ಕಣ್ಣ ಹನಿ ಜಿನುಗಿಸುವ ಫೋಟೋ…
ಸಿನಿಮಾದ ಆರಂಭ ಮುಂಜಾನೆಯಿಂದ ಕ್ಯಾಮೆರಾ ಮೇಲಿಂದ ಕೆಳಗೆ ಪ್ಯಾನ್ ಆದರೆ ಸಿನಿಮಾದ ಅಂತ್ಯದಲ್ಲಿ ಮುಸ್ಸಂಜೆ ಮುಗಿದು ಕತ್ತಲು ಹರಿದು ದೀಪವೊಂದು ಆರಿ ಕತ್ತಲಾಗುತ್ತದೆ. ಕ್ಯಾಮೆರಾ ನಿಧಾನಕ್ಕೆ ಮೇಲಕ್ಕೆ ಪ್ಯಾನ್ ಆಗಿ ನಿಲ್ಲುತ್ತದೆ. ಕತೆ ಎಲ್ಲಿ ಶುರುವಾಯ್ತೊ ಅಲ್ಲೇ ಕೊನೆಯಾಗಿದೆ. ಫೋಟೋ ತೆಗೆಸಲು ಹೊರಟ ದುರ್ಗ್ಯಾ ನಮ್ಮೆಲ್ಲರಲ್ಲೂ ಕೂತುಬಿಡುತ್ತಾನೆ. ಇದು ನಿರ್ದೇಶಕರ ಮೊದಲ ಸಿನಿಮಾ ಅಂದಾಗ ಎಲ್ಲರಿಂದ ಓಹ್! ಎಂಬ ಉದ್ಘಾರ…
ಉತ್ಸವ್ ಗೋನವಾರ ನಿರ್ದೇಶನದ “ಫೋಟೋ” ಸಿನಿಮಾದ ಕುರಿತು ಜಯರಾಮಾಚಾರಿ ಬರಹ
ಏನೋ ಹೇಳಬೇಕು…
ನೂರಾರು ಪ್ರಶ್ನೆಗಳೊಂದಿಗೆ, ಮಗ್ಗಲು ಬದಲಿಸುವ ಬದುಕಿನ ಬದುವಿನಲ್ಲಿ ಹುಡುಕಾಟ ತೀವ್ರಗೊಂಡ ನೆಲೆಯಲ್ಲಿ ಆಧ್ಯಾತ್ಮದ ಗವಿಯೊಳಗೆ ಬೆಳಕು ಕಾಣಲು ಹಂಬಲಿಸಿ, ಬದುಕನ್ನು ಭಿನ್ನ ಪಾತಾಳಿಯಲ್ಲಿ ಕಾಣುವ ಹಠಕ್ಕೆ ಬಿದ್ದವನಿಗೆ ಈ ಕವಿತೆಗಳ ಕಡೆ ಅದೇನೋ ತದೇಕ ಸೆಳೆತ ಮತ್ತು ದಿನದಿಂದ ದಿನಕ್ಕೆ ಎಲ್ಲರಿಂದಲೂ ಬಹುದೂರ ಸಾಗುತ್ತಿದ್ದೇನೆ ಅನಿಸಿದರೂ; ನನಗೆ ನಾನು ತುಂಬಾ ಹತ್ತಿರವಾಗುತ್ತಿದ್ದೇನೆ ಎಂದೆನಿಸಿದೆ. ದ್ರುತಗತಿಯ ಹಾದಿ ತುಳಿಯದೇ ಒಂದೊಂದಾಗಿ ಕಳಚಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಸುಮಿತ್ ಮೇತ್ರಿ ಬರಹ
ಎಮ್ಮೆಎಮ್ಮೆಯೆಂದೇಕೆ ಬೀಳುಗಳೆವಿರಿ?
ಕೆಲವು ಎಮ್ಮೆಗಳು ಬಹಳ ಸೂಕ್ಷ್ಮ. ಎಮ್ಮೆ ಕರುಹಾಕಿ ನಂತರದಲ್ಲಿ ಒಬ್ಬರೇ ಹಾಲು ಕರೆಯುತ್ತಿದ್ದರೆ ಅದು ಕೆಲವು ದಿನಗಳ ನಂತರ ಇನ್ನೊಬ್ಬರಿಗೆ ಹಾಲನ್ನು ಕೊಡುವುದಿಲ್ಲ. ಸೊರವು ಬಿಡದೆ ಸುಮ್ಮನೆ ನಿಂತಿರುತ್ತದೆ. ಮೊಲೆಗಳನ್ನು ಎಷ್ಟೇ ಜಗ್ಗಿದರೂ ಮೊಲೆಗೆ ಹಾಲು ಇಳಿಸುವುದೇ ಇಲ್ಲ. ಇದನ್ನು ನಮ್ಮೂರಕಡೆ ಕೈಮರ್ಚಲು ಎನ್ನುತ್ತಾರೆ. ಇನ್ನೊಬ್ಬರು ಹಾಲು ಕರೆಯಬೇಕೆಂದರೆ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ.
ಎಮ್ಮೆಯ ಕುರಿತು ಹಲವು ಕುತೂಹಲಕರ ಪ್ರಸಂಗಗಳನ್ನು ಬರೆದಿದ್ದಾರೆ ಚಂದ್ರಮತಿ ಸೋಂದಾ
ಏಕೆ ಕುಣಿವೆ ತೂಕ ತಪ್ಪಿ ಸಾಕು ಕಾಲ ಭೈರವ
ಗೇರುಹಣ್ಣನ್ನು ತಿಂದು ಬೀಜವನ್ನು ಎಲ್ಲರೂ ಸೇರಿ ಒಂದೆಡೆ ಕೂಡಿಡುತ್ತಿದ್ದೆವು. ನೂರು ಬೀಜಗಳಾದ ಮೇಲೆ ಅದನ್ನು ಕಮ್ತೀರ ಅಂಗಡಿಗೆ ಕೊಟ್ಟರೆ ಅವರು ನಮಗೆಲ್ಲ ಒಂದೊಂದು ಆಯ್ಸ್-ಕ್ಯಾಂಡಿ ಕೊಡುತ್ತಿದ್ದರು. ತಂಪಾಗಿರುವ ಅದನ್ನು ತಿನ್ನುತ್ತಾ ಅದಕ್ಕೆ ಹಾಕಿರುವ ಕೆಂಪನೆಯ ಬಣ್ಣ ನಮ್ಮ ಬಾಯಿಯ ಸುತ್ತಮುತ್ತ ಚಂದದ ಪ್ರಭಾವಳಿಯನ್ನು ರಚಿಸುತ್ತಿತ್ತು. ನಮ್ಮ ಈ ಘನಂದಾರಿ ನಡೆ ಅದು ಹೇಗೋ ಪರಮಜ್ಜನಿಗೆ ಗೊತ್ತಾಗಿಬಿಡುತ್ತಿತ್ತು. ನಾರಾಯಣ ಯಾಜಿ ಬರಹ
ಹಕ್ಕಿನ ಒಕ್ಕೊರಲ ಕೂಗು…
ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನ ಇರಬೇಕು. ಇಂದು ನಾವು ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಚಿತ್ರದಲ್ಲಿ ತೋರಿಸಿದ ಹಾಗೆ ಒಂದು ಹೋರಾಟಕ್ಕೆ ಮಾಧ್ಯಮ ಮತ್ತು ಸಂಘಟನೆಗಳು ತುಂಬಾ ಅವಶ್ಯಕ. ಈ ಎರಡು ಪ್ರಾಮಾಣಿಕವಾಗಿದ್ದರೆ ಯಶಸ್ಸು ಶತಸಿದ್ಧ. ಇಂದಿನ ಹೋರಾಟವು ದಾರಿ ತಪ್ಪುವುದಕ್ಕೆ ಕಾರಣ ಕೇವಲ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕಾಗಿ ಹೋರಾಟದ ದಿಕ್ಕನ್ನೇ ಬದಲಿಸುತ್ತಿರುವುದನ್ನು ಕಾಣುತ್ತೇವೆ.
ಮಂಸೋರೆ ನಿರ್ದೇಶನದ “19.20.21” ಚಲನಚಿತ್ರದ ಕುರಿತು ವಿಜಯಲಕ್ಷ್ಮೀ ದತ್ತಾತ್ರೇಯ ದೊಡ್ಡಮನಿ ಬರಹ
ಗೋಡೆ ಮೇಲಿನ ಮಗಳ ಬರಹ ತರಲಾಗಲಿಲ್ಲ….
ಈಗಷ್ಟೇ ಬರೆಯಲು ಕಲಿಯುವ ಮಗುವಿನ ಗೋಡೆಯ ಮೇಲಿನ ಬರಹದಂತೆ ವಕ್ರ ವಕ್ರ… ಕವಿ ತಿರುಮಲೇಶರು ಹೇಳಿದಂತೆ ಎಲ್ಲ ಆರಂಭಗಳೂ ಅನುಮಾನದಲ್ಲೇ! ಬಾಡಿಗೆ ಮನೆಯಲ್ಲಿದ್ದ ಕವಿಯೊಬ್ಬ ಮನೆ ಬದಲಿಸುವಾಗ ಎಲ್ಲಾ ಸಾಮಾನುಗಳನ್ನು ಹೊಸ ಮನೆಗೆ ಒಯ್ದರೂ ಗೋಡೆಯ ಮೇಲೆ ಈಗ ಬೆಳೆದು ದೊಡ್ಡವಳಾದ ಮಗಳ ಗೋಡೆಯ ಗೀರುಗಳನ್ನು ತರಲಾಗಲಿಲ್ಲವೆಂಬ ತಹ ತಹಿಕೆಯ ಕವಿತೆ ಇದೆ. ಕೇವಲ ಗೆರೆಗಳು ಮಾತ್ರವಲ್ಲ, ಸೊಟ್ಟು ಮೂತಿಯ ಪ್ರಾಣಿ, ರೆಕ್ಕೆಯಿಲ್ಲದ ಹಕ್ಕಿ, ಬೆಟ್ಟ…
ಕೈಬರಹದ ಕುರಿತು ಡಾ. ಲಕ್ಷ್ಮಣ ವಿ. ಎ. ಬರಹ ನಿಮ್ಮ ಓದಿಗೆ
“ದೋಸೆ”ಯ ವೈಭೋಗ…..
ಮಿಕ್ಸಿ ಇಲ್ಲದ ಕಾಲವಾದರೂ ವಾರದಲ್ಲಿ ನಾಲಕ್ಕೋ ಐದೋ ದಿನ ದೋಸೆಯೇ ಬೆಳಗಿನ ತಿಂಡಿಗೆ. ಅವಲಕ್ಕಿ, ಉಪ್ಪಿಟ್ಟು ಅಂದರೆ ಅದು ಸೋಮಾರಿಗಳ ತಿಂಡಿ ಎನ್ನುವ ಅಭಿಪ್ರಾಯವಿತ್ತು. ಒಮ್ಮೆ ಮನೆಯಲ್ಲಿ ಹೆಂಗಸರಿಲ್ಲದೆ, ಗಂಡಸು ತಿಂಡಿಮಾಡಿಕೊಳ್ಳುವ ಪ್ರಮೇಯ ಬಂದರೆ ಅಕ್ಕಪಕ್ಕದ ಮನೆಯ ಹೆಂಗಸರು `ಮನೇಲ್ಲಿ ಯಾರೂ ಹೆಂಗಸ್ರಿಲ್ಲೆ. ನಮ್ಮನೆಗೆ ತಿಂಡಿಗೆ ಬಾ, ದೋಸೆ ತಿನ್ನಲಕ್ಕು’ ಎಂದು ಕರೆಯುವುದಿತ್ತು.
ಚಂದ್ರಮತಿ ಸೋಂದಾ ಬರೆದ ದೋಸೆ ಕುರಿತ ಪ್ರಬಂಧ ನಿಮ್ಮ ಓದಿಗೆ
ಗಾಢವಾಗಿ ಆವರಿಸಿಕೊಂಡ ಸಾವಿನ ಚಾದರದೊಳಗಿಂದ…
ಸಾವೇ ಹಾಗೆ ಅದು ಉಂಟು ಮಾಡು ಪರಿಣಾಮವೂ ತೀವ್ರತರವಾದದ್ದು. ಹತ್ತಿರದವರ ಸಾವು ನಮ್ಮ ಬದುಕನ್ನು ಪಲ್ಲಟಗೊಳಿಸುವ ರೀತಿ ಎಂಥವರನ್ನೇ ಆಗಲಿ ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಅದು ಸಹಜವಾದ ಸಾವಾದರೆ ಅದನ್ನು ಸಹಜವಾಗಿಯೇ ಸ್ವೀಕರಿಸಲು ಪ್ರಯತ್ನಿಸಬಹುದು. ಆದರೆ ಅದು ಕೊಲೆಯೋ, ಆತ್ಮಹತ್ಯೆಯೋ ಆಗಿದ್ದರೆ, ನಿಜಕ್ಕೂ ಅದನ್ನು ಮನಸ್ಸು ಒಪ್ಪಲು, ನಂಬಲು ಸಿದ್ಧವಿರುವುದೇ ಇಲ್ಲ.
ಅಕಾಲಿಕ ಸಮಯದಲ್ಲಿ ಸಾವಿನ ಬಾಗಿಲು ತಟ್ಟಿದ ಹಲವು ಲೇಖಕಿಯರ ಕುರಿತು ಆಶಾ ಜಗದೀಶ್ ಬರಹ ನಿಮ್ಮ ಓದಿಗೆ
ಮತ್ತೆ ಬಂದಿದೆ ಯುಗಾದಿ, ತರದು ಅಂದಿನ ಉಮೇದಿ
ಯುಗಾದಿಗೆ ಪರಿಸರದ ಕುರಿತ ಮಾತೇಕೆ? ಎಂದು ಪ್ರಶ್ನಿಸಬಹುದು ನೀವು!! ಚೈತ್ರಮಾಸದ ಪ್ರಾರಂಭದ ದಿನ ಯುಗಾದಿಯ ಆಚರಣೆ. ಪ್ರಕೃತಿಯ ಜೊತೆ ನಮ್ಮ ಸಂಬಂಧವನ್ನು ಆಚರಣೆಗಳ ಮುಖಾಂತರ ಗಟ್ಟಿಗೊಳಿಸಿಕೊಳ್ಳುತ್ತಾ ಬಂದ ದೇಶ ನಮ್ಮದು. ಪ್ರಕೃತಿ ಪೂಜೆಯೇ ನಮ್ಮ ಪೂರ್ವಿಕರ ನೈಜ ಆಚರಣೆಗಳಾಗಿದ್ದವು ಎಂಬುದು ನಮಗೆಲ್ಲ ತಿಳಿದ ಸಂಗತಿಯೇ..
ಪ್ರಕೃತಿ ಜೊತೆಗೆ ನಂಟಿರುವ ಯುಗಾದಿ ಹಬ್ಬ ಇಂದಿನ ದಿನಗಳಲ್ಲಿ ಹೇಗೆ ಆಚರಿಸಲ್ಪಡುತ್ತಿದೆ ಎನ್ನುವುದರ ಕುರಿತು ಬರೆದಿದ್ದಾರೆ ನಾಗರೇಖಾ ಗಾಂವಕರ









