Advertisement

Tag: Sheshadri Ganjur

ಸಲಕರಣೆಗಳನ್ನು ಅನ್ವೇಷಿಸುವ ಮನುಷ್ಯರ ಮನೋಲೋಕದ ಕತೆಯಿದು

ನ್ಯೂಯಾರ್ಕ್ ಸರ್ಕಾರ ಎ.ಸಿ. ವಿದ್ಯುತ್ ನ ಅಪಾಯದ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ, ಎಂಜಿನಿಯರುಗಳು ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕಿತು. ವೆಸ್ಟಿಂಗ್‌ಹೌಸ್‌ನ ಪರವಿದ್ದ ಎಂಜಿನಿಯರುಗಳು ಅಪಾಯವನ್ನು ಅಲ್ಲಗೆಳೆದರೆ, ಎಡಿಸನ್ ಪರವಿದ್ದ ತಜ್ಞರು ಎ.ಸಿ. ವಿದ್ಯುತ್ ವ್ಯವಸ್ಥೆಯನ್ನು ಮಾನವರನ್ನು ಅರೆಗಳಿಗೆಯಲ್ಲೇ ಕೊಲ್ಲಬಲ್ಲ ರಕ್ಕಸ ಶಕ್ತಿಯೆಂಬಂತೆ ಬಿಂಬಿಸಿದರು. ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಈ ವ್ಯಾವಹಾರಿಕ ಕದನದಲ್ಲಿ, ತಾನು ನಿರ್ಲಿಪ್ತನೆಂದು ಘೋಷಿಸಿಕೊಂಡ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ವಿರುದ್ಧ..”

Read More

ಸ್ನೇಹದ ದೋಣಿಯಲಿ ಆನೆಗಳ ನೆನಪಿನ ಪಯಣ

ಜೆನ್ನಿ ಮತ್ತು ಷರ್ಲಿ ಒಂದೇ ಲಾಯದಲ್ಲಿದ್ದರೂ, ಅಕ್ಕ-ಪಕ್ಕದ ಸ್ಟಾಲ್‌ಗಳಲ್ಲಿ ಇರಲಿಲ್ಲ. ಮಧ್ಯದಲ್ಲಿ ಕಬ್ಬಿಣದ ಗೇಟುಗಳು ಇದ್ದವು. ಜೆನ್ನಿಯ ಚಡಪಡಿಕೆಯನ್ನು ಕೇಳಿದ ಷರ್ಲಿ ತಾನೂ ಚಡಪಡಿಸತೊಡಗಿದಳು. ತಮ್ಮ ಸ್ಟಾಲ್‌ಗಳ ನಡುವೆ ಇದ್ದ ಗೇಟುಗಳ ಸಂದಿಗಳ ಮೂಲಕ ತಮ್ಮ ಸೊಂಡಿಲುಗಳನ್ನು ಚಾಚಿ ಹೇಗಾದರೂ ಮಾಡಿ ಒಂದನ್ನೊಂದು ಮುಟ್ಟಲು ಎರಡೂ ಆನೆಗಳು ಪ್ರಯತ್ನ ಪಡಲಾರಂಭಿಸಿದವು. ಗೇಟುಗಳ ತಳ್ಳುವಿಕೆ, ಜೋರಾದ ಘರ್ಜನೆ-ಘೀಳಿಡುವಿಕೆಗಳೂ ಪ್ರಾರಂಭವಾದವು.

Read More

ಕೃಷ್ಣರಂಧ್ರದ ಸುಬ್ರಹ್ಮಣ್ಯನ್ ಚಂದ್ರಶೇಖರರ ಕುರಿತು

ಚಂದ್ರಶೇಖರ್ ಇಂಗ್ಲೆಂಡ್ ಬಿಟ್ಟು ಅಮೆರಿಕ ತಲುಪಿದ ನಂತರವೂ, ಕೆಲವೊಂದು ವೈಜ್ಞಾನಿಕ ಕಾನ್ಫರೆನ್ಸ್‌ಗಳಲ್ಲಿ, ಎಡ್ಡಿಂಗ್‌ಟನ್ ಜೊತೆಗೆ ಮುಖಾಮುಖಿಯಾಗುವ ಸಂದರ್ಭಗಳು ಎದುರಾದವು. ಒಮ್ಮೆ ಹೀಗೆ ಎದುರಾದಾಗ, ಎಡ್ಡಿಂಗ್‌ಟನ್ ತಮ್ಮ ಹಿಂದಿನ ನಡೆವಳಿಕೆಯ ಬಗೆಗೆ, ಚಂದ್ರಶೇಖರ್ ಅವರಲ್ಲಿ ಕ್ಷಮೆ ಬೇಡಿದರಂತೆ. ಆಗ ಚಂದ್ರಶೇಖರ್, “ಹಾಗಿದ್ದರೆ… ನನ್ನ ಅಧ್ಯಯನದ ತೀರ್ಮಾನಗಳನ್ನು ನೀವು ಈಗ ಒಪ್ಪುತ್ತೀರೇ?” ಎಂದು ಕೇಳಿದರಂತೆ.”

Read More

ಐನ್‌ಸ್ಟೈನನ ಥಿಯರಿ ಆಫ್ ರಿಲೆಟಿವಿಟಿ ಕಬ್ಬಿಣದ ಕಡಲೆಯೆ?

“ಹದಿಹರೆಯದ ಐನ್‌ಸ್ಟೈನನ ಮನದಲ್ಲಿ ಮೂಡಿದ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ಕುರಿತಾದ ಈ ಸೋಜಿಗ, ಹಾಗೆಯೇ ಮುಂದುವರೆಯಿತು. ಅವನು ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿದಮೇಲೆ, ಸಮಯ ದೊರೆತಾಗಲೆಲ್ಲಾ ಈ ವಿಷಯದ ಬಗೆಗೆ ಆಳವಾದ ಚಿಂತನೆ ನಡೆಸಲಾರಂಭಿಸಿದ. ಬೆಳಕಿನ ವೇಗ ಮತ್ತು ಈಥರ್‌ ನ ಒಗಟನ್ನು ಬಿಡಿಸಲು ಮನದಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ….”

Read More

ಪ್ರಿಂಟಿಂಗ್‌ ಪ್ರೆಸ್ಸಿನಲ್ಲಿ ರೂಪುಗೊಂಡ ವಿಜ್ಞಾನಿ!: ಶೇಷಾದ್ರಿ ಗಂಜೂರು ಅಂಕಣ

“ಓದು ಬರಹ ಬಲ್ಲವನಾದರೂ ಕ್ರಮ ಶಿಕ್ಷಣ ಪಡೆಯದಿದ್ದ ಫ್ಯಾರಡೆಗೆ ಆ ಪುಸ್ತಕ ಒಂದು ವರದಾನವಾಯಿತು. ರಾಸಾಯನಿಕ ಶಾಸ್ತ್ರದ ಪ್ರಥಮ ಪಾಠಗಳನ್ನು ಅವನು ಕಲಿತದ್ದು ಆ ಪುಸ್ತಕದ ಮೂಲಕವೇ. ಆ ಪುಸ್ತಕವನ್ನು ಬರೆದವಳು ಜೇನ್ ಮಾರ್ಸೆಟ್ ಎಂಬ ಲೇಖಕಿ. ವೈಜ್ಞಾನಿಕ ರಂಗದಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತವಾದ ಆ ಪುಸ್ತಕ ಮತ್ತು ಆ ಲೇಖಕಿಯನ್ನು ಫ್ಯಾರಡೆ ಮರೆಯಲ್ಲಿಲ್ಲ. ವಿಜ್ಞಾನಿಯಾಗಿ ಹೆಸರು ಮಾಡಿದ ನಂತರವೂ ತನ್ನೆಷ್ಟೋ ಲೇಖನ….”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ