Advertisement

Tag: kendasampige

ಒಂದು ಕೊನೇ ರೌಂಡು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸ್ವಾಮಿಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಮಣಿ, “ಕಾರ್ ಚೆನ್ನಾಗಿದೆ. ತಿಂಡಿ ತಿಂದ ಮೇಲೆ ನನ್ನನ್ನು ಒಂದು ರೌಂಡ್ ಹಾಕಪ್ಪ ಸ್ವಾಮಿ” ಎಂದಿದ್ದು ಸ್ವಾಮಿ, “ಅದೇನು ದೊಡ್ಡ ವಿಷಯ. ಒಂದಲ್ಲ ಎರಡು ರೌಂಡ್ ಹಾಕೋಣ ಬಿಡು” ಎಂಬ ಮಾತುಗಳು ಜ್ಞಾಪಕಕ್ಕೆ ಬಂದವು. ಸ್ವಾಮಿ ಕೈಕೈ ಹಿಸುಕಿಕೊಂಡು ನನ್ನಿಂದ ಅಪಾರಾಧ ನಡೆದು ಹೋಯಿತಲ್ಲ ಎಂದುಕೊಳ್ಳುತ್ತ.. ಸ್ವಾಮಿ, “ದೇವರೆ ಈ ದಿನ ಬೆಳಿಗ್ಗೆ ನನ್ನನ್ನು ಯಾಕಪ್ಪ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ಅಳತೊಡಗಿದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಕೊನೆಯ ಕಂತು

Read More

ಟು ಡು ಲಿಸ್ಟ್‌ ಹಾಗೂ ರದ್ದಿ ಹಾಳೆಯ ಕತೆಗಳು….: ಎಚ್‌. ಗೋಪಾಲಕೃಷ್ಣ ಸರಣಿ

ನನ್ನ ಅನುಭವಗಳನ್ನು ಕೊಂಚ, ಕೊಂಚ ಏನೂ ತುಂಬಾ ಹೆಚ್ಚಾಗಿಯೇ ಉತ್ಪ್ರೇಕ್ಷಿಸಿ ಬುರುಡೆ ಅಂದರೆ ಸಖತ್ ಬುರುಡೆ ಬಿಡುತ್ತಿದ್ದೆ. ಈ ಬುರುಡೆಯಲ್ಲಿ ಬಹಳ ಮುಖ್ಯವಾಗಿ ಬ್ಯಾಂಕ್ ಡೈರೆಕ್ಟರ್ ಜತೆ ಇಂಟರ್ವ್ಯೂ ಮಾಡಿಸಿಕೊಂಡು ಸಾಲವನ್ನು ಮೂವತ್ತು ಸಾವಿರದಿಂದ ಮೂವತ್ತ ಮೂರು ಸಾವಿರ ಹೆಚ್ಚಿಸಿದ್ದು, ಬೇವಿನ ಮರದ ಹಳೇ ಬಾಗಿಲು ಕೊಂಡು ಟೋಪಿ ಬಿದ್ದದ್ದು, ಕುಬೇರಪ್ಪ ಹಳದಿ ಇಂಗಿನ ಬ್ಯಾಗ್‌ನಲ್ಲಿ ಕೇಜಿ ಅಷ್ಟು ಚಿನ್ನ ತುಂಬಿಕೊಂಡು ಯಶವಂತ ಪುರಕ್ಕೆ ನಡೆದುಕೊಂಡು ಹೋಗಿ ಚಿನ್ನ ಮಾರಿದ್ದೂ, ನನ್ನ ಹತ್ತಿರ ಊಹೂಂ ನನ್ನ ಹತ್ತಿರ ಅಲ್ಲ, ನನ್ನಾಕೆ ಹತ್ತಿರ ಮುಕ್ಕಾಲು ಗ್ರಾಮ್‌ನ ತಾಳಿ ಇರೋದು…. ಇವೆಲ್ಲಾ ಸೇರಿರುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಪ್ರಕೃತಿಯೇ ದೈವವೆನ್ನುವ ದೈಯ್ಯದ ಹರಕೆ: ಭವ್ಯ ಟಿ.ಎಸ್. ಸರಣಿ

ರಮಣೀಯವಾದ ಹಚ್ಚಹಸಿರಿನ ಮಲೆನಾಡಿನ ಒಂಟಿ ಮನೆಗಳ ಅಕ್ಕಪಕ್ಕದ ದರುಗು ಗುಡಿಸುವ ಹಡ್ಡೆಗಳ ಬನದೊಳಗೆ ಇರುವ ಮರದ ಬುಡಗಳೇ ಈ ದೈಯ್ಯಗಳ ಆವಾಸಸ್ಥಾನ. ಪ್ರಕೃತಿ, ಮರ-ಗಿಡಗಳಲ್ಲಿ ದೈವತ್ವವನ್ನು ಕಾಣುವ ಮಲೆಯ ಜನರ ಭಕ್ತಿ, ಶ್ರದ್ಧೆಗಳಿಗೆ ಈ ದೈಯ್ಯಗಳು ಪಾತ್ರವಾಗಿವೆ. ದೈಯ್ಯದ ಮರಗಳೆಂಬ ಭಯ, ಭಕ್ತಿಯಿಂದ ಈ ಮರಗಳನ್ನು ಯಾರೂ ಕಡಿಯುವುದಿಲ್ಲ. ಇದರಿಂದ ಪ್ರಕೃತಿಯ ಸಂರಕ್ಷಣೆಯೂ ಆಗುತ್ತಿದೆ. ಊರು ತೊರೆದು ಬೇರೆ ಬೇರೆ ಊರಿಗೆ ಹೋಗಿ ನೆಲೆಸಿರುವ ಜನರು ಪುನಃ ಊರಿಗೆ ಬರುವುದು, ಬಂಧು ಬಾಂಧವರೊಡನೆ ಬೆರೆಯಲು ಇದೊಂದು ಸುದಿನ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ದೇವರ ಹರಕೆ ಸಲ್ಲಿಸುವುದರ ಕುರಿತ ಬರಹ ನಿಮ್ಮ ಓದಿಗೆ

Read More

ಅಲಾರಾಂ ಹಾಗೂ ಓದುವ ವೇಳೆಯ ಕುರಿತು ಒಂದಷ್ಟು ಮಾತು… ಬಸವನಗೌಡ ಹೆಬ್ಬಳಗೆರೆ ಸರಣಿ

ನಮ್ಮಜ್ಜನ ಮನೆಯಲ್ಲಿ ಇದ್ದಾಗ, ನಮ್ಮಜ್ಜ ನನ್ನನ್ನು ಬೆಳಗ್ಗೆ ಏಳಿಸುವ ಅಲಾರಾಂನಂತೆ ಕೆಲಸ ಮಾಡುತ್ತಿದ್ದರು. ಆದರೆ ಯಾವಾಗ ಹಾಸ್ಟೆಲ್ ಸೇರಿದೆನೋ ಅಲ್ಲಿ ಹಾಸ್ಟೆಲ್ ವಾರ್ಡನ್ ಪೀಪಿಯನ್ನು ಊದಿ ಏಳಿಸುತ್ತಿದ್ದರು. ಆಗ ನಮ್ಮ ಮಲ್ಲಾಡಿಹಳ್ಳಿಯ ಹಾಸ್ಟೆಲ್ಲಿನಲ್ಲಿ ತುಂಬಾ ಶಿಸ್ತು ಇತ್ತು. ನಾವು ಕಡ್ಡಾಯವಾಗಿ ಬೆಳಗ್ಗೆ 5 ಕ್ಕೆ ಏಳಲೇಬೇಕಾಗಿತ್ತು. ಏಳದಿದ್ದರೆ ಕೋಲು ಹಿಡಿದುಕೊಂಡು ಬರುತ್ತಿದ್ದರು. ಒಂದೊಮ್ಮೆ ಮಲಗಿರುವುದನ್ನು ಕಂಡರೆ ಕುಂಡೆಯ ಮೇಲೆ ಬಾರಿಸುತ್ತಾ ಹೋಗುತ್ತಿದ್ದರು, ಬೆಳಗ್ಗೆ ಎದ್ದು ಕೆಲವರು ಓದುತ್ತಾ ಕುಳಿತರೆ ಕೆಲವರು ಬ್ರಷ್ ಮಾಡಲು ಹೋಗುತ್ತಿದ್ದರು. ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಪದಗಳಲ್ಲಡಗಿದ ಅನೇಕಾರ್ಥ ಮತ್ತು ನ್ಯಾಂಡೊ ಪೆರಾಡೊ: ಸುಮಾವೀಣಾ ಸರಣಿ

ಈ ‘ಮಾನ’ ಎಂದಾಗ ಮೊನ್ನೆ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತವೇ ನೆನಪಾಗುತ್ತದೆ. ‘ವಿಮಾನ’ ಬರೆ ಪ್ರಯಾಣಿಕರನ್ನು ಹೊತ್ತು ಸಾಗುವುದಲ್ಲ. ದೇವಾಲಯದ ಗರ್ಭಗುಡಿಯ ಮೇಲ್ಭಾಗದ ಗೋಪುರಕ್ಕೂ ‘ವಿಮಾನ’ ಎಂದು ಕರೆಯುತ್ತಾರೆ. ವಿಚಿತ್ರ ಎಂದರೆ ಪಾರ್ಥೀವ ಶರೀರವನ್ನು ಸಾಗಿಸುವ ಬಿದಿರಿನ ಜೋಡಣೆಗೂ ವಿಮಾನವೆನ್ನುವರು. ಒಂದೊಮ್ಮೆ ತಿರುಪತಿ ಗೋವಿಂದರಾಜ ದೇವಸ್ಥಾನವನ್ನು ವೀಕ್ಷಣೆ ಮಾಡುತ್ತಾ ಇದು ‘ವಿಮಾನ ಗೋಪುರ’ ಎಂದು ವಿವರಿಸುತ್ತಿದ್ದಂತೆ ನಿಜವಾಗಿ ವಿಮಾನವೊಂದು ಹಾರಿ ಹೋಗಿದ್ದು ಇಲ್ಲಿ ನೆನಪಾಗುತ್ತಿದೆ…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ