Advertisement

Tag: kendasampige

ಮಾಡೆಲಿಂಗ್ ಕ್ಷೇತ್ರದೆಡೆಗೆ ಒಂದು ಸ್ತ್ರೀನೋಟ: ಡಾ.ಎಲ್.ಜಿ.ಮೀರಾ ಅಂಕಣ

ಶೇವಿಂಗ್ ಬ್ಲೇಡ್‌ನಿಂದ ಹಿಡಿದು ದುಬಾರಿ ಕಾರುಗಳ ತನಕ ನೂರಾರು ಉತ್ಪನ್ನಗಳ ಮಾರಾಟಕ್ಕೆ ಹೆಣ್ಣಿನ `ಸುಂದರ’ ದೇಹದ ಪ್ರದರ್ಶನ ಅನಿವಾರ್ಯವಾಗಿಬಿಟ್ಟಿದೆ. ಈ ನಡುವೆ ಜಾಹೀರಾತುಗಳು ವಿದ್ಯಾವಂತ ಹಾಗೂ ತನ್ನ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ತ್ರೀಯನ್ನು ಆಗೀಗ ತೋರಿಸುತ್ತವಾದರೂ ಸೌಂದರ್ಯದ ಸೀಮಿತ ಕಲ್ಪನೆಯನ್ನೇ ಇವು ಮುಂದು ಮಾಡುತ್ತವೆ ಎಂಬುದು ಸತ್ಯ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಏಳನೆಯ ಬರಹ

Read More

ಮೊಮ್ಮಕ್ಕಳಿಂದ ಕಲಿಯುವುದು: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುವ ನಮ್ಮ ಆತುರದಲ್ಲಿ ಅವರ ಬಾಲ್ಯದ ಸಂತೋಷಕ್ಕೆ ನಾವು ಅಡ್ಡ ಬರಬಾರದಷ್ಟೇ. ಈ ಎಚ್ಚರ ನನಗೆ ಯಾವಾಗಲೂ ಇತ್ತು. ನನಗೆ ಎಚ್ಚರವಿಲ್ಲದಿದ್ದರೂ ಏನೂ ತೊಂದರೆ ಆಗುತ್ತಿರಲಿಲ್ಲ. ಏಕೆಂದರೆ, ಅವನು ಪುಸ್ತಕಗಳಿಗಿಂತ ಹೆಚ್ಚಾಗಿ ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯುವುದನ್ನೇ, ಅವರೊಡನೆ ಆಟವಾಡುವುದನ್ನೇ ತುಂಬಾ ಇಷ್ಟಪಡುತ್ತಿದ್ದ. ದಣಿಯುವ ತನಕ ಅಡುತ್ತಿದ್ದ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ

Read More

ಕೂರಾಪುರಾಣ ೧೦: ಬೆಳ್ಳಿ ಮೂಡಿತೋ ಕೋಳಿ ಕೂಗಿತೋ, ಫ್ರೆಂಡು ಊಳಿಟ್ಟಿತೋ..

ಪಾರ್ಕಿನಲ್ಲಿ ಹಲವಾರು ನಾಯಿಗಳು ಬಂದರು ಅವನು ಆಟವಾಡುವುದು ಕೆಲವೊಂದು ನಾಯಿಗಳ ಜೊತೆಗೆ ಮಾತ್ರ. ಶಾಲೆಯಲ್ಲಿ ನಡೆಯುವ ಹಾಗೆ ಇಲ್ಲಿಯೂ ಬುಲ್ಲಿ ಆಗುತ್ತದೆ. ಕೆಲವೊಂದು ಡಾಮಿನೇಟಿಂಗ್ ನಾಯಿಗಳಿರುತ್ತವೆ. ತಮ್ಮ ಮಟ್ಟದ ನಾಯಿಗಳ ಜೊತೆಗೆ ಮಾತ್ರ ಬೆರೆಯುವ ಇವು ಉಳಿದವುಗಳನ್ನ ತುಚ್ಛವಾಗಿ ನೋಡುತ್ತ ಕೆಲವೊಮ್ಮೆ ಗುಂಪು ಕಟ್ಟಿಕೊಂಡು ಅಟ್ಟಾಡಿಸುತ್ತವೆ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಹತ್ತನೆಯ ಕಂತು

Read More

ನೇಪಾಳವೆಂಬ ಮತ್ತೊಂದು ಭಾರತ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನೇಪಾಳದ ಜನರು ಶ್ರಮಜೀವಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಪರ್ವತ ಪ್ರದೇಶಗಳನ್ನು ಅವರು ಏರುವ ಮತ್ತು ಇಳಿಯುವ ರೀತಿ ಎಂಥವರಲ್ಲೂ ಅಚ್ಚರಿ ಮೂಡಿಸುತ್ತದೆ. ಮೊದಮೊದಲು ಪರ್ವತಾರೋಹಣಕ್ಕೆ ಹೊರಟವರಿಗೆ ಖಾಲಿ ಕೈಯ್ಯಲ್ಲಿ ಪರ್ವತದ ತುದಿ ತಲುಪುವುದೇ ಅಬ್ಬಬ್ಬಾ ಎನಿಸಿಬಿಡುತ್ತದೆ. ಆದರೆ ನೇಪಾಳದವರು ತಮ್ಮ ಬೆನ್ನ ಮೇಲೆ ಭಾರವಾದ ಚೀಲಗಳನ್ನು ಇಲ್ಲವೇ ವಸ್ತುಗಳನ್ನು ಹೊತ್ತುಕೊಂಡು ಪರ್ವತವನ್ನು ಏರುತ್ತಾರೆ; ಇಳಿಯುತ್ತಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ನೇಪಾಳದ ಕುರಿತ ಬರಹ ನಿಮ್ಮ ಓದಿಗೆ

Read More

ಊರುಗಳ ಹೆಸರಿನ ಸುತ್ತ: ಸುಮಾವೀಣಾ ಸರಣಿ

ವಾರದ ಸಂತೆ ಆಗುವ ಅದೇ ದಿನದ ಹೆಸರುಗಳು ಊರುಗಳಾಗಿವೆ. ಸೋಮವಾರಪೇಟೆ, ಶನಿವಾರಸಂತೆ, ಶುಕ್ರವಾರಸಂತೆ ಇತ್ಯಾದಿಗಳು. ‘ಅಂಗ’ಡಿ ಎಂಬ ಹೆಸರನ್ನು ಕಡೆಯಲ್ಲಿ ಹೊಂದಿರುವ ಬೆಳ್ತಂಗಡಿ, ಉಪ್ಪಿನಂಗಡಿ, ಹಳೆಯಂಗಡಿ, ಹಟ್ಟಿಯಂಗಡಿ ಎಂಬ ಊರುಗಳಿವೆ. ‘ಅಂಗಡಿ’ ಎನ್ನುವ ಹೆಸರಿಗೂ ಹೊಯ್ಸಳ ಸಾಮ್ರಾಜ್ಯಕ್ಕೂ ಅವಿನಾಭಾವ ನಂಟು. ಇದಕ್ಕೂ ಅನನ್ಯ ಹೆಸರಿನ ಊರುಗಳಿವೆ. ರಸ್ತೆಯಲ್ಲಿರುವ ಪಾಲವನ್ನು ಸೇರಿಸಿಕೊಂಡು ಜೋಡುಪಾಲವೆಂದೂ ಕರೆಯುತ್ತಾರೆ. ‘ಪಾಲ’ ಅಂದರೆ ಸಂಕ /ಕಾಲುಸಂಕ ಅರ್ಥಾತ್ ಚಿಕ್ಕ ಸೇತುವೆ ಎಂದರ್ಥ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಆರನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ