ” ಬಿಡಿಸುತ್ತಿದ್ದವರು ನಾವು!: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಅಣ್ಣ ಫಿಲ್ಮ್ ರೋಲ್ ಅನ್ನ ಅವನ ಸ್ನೇಹಿತರ ಮೂಲಕ ಮಿಲಿಟರಿ ಕ್ಯಾಂಟೀನ್‌ನಿಂದ ತರಿಸುತ್ತಿದ್ದ. ಹತ್ತು ರೂಪಾಯಿ ಕಡಿಮೆ ಬೀಳೋದು. ಆಗಲೇ ನನ್ನ ಫೋಟೋ ನಾನೇ ತೆಗಿತಿದ್ದೆ, ಈಗಿನ ಸೆಲ್ಫಿ ಹಾಗೇ. ಕ್ಯಾಮೆರಾ ತಿರುಗಿಸಿ ನನ್ನ ಮುಖ ಅಂದಾಜಿನ ಮೇಲೆ ಲೆನ್ಸ್ ಎದುರು ಇಟ್ಟುಕೊಂಡು ಕ್ಲಿಕ್ ಮಾಡೋದು. ಸೆಲ್ಫಿ ಕಲ್ಪನೆ ಆಗಲೇ ನಾನು ಕಂಡು ಹಿಡಿದಿದ್ದೆ. ಅದು ಚರಿತ್ರೆಯಲ್ಲಿ ಎಲ್ಲೂ ದಾಖಲು ಆಗಲಿಲ್ಲ, ನನ್ನ ಎಷ್ಟೋ ಇನ್ವೆನ್ಷನ್‌ಗಳ ಹಾಗೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಸಂಡೇ ಬಜಾರ್.. “ಮಂಡೆ” ಬಜಾರ್..: ಎಚ್. ಗೋಪಾಲಕೃಷ್ಣ ಸರಣಿ

ಮತ್ತೊಮ್ಮೆ ಆಗಲೇ ಅಪರೂಪ ಅನಿಸಿದ್ದ ಲೆಗ್ ಹಾರ್ಮೋನಿಯಂ ನೋಡಿದ್ದೆ. ಒಮ್ಮೆ ಅಲ್ಲೇ ಬುಲ್ ಬುಲ್ ತರಂಗ ಮಾರೋದನ್ನು ನೋಡಿ ಅದನ್ನ ಕೊಂಡು ತಂದೆ. ಅದನ್ನು ನುಡಿಸುವ ಬಗ್ಗೆ ಒಂದು ಕತ್ತೆ ಕಾಗದದಲ್ಲಿ ಪ್ರಿಂಟ್ ಮಾಡಿದ್ದ ಪುಸ್ತಕ ಬೇರೆ ಕೊಟ್ಟಿದ್ದ. ಅದನ್ನು ಸುಮಾರು ತಿಂಗಳು ನುಡಿಸಲು ಪ್ರಯತ್ನ ಪಟ್ಟೆ. ಹೇಗೆ ನುಡಿಸಿದರೂ ಒಂದೇ ಶಬ್ದ ಬರುತ್ತಿತ್ತು. ಸುಮಾರು ವರ್ಷ ಅಟ್ಟದ ಮೇಲೆ ಕೂತಿತ್ತು ಇದು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೇಳನೆಯ ಕಂತು ನಿಮ್ಮ ಓದಿಗೆ

Read More

ಮೆಜೆಸ್ಟಿಕ್‌ ಎಂಬ ಚಿತ್ರಮಂದಿರಗಳ ನಗರ: ಎಚ್. ಗೋಪಾಲಕೃಷ್ಣ ಸರಣಿ

ಜಯಶ್ರೀ ಚಿತ್ರಮಂದಿರ ಚಾಮರಾಜಪೇಟೆ ಒಂದನೇ ರಸ್ತೆಯ ಕೊನೆಯಲ್ಲಿ ಇತ್ತು. ಅದು ಕಳ್ಳೇಕಾಯಿ ಟಾಕೀಸ್ ಎಂದೇ ಪ್ರಖ್ಯಾತವಾಗಿತ್ತು. ಸುಮಾರಾಗಿ ಹಳೆಯ ಚಿತ್ರಗಳೇ ಅಲ್ಲಿ ಪ್ರದರ್ಶನವಾಗುತ್ತಿತ್ತು. ಆ ಟಾಕೀಸ್‌ಗೆ ಬರುತ್ತಿದ್ದವರು ಬಹುತೇಕ ಕಾರ್ಮಿಕ ವರ್ಗದವರು. ದೂರದೂರದ ಪ್ರದೇಶದವರು. ಅವರು ಹಾಗೆ ಬರುವಾಗ ಟೈಮ್ ಪಾಸ್‌ಗಾಗಿ ಕಳ್ಳೇಕಾಯಿ ತಂದು ತಿನ್ನುತ್ತಿದ್ದರಂತೆ. ಒಂದೊಂದು ಪ್ರದರ್ಶನವಾದಾಗಲೂ ರಾಶಿ ರಾಶಿ ಸಿಪ್ಪೆ ಬಿದ್ದಿರುತ್ತಿತ್ತಂತೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ