Advertisement

Tag: ಕೆಂಡಸಂಪಿಗೆ

ಬಿಸಿಲು ಮೂಡುವ ಹೊತ್ತಿಗೆ, ಕೈಯಲ್ಲೊಂದು ಹೊತ್ತಿಗೆಯಿರಲಿ

ಇತ್ತೀಚೆಗೆ ಇತ್ತ ನಾಟಕವೂ ಅಲ್ಲದ, ಅತ್ತ ಸರಳ ಓದುವಿಕೆಯೂ ಅಲ್ಲದ ಮಧ್ಯಮಾರ್ಗದಲ್ಲಿ ನಿಂತ ಆಡಿಯೋ ಪುಸ್ತಕಗಳ ಭರಾಟೆಯೂ ಹೆಚ್ಚಿದೆ. ಕೆಲಸ ಮಾಡುತ್ತಲೇ ಕೇಳಿಸಿಕೊಳ್ಳಬಹುದು. ವಿಚಾರ ತಿಳಿಯಬಹುದು ಎಂಬ ಸಕಾರಾತ್ಮಕ ಅಂಶಗಳ ಬೆಂಬಲವಿದ್ದರೂ, ಏಕಾಂತದಲ್ಲಿ ಈ ಜಗದ ಪರಿವೆ ಇಲ್ಲದೆ, ಮನೋಲೋಕದಲ್ಲಿ ಪಾತ್ರವೇ ನಾವಾಗಿ ವಿಹರಿಸುವ ‘ಓದಿ’ನ ಆನಂದವನ್ನು ಎಂದಿಗೂ ಅವು ನೀಡಲಾರವು. ನಮ್ಮ ಕಲ್ಪನೆಯಲ್ಲಿ ಪಾತ್ರಗಳಿಗೆ ರೂಪ, ಬಣ್ಣ, ನಿಲುವು ಸಿಕ್ಕಂತೆಯೇ ಅವುಗಳಿಗೆ ಧ್ವನಿಯೂ ಲಭಿಸಿರುತ್ತದೆ.
ಎಸ್. ನಾಗಶ್ರೀ ಅಜಯ್ ಬರೆಯುವ ಲೋಕ ಏಕಾಂತ ಅಂಕಣ

Read More

ಮೂವತ್ತು ವರ್ಷಗಳ ಹಿಂದೆ ಸಾರಾ ಉಮ್ಮಾ ಜೊತೆಗೆ

ನಾಲ್ಕು ದಶಕಗಳ ಹಿಂದೆ ತನ್ನ ನಲವತ್ತೆರಡನೆಯ ವಯಸ್ಸಿನಲ್ಲಿ ಬರೆಯಲು ಶುರು ಮಾಡಿದ ಸಾರಾ ಅಬೂಬಕ್ಕರ್ ಕನ್ನಡಕ್ಕೆ ಸಂಭವಿಸಿದ ಒಂದು ಅಚ್ಚರಿ. ಬಹುಶಃ ಕನ್ನಡಕ್ಕೆ ಸಂಭವಿಸಿದ ಇನ್ನೊಂದು ಅಚ್ಚರಿಯಾದ ಪಿ. ಲಂಕೇಶರು ಇಲ್ಲದಿದ್ದರೆ ಸಾರಾ ಕನ್ನಡದಲ್ಲಿ ಬರೆಯುತ್ತಲೇ ಇರಲಿಲ್ಲವೇನೋ.ಸುಮಾರು ಮೂವತ್ತು  ವರ್ಷಗಳ ಹಿಂದೆ ಆಗ ಇನ್ನೂ ಮೂವತ್ತರ ಹರೆಯದ ತರುಣನಾಗಿದ್ದ ಕನ್ನಡದ ಕಥೆಗಾರ ಅಬ್ದುಲ್ ರಶೀದ್ ಲಂಕೇಶ್ ಪತ್ರಿಕೆಗಾಗಿ ಸಾರಾ ಅವರೊಡನೆ ನಡೆಸಿದ್ದ ಮಾತುಕತೆಯ ಪಠ್ಯ ಇಲ್ಲಿದೆ

Read More

ಸಾರಾ ಉಮ್ಮಾ ತೀರಿಕೊಂಡರು…

ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ ಸಾರಾ ಅಬೂಬಕ್ಕರ್ ಮಂಗಳವಾರ ಮಧ್ಯಾಹ್ನ ತೀರಿಕೊಂಡರು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿದ ಸಾರಾ, ಲೇಖಕಿಯಾಗಿಯಷ್ಟೇ ಅಲ್ಲ, ಉದಾರವಾದಿ ಚಿಂತಕಿಯಾಗಿಯೂ ಗುರುತಿಸಿಕೊಂಡರು. ಅವರ ಕುರಿತು ಕಳೆದ ವರ್ಷ ಕೆಂಡಸಂಪಿಗೆಯಲ್ಲಿ ಪ್ರಕಟವಾದ ಬರಹವೊಂದು ಇಲ್ಲಿದೆ.

Read More

ದೇವಾಲಯಗಳಲ್ಲಿ ಮಿಥುನ ಶಿಲ್ಪಗಳು

ಇನ್ನೊಂದು ಕುತೂಹಲಕರ ವಿಷಯ ಅಂದರೆ, ಆ ಕಾಲದ ಸಾಮಾಜಿಕ ಜೀವನದ ಮೇಲೆ ಬೆಳಕು ಚೆಲ್ಲುವ ಕೃತಿಗಳನ್ನು ರಚಿಸಿರುವ, ತಮ್ಮ ಪ್ರವಾಸದ ಕಥೆ ಹೇಳುತ್ತ ಅಂದಿನ ಜೀವನದ ಬಗ್ಗೆ ತಿಳಿಸುವ ಕಲಣ, ಬಿಲ್ಲಣ ಮುಂತಾದವರ ಕೃತಿಗಳಲ್ಲೂ ಕೂಡ ಯಾವ ಕಾರಣಕ್ಕೆ ದೇವಾಲಯಗಳಲ್ಲಿ ಮಿಥುನ ಶಿಲ್ಪಗಳನ್ನು ಕೆತ್ತುತ್ತಾರೆ ಎನ್ನುವುದರ ಬಗ್ಗೆ ಏನೂ ಮಾಹಿತಿ ಸಿಗುವುದಿಲ್ಲ. ಹಾಗಾಗಿ ಇದು ಅಂದಿನ ಸಾಮಾಜಿಕ ಜೀವನದಲ್ಲಿ ತುಂಬಾ ಸಹಜವಾದ ಭಾಗವಾಗಿರಬಹುದು.
‘ದೇವಸನ್ನಿಧಿ’ ಅಂಕಣದಲ್ಲಿ ಪುರಾತನ ದೇವಸ್ಥಾನಗಳಲ್ಲಿ ಕಾಣಸಿಗುವ ಮಿಥುನ ಶಿಲ್ಪಗಳ ಕುರಿತು ಬರೆದಿದ್ದಾರೆ ಗಿರಿಜಾ ರೈಕ್ವ

Read More

ಸಮಕಾಲೀನ ತಲ್ಲಣಗಳಿಗೆ ಹೆಗಲುಕೊಡುವ ಕವಿತೆಗಳು

ಮನುಷ್ಯ ಮಾಗಿದಷ್ಟೂ ಅವನ ಬರಹ ಪಕ್ವವಾಗುತ್ತದೆ ಎಂಬ ಮಾತು ಕೆಲವರಿಗೆ ಅಪವಾದವಾಗುತ್ತದೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿ ಮತ್ತು ಆತನ ಬರವಣಿಗೆಗಳು ಇಂಥ ದುರಿತ ಕಾಲಕ್ಕೆ ಖಂಡಿತ ಅವಶ್ಯಕತೆ ಇದೆ. ವಿಶಾಲ್ ಅವರ ಬರಹದ ನಡಿಗೆಯೂ ಸಮಸಮಾಜದ ನಿರ್ಮಿತಿಯ ಕಡೆಗೇ ಇದೆ. ಒಂದೊಂದು ಕವಿತೆಯಲ್ಲೂ ಅವರೇ ಕಂಡು, ಅನುಭವಿಸಿದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ವಿಶಾಲ್‌ ಮ್ಯಾಸರ್‌ ಕವನ ಸಂಕಲನ ‘ಬಟ್ಟೆಗಂಟಿದ ಬೆಂಕಿ’ಯ ಕುರಿತ ಬರಹ ಇಲ್ಲಿದೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ