Advertisement
ವಿದ್ಯಾಶಂಕರ ಹರಪನಹಳ್ಳಿ ಬರೆದ ಈ ದಿನದ ಕವಿತೆ

ವಿದ್ಯಾಶಂಕರ ಹರಪನಹಳ್ಳಿ ಬರೆದ ಈ ದಿನದ ಕವಿತೆ

​ಅಮರತ್ವದ ಭಾರ

ಚಿರಂಜೀವಿ ಅಶ್ವತ್ಥಾಮ
ಕೊರಗುತ ಕುಗ್ಗುವನು,
ಭೂತಕಾಲದ ಭಾರಕ್ಕೆ ಸಿಲುಕಿ
ಸ್ವಮರುಕದಿ ಕುಸಿಯುವನು…
ಚಿರಂಜೀವಿತ್ವವ ಎಂಬುದು
ವರವೋ..? ಇಲ್ಲ ಶಾಪವೋ..?
ಮುಗಿಯದ ಈ ದಾರಿಯಲ್ಲಿ
ದಣಿದು ದಣಿದು ಕನಲುವನು…

*

“ಡೈಮಂಡ್ಸ್ ಆರ್ ಫಾರೆವರ್, ಹುಡುಗಿ!
ಫಾರೆವರ್… ಶಾಶ್ವತ…!”
ಎನ್ನುತ್ತಾ ಪ್ರೇಮಿ,
ವಜ್ರದುಂಗುರ ತೊಡಿಸಿ
ಅಧಿಕಾರದ ಮುದ್ರೆಯೊತ್ತಲು ಹವಣಿಸುವನು.
ಪ್ರೀತಿಸಿದ ಹುಡುಗನೇ ಆದರೂ,
ಈ ‘ಫಾರೆವರ್’ ಎಂಬ ಮಾತಿಗೇಕೋ
ಅವಳು ಬೆದರುತ್ತಾಳೆ…
ಅವ್ಯಕ್ತ ಭಯವೊಂದರಲ್ಲಿ ಮುಳುಗಿ
ಮಂಟಪದಲ್ಲೇ ಬೆವರುತ್ತಾಳೆ…

“ಅಮರತ್ವದ ವಜ್ರಕ್ಕಿಂತ
ಮುಂಜಾನೆ ಅರಳಿ ಸಂಜೆಗೆ ಬಾಡುವ
ಹೂವೊಂದೇ ಸಾಕಿತ್ತು…”
ಎನ್ನಲಾಗದೆ ಅಸಹಾಯಕಳಾಗಿ
ಸುಮ್ಮನೆ ಪೆಚ್ಚಾಗಿ ನಗುತ್ತಾಳೆ…

ಈ ಕ್ಷಣದ ಸತ್ಯವಷ್ಟೇ ಸತ್ಯ,
ಸಾರ್ವಕಾಲಿಕ ಸತ್ಯವೆಲ್ಲವೂ ಮಿಥ್ಯ!
ಅಮರತ್ವದ ಸಂಕಟ-ಸವಾಲುಗಳು
ದೇವತೆಗಳಿಗಷ್ಟೇ ಇರಲಿ,
ಸಾಮಾನ್ಯ ನರಮನುಷ್ಯರಿಗಲ್ಲ…

ವಿದ್ಯಾಶಂಕರ ಹರಪನಹಳ್ಳಿ, ಮಾಜಿ ಐ. ಟಿ ಉದ್ಯೋಗಿ. ಸಧ್ಯಕ್ಕೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪಾಧ್ಯಾಯಕ.
ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಪ್ರಸ್ತುತ ಬೆಂಗಳೂರುನಲ್ಲಿ ವಾಸ. 

ಸಾಹಿತ್ಯದಲ್ಲಿ, ಸೈಕಲ್ ಸವಾರಿಯಲ್ಲಿ ಆಸಕ್ತಿ. ಬರವಣಿಗೆ ಮೆಚ್ಚಿನ ಹವ್ಯಾಸ. ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ, ವೆಬ್ ಮ್ಯಾಗಜಿನ್-ಗಳಲ್ಲಿ ಕಥೆ, ಕವನಗಳು ಪ್ರಕಟವಾಗಿವೆ. ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರಹ ಪ್ರಕಟವಾಗಿವೆ. ಸಿಂಚನ – ೨೦೧೪ರ  ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದಾರೆ.
 ‘ಶುಭಾಸಂಕಲ್ಪ’ – ಸ್ಫೂರ್ತಿದಾಯಕ ಕತೆಗಳ ಸಂಕಲನ, ‘ಕನಸಿನ ಚಿಟ್ಟೆಯ ಹಿಡೆಯಲು ಹೊರಟು’ – ಕನ್ನಡ ಪ್ರಪ್ರಥಮ ಮೊಬೈಲ್ ಕೃತಿ ಮತ್ತು ‘Fun and Engaging Stories For Children’ ಪ್ರಕಟಿತ ಪುಸ್ತಕಗಳು. ಅಂಡ್ರಾಯಿಡ್ ಯ್ಯಾಪ್ ಮೂಲಕ ‘ಕವಿತೆ ಯಾರ್ ಕೊಳ್ತಾರೆ ಸ್ವಾಮೀ?’ ವಿವಿಧ ಕವಿಗಳ ಕವಿತೆಗಳ ಸಂಕಲನ ರೂಪಿಸಿದ್ದಾರೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ