Advertisement

Tag: Prasad Shenoy

ಕಣ್ಣೆದುರು ಸಾಯುತ್ತಿರುವ ದೇವರುಗಳು

ಮೊನ್ನೆ ಮೊನ್ನೆಯಷ್ಟೇ ದಷ್ಟ ಪುಷ್ಟವಾದ ರೆಂಬೆ ಕೊಂಬೆಗಳನ್ನು ಅಗಲಿಸಿ ಸಾವಿರಾರು ಹಕ್ಕಿಗಳ ಹಕ್ಕಿನ ಮನೆಯಾಗಿದ್ದ ಆಲದ ಮರ, ಹುಣಸೆ ಮರ, ಹೊಸದಾಗಿ ನಿರ್ಮಾಣವಾದ ದೇಗುಲದ ಕಾಲಬುಡದಲ್ಲಿ ದಿಕ್ಕಾಪಾಲಾಗಿ ಬಿದ್ದಿರುವುದನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ. ನಿಜವಾದ ದೇವರು ಹೀಗೆ ಅನಾಥವಾಗಿ ಬಿದ್ದಿರುವುದನ್ನು, ಆ ದೇವರು ಅಳುತ್ತಿರುವುದನ್ನು…”

Read More

ದೂರ ಅನ್ನುವ ಹತ್ತಿರ ಭಾವವಿದು…

ದೂರ ಎನ್ನುವ ಪದ ಕೆಲವರಿಗೆ ತುಂಬಾ ದೂರ, ಕೆಲವರ ಹೃದಯಕ್ಕೆ ತೀರಾ ಹತ್ತಿರ. ‘ದೂರ’ ಪದ ಕೇಳಿದಾಗಲೆಲ್ಲ ನಿಮಗೆ ಯಾವ ಭಾವ ಮೂಡುತ್ತದೋ ನಂಗೆ ಗೊತ್ತಿಲ್ಲ. ಆದರೆ ದೂರ ಎನ್ನುವುದು ನಿಮಗೆ ಹತ್ತಿರದಲ್ಲಿ ಕಾಣಿಸದಿದ್ದದ್ದನ್ನು ಕಾಣಿಸುವ ಬೈನಾಕ್ಯುಲರ್‌ನಂತೆ. ಹತ್ತಿರ ಇರುವಾಗ ಕಾಣಿಸದ್ದು ದೂರದಲ್ಲಿ ಬೇರೊಂದು ರೀತಿಯಲ್ಲೇ ಕಾಣಿಸುತ್ತದೆ. ನಂಗ್ಯಾಕೋ ದೂರ ಅನ್ನುವ ಪದ ತೀರಾ ಕಾಡುತ್ತಿರುವುದು ಆ ಒಂದು ಪದ ನನ್ನಲ್ಲಿ ಕುತೂಹಲ…”

Read More

ಪ್ರಸಾದ್ ಶೆಣೈ ಪುಸ್ತಕಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು

“ಮಾಳ ಎಂಬುದು ನಕ್ಷೆಯಲ್ಲಿ ನೀವು ಗುರುತಿಸಲಾಗದ ಒಂದು ಪುಟ್ಟ ಹಳ್ಳಿ. ಲೇಖಕರು ಹೇಳುವ ಹಾಗೆ ಈ ಮಾಳ “ಪಶ್ಚಿಮ ಘಟ್ಟದ ಕೆಳಗಿನ ಹಸಿರು ತೊಟ್ಟಿಲು”. ಅಷ್ಟೇ ಅಲ್ಲ ಈ ಮಾಳವನ್ನೇ ಬಳಸಿ ಸಹ್ಯಾದ್ರಿ ತಟದ ಊರುಗಳಾದ ಕುದುರೆ ಮುಖ, ಹೊರನಾಡು, ಕಳಸ, ಶೃಂಗೇರಿಗಳ ದಾರಿ ಹಿಡಿದರಂತೂ ಇಷ್ಟು ದಿನ ಕಳೆದುಕೊಂಡ ಹೊಸ ಜಗತ್ತೊಂದು ದುತ್ತನೆ ಎದಿರು ಬಂದು ಮೂಡುತ್ತದೆ.”

Read More

ಲಾಕ್ ಡೌನ್ ನಿಂದ ತುಂಬಿಕೊಂಡ ಗಂಧ: ಪ್ರಸಾದ್ ಶೆಣೈ ಅಂಕಣ

“ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು…”

Read More

ಪದ್ದಜ್ಜಿಯ ಕಣ್ಣಲಿ ಕಂಡ ನೆನಪುಗಳ ಜಲಪಾತ: ಪ್ರಸಾದ್ ಶೆಣೈ ಅಂಕಣ

“ಒಳ ಬಾಗಿಲಿಂದ ಇಣುಕಿದ ಪದ್ದಜ್ಜಿ ಈಗ ಹೊರಬಂದಳು. ಬೆನ್ನು ಬಾಗಿದ್ದರೂ, ಕೂದಲೆಲ್ಲಾ ಮುಪ್ಪಾಗಿದ್ದರೂ, ಮೈಯೆಲ್ಲಾ ಸುಕ್ಕುಗಟ್ಟಿದ್ದರೂ ಅವಳ ಕಣ್ಣುಗಳು ಫಳ್ಳನೇ ಹೊಳೆಯುತ್ತಿದ್ದವು. ಆ ಕಣ್ಣ ಬೆಳಕಿನಲ್ಲಿ ತಾನು ಕಂಡ ನೂರಾರು ಮಳೆಗಾಲ, ಹೊಳೆಯುವ ಬಿಸಿಲು, ಧಾರೆಯಾಗುವ ಮಂಜು, ಗುಡುಗು-ಸಿಡಿಲಿನ ಮೊರೆದಾಟಗಳು ಕಾಣಿಸುತ್ತಿತ್ತು. ಅವಳ ಸುಕ್ಕುಗಟ್ಟಿ ಭೂಮಿಗೂರಿದ ಪಾದಕ್ಕೆ ನಡೆದ ದಾರಿಯ ಮಣ್ಣಿನ, ಹುಲ್ಲಿನ, ಜಲಪಾತದ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ