Advertisement

Tag: kendasampige

ಅಮ್ಮ ಮತ್ತು ಹುಣ್ಣಿಮೆ: ಸುಧಾ ಆಡುಕಳ ಬರಹ

ಪ್ರತಿದಿನ ಸ್ನಾನಮಾಡಿ ಬಂದಕೂಡಲೇ ಅಮ್ಮ ಮುಖದ ತುಂಬ ಪಾಂಡ್ಸ್ ಪೌಡರನ್ನು ಢಾಳಾಗಿ ಹಚ್ಚಿಕೊಳ್ಳುತ್ತಿದ್ದಳು. ಅಶ್ವತ್ಥದ ಎಲೆಯಾಕಾರದಲ್ಲಿ ಕಾಡಿಗೆಯನ್ನು ಚಂದಗೆ ಬೊಟ್ಟಾಗಿಸುತ್ತಿದ್ದಳು. ಎಲ್ಲರಂತೆ ಕುಂಕುಮವನ್ನು ಹಣೆಗೆ, ತಾಳಿಗೆ ಹಚ್ಚಿಕೊಳ್ಳದೇ ತುಟಿಗೆ ನವಿರಾಗಿ ಲೇಪಿಸಿಕೊಳ್ಳುತ್ತಿದ್ದಳು. ಎಲ್ಲವೂ ಮುಗಿದು ಕನ್ನಡಿಯಲೊಮ್ಮೆ ಇಣುಕುವಾಗ ಅವಳ ಮುಖದಲ್ಲೊಂದು ಹೂ-ನಗೆಯಿರುತ್ತಿತ್ತು.
ಇಪ್ಪತ್ತೊಂಭತ್ತು ವರ್ಷಗಳ ಹಿಂದೆ ಹುಣ್ಣಿಮೆಯ ರಾತ್ರಿ ತೀರಿಕೊಂಡ ತಮ್ಮ ತಾಯಿಯ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಬದುಕಿಗೆ ಪರಿಧಿಯ ಬರೆವ ಕರ್ಮಫಲವೆಂಬ ಕೈವಾರ: ರಾಮ್ ಪ್ರಕಾಶ್ ರೈ ಕೆ ಸರಣಿ

ಸುಜಿಗೆ ಒಳ್ಳೆಯ ಬದುಕಿತ್ತು. ಮಧುವಿನ ಪತ್ನಿಗೂ. ಆದರೆ, ಅವಳಲ್ಲಿನ ಖಾಲಿತನವನ್ನು ತುಂಬಲು ಆಕೆ ಹೊರಟಳು. ಸುಜಿ ಆ ಅವಕಾಶವನ್ನು ಬಳಸಿ ಆಕೆಯ ನಂಬಿಕೆ, ಆತ್ಮಾಭಿಮಾನದ ಜೊತೆಗೆ ಆಟವಾಡಿಬಿಟ್ಟ. ಇವೆಲ್ಲವೂ ನಡೆದಾಗ ಮಧು ಮೂಕ ಪ್ರೇಕ್ಷನಾಗಿದ್ದ. ಆದರೆ ಪತ್ನಿಯ ಮೇಲಿನ ಆತನ ಅಸ್ಖಲಿತ ಪ್ರೇಮ, ಗೌರವಕ್ಕೆ ಧಕ್ಕೆಯಾದಾಗ ಆತ ಹಿಂಸೆಯ ದಾರಿಯ ಹಿಡಿದ. ಸರಿ ತಪ್ಪುಗಳಾಚೆ ಇಂತಹ ಅದೆಷ್ಟೋ ಕ್ರಿಮಿಗಳಿಗೆ ‘ಸಾವು ಮಲಗಿರುತ್ತೆ ನಿನ್ನ ಪಕ್ಕದಲ್ಲೇ, ಗೊತ್ತಾಗೋದು ಎದ್ದಾಗಲೇ’ ಎಂದು ಪಾಠವಾಯಿತು ಆತನ ನಡೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಇಲಾ ವಿಳಾ ಪೂಂಚಿರಾ’ ಸಿನಿಮಾದ ವಿಶ್ಲೇಷಣೆ

Read More

ತಾಕಲಾಟಗಳ ಮೌನದಲ್ಲಿ ಮೂಡಿದ ವಸಂತ: ನಾರಾಯಣ ಯಾಜಿ ಬರಹ

ಚರ್ಚಿನಲ್ಲಿ ಹಾಡಿದ ಮಗಳು ರೈಲಿನ ಟಿಕೆಟ್ಟಿಗೆ ಹಣ ಕೂಡಿಟ್ಟಿದ್ದನ್ನು ತಿಳಿದಾಗ ಅದನ್ನು ದೆವ್ವವೆನ್ನುವಂತೆ ದೂರ ಎಸೆಯುವ ಅಸಹಾಯಕತೆ ಮತ್ತು ಉಮ್ಮಳಿಸುವ ದುಃಖ, ಕೋಪಬಂದರೂ ಅಜ್ಜನ ಭಾವನೆಯನ್ನು ಅರ್ಥಮಾಡಿಕೊಂಡು ಮೊಮ್ಮಗಳು ಒಳಗೊಳಗೇ ಅನುಭವಿಸುವ ತುಮುಲ ಇವೆಲ್ಲವನ್ನೂ ರಂಗದಲ್ಲಿ ತೆರೆದಿಡುವ ನಾಟಕದ ಕೊನೆಯಲ್ಲಿ ಮೊಮ್ಮಗಳು ಅಜ್ಜನನ್ನು ಒಪ್ಪಿಸಿ ಹೊರಟು ಹೋಗುವಾಗ ಮಗುವಿನ ಪ್ರತಿಭೆ ಕಾಡ ಬೆಳದಿಂಗಳಾಗಲಿಲ್ಲವಲ್ಲ ಎನ್ನುವ ನಿಟ್ಟಿಸಿರು, ಅಜ್ಜನ ಪಾಡು ಎಂಥದೋ ಎನ್ನುವ ನೋವು ಎರಡೂ ಕಾಡುತ್ತದೆ.
ಡಾ. ಶ್ರೀಪಾದ ಭಟ್ ನಿರ್ದೇಶನದ “ಮೌನ ಕಣಿವೆಯ ಹಾಡು” ನಾಟಕದ ಕುರಿತು ನಾರಾಯಣ ಯಾಜಿ ಬರಹ

Read More

ಹೋಳಿಗೆ ಕೊಡಿಸಿದ ಯುಗಾದಿ ಚಂದಿರ..: ಪೂರ್ಣೇಶ್‌ ಮತ್ತಾವರ ಸರಣಿ

ಹಬ್ಬದ ಹಿಂದಿನ ಸಂಜೆ “ನಾಳೆ ರಜಾ, ಕೋಳಿ ಮಜಾ..” ಎನ್ನುತ್ತಾ ರಜೆಯ ಸಡಗರವನ್ನು ಅನುಭವಿಸಿ, ಹಗಲಿಡೀ‌‌ ಆಟವಾಡಿ, ಮಧ್ಯಾಹ್ನ ಸಿಹಿ‌ ತಿಂದು ಖುಷಿಪಟ್ಟವರು ಸಂಜೆಯಾಗುತ್ತಲೇ ನಮಗೆ ತಿಳಿಯದಲೇ ಬೇಸರಿಸಿಕೊಂಡು ಬಿಡುತ್ತಿದ್ದೆವು. “ಹೋಂ ಸಿಕ್ ನೆಸ್” ಎಂಬುದು ನಮಗರಿವಿಲ್ಲದಲೇ ಹಬ್ಬದ ದಿನಗಳಲ್ಲೇ ಹೆಚ್ಚಾಗಿ ನಮ್ಮನ್ನು ಆವರಿಸಿಕೊಂಡು ಬಿಡುತ್ತಿತ್ತು. ಕೊಟ್ಟ ಹೋಂ ವರ್ಕ್ “ನಾಳೆ ಮಾಡಿದರಾಯ್ತು” ಎಂದು ಮುಂದೂಡಿ ಈಗ ಮಾಡಬೇಕಿರುವುದೂ ನಮ್ಮ ದುಃಖವನ್ನು ಮತ್ತಷ್ಟು ಹೆಚ್ಚಿಸಿ ಬಿಡುತ್ತಿತ್ತು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹನ್ನೆರಡನೆಯ ಬರಹ

Read More

ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

“ಬಂಧಿಸಲಾಗದು ಪ್ರೀತಿಯ
ರೂಪಕಗಳ ಬಂಧೀಖಾನೆಯಲ್ಲಿ,
ಹಾರುತ್ತದೆ ಪ್ರೀತಿಯ ಹಕ್ಕಿ
ಬಿಗುಮಾನದಲ್ಲಿ,
ಕಟ್ಟುತ್ತದೆ ಗೂಡು
ನೊಂದ ಹೃದಯದಲ್ಲಿ” -ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ