ಬೃಹದೀಶ್ವರ ದೇವಾಲಯದ ಬಗೆಹರಿಯದ ನಿಗೂಢಗಳು: ಶ್ರೀಧರ್ ಎಸ್. ಸಿದ್ದಾಪುರ ಪ್ರವಾಸ ಸರಣಿ
ಈ ಎರಡೂ ಮುಖಗಳು ಈ ದೇವಾಲಯಕ್ಕೊಂದು ವಿಕ್ಷಿಪ್ತ ನೋಟ ಒದಗಿಸುತ್ತದೆ. ಹಲವರ ಪ್ರಕಾರ ಇದು ಯುರೋಪಿನ ಮಾರ್ಕೊ ಪೋಲೋ ಮತ್ತು ಆತನ ಮಡದಿಯ ಚಿತ್ರ ಎನ್ನಲಾಗಿದೆ. 1600 ರ ಸುಮಾರಿಗೆ ಇದನ್ನು ಸೇರಿಸಲಾಗಿದೆ ಎನ್ನುತ್ತಾರೆ. ಮಾರ್ಕೊ ಪೋಲೋ ಇಟಲಿಯ ಪ್ರವಾಸಿಗ. ಎಲ್ಲಿಯ ಇಟಲಿ ಎಲ್ಲಿಯ ಭಾರತ. ಆತನ ಚಿತ್ರ ಸೇರಿಸುವ ಉದ್ದೇಶವಾದರೂ ಏನು? ಅದೂ ಒಬ್ಬ ವಿದೇಶಿ ಪ್ರವಾಸಿಗನನ್ನು ದೇವಾಲಯದ ಹೊರ ಭಿತ್ತಿಯಲ್ಲಿ ಬಿತ್ತರಿಸುವ ಉದ್ದೇಶವಾದರೂ ಏನು? ಎಲ್ಲವೂ ನಿಗೂಢ.
ಶ್ರೀಧರ್ ಎಸ್. ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಬೃಹದೀಶ್ವರ ದೇವಾಲಯದ ಕುರಿತ ಬರಹ ಇಲ್ಲಿದೆ

