ದೂರದೂರಿನ ನೆಂಟತನವೂ, ನೆರೆಹೊರೆಯವರ ಸ್ನೇಹಹಸ್ತವೂ
ಆಸ್ಟ್ರೇಲಿಯ ವಸಾಹತುಶಾಹಿ ಆಡಳಿತದಿಂದ ಕ್ರಮೇಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬದಲಾದರೂ ದೇಶವನ್ನು ಆಳುವುದು ಬಿಳಿಯ ರಾಜಕಾರಣಿಗಳೆ ಎನ್ನುವುದು ಸರ್ವೇಸಾಮಾನ್ಯ ಸತ್ಯ. ಇಂಗ್ಲಿಷ್ ಭಾಷೆಯ ಜೊತೆ ಆಮದಾಗಿ ಬಂದಿದ್ದು ವ್ಯವಸ್ಥೆ. ಹೀಗಾಗಿ ಆಸ್ಟ್ರೇಲಿಯಾವು ಇಂಗ್ಲಿಷ್ ಭಾಷೆಯ ಪಾಶ್ಚಾತ್ಯ ದೇಶ. ಈ ಪಟ್ಟದೊಡನೆ ಬಳುವಳಿಯಾಗಿ ಬಂದಿರುವುದು, ನಂಬಿರುವುದು ದೂರದೂರಿನ ನೆಂಟತನ. ಮಾತೃದೇಶ ಬ್ರಿಟನ್, ಅಣ್ಣನಾಗಿ ಅಮೆರಿಕ, ಕಿರಿತಂಗಿಯಾಗಿ ನ್ಯೂ ಝಿಲಂಡ್, ಬಂಧುಬಾಂಧವರು ಯುರೋಪಿಯನ್ ದೇಶದವರು.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ಜೋಕು ಮಾಡಲು ಬಳಸುತ್ತಿದ್ದ ಪದದ ನಿಜ ಅರ್ಥ ತಿಳಿಯಿತು
ಮೋಹನ ಸ್ವಾಮಿ ಒಂದು ಕಥಾ ಸಂಕಲನವಾದರೂ ನಿಧಾನವಾಗಿ LGBT ಸಮುದಾಯದೆಡೆಗಿನ ನನ್ನ ಮನೋಭಾವನೆಯನ್ನು ಬದಲಾಯಿಸಿಕೊಳ್ಳಲು ಸಹಾಯಮಾಡಿತು. ನನ್ನೆದುರು ಆ ಸಮುದಾಯದ ವ್ಯಕ್ತಿಗಳು ಸಿಕ್ಕಾಗ ಮಾಮೂಲಿ ಗಂಡು ಹೆಣ್ಣುಗಳ ಹಾಗೇ ಮಾತನಾಡಲು, ಹರಟೆ ಹೊಡೆಯಲು ಸಾಧ್ಯವಾಯಿತು. ಹಾಗಾದರೆ ನಾನು ಈ ವಿಚಾರಲ್ಲಿ ನನ್ನ ಯೋಚನೆಯನ್ನು ನೂರಕ್ಕೆ ನೂರು ಬದಲಿಸಿಕೊಂಡೆನೇ? ಎಂದು ಕೇಳಿದರೆ ಉತ್ತರ ಗೊತ್ತಿಲ್ಲ, ಅಥವಾ ಇಲ್ಲವೆನ್ನಿಸುತ್ತದೆ.
ಓದುವ ಸುಖ ಅಂಕಣದಲ್ಲಿ ವಸುಧೇಂದ್ರರ “ಮೋಹನಸ್ವಾಮಿ” ಕೃತಿಯ ಕುರಿತು ಬರೆದಿದ್ದಾರೆ ಗಿರಿಧರ್ ಗುಂಜಗೋಡು
ನಂಬಿ ಬದುಕಿದವರ ಕಥೆ
ಝುಹೆಬಾನ್ ಎಂಬ ಮಧ್ಯವಯಸ್ಕನೊಬ್ಬರನ್ನು ಮಾತಿಗೆಳೆದಾಗ ಅವರು ದರ್ಗಾಹದ ಇತಿಹಾಸವನ್ನು ಬಿಚ್ಚಿಡುತ್ತಾ ಹೋದರು. ಸುಮಾರು ಎರಡುನೂರ ಎಪ್ಪತ್ತೈದು ವರ್ಷಗಳ ಹಿಂದೆ ಟಿಪ್ಪು ಮಸ್ತಾನ್, ಮಾಣಿಕ್ ಮಸ್ತಾನ್ ಮತ್ತು ತವಕ್ಕಲ್ ಮಸ್ತಾನ್ ಎಂಬ ಮೂವರು, ನವಾಬ್ ಹೈದರ್ ಆಲಿ ಕಟ್ಟಿಸುತ್ತಿದ್ದ ಕಲ್ಲಿನರಮನೆಯ ಕೆಲಸಕ್ಕೆಂದು ಬಂದರು. ಧರ್ಮನಿಷ್ಠರಿದ್ದ ಆ ಮೂವರೂ ಕೆಲಸವೇ ದೇವರೆಂದು ದುಡಿಯುತ್ತಿದ್ದರೂ ಪಗಾರದ ದಿನ ಮಾತ್ರ ಕಾಣೆಯಾಗಿಬಿಡುತ್ತಿದ್ದರಂತೆ!
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ
‘ಊಲುರು ಮಾತು’ ಎಂಬ ಹೊಸ ಭಾಷ್ಯ
ದೇಶೀಯ ಮಟ್ಟದಲ್ಲಿ ಆಡಳಿತ ನಡೆಸುವ ಪಾರ್ಲಿಮೆಂಟಿಗೆ ಅಬೊರಿಜಿನಲ್ ಜನರ ಸಮಿತಿಯನ್ನು ನೇಮಿಸಿ ಅವರ ದನಿಗೆ ಪುನಃಶ್ಚೇತನ ಕೊಡುವ ಭರವಸೆಯನ್ನು ಆಸ್ಟ್ರೇಲಿಯಾದ ಹೊಸ ಸರ್ಕಾರ ನೀಡಿದೆ. ಅಷ್ಟೇ ಅಲ್ಲ, ದೇಶದ ಸಂವಿಧಾನದಲ್ಲಿ ಅವರ ದನಿಯನ್ನು ಸೇರ್ಪಡಿಸುವ ಮಾತನ್ನು ಕೊಟ್ಟಾಗಿದೆ. ಹೊಸ ಪ್ರಧಾನಮಂತ್ರಿಗಳ ಮಾತಿನಿಂದ ಅಬೊರಿಜಿನಲ್ ಜನಸಮುದಾಯಗಳ ನಾಯಕರಲ್ಲಿ, ಹಿರಿಯರಲ್ಲಿ ಸಂಚಲನೆ ಮೂಡಿದೆ. ಆಸ್ಟ್ರೇಲಿಯಾ ಪತ್ರದಲ್ಲಿ ಡಾ. ವಿನತೆ ಶರ್ಮಾ ಅವರು ಆಸ್ಟ್ರೇಲಿಯಾದ ವರ್ತಮಾನಗಳನ್ನು ಬರೆದಿದ್ದಾರೆ.
ರಾಜಕೀಯ ಹಾದಿಯಲ್ಲಿ ಕಂಡ ಪ್ರಾಮಾಣಿಕ ನುಡಿಗಳು
ಬಿ.ಎ. ಮೊಹಿದೀನ್ ಅವರು ಜೀವನದಲ್ಲಿ ಇಟ್ಟುಕೊಂಡ ಮೌಲ್ಯಗಳು ಅನುಕರಣೀಯವಾದುದು. ತಾನು ಚುನಾವಣೆಗೆ ನಿಂತಾಗ ಮಸೀದಿ ದೇವಾಲಯ ಚರ್ಚುಗಳಿಗೆ ಮತಕೇಳಲು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅದನ್ನು ಹಟಬಿಡದೇ ಪಾಲಿಸಿದವರು ಅವರು. ತಾವು ಹುಟ್ಟಿಬಂದ ಸಮುದಾಯದ ಏಳಿಗೆಗಾಗಿ ಮೊಹಿದೀನ್ ಅವರಿಗಿದ್ದ ಕಾಳಜಿ ಪ್ರಶ್ನಾತೀತವಾದುದು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ವಿದಾಯದಲ್ಲೂ ಬೆಳೆವ ಪ್ರೀತಿ
‘ಎಲ್ಲಾ ಕ್ಯಾಲ್ಕುಲೆಟ್ ಮಾಡಿ ಪ್ರೀತ್ಸಕೆ ಇದು ಅರೆಂಜ್ ಮ್ಯಾರೇಜ್ ಅಲ್ಲ. ಅವನನ್ನು ನೋಡಿದ್ರೆ ನನ್ನ ಎದೆಬಡಿತ ಹೆಚ್ಚಾಗತ್ತೆ. ಅವನ ಸಮುದ್ರದಂತಹ ಕಣ್ಣುಗಳ ಸೆಳೆತದಿಂದ ಪಾರಾಗೋದಿಕ್ಕೆ ಆಗದೆ ಇಲ್ಲ…’ ಎಂದು ಹೇಳುತ್ತಿದ್ದವನನ್ನು ತಡೆದು ‘ಇವೆಲ್ಲಾ ಮೊದಲ ನೋಟದಲ್ಲೇ ಆಯ್ತೆನೋ ಸಾಹೇಬ್ರಿಗೆ?!’ ಎಂದು ಕೇಳಿದಾಗ ಅವನು ಕೊಟ್ಟ ಉತ್ತರ ಅದೆಷ್ಟು ಸಮಂಜಸ ಅನಿಸುತ್ತದೆ… ಅವನು ಹೇಳಿದ; ‘ನೀ ಏನೇ ಅನ್ನು, ಮೊದಲ ನೋಟ, ಮೊದಲ ಗುರುತುಗಳೇ ನಮ್ಮನ್ನು ಸಾಹಸಿಗಳನ್ನಾಗಿ ಮಾಡದು.
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ
ನಗರ-ಬೆಟ್ಟಗಳ ಕಿರು ಕತೆಗಳು
ಬೆಟ್ಟ ಹತ್ತೋದು ಎಂದರೆ ರಾಷ್ಟ್ರೀಯ ರಕ್ಷಿತ ವನಗಳಲ್ಲಿ ಅರಣ್ಯ ಇಲಾಖೆಯ ರೇಂಜರುಗಳು ಸೊಗಸಾದ ದಾರಿ ಮಾಡಿರುತ್ತಾರೆ. ಅದೇ ದಾರಿಯಲ್ಲೆ ನಾವು ನಡೆದು, ಬೆಟ್ಟದ ಮೇಲಿರುವ ವ್ಯೂ ಪಾಯಿಂಟ್ ತಲುಪಿ ಸುತ್ತಮುತ್ತಲಿನ ಪ್ರದೇಶಗಳನ್ನು ಪಕ್ಷಿನೋಟದಲ್ಲಿ ನೋಡುವುದು. ದಾರಿ ಬಿಟ್ಟು ಅಕ್ಕಪಕ್ಕ ಇರುವ ಕಾಡಿನಲ್ಲಿ ತಿರುಗಾಡುವಂತಿಲ್ಲ. ರಕ್ಷಿತ ವನ ಅಥವಾ ಕಾಡು ಎನ್ನುವ ಎಚ್ಚರಿಕೆಯನ್ನು ಪಾಲಿಸಿಯೇ ಮುಂದುವರೆಯಬೇಕು. ಇದರಿಂದ ಪರಿಸರಕ್ಕೆ ಒಳ್ಳೆಯದು. ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’
ಆನೆ ಸಾಕಲು ಹೊರಟವಳ ಕಥೆ
ಸುಲಲಿತವಾದ ಪ್ರಬಂಧಗಳಿಗೆ ಅವರು ಆಯ್ದುಕೊಳ್ಳುವ ವಿಷಯಗಳೇನೂ ಅಸಾಮಾನ್ಯವಾದುದಲ್ಲ. ಹೆಚ್ಚಿನವು ದಿನನಿತ್ಯ ಜರುಗುವ ಸಂಗತಿಗಳೇ. ಆದರೆ ಅದನ್ನು ಹೇಳುವ ಶೈಲಿ ಇದೆಯಲ್ಲಾ, ಅದು ಮಾತ್ರ ನಿಜಕ್ಕೂ ಅದ್ಭುತ. ಅತ್ಯಂತ ಚಿಕ್ಕದಾಗಿ, ಚೊಕ್ಕದಾಗಿ ಮತ್ತು ಸರಳವಾಗಿ ನಿರೂಪಣೆ ಮಾಡುತ್ತಾರೆ. ಮಧ್ಯಾಹ್ನ ಮಾಡುವ ಅಡುಗೆಗೆ ಸಂಬಂಧಿತ ಲಹರಿ ಬಂದರೆ ಅದುವೇ ಒಂದು ಪ್ರಬಂಧವಾಗುತ್ತದೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ಮಳೆ ನಕ್ಷತ್ರಗಳ ಲೆಕ್ಕಾಚಾರದ ನಡುವೆ
ಹಳ್ಳಿಗರು ನಮಗಿಂತ ಬೆಸ್ಟ್. ಅವರಲ್ಲೂ ನಾಟಕ ಮಾಡುವ ಉಮೇದು ಇದೆ. ಹಾಗೆ ನೋಡಿದರೆ ನಮಗಿಂತ ಹೆಚ್ಚು ಇದೆ. ಆದರೆ ಅವರಿಗೆ ನಾಟಕ ಎನ್ನುವುದು ತಮ್ಮ ಬಿಡುವಿನ ದಿನಗಳ ಒಂದು ದಿವ್ಯ ಬಾಬ್ತು. ಮಳೆಗಾಲ ಆರಂಭವಾಗಿ ಬೇಸಾಯ ಆರಂಭಿಸಿ ಉತ್ತುಬಿತ್ತು ಫಸಲು ಕೈಗೆ ಬರುತ್ತದೆ ಅನಿಸಿದಾಗ ಅವರು ನಾಟಕದ ಪ್ರಾಕ್ಟೀಸ್ ಮಾಡಿ ಬಣ್ಣ ಹಚ್ಚಿ ಸಂಭ್ರಮಿಸುತ್ತಾರೆ.
ಎನ್.ಸಿ. ಮಹೇಶ್ ಬರೆಯುವ ‘ರಂಗ ವಠಾರ’ ಅಂಕಣ










