Advertisement

Tag: kendasampige

ನಮ್ಮೂರಿನ ಕತೆಗಳು: ಸುಮಾ ಸತೀಶ್ ಸರಣಿ

ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ‌ ಹಠ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಕುರಿತ ಬರಹ

Read More

ತಿಳಿವಳಿಕೆಯ ಚಳುವಳಿಗಳಿಂದ ಅರಳಿನಿಂತ ಫ್ರಾನ್ಸ್: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

“ಧಂ”ಪತಿ ಮುಯ್ಯಿ: ಸುಮಾವೀಣಾ ಸರಣಿ

‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್‌ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎರಡನೆಯ ಬರಹ

Read More

ಸ್ಮಾರ್ಟ್ ಬೋರ್ಡ್..!: ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ

ಸ್ಮಾರ್ಟ್‌ ಬೋರ್ಡ್‌ ಬರುವುದಕ್ಕಿಂತ ಮುಂಚೆ ತರಗತಿ ಮುಗಿಸಿದಾಗ ರಮೇಶ ಅವರ ಅವತಾರ ಮೆಚ್ಚಿ ವಾಹ್‌ ಶಿಕ್ಷಕರೆಂದರೆ ಹೀಗಿರಬೇಕು ಎನ್ನುವಂತಿದ್ದರು, ಸುಣ್ಣದಿಂದ ಮುಳುಗಿದ ಅವರ ಕೈಗಳು, ಬಣ್ಣ ಬದಲಾಯಿಸಿಕೊಂಡು ಬಿಳಿ ಬಟ್ಟೆಯಂತಿದ್ದ ಅವರ ಪ್ಯಾಂಟ್‌, ಅಂಗಿ ಅಲ್ಲಲ್ಲಿ ಕೈ ತಗುಲಿ ಮುಖಕ್ಕೂ ಹತ್ತಿದ್ದ ಸೀಮೆ ಸುಣ್ಣದ ಬಿಳಿ ಯಾರೇ ನೋಡಿದರೂ ಇವರು ಗಣಿತ ಶಿಕ್ಷಕರೆಂದು ಗುರುತಿಸಬಹುದಾದ ಮಾದರಿ ರೂಪ.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಶೈಕ್ಷಣಿಕ ಬರಹ ನಿಮ್ಮ ಓದಿಗೆ

Read More

ಸುತ್ತೂರ್ಗೊಂದೇ ಗೌರ್ಮೆಂಟು ಇಸ್ಕೂಲ್: ಸುಮಾ ಸತೀಶ್ ಸರಣಿ

ಅಲ್ಲಾ ನಮ್‌ ಮೇಷ್ಟ್ರು ಹೇಳಿರೋ ಸಿನ್ಮಾ‌ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮಕ್ಕಳು ಸಿನಿಮಾ ನೋಡಿದ ಪ್ರಸಂಗ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ