Advertisement

Tag: kendasampige

ಕಾಸರವಳ್ಳಿ, ಕಾಯ್ಕಿಣಿ ಮತ್ತು ಟ್ರಾಫಿಕ್!: ಸುಕನ್ಯಾ ಕನಾರಳ್ಳಿ ಅಂಕಣ

ನಮ್ಮ ಅಪಾರ್ಟ್ಮೆಂಟಿನ ತನಕವೂ ಇದ್ದ ಪೊಲೀಸರನ್ನು ಕಂಡಾಗ ಮಾತ್ರ ಇದು ಜಯಂತ ಎಫೆಕ್ಟ್ ಅಲ್ಲ ಅಂತ ಅರಿವಾಗಿತ್ತು. ಸೆಕ್ಯೂರಿಟಿ ಹತ್ತಿರ ನಿಲ್ಲಿಸಿ ಏನ್ರೀ ಇದು ಅವಾಂತರ ಎಂದು ವಿಚಾರಿಸಿದೆ. ‘ಅಯ್ಯೋ, ಮೇಡಮ್. ಸಿಎಂ ಬರ್ತಾ ಇದಾರೆ. ಪಕ್ಕದ ಹೋಟೆಲ್ಲಿನಲ್ಲಿ ಪ್ರಜಾವಾಣಿ ವಾರ್ಷಿಕ ಸಾಧಕಿಯರಿಗೆ ಅಭಿನಂದನೆ ಸಮಾರಂಭ ಇದೆ. ನಿಮ್ಮ ಹೆಸರು ಸಹ ಒಂದಲ್ಲಾ ಒಂದು ದಿನ ಬರುತ್ತೆ ನೋಡ್ತಾ ಇರಿ,’ ಎಂದು ರೇಗಿಸಿದಾಗ, ‘ಆ ಹೊತ್ತಿಗೆ ನಾನು ಇರೊಲ್ಲ. ಇದ್ದರೂ ಹೋಗೊಲ್ಲ,’ ಎಂದು ಉಡಾಫೆಯಿಂದ ನಕ್ಕು ಗೇಟನ್ನು ದಾಟಿ ಒಳಹೊಕ್ಕು ಸಮಾಧಾನದ ನಿಟ್ಟುಸಿರು ಬಿಟ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕನ್ನಡ ವಿಜ್ಞಾನ ಸಂವಹನಕ್ಕೆ ಡಾ. ಕೆ. ಶಿವರಾಮ ಕಾರಂತರ ಕೊಡುಗೆ: ಎಲ್. ಜಿ. ಮೀರಾ ಅಂಕಣ

ಇಂತಹ ವಿಚಾರ ಮನಸ್ಸಿಗೆ ಬಂದ ಮೇಲೆ ಕಾರಂತರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಮಕ್ಕಳಿಗೆ ತಮ್ಮ ಜಿಲ್ಲೆಯಾದ ದಕ್ಷಿಣಕನ್ನಡದ ಪರಿಚಯವನ್ನು ಸ್ವಾರಸ್ಯಕರವಾಗಿ ಮತ್ತು ಚಿತ್ರಸಹಿತವಾಗಿ ಮಾಡಿಕೊಡುವ `ಚಿತ್ರಮಯ ದಕ್ಷಿಣಕನ್ನಡ’ ಕೃತಿಯನ್ನು ರಚಿಸಿಯೇಬಿಟ್ಟರು. ಇದಕ್ಕಾಗಿ ಜಿಲ್ಲೆಯ ತುಂಬ ಓಡಾಡಿ ಅನೇಕ ಛಾಯಾಚಿತ್ರಗಳನ್ನು ತೆಗೆದರು, ಚಿತ್ರಗಳನ್ನು ಸ್ವತಃ ಬರೆದರು! ಮುಂದೆ ಮಕ್ಕಳಿಗಾಗಿ ಮತ್ತು ಆಸಕ್ತ ದೊಡ್ಡವರಿಗಾಗಿ `ದಕ್ಷಿಣ ಹಿಂದೂಸ್ಥಾನ’ ಕೃತಿಯನ್ನು ಹಾಗೂ `ಬಾಲಪ್ರಪಂಚ’, `ವಿಜ್ಞಾನ ಪ್ರಪಂಚ’ ಎಂಬ ವಿಶ್ವಕೋಶಗಳನ್ನು ರಚಿಸಿದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೈದನೆಯ ಬರಹ

Read More

ಆರ್.‌ ಪವನ್‌ ಕುಮಾರ್‌ ಬರೆದ ಈ ಭಾನುವಾರದ ಕತೆ “ಗುರುತು”

ಸರೋಜಮ್ಮ ಇದನ್ನು ಸರಿ ತಪ್ಪು ಎಂದು ತರ್ಕ ಮಾಡಲು ಹೋಗಲಿಲ್ಲ. ಅವಳೊಳಗೆ ಹೆಣ್ಣಿನ ಅಂತರಂಗದ ತುಮುಲಗಳ ಬಗ್ಗೆ ಗೌರವವಿದ್ದು, ಅದಕ್ಕೆ ಗಂಡು ಸೂಕ್ತವಾಗಿ ಪ್ರತಿಕ್ರಿಯಿಸದೆ ಹೋದರೆ ಇಂಥವೆಲ್ಲಾ ಘಟಿಸಿ ಹೋಗುತ್ತವೆ ಎಂದುಕೊಂಡಿದ್ದಳು. ತನ್ನ ಮಗ ಇದರಲ್ಲಿ ಸಂಪೂರ್ಣ ಸೋತವನೆಂದು ಅರಿವಾಗಿತ್ತು. ಇನ್ನೂ ಮಗನೂ ಅಷ್ಟೇ ತನ್ನ ಚಟಗಳಿಗೆ ಇದನ್ನೆ ಮತ್ತೊಂದು ನೆಪ ಮಾಡಿಕೊಂಡವನು ಮನೆ ಮರೆತು ತನಗೆ ಅನುಕೂಲವಾದ ಕಡೆ ತಿರುಗುತ್ತ ಎಂದಾದರೊಮ್ಮೆ ಮನೆಗೆ ಬರುತ್ತಿದ್ದ.
ಆರ್.‌ ಪವನ್‌ ಕುಮಾರ್‌ ಬರೆದ ಕತೆ “ಗುರುತು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಆಸ್ಟ್ರೇಲಿಯಾದ ಎನ್‌ಡಿಐಎಸ್‌ ಅನುದಾನದ ಏಳುಬೀಳುಗಳು: ಡಾ. ವಿನತೆ ಶರ್ಮ ಅಂಕಣ

ಈ NDIS ಸಹಾಯವನ್ನು ಪಡೆಯಲು ಕೆಲವು ಅರ್ಹತಾ ಮಾನದಂಡಗಳಿವೆ. ಅನುದಾನವನ್ನು ಕೋರಲು ಅಭ್ಯರ್ಥಿಗಳು ತಮಗಿರುವ ಅಂಗ ಮತ್ತು ಮಾನಸಿಕ ನ್ಯೂನತೆಗಳ ತಪಾಸಣಾ ವರದಿಗಳನ್ನು ಸಲ್ಲಿಸಬೇಕು. ತಮ್ಮ ಕುಟುಂಬ ವಾರ್ಷಿಕ ಆದಾಯ, ಸ್ಥಿರ, ಅಸ್ಥಿರ ಆಸ್ತಿ ವಿವರಗಳು, ಇರುವ ಸಾಮರ್ಥ್ಯಗಳ ಬಳಕೆ, ದೌರ್ಬಲ್ಯಗಳಿಂದ ಆಗುತ್ತಿರುವ ಪರಿಣಾಮ, ಹೀಗೇ ಅನೇಕ ದಾಖಲೆಗಳನ್ನು ಒದಗಿಸಬೇಕು. ಇವನ್ನೆಲ್ಲಾ ಪಡೆಯುವುದು, ಒದಗಿಸುವುದು ಸುಲಭದ ಮಾತಲ್ಲ. ಅನೇಕರಿಗೆ ಇದು ದೊಡ್ಡ ಚಾಲೆಂಜ್. ಇವರೊಡನೆ ಇವರ ಕುಟುಂಬ ಸದಸ್ಯರೂ ಕಣಕ್ಕಿಳಿದು ಪರದಾಡಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

ಅಪ್ಪನ ಅಂಗೈಯಲ್ಲಿ ತಿರುಗುವ ಚಕ್ರಗಳು…: ಲೈಲಾ ಪರ್ವೀನ್‌ ಬರಹ

ಬಾಬಾ ಎಲ್ಲಿಗೆ ಬೇಕಾದರೂ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದರು. ಅದು ಕಾಡಾಗಲಿ, ಸಣ್ಣ ಹಳುವಾಗಲಿ, ಗದ್ದೆ ಅಂಚಾಗಲಿ, ಕಲ್ಲುಗೊಜ್ಜಿನ ರಸ್ತೆಯಾಗಲಿ, ಯಾರ ಮನೆಯಂಗಳವೇ ಆಗಲಿ, ಯಾವ ರೀತಿಯ ಏರು ತಗ್ಗುಗಳಿರಲಿ, ಗುಂಡಿಗಳಿರಲಿ, ಬಂಡೆಕಲ್ಲೇ ಇರಲಿ ಎಲ್ಲದರ ಮೇಲೂ ಸೈಕಲ್ ಓಡಿಸುವ ಛಾತಿಯಿತ್ತು ಅವರಿಗೆ. ಹೇಳಿ ಕೇಳಿ ಸೈಕಲ್ಲುಗಳ ನಾಡಿಮಿಡಿತ ಬಲ್ಲ ವೈದ್ಯರಲ್ಲವೇ? ಸೈಕಲ್ಲು ಎಲ್ಲಿ ಹೇಗೆ ಹೋಗಬಲ್ಲುದು ಹಾಗೂ ಎಲ್ಲಿ ಹೋಗಲಾರದೆಂಬುದನ್ನು ಅವರಿಗಿಂತ ಚೆನ್ನಾಗಿ ಬಲ್ಲವರಿಲ್ಲ.
ತಮ್ಮ ತಂದೆಯವರ ಸೈಕಲ್‌ ಪ್ರೇಮದ ಕುರಿತು ಲೈಲಾ ಪರ್ವೀನ್‌ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ