ರಾಜಕೀಯ ಹಾದಿಯಲ್ಲಿ ಕಂಡ ಪ್ರಾಮಾಣಿಕ ನುಡಿಗಳು
ಬಿ.ಎ. ಮೊಹಿದೀನ್ ಅವರು ಜೀವನದಲ್ಲಿ ಇಟ್ಟುಕೊಂಡ ಮೌಲ್ಯಗಳು ಅನುಕರಣೀಯವಾದುದು. ತಾನು ಚುನಾವಣೆಗೆ ನಿಂತಾಗ ಮಸೀದಿ ದೇವಾಲಯ ಚರ್ಚುಗಳಿಗೆ ಮತಕೇಳಲು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಹಟಬಿಡದೇ ಪಾಲಿಸಿದವರು ಅವರು. ತಾವು ಹುಟ್ಟಿಬಂದ ಸಮುದಾಯದ ಏಳಿಗೆಗಾಗಿ ಮೊಹಿದೀನ್ ಅವರಿಗಿದ್ದ ಕಾಳಜಿ ಪ್ರಶ್ನಾತೀತವಾದುದು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ವಿದಾಯದಲ್ಲೂ ಬೆಳೆವ ಪ್ರೀತಿ
‘ಎಲ್ಲಾ ಕ್ಯಾಲ್ಕುಲೆಟ್ ಮಾಡಿ ಪ್ರೀತ್ಸಕೆ ಇದು ಅರೆಂಜ್ ಮ್ಯಾರೇಜ್ ಅಲ್ಲ. ಅವನನ್ನು ನೋಡಿದ್ರೆ ನನ್ನ ಎದೆಬಡಿತ ಹೆಚ್ಚಾಗತ್ತೆ. ಅವನ ಸಮುದ್ರದಂತಹ ಕಣ್ಣುಗಳ ಸೆಳೆತದಿಂದ ಪಾರಾಗೋದಿಕ್ಕೆ ಆಗದೆ ಇಲ್ಲ…’ ಎಂದು ಹೇಳುತ್ತಿದ್ದವನನ್ನು ತಡೆದು ‘ಇವೆಲ್ಲಾ ಮೊದಲ ನೋಟದಲ್ಲೇ ಆಯ್ತೆನೋ ಸಾಹೇಬ್ರಿಗೆ?!’ ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಅದೆಷ್ಟು ಸಮಂಜಸ ಅನಿಸುತ್ತದೆ… ಅವನು ಹೇಳಿದ; ‘ನೀ ಏನೇ ಅನ್ನು, ಮೊದಲ ನೋಟ, ಮೊದಲ ಗುರುತುಗಳೇ ನಮ್ಮನ್ನು ಸಾಹಸಿಗಳನ್ನಾಗಿ ಮಾಡದು.
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ
ನಗರ-ಬೆಟ್ಟಗಳ ಕಿರು ಕತೆಗಳು
ಬೆಟ್ಟ ಹತ್ತೋದು ಎಂದರೆ ರಾಷ್ಟ್ರೀಯ ರಕ್ಷಿತ ವನಗಳಲ್ಲಿ ಅರಣ್ಯ ಇಲಾಖೆಯ ರೇಂಜರುಗಳು ಸೊಗಸಾದ ದಾರಿ ಮಾಡಿರುತ್ತಾರೆ. ಅದೇ ದಾರಿಯಲ್ಲೆ ನಾವು ನಡೆದು, ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ತಲುಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಪಕ್ಷಿನೋಟದಲ್ಲಿ ನೋಡುವುದು. ದಾರಿ ಬಿಟ್ಟು ಅಕ್ಕಪಕ್ಕ ಇರುವ ಕಾಡಿನಲ್ಲಿ ತಿರುಗಾಡುವಂತಿಲ್ಲ. ರಕ್ಷಿತ ವನ ಅಥವಾ ಕಾಡು ಎನ್ನುವ ಎಚ್ಚರಿಕೆಯನ್ನು ಪಾಲಿಸಿಯೇ ಮುಂದುವರೆಯಬೇಕು. ಇದರಿಂದ ಪರಿಸರಕ್ಕೆ ಒಳ್ಳೆಯದು. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’
ಆನೆ ಸಾಕಲು ಹೊರಟವಳ ಕಥೆ
ಸುಲಲಿತವಾದ ಪ್ರಬಂಧಗಳಿಗೆ ಅವರು ಆಯ್ದುಕೊಳ್ಳುವ ವಿಷಯಗಳೇನೂ ಅಸಾಮಾನ್ಯವಾದುದಲ್ಲ. ಹೆಚ್ಚಿನವು ದಿನನಿತ್ಯ ಜರುಗುವ ಸಂಗತಿಗಳೇ. ಆದರೆ ಅದನ್ನು ಹೇಳುವ ಶೈಲಿ ಇದೆಯಲ್ಲಾ, ಅದು ಮಾತ್ರ ನಿಜಕ್ಕೂ ಅದ್ಭುತ. ಅತ್ಯಂತ ಚಿಕ್ಕದಾಗಿ, ಚೊಕ್ಕದಾಗಿ ಮತ್ತು ಸರಳವಾಗಿ ನಿರೂಪಣೆ ಮಾಡುತ್ತಾರೆ. ಮಧ್ಯಾಹ್ನ ಮಾಡುವ ಅಡುಗೆಗೆ ಸಂಬಂಧಿತ ಲಹರಿ ಬಂದರೆ ಅದುವೇ ಒಂದು ಪ್ರಬಂಧವಾಗುತ್ತದೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ಮಳೆ ನಕ್ಷತ್ರಗಳ ಲೆಕ್ಕಾಚಾರದ ನಡುವೆ
ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ಇದೆ. ಹಾಗೆ ನೋಡಿದರೆ ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಅವರು ನಾಟಕದ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ
ಬದುಕಿನ ಪ್ರಶ್ನೆಗಳು..ಪರೀಕ್ಷೆಗಳು
ಅವನಿಗೆ ಮೊದಲಿನಿಂದಾನು ಮನೆಕಡೆಯಿಂದ ಸಮಸ್ಯೆ ಇತ್ತು. ಅಮ್ಮ, ಅಪ್ಪ, ವಿಕಲ ಚೇತನ ಅಣ್ಣ, ಮನೆಯಲ್ಲಿ ಸದಾ ಇರುವ ಜಗಳಗಳು ನೆನಪಾದವು. ನನಗೆ ನನ್ನ ಮನೆಯಲ್ಲಿರುವ ಬಡತನ, ರಿಸರ್ವಶನ್ ಕೊಟ್ಟರೂ ಇವಕ್ಕೆ ಮುಂದೆ ಬರೋದಕ್ಕೆ ಗೊತ್ತಿಲ್ಲ ಎಂಬ ಕುಹಕಗಳು ಕುದಿಯುತ್ತಿದ್ದವು. ಎರಡು ಮಗ್ಗಿನಲ್ಲಿ ಚಾ ಬಗ್ಗಿಸಿಕೊಂಡು ಕೋಣೆಗೆ ಬಂದರೆ ಅವನು ಹಾಸಿಗೆಯಿಂದೆದ್ದು ಗೋಡೆಗಾತು ಯಾವುದೋ ಮ್ಯಾಗಜಿನ್ ಹಿಡಿದು ಕೂತಿದ್ದ. ಮೊಬೈಲು, ಬ್ಯಾಟರಿ ದಿಕ್ಕಿಗೊಂದೊಂದು ಬಿದ್ದಿದ್ದವು.
ದಾದಾಪೀರ್ ಜೈಮನ್ ಬರೆಯುವ “ಜಂಕ್ಷನ್ ಪಾಯಿಂಟ್” ಅಂಕಣ
ಸಾಮಾನ್ಯ ಪ್ರಜೆಯ ಅರ್ಧಸತ್ಯಗಳು
ಯಾವುದೇ ಸರಕಾರ ಬರಲಿ ಅಥವಾ ಇರಲಿ, ಕೋವಿಡ್ ಮಾರಿ ಬರಲಿ ಹೋಗಲಿ, ಯುಕ್ರೇನಿನಲ್ಲಿ ಯುದ್ಧವಾಗುತ್ತಿರಲಿ ಬಿಡಲಿ, ದಿನನಿತ್ಯದ ಸಾಮಾನ್ಯಪ್ರಜೆಯ ಪರಿಸ್ಥಿತಿ ಯಥಾಪ್ರಕಾರ ಅಯೋಮಯವಾಗಿದೆ. ಆಸ್ಟ್ರೇಲಿಯವು ಪ್ರಪಂಚದ ಅತ್ಯಂತ ದುಬಾರಿ ದೇಶಗಳಲ್ಲಿ ಒಂದು. ಇಲ್ಲಿನ ದಿನನಿತ್ಯ ಜೀವನದ ಅಂದಾಜು ಖರ್ಚುವೆಚ್ಚವು ಸದಾ ದುಬಾರಿಯಾಗಿಯೇ ಇರುತ್ತದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ವಸತಿ ಸಮಸ್ಯೆ ವಿಪರೀತವಾಗಿದೆ.
ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ಕವಿಜೋಡಿಯ ದುರಂತಗೀತ
ಕವಿಜೋಡಿಯ ದುರಂತ ಅಂತ್ಯವೂ ಬಹಳ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಕಾವ್ಯದೇವಿಯೇ ಹೇಳಿ ಮಾಡಿಸಿದಂಥ ಜೋಡಿಯೊಂದು ಪರಸ್ಪರರ ವಿಶ್ವಾಸ ನಂಬಿಕೆಗಳನ್ನು ಉಳಿಸಿಕೊಳ್ಳಲಾಗುವುದಿಲ್ಲ. ತನ್ನ ಗಂಡ ಆಸಿಯಾ ಎಂಬುವವಳ ಜೊತೆ ಸಲಿಗೆಯಿಂದ ಇರುವುದನ್ನು ಸಹಿಸಲಾಗದೆ ತಮ್ಮಿಬ್ಬರ ಪ್ರೇಮದ ಕುರುಹಾಗಿದ್ದ ಕವಿಕುಟೀರದಿಂದ ಅವನ ಕವಿತೆ-ಟಿಪ್ಪಣಿಗಳ ಪುಸ್ತಕವನ್ನು ಸುಟ್ಟು ಟೆಡ್ ನನ್ನು ಹೊರಹಾಕುವುದು..
ಎಸ್. ಸಿರಾಜ್ ಅಹಮದ್ ಬರೆಯುವ ಅಂಕಣ
ಸುಳಿಯ ಸೆಳವಿಗೆ ಸಿಲುಕದೇ…
ಮನುಷ್ಯ ಮುಕ್ತವಾಗಿ ಮತ್ತು ಸ್ವಚ್ಛಂದವಾಗಿ ಬೇರೆಯವರ ಜೊತೆ ಕಲೆಯಲು ರಂಗಭೂಮಿಗೆ ಬರಬೇಕು. ಅಲ್ಲಿ ಇರುವ ಮಜವೇ ಬೇರೆ. ಪ್ರೀತಿಯಲ್ಲಿ, ಸಲಿಗೆಯಲ್ಲಿ ಮತ್ತು ಸ್ನೇಹದಲ್ಲಿ ಕಾಲೆಳೆಯುವ ಬಗೆಗಳು ಇಲ್ಲಿ ಪಡೆದುಕೊಳ್ಳುವ ಆಯಾಮವೇ ಬೇರೆ. ಮೇಕಪ್‍ಗೆ ಕೂತರೆ ಮತ್ತು ರಂಗಕ್ಕೆ ಬಂದರೆ ಅಲ್ಲಿ ಅವರ ಚಹರೆ ಬೇರೆ. ಈ ಎಲ್ಲ ತಿಳಿದು ಮತ್ತು ಸಮುದ್ರದ ಬಗೆಗೆ ನನ್ನಲ್ಲಿ ಮೊದಲಿಂದ ಇರುವ ಸೆಳೆತದಿಂದ ಹೊರಟೆ. ಟಿಟಿಯಲ್ಲಿ ಹುಡುಗರ ಗೇಲಿ. ಪರಸ್ಪರ ಕಾಲೆಳೆಯುವ ಗುಣ ನಗು ತರಿಸುತ್ತಿತ್ತು.
ಎನ್.ಸಿ. ಮಹೇಶ್ ಬರೆಯುವ “ರಂಗ ವಠಾರ” ಅಂಕಣ









