Advertisement

Tag: ಕೆಂಡಸಂಪಿಗೆ

ಗಂಟಿಚೋರರ ಸಾಂಪ್ರದಾಯಿಕ ಶಿಕ್ಷಣ

ಈ ಬಗೆಯ ಸವಾಲು ಸೆಟ್ಲಮೆಂಟಿಗೆ ಬಂದ ಮೇಲೆ ಒಂದು ಹಂತದಲ್ಲಿ ಬದಲಾಯಿತು. ಕಾರಣ ಈ ಸೆಟ್ಲಮೆಂಟುಗಳಲ್ಲಿ ಕ್ರಿಮಿನಲ್ ಟ್ರೈಬ್ಸ್ ಎಂದು ಯಾವುದನ್ನು ಕರೆಯುತ್ತಿದ್ದರೋ ಆ ಸಮುದಾಯಗಳು ಒಟ್ಟಿಗೆ ಬಾಳುವುದಕ್ಕೆ ಆರಂಭಿಸಿದವು. ಅಂತೆಯೇ ಬ್ರಿಟಿಷರ ಕಣ್ಗಾವಲು, ಹಾರುವ ಹಕ್ಕಿಯನ್ನು ಪಂಜರದೊಳಿಟ್ಟಂತಹ ಸ್ಥಿತಿ -ಹೀಗೆ ಏನೆಲ್ಲವು ಸೆಟ್ಲಮೆಂಟಿನಲ್ಲಿದ್ದರೂ ಗ್ರಾಮೀಣ ಭಾಗದಲ್ಲಿದ್ದ ಅವಮಾನದ ಸ್ವರೂಪ ಇಲ್ಲದಾಯಿತು. ಸೆಟ್ಲಮೆಂಟಿನ ಪ್ರತ್ಯೇಕ ಶಾಲೆಗಳಲ್ಲಿ ಈ ಸಮುದಾಯವನ್ನು ಮೌಲ್ಯಮಾಪನ…

Read More

ಡೈರಿ ಆಫ್‌ ಅ ವಿಂಪಿ ಕಿಡ್ : ನಮ್ಮಂತೆಯೇ ಅವರು, ಅವರಂತೆಯೇ ನಾವು

ಅವನು ಒಂದು ದಿನ ಹೀಗೆ ಯೋಚಿಸುತ್ತಾನೆ: ತಾನು ಮಂದೆ ದೊಡ್ಡವನಾದಮೇಲೆ ಬಹಳ ಪ್ರಸಿದ್ಧ ವ್ಯಕ್ತಿಯಾದರೆ ಹೇಗಿರಬಹುದು, ಜನರೆಲ್ಲಾ ತನ್ನನ್ನು ಗುರುತಿಸುತ್ತಾರೆ, ಎಲ್ಲರಿಗೂ ತಾನೆಂದರೆ ಯಾರು ಅಂತ ತಿಳಿದಿರುತ್ತದೆ. ಹಾಗೆ ತನ್ನ ಹುಟ್ಟಿದ ಹಬ್ಬದಂದು ರಜಾ ದಿನ ಕೂಡಾ ಘೋಷಣೆಯಾಗಬಹುದು. ಅದು ಸಂತಸದ ವಿಷಯವೇ ಆದರೂ ಕೆಲವು ತನಗೆ ಮುಜುಗರ ತರಿಸಬಹುದು. ಉದಾಹರಣೆಗೆ – ‘ಗ್ರೆಗ್ ದಿನದ ಮೆಗಾ ಸೇಲ್. ಕಾಚಾ ಬನಿಯನ್ ಮೇಲೆ ಎಷ್ಟೋ ಪ್ರತಿಶತ ಕಡಿತ’ ಅನ್ನೋ ತರಹದ ಜಾಹಿರಾತುಗಳು ಬಂದು ತನ್ನ ಹುಟ್ಟುಹಬ್ಬಕ್ಕೆ ಬೆಲೆಯೇ ಇರದ ಸನ್ನಿವೇಶ ಬರಬಹುದು ಎಂದೂ ಚಿಂತಿಸುತ್ತಾನೆ.
‘ಓದುವ ಸುಖ’ ಅಂಕಣದಲ್ಲಿ “ಡೈರಿ ಆಫ್‌ ಅ ವಿಂಪಿ ಕಿಡ್ಸ್‌” ಸರಣಿಯ ಕುರಿತು ಗಿರಿಧರ್ ಗುಂಜಗೋಡು ಬರಹ

Read More

ಎಂಡದ ಗಡಿಗೆ ಹೊತ್ತ ಸರಸಿಯರು

ಪೆಂಟೆಯ ಸರಸಿಯರು ನನ್ನ ತಾಯಿಯ ಬಗ್ಗೆ ವಿಪರೀತ ಕುತೂಹಲ ತೋರುತ್ತಿದ್ದರು. ‘ಒಮ್ಮೆ ಕರೆದುಕೊಂಡು ಬಾ’ ಎನ್ನುತ್ತಿದ್ದರು.  ಆಕೆ ಹೊಸಿಲು ದಾಟಿ ಬರುವಂತಿರಲಿಲ್ಲ. ತಾಯಿಗೆ ಮನೆಯೇ ಸೆರೆಯಾಗಿತ್ತು. ಹಾಗೆ ಹೊರಗೆ ತಾಯಿ ಹೋಗುವಂತಿದ್ದರೆ ಅಪ್ಪ ತಲೆಕಡಿಯುತ್ತಿದ್ದನೇನೊ. ನನಗೆ ಆ ಹೆಂಗಸರ ಬಗ್ಗೆ ಕೆಡುಕಿರಲಿಲ್ಲ. ಹೊಳೆಯಲ್ಲಿ ಅವರು ಈಜಾಡುತ್ತಿದ್ದರು. ಈಜು ಕಲಿಸಲು ನೀರಿಗಿಳಿಸಿ ಕೈಕಾಲು ಬಡಿಸುತ್ತಿದ್ದರು. ಗತಕಾಲದ ನನ್ನ ಹಳೆಯ ಚಡ್ಡಿ ನಿಲ್ಲುತ್ತಿರಲಿಲ್ಲ. ಅದನ್ನತ್ತ ಬಿಚ್ಚಿ ದಂಡೆಗೆ ಎಸೆಯುತ್ತಿದ್ದರು. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ, ‘ನನ್ನ ಅನಂತ ನೀಲಿ ಆಕಾಶ’ ಸರಣಿಯ ಹೊಸ ಬರಹ 

Read More

ಒಂದು ನೊಣದ ಕಥೆ….

ಅಂದು ಬೆಳಿಗ್ಗೆ ಕೋರ್ಟಿಗೆ ಹೋದ ನನಗೆ ಕಟ ಕಟೆಯಲ್ಲಿ ಮುಖಾಮುಖಿಯಾಗಿದ್ದು ಆಗ ಬೆಂಗಳೂರಿನಲ್ಲಿ ಇದ್ದಂತಹ ಇಬ್ಬರು ಪ್ರಸಿದ್ಧ, ಘಟಾನುಘಟಿ ಕ್ರಿಮಿನಲ್ ವಕೀಲರುಗಳಲ್ಲಿ ಒಬ್ಬರು. ಶವಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನಾನು ನೀಡುತ್ತ ಹೋದಂತೆ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೆಲವು ದಿವಸಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದಿದ್ದ ನಾನು ಪರೀಕ್ಷೆಗೆಂದು ಬಹಳಷ್ಟು ಓದಿದ್ದೆ. ಆದ್ದರಿಂದ ಪಾಟೀ ಸವಾಲು ಎದುರಿಸುತ್ತ, ಸಾವು ಸಂಭವಿಸಿ ಅಂದಾಜು ಎಷ್ಟು ದಿನಗಳಾಗಿರಬಹುದು ಎಂಬುದನ್ನು ಹೇಳಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಹೊಸ ಬರಹ. 

Read More

ಆಧ್ಯಾತ್ಮಿಕ ಗುರುವಿನ ಕಾವ್ಯ ಮತ್ತು ಲಂಡನ್‌ನ ದಿನಗಳು

ಲಂಡನ್ನಿನ ಸೈಂಟ್ ಪೌಲ್ಸ್ ಎನ್ನುವ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿವೇತನ ಗಳಿಸಿಕೊಂಡ ಹನ್ನೆರಡು ವರ್ಷದ ಅರಬಿಂದೋವಿನ ಔಪಚಾರಿಕ ಶಿಕ್ಷಣ ಆರಂಭವಾಯಿತು. ಭಾಷೆಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದ ಭಾರತೀಯ ಬಾಲಕ ಆಂಗ್ಲ ಹೆಡ್ ಮಾಸ್ತರರ ಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬನಾದ. ಫ್ರೆಂಚ್, ಇಟಾಲಿಯನ್, ಸ್ಪ್ಯಾನಿಷ್, ಗ್ರೀಕ್ ಲ್ಯಾಟಿನ್ ಹೀಗೆ ಹಲವು ಭಾಷೆಗಳನ್ನು ಅಧ್ಯಯನ ಮಾಡುತ್ತಿದ್ದ ಅರಬಿಂದೋಗೆ ಲ್ಯಾಟಿನ್ ನಲ್ಲಿ ಇದ್ದ ಪ್ರಭುತ್ವವನ್ನು ಕಂಡ ಹೆಡ್ ಮಾಸ್ತರರು ತಾನೇ ಮುತುವರ್ಜಿಯಿಂದ ಲ್ಯಾಟಿನ್ ಹೇಳಿಕೊಡಲು ಶುರು ಮಾಡಿದರು.
ಯೋಗೀಂದ್ರ ಮರವಂತೆ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ