Advertisement

Tag: kendasampige

ಒಮಾಹಾದಲ್ಲಿ ಟೊಮೆಟೋ ಸಾರು!: ಗುರುಪ್ರಸಾದ ಕುರ್ತಕೋಟಿ ಸರಣಿ

ನಮ್ಮವರಲ್ಲಿ ಹೆಚ್ಚಿನವರು ಅಲ್ಲಿನವರಿಗೆ ತುಂಬಾ ಹೆದರುತ್ತೇವೆ. ಅಮೆರಿಕನ್ನರು ತುಂಬಾ superior ಅಂತ ನಮ್ಮವರು ಭಾವಿಸಿಬಿಡುತ್ತಾರೆ. ಅಲ್ಲಿಗೆ ಹೋದಾಗಲೆ ಅದು ಸುಳ್ಳು ಅಂತ ಗೊತ್ತಾಗುತ್ತದೆ. ಅವರೂ ಕೂಡ ನಮ್ಮಂತೆಯೇ ಮನುಷ್ಯರೇ, ಅವರಿಗೂ ತಮ್ಮ ದೈನಂದಿನ ಆಗುಹೋಗುಗಳ ಬಗ್ಗೆ ಕಳವಳ ಇದೆ, ಅವರಿಗೂ ದುಡ್ಡಿನ ಚಿಂತೆ ಇದೆ, ತಾವು ಒಂದು ವೇಳೆ ಕೆಲಸ ಕಳೆದುಕೊಂಡರೆ ಹೇಗೆ ಎಂಬ ಭಯ ಇದೆ.. ಇತ್ಯಾದಿ..
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಏಳನೆಯ ಬರಹ

Read More

ಲಿಂಗರಾಜ ಸೊಟ್ಟಪ್ಪನವರ್‌ ಹೊಸ ಅಂಕಣ “ಉತ್ತರದ ಕತೆಗಳು” ಶುರು..

ನಿತ್ಯ ಬದುಕಿನ ಜಂಜಡಗಳನ್ನು ಹಗುರಗೊಳಿಸಿಕೊಳ್ಳುವ ಸಾಧನ ಮಾರ್ಗಗಳಾಗಿ ಇವು ಬಳಕೆಯಲ್ಲಿವೆ. ಇವುಗಳು ವೈಯಕ್ತಿಕ ಬದುಕನ್ನು ರಂಜಿನೀಯಗೊಳಿಸುವಲ್ಲಿ ಮತ್ತು ಸಾಮಾಜಿಕವಾದ ಪರಸ್ಪರವಾದ ಒಂದು ಬಂಧವನ್ನು ಮನುಷ್ಯ ಮನುಷ್ಯರ ನಡುವೆ ರೂಪಿಸುವಲ್ಲಿ ಮಹತ್ವವಾದವು. ಇದನ್ನು ಜಾನಪದ ದಾರಿ ಸಾಬೀತುಪಡಿಸಿದೆ.
ಲಿಂಗರಾಜ ಸೊಟ್ಟಪ್ಪನವರ್‌ ಬರೆಯುವ ಉತ್ತರ ಕರ್ನಾಟಕದ ಬದುಕು ಮತ್ತು ಸಂಸ್ಕೃತಿಯ ಕುರಿತ ಅಂಕಣ “ಉತ್ತರದ ಕತೆಗಳು”

Read More

ಹೊಸ ಹಾದಿಯಲ್ಲಿ ನಡಿಗೆಯ ಸವಾಲುಗಳು..: ಎಸ್ ನಾಗಶ್ರೀ ಅಜಯ್ ಅಂಕಣ

ಕೇಳಿದವರಿಗೆ ಏನು ಮಹಾ ಎನ್ನಿಸುವ ಸಣ್ಣಪುಟ್ಟ ವಿಚಾರಗಳು ಹೊಸ ವಾತಾವರಣದಲ್ಲಿ ಚಪ್ಪಲಿಯೊಳಗೆ ಸೇರಿದ ಮರಳಿನ ಕಣದಂತೆ ಒತ್ತುತ್ತಿರುತ್ತವೆ. ಒಂದೇ ಜಾತಿ, ಉಪಜಾತಿ, ಪಂಗಡದಲ್ಲೇ ಮದುವೆಯಾದರೂ ಮನೆಯ ಪದ್ಧತಿ, ಸಂಪ್ರದಾಯ, ಇಷ್ಟಾನಿಷ್ಟಗಳಲ್ಲಿ ಹಲವು ವ್ಯತ್ಯಾಸಗಳು. ಬೆರಳು ಚುರಕ್ಕೆನ್ನುವಷ್ಟು ಸುಡುವ, ಹಬೆಯಾಡುವ ಊಟ ಇಷ್ಟಪಡುವ ಮನೆಯಿಂದ, ತಣ್ಣಗೆ ಆರಿ ಅಕ್ಷತೆಯಾದ ಅನ್ನ, ಉಗುರುಬೆಚ್ಚಗಿನ ಸಾರು ತಿನ್ನುವ ಮನೆಗೆ ಬಂದರೆ ತುತ್ತು ಗಂಟಲಿನಿಂದ ಕೆಳಗಿಳಿಯಲ್ಲ.
ಎಸ್ ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ತಿಜೋರಿಯಿಂದ ತಪ್ಪಿಸಿಕೊಂಡ ಘಳಿಗೆಗಳೆಷ್ಟೋ…: ಆಶಾ ಜಗದೀಶ್ ಅಂಕಣ

ಸುಮ್ಮನೇ ತಟ್ಟೆಯ ಮುಂದೆ ಕುಳಿತು ಸಮಯ ಉರುಳದಂತೆ, ಈ ತುತ್ತು ಮತ್ತಾರದೋ ಚೀಲ ಸೇರಲಿ ಎಂದಷ್ಟೇ ಪ್ರಾರ್ಥಿಸುತ್ತಾ… ಇಷ್ಟೇ ಅಲ್ಲವಾ ಈ ಬದುಕು ಎನ್ನುವ ಅಂತಿಮ ಸತ್ಯದ ದರ್ಶನವಾದಾಗ ಯಾವುದೆಲ್ಲವನ್ನು ಬೇಕು ಎಂದುಕೊಳ್ಳುತ್ತಿದ್ದೇವೋ ಅದಾವುದೂ ನಮ್ಮ ಆತ್ಯಂತಿಕ ಜರೂರತ್ತಿನ ಪಟ್ಟಿಯಲ್ಲಿ ಇರಲೇ ಇಲ್ಲ ಎನ್ನುವುದನ್ನು ಪ್ರಯಾಸದಿಂದ ಮನಗಾಣುತ್ತಾ… ಯಾವುದೂ ಪೂರ್ಣವಲ್ಲ ಇಲ್ಲಿ… ಈ ರೈಲು ಬಂಡಿ, ನಾವು ಹತ್ತುವ ಮುಂಚೆಯೇ ಪಯಣ ಆರಂಭಿಸಿತ್ತು ಮತ್ತು ನಾವು ಇಳಿದ ನಂತರವೂ ಪಯಣಿಸುತ್ತಲೇ ಇರುತ್ತದೆ..
ಆಶಾ ಜಗದೀಶ್ ಅಂಕಣ “ಆಶಾ ಲಹರಿ”

Read More

ನನ್ನ ತವನಿಧಿ…: ರಂಜಾನ್ ದರ್ಗಾ ಬರೆಯುವ ಸರಣಿ

ಜನಸಾಮಾನ್ಯರ ಶಕ್ತಿಯಲ್ಲಿ ಮತ್ತು ಜ್ಞಾನ ಶಕ್ತಿಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇದೆ. ಒಬ್ಬ ವಕೀಲನಿಗೆ ತನ್ನ ಕ್ಷೇತ್ರದಲ್ಲಿನ ಎಷ್ಟು ಶಬ್ದಗಳು ಗೊತ್ತಿವೆಯೋ ಅದಕ್ಕಿಂತ ಹೆಚ್ಚಿನ ಶಬ್ದಗಳು ಮೀನುಗಾರನಿಗೆ ಅವನ ಸಮುದ್ರ ಸಂಬಂಧದಿಂದ ಗೊತ್ತಾಗುತ್ತವೆ ಎಂದು ಅವರು ಹೇಳಿದ್ದರು. ಆತನಿಗೆ ವಿವಿಧ ಜಾತಿಯ ಜಲಚರಗಳು, ಗಾಳಿ, ಮೋಡಗಳು, ತೆರೆಗಳು, ಕಾಲ ಮತ್ತು ದಿನಮಾನಗಳ ಪರಿಚಯವಿರುತ್ತದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 68ನೇ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ