Advertisement

Tag: ಕೆಂಡಸಂಪಿಗೆ

‘ಮುಖ್ಯಮಂತ್ರಿ’ಯ ಬದುಕಿನ ಪುಟಗಳು….

ಆಗ ಮುಖ್ಯಮಂತ್ರಿ ಪಾತ್ರದ ಕುರಿತು ಚರ್ಚೆ ಶುರುವಾಗಿ, ರಾಜಾರಾಂ ಅವರನ್ನು ಮುಖ್ಯಮಂತ್ರಿ ಪಾತ್ರ ಮಾಡಲು ಒತ್ತಾಯಿಸಿದಾಗ ಅವರು ಒಪ್ಪಲಿಲ್ಲ. ಬೇರೆ ತಂಡಗಳ ಪ್ರಮುಖ ಕಲಾವಿದರ ಕುರಿತು ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನನ್ನ ತಲೆಗೇ ಬಂತು. ನಾಟಕ ಕೆಟ್ಟರೂ ಚಿಂತೆಯಿಲ್ಲ, ಪ್ರದರ್ಶನ ನಿಲ್ಲಿಸುವುದು ಬೇಡವೆಂದಾಯಿತು. ಭಂಡ ಧೈರ್ಯ ನನಗಿದ್ದುದರಿಂದ ಒಪ್ಪಿದೆ. ಆದರೆ ನಿರ್ದೇಶನಕ್ಕೆ ಒಪ್ಪಲಿಲ್ಲ. ರಾಜಾರಾಂ ಅವರು ಇಬ್ಬರೂ ಸೇರಿ ನಿರ್ದೇಶಿಸೋಣವೆಂದರೂ ಬೇಡವೆಂದೆ. ಎಂಟತ್ತು ದಿನಗಳಲ್ಲಿ ನಾಟಕ ಪ್ರದರ್ಶನ ಇರುವುದರಿಂದ ನಾನು ಒಪ್ಪಲಿಲ್ಲ. ಆದರೆ ಕರಾರೊಂದು ಹಾಕಿದೆ.
ನಟ ಮುಖ್ಯಮಂತ್ರಿ ಚಂದ್ರು ಬರೆದ “ರಂಗವನದ ಚಂದ್ರತಾರೆ” ಆತ್ಮಕಥನದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಉತ್ಸಾಹ ಚಿಲುಮೆಯ ತೋಳಿಗೆ ಬಳ್ಳಿಯಾಗಿದ್ದ ನಾನು!

ಧರ್ಮಶಾಲಾದಿಂದ 112 ಕಿಲೋಮೀಟರ್‌ಗಳಷ್ಟು ದೂರದಲ್ಲಿ ಆಕರ್ಷಿಸುತ್ತದೆ ಖಜ್ಜಿಯಾರ್ ಗಿರಿಧಾಮ. ದೌಲಾದರ ಪರ್ವತಶ್ರೇಣಿಯ ನಡುವೆ 12ನೆಯ ಶತಮಾನದಲ್ಲಿ ಚಂಬಾ ರಾಜಮನೆತನದವರು ಕಟ್ಟಿಸಿರುವ, ಸಂಪೂರ್ಣ ಮರದಿಂದ ಮಾಡಿರುವ ಅರಮನೆ. ಅದರ ಬಾಗಿಲುವಾಡಗಳಿಗೆ ಕಟ್ಟಿಕೊಂಡಿರುವ ಚಿನ್ನದ ತಗಡು, ಅರಮನೆಯ ಒಳಗೇ ಇರುವ ಖಾಜ್ಜಿ ನಾಗಮಂದಿರ. ಶಿವ ಮತ್ತು ಹಿಡಿಂಬೆಯ ಮೂರ್ತಿಗಳೂ ಇರುವುದು ಇಲ್ಲಿನ ಆಕರ್ಷಣೆ. ನವರಾತ್ರಿಯಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುತ್ತದೆ. ಬಾಕಿಯಂತೆ ದೈವಭಕ್ತ ಪ್ರವಾಸಿಗರು ತಾವೇ ಕುಂಕುಮವಿಟ್ಟು ಪೂಜೆ ಮಾಡಿ ಬರಬಹುದು.
ʻಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ನಿಶೆಯ ಹೆಬ್ಬಾವಿನ ಬಾಯಲ್ಲಿ ಮಲಗಿದ್ದೆ

“ನನ್ನ ಸ್ವಕಾರಣದಿಂದ ಪಿಎಚ್.ಡಿ ಸಂಶೋಧನೆಗೂ, ಅತಿಥಿ ಉಪನ್ಯಾಸಕ ವೃತ್ತಿಗೂ ರಾಜಿನಾಮೆ ನೀಡುತ್ತಿರುವೆ’ ಎಂದು ಒಂದು ಸಾಲಿನ ರಾಜಿನಾಮೆ ಬರೆದು ಲಕೋಟೆಯಲ್ಲಿಟ್ಟು ಯಾರ್ಯಾರಿಗೆ ಕೊಡಬೇಕೊ ಅವರಿಗೆಲ್ಲ ಕೊಟ್ಟು ಹಾಸ್ಟಲಿಗೆ ಬಂದೆ. ಆ ಕ್ಷಣವೇ ಕ್ಯಾಂಪಸ್ಸನ್ನು ತೊರೆದೆ. ಯಾರಿಗೂ ಹೇಳಲಿಲ್ಲ. ಇಷ್ಟು ಕಾಲ ಪೊರೆದ ಕ್ಯಾಂಪಸ್ಸೇ ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ಈ ನೆಲದ ಸಾರವನೆಲ್ಲ ತಾಯ ಎದೆ ಹಾಲ ಕುಡಿದಂತೆ ಹೀರಿ ಅರಗಿಸಿಕೊಂಡಿರುವೆ. ಹೋಗುವೆ ನನ್ನ ಮುದ್ದಿನ ನವಿಲುದಾರಿಗಳೇ ಎಂದು ಕತ್ತಲಲ್ಲಿ ಬಂದಿದ್ದೆ”
ʻನನ್ನ ಅನಂತ ಅಸ್ಪೃಶ್ಯ ಆಕಾಶʼ ಮೊಗಳ್ಳಿ ಗಣೇಶ್‌  ಆತ್ಮಕತೆಯ  ಮೂವತ್ತೇಳನೆಯ ಕಂತು. 

Read More

ಎರಡು ತೀರಗಳ ಸೇರಿಸಿದ ಹಿರಿಯಜ್ಜ

ಮೂರು ದಶಕಗಳ ರಾಜಕೀಯ ಜೀವನದಲ್ಲಿ ದಾದಾಬಾಯಿ ನವರೋಜಿ ಏಳು ಬಾರಿ ಬ್ರಿಟನ್‌ಗೆ ಭೇಟಿ ನೀಡಿದರು, ಐದು ಬಾರಿ ಲಂಡನ್ ನ ಬೇರೆ ಬೇರೆ ವಿಳಾಸಗಳಲ್ಲಿ ಉಳಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನ್ನಿನ ಬೇರೆ ಬೇರೆ ಭಾಗಗಳಿಗೆ ತನ್ನ ಯೋಚನೆಗಳನ್ನು ತಿಳಿಸಲು ತಿರುಗಾಡಿದರು. 1906, ಎಂಭತ್ತರ ವಯಸ್ಸಿನಲ್ಲಿ ಮತ್ತೆ ಸಂಸತ್ತಿಗೆ ಮರಳುವ ಯತ್ನ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಲಂಡನ್‌ನ ಲಾಂಬೆತ್ ಪ್ರದೇಶದಲ್ಲಿ, ಒಂದು ಕಾಲಕ್ಕೆ ತಾವು ಸಮರ್ಥಿಸುತ್ತಿದ್ದ ಲಿಬರಲ್ ಪಕ್ಷದ ಅಭ್ಯರ್ಥಿಯ ಎದುರು ಅವರು ನಿಂತಿದ್ದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಾದಾಬಾಯಿ ನವರೋಜಿ ಅವರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ನಡೆ ಎಲ್ಲೆಂದರಲ್ಲಿಗೆ ನಡೆ

ಹಳ್ಳಿಗೆ ಹೋಗಿ ಹೀಗಾಯಿತು ಎಂದು ಹೇಳಿದರೆ ನನ್ನ ಕನಸು ನನ್ನ ದುಃಖ ಅವರಿಗೆ ಅರ್ಥವಾಗುತ್ತಿರಲಿಲ್ಲ. ಯಾರಿಗೂ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ಹೇಳಿಕೊಂಡರೆ ನಗುತ್ತಿದ್ದರು. ಜುಜುಬಿ ಫೋಕ್‌ಲೋರ್ ಓದ್ಬುಟ್ಟು ಇಷ್ಟೆಲ್ಲಾ ಬಿಲ್ಡಪ್ ಕೊಡ್ತಿಯಲ್ಲಾ. ನಿನ್ನ ರೇಂಜ್ ಏನಿದೆಯೊ ಅದ್ನೇ ಮೆಯಿಂಟೇನ್ ಮಾಡು ಎಂದಿದ್ದರು ಗೆಳೆಯರು. ನಿಜವಿತ್ತು. ನಾನೇನು ಮಹಾ ತಿಳಿದವನಾಗಿರಲಿಲ್ಲ. ಅವೆಲ್ಲ ಈ ವ್ಯವಸ್ಥೆಯ ಬಲೆಯಿಂದ ತಪ್ಪಿಸಿಕೊಂಡು ಕಣ್ಮರೆಯಾಗಿ ಎಲ್ಲೊ ಹೋಗಿ ಅನಾಥನೇ ಆಗಿ ಬದುಕಲು ಹೂಡುತ್ತಿದ್ದ ವಿಕಟ ವಿನೋದ ದುರಂತ ನಾಟಕ. ಕೆ.ಆರ್.ಮಾರ್ಕೆಟಲ್ಲಿ ಹೋಗಿ ಮೂಟೆ ಹೊತ್ತು ಸಂಸಾರ ನಡೆಸಲು ಇಲ್ಲಿ ತನಕ ಹೋರಾಡಿ ಬರಬೇಕಿತ್ತೇ…
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 36ನೇ ಕಂತು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ