ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ
ಮಹಾನ್ ಬುದ್ಧರು ತೀರಿಹೋದ ಮೇಲೂ ಭಿಕ್ಷುಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸ್ತೂಪಗಳನ್ನು ವಿಸ್ತರಿಸುವುದಕ್ಕೆ, ಹೊಸದಾಗಿ ನಿರ್ಮಾಣ ಮಾಡುವುದಕ್ಕೆ, ಆಶ್ರಮ, ಉದ್ಯಾನವನಗಳನ್ನು ರೂಪಿಸುವುದಕ್ಕೆ, ವರ್ತಕರಲ್ಲಿ, ಸೇನಾಧಿಪತಿಗಳಲ್ಲಿ, ಚಕ್ರವರ್ತಿಗಳಲ್ಲಿ ಒಂದು ಸ್ಪರ್ಧೆಯೇ ಏರ್ಪಟ್ಟಂತಿತ್ತು. ಇದೆಲ್ಲವನ್ನೂ ನೋಡಿಕೊಳ್ಳುವುದಕ್ಕೆ ಆನಂದನೊಬ್ಬನಿಗೇ ಸಮಯವಿರುತ್ತಿರಲಿಲ್ಲ, ದಣಿವಾಗುತ್ತಿತ್ತು. ಜವಾಬ್ದಾರಿಯನ್ನು ಹಂಚಿಕೊಳ್ಳಲು ನಂಬುಗೆಯ ಜನರು ಸಮೀಪದಲ್ಲಿರಲಿಲ್ಲ.
ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ ‘ಸಾರಿಪುತ್ರನ ಸಂಸಾರ ಸಾಮ್ರಾಜ್ಯ’