Advertisement

Tag: ಅಬ್ದುಲ್ ರಶೀದ್

ಪುಟ್ಟದೊಂದು ಹೂಹಕ್ಕಿಯ ಹುಡುಕುವುದು ಇಲ್ಲಿಗೆ ಹೊರಟ ಕಾರಣವಾಗಿತ್ತು

ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಅಷ್ಟು ಹಗುರ.ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಅವುಗಳು ಈಗ ಇಲ್ಲದಿರುವುದಕ್ಕೆ…”

Read More

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

Read More

ಅಬ್ದುಲ್‌ ರಶೀದ್‌ ಕಥಾಸಂಕಲನಕ್ಕೆ ರಾಜೇಂದ್ರ ಚೆನ್ನಿ ಬರೆದ ಮಾತುಗಳು

“ಈ ಕತೆಗಳಲ್ಲಿ ಕೆಲವು ಬಹುಕಾಲ ಬಾಳಿ ನಮ್ಮನ್ನು ಕೆದಕುವಂಥವು. ಆರಂಭದ ದಿನಗಳಲ್ಲಿಯೇ ರಶೀದ್ ಬರೆದ ‘ಮೂಸಾ ಮೊಯಿಲಿಯವರ ಮುದ್ದಿನ ಮಗಳು ಮತ್ತು ಹೆಲಿಪೆಟ್ಟರ್ ಎಂಬ ದುಷ್ಟಜಂತು’ ಕತೆಯು ಕನ್ನಡದ ಶ್ರೇಷ್ಟ ಕತೆಗಳಲ್ಲಿ ಒಂದಾಗಿರುವುದಕ್ಕೆ ಕಾರಣವೆಂದರೆ ತುಂಬಾ ಸಹಜವಾಗಿ ಅದು ಪಡೆದುಕೊಳ್ಳುವ ಸಾಂದ್ರತೆ ಮತ್ತು ಬಂಧ. ಮರಗಳಿಗೆ ಕೀಟನಾಶಕವನ್ನು,…”

Read More

ಲಾರ್ಡ್ ಕಾರ್ನ್ ವಾಲಿಸ್ ಮತ್ತು ಕ್ವೀನ್ ಎಲಿಜಬೆತ್: ಅಬ್ದುಲ್ ರಶೀದ್ ಬರೆದ ಹೊಸ ಕಥೆಯ ಪೂರ್ಣರೂಪ

“ಈಗಲೂ ಹಾಗೆಯೇ. ಅವಳು ಮಣಿಸಬೇಕು. ನಾನು ತಣಿಯಬೇಕು. ಅವಳಿಗೆ ಅಷ್ಟೇ ಸಾಕು. `ನಾನು ಬೇಟೆಯ ನಾಯಿ, ನೀನು ಓಡುತ್ತಿರುವ ಜಿಂಕೆ’ ಎಂದು ಮೂವತ್ತು ವರ್ಷಗಳಿಂದ ಅಟ್ಟಿಸಿಕೊಂಡು ಬೇಟೆಯಾಡುತ್ತಲೇ ಇರುತ್ತಾಳೆ. ಅವಳು ನನ್ನ ಪಾಲಿನ ದೇವರು. ಇಷ್ಟು ಹೇಳಿದ ಮೇಲೆ ನನ್ನ ಮತ್ತು ಅವಳ ಹುಚ್ಚು ಬೇಟೆಯ ಕುರಿತು ಓದುಗರಾದ ನಿಮಗೆ ಕುತೂಹಲವೂ ಉದ್ರೇಕವೂ ಏಕಕಾಲದಲ್ಲಿ ಉಂಟಾಗುತ್ತಿರಬಹುದು.”

Read More

ಕೊನೆಯೇ ಇಲ್ಲದ ಉಪಸಂಹಾರವು…

“ನಾನಾದರೋ ಹುಣ್ಣಿಮೆ ಇರುಳಿನ ತಿಯದಿಯಂದು ಮಂಗಳೂರಿಗೆ ಹೊರಡುವ ಹಡಗಲ್ಲಿ ಪ್ರಯಾಣದ ಟಿಕೇಟು ಕೊಂಡುಕೊಂಡು ಹಡಗಿನ ದಕ್ಕೆಯಲ್ಲಿ ಆಕಾಶನೋಡುತ್ತಾ ಅಂಗಾತ ಮಲಗಿದ್ದೆ. ಬೆಳದಿಂಗಳಿನ ಸಣ್ಣಗಿನ ಬೆಳಕು ದುಪ್ಪಟ ಹೊದ್ದ ಈತನ ಮುಖದ ಮೇಲೂ ಬೀಳುತ್ತಿತ್ತು. ಮಧ್ಯಾಹ್ನದಿಂದಲೂ ಈತನನ್ನು ನೋಡುತ್ತಲೇ ಇದ್ದೆ. ಹಡಗಿನ ಓಟಕ್ಕೆ ಸಣ್ಣಗೆ ಅಲುಗುತ್ತಿದ್ದರೂ, ಒಳಗೊಳಗೆ ಸಣ್ಣಗೆ ಕೆಮ್ಮುತ್ತಿದ್ದರೂ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ