“ಲಯ”ದ ಜಾಡು ಹಿಡಿದು: ಸುಭದ್ರಾ ಹೆಗಡೆ ಬರಹ
ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ, ಕೆಡುಕಿನೆಡೆಗೆ ಸಾಗಬಾರದೆಂಬ ಕಳಕಳಿ, ಪರೋಪಕಾರ ಮನೋಭಾವ ಎಲ್ಲಾ ಪಾತ್ರಗಳಲ್ಲಿ ಅಡಕವಾಗಿರುವ ಮೂಲದ್ರವ್ಯ. ಹಾಗಾಗಿ ವಿದೇಶಿಯಳಾದರೂ ಸೋಫಿಯಾ ಮತ್ತವಳ ಮಗನನ್ನು ತಮ್ಮೊಳಗೆ ಒಬ್ಬನಂತೆ ಭಾವಿಸುತ್ತಾರೆ. ಗಂಗಾಳ ವಿಧವೆ ಮಗಳಿಗೊಂದು ಬದುಕು ಕಟ್ಟಿಕೊಡುವ ಹಿರಿಯಗುಣ ಇವರೆಲ್ಲರಲ್ಲಿ ಕಾಣಸಿಗುತ್ತದೆ. ಸಹಬಾಳ್ವೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಎನ್ನುವುದೇ ಲಯದಲ್ಲಿ ಕಂಡುಬರುವ ಪ್ರಮುಖ ಅಂಶ. ವಿವಿಧ ರಂಗದಲ್ಲಿ ವಿಭಿನ್ನ ಬದುಕನ್ನು ಕಟ್ಟಿಕೊಂಡ ಉತ್ತಮ ವಿಚಾರಗಳ, ಸಂಸ್ಕಾರ, ಸಂಸ್ಕೃತಿಪ್ರಿಯರ ಸಮಾವೇಶವೇ ಈ ‘ಲಯ’ ಕಾದಂಬರಿಯಲ್ಲಿದೆ.
ಎಲ್.ಎಸ್. ಶಾಸ್ತ್ರಿ ಅವರ “ಲಯ” ಕಾದಂಬರಿ ಕುರಿತು ಸುಭದ್ರಾ ಹೆಗಡೆ ಬರಹ

