Advertisement

Tag: ಕೆಂಡಸಂಪಿಗೆ

ಪುಟ್ಟದೊಂದು ಹೂಹಕ್ಕಿಯ ಹುಡುಕುವುದು ಇಲ್ಲಿಗೆ ಹೊರಟ ಕಾರಣವಾಗಿತ್ತು

ಈ ಹಕ್ಕಿಯ ಹೆಸರು ‘ಫೂಕುಂಞಿ’ . ಅಂದರೆ ಹೂಮರಿ ಎಂದು ಅರ್ಥ. ಅಷ್ಟು ಹಗುರ.ಅಷ್ಟು ಸೂಕ್ಷ್ಮ, ಮತ್ತು ಅಷ್ಟೊಂದು ಸುಂದರ. ಒಂದು ಕಾಲದಲ್ಲಿ ಈ ದ್ವೀಪದ ಮನೆಮನೆಗಳ ಎದುರಿಗಿರುವ ಬುಗುರಿ ಮರದ ಎಲೆಗಳಿಗೆ ಜೋತಾಡುತ್ತ, ಎಲೆ ಯಾವುದು ಹಕ್ಕಿ ಯಾವುದು ಎಂದು ಗೊತ್ತಾಗದ ಹಾಗೆ ಉಲಿಯುತ್ತಿದ್ದ ಈ ಹೂ ಹಕ್ಕಿಗಳು ಇವರ ಹಾಡುಗಳಲ್ಲಿ ಮತ್ತು ಕತೆಗಳಲ್ಲಿ ದಂಡಿಯಾಗಿ ಸಿಗುತ್ತವೆ. ಅವುಗಳು ಈಗ ಇಲ್ಲದಿರುವುದಕ್ಕೆ…”

Read More

ಕಾಶಮ್ಮನೆಂಬ ಪರಿಮಳದ ನೆನಪು ಹಾಗೂ ಸಾರ್ಥಕ ಸಾವಿನ ಬಯಕೆ

“ಮುಪ್ಪೇ ಮುಟ್ಟದ ಹೂವಿನಂತೆ ಕಾಶಮ್ಮ ಯಾವಾಗಲೂ ನಳನಳಿಸುತ್ತಿದ್ದಳು. ಈ ಕಾಶಮ್ಮಜ್ಜಿಯಿಂದ ನಮಗೆ ಯಾವುದೇ ಹಾನಿ ಇಲ್ಲ ಎಂಬುದನ್ನು ಮನಗಂಡ ಮಠದ ಕೇರಿಯ ಗಂಡಸರು, ತಂತಮ್ಮ ಹೆಂಗಸರನ್ನು ಧಾರಾಳವಾಗಿ ಅವಳ ಕೋಣೆಯ ಬಾಗಿಲಿಗೆ ಕಳಿಸಿಕೊಡುತ್ತಿದ್ದರು…”

Read More

ರಹಮತ್‌ ತರೀಕೆರೆ ಬರೆದ ಹೊಸ ಪುಸ್ತಕ ‘ಕರ್ನಾಟಕ ಗುರುಪಂಥʼ…

“ವರ್ಗ ಅಸಮಾನತೆಯ ಸಮಾಜದಲ್ಲಿ ಹಂಚುತತ್ವದ ಈ ಆಧ್ಯಾತ್ಮಿಕ ಮಿತ್‌ ಗಳಿಗೆ ಮಾರ್ಮಿಕವಾದ ಅರ್ಥವಿದೆ. ಇಲ್ಲಿ ಆಹಾರವು ಸಹಾನುಭೂತಿ ತೋರುವ ಹಾಗೂ ಮನುಷ್ಯ ಸಂಬಂಧ ಬೆಸೆವ ಸಾಧನವಾಗುತ್ತದೆ. ಆಹಾರದ ವಿಷಯದಲ್ಲಿ ದಲಿತರ ಜತೆ ಸಹಭೋಜನದ ಏರ್ಪಾಟನ್ನು ಮುದ್ದಾಮಾಗಿ ಮಾಡಿದವರು ಇಂಚಗೇರಿಯವರು. `ದಲಿತರ ಕೇರಿಯಲ್ಲಿ ಉಣ್ಣದ ಹೊರತು ಮುಕ್ತಿಯಿಲ್ಲ’ ಎಂಬ ವಾಚ್ಯ-ಆಧ್ಯಾತ್ಮಿಕ ಎರಡೂ ಅರ್ಥದಲ್ಲಿ ಸಲ್ಲುವ…”

Read More

ನಾನು ನಾನೇ ಆಗಿದ್ದ ಆ ಒಂದು ದಿನ: ಶ್ವೇತಾ ಹೊಸಬಾಳೆ ಲಹರಿ

“ಗಂಡಸರು ಹೀಗೆ ಹೋಗುವುದು ಯಾರಿಗೂ ಅಸಹಜ ಎನ್ನಿಸುವುದೂ ಇಲ್ಲ; ಜವಾಬ್ದಾರಿಗಳಿಂದ ಕಳಚಿಕೊಂಡಂತೆ ಎಂದೂ ಅನ್ನಿಸುವುದಿಲ್ಲ. ದುಡಿಯುವ ಗಂಡಸಿಗೆ ವಿರಾಮ-ವಿಶ್ರಾಂತಿ ಬೇಕು ಎನ್ನುವ ಅನುಕಂಪ. ಅದೇ ಮಗುವನ್ನೂ ನೋಡಿಕೊಂಡು ಮನೆಕೆಲಸಗಳನ್ನು ನಿಭಾಯಿಸುವ, ಅಮ್ಮನಾದ ನಂತರ ವೈಯಕ್ತಿಕ ಜೀವನವೇ ಮರೀಚಿಕೆಯಾಗಿ, ಹವ್ಯಾಸ, ಸಿನೆಮಾ, ನಾಟಕ..”

Read More

ಸಿಂಹದ ಮೂಗ ತುದಿಯ ಸವರಿದ ತೆಂಗಿನ ತೋಪಿನವನ ಕಥೆ

“ಕಣ್ಣಿಂದ ಕೆಲವೇ ಕಾಲದಲ್ಲಿ ಮರೆಯಾಗಲಿರುವ ಬಹಳಷ್ಟು ಸಂಗತಿಗಳು ಅಪರಿಮಿತ ಸೌಂದರ್ಯದಿಂದ ಕೂಡಿರುತ್ತವೆ ಎನ್ನುವುದು ಬಲ್ಲವರು ಹೇಳುವ ಮಾತು. ಕಳೆದ ಹದಿನೈದು ಮಾಸಗಳಿಂದ ವಾಸಿಸುತ್ತಿರುವ ಈ ಲಕ್ಷದ್ವೀಪ ಸಮೂಹದ ಕಡಲು ಮತ್ತು ಆಕಾಶದ ಅನೂಹ್ಯ ನೀಲ ನಿಚ್ಛಳ ಬಣ್ಣವನ್ನು ನೋಡುತ್ತಾ ಇದ್ದರೆ ನನಗೂ ಹಾಗೇ ಅನಿಸುತ್ತದೆ. ಹಾಗಾಗಿ ಇಲ್ಲಿ ಇರುವ ತನಕ ಒಂದು ನಿಮಿಷವನ್ನೂ ವ್ಯರ್ಥ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ