ಪುರಸ್ಕಾರ ದೊಡ್ಡದೋ ನಗದು ದೊಡ್ಡದೋ: ಒಂದು ಸಾಹಿತ್ಯಿಕ ಜಿಜ್ಞಾಸೆ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ರೀತಿಯ ಪ್ರಶಸ್ತಿಗಳಿವೆ. ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಮಂದಿ ಹಿರಿಯರು, ಪೂರ್ವಿಕರು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಪ್ರಶಸ್ತಿಗಳನ್ನು ನೀಡಲು ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ. ಆದರೆ ಆ ದತ್ತಿನಿಧಿಯ ಬಡ್ಡಿ ಮೊತ್ತ ಕಿರಿದಾಗುತ್ತಿರುವುದರಿಂದ, ಪ್ರಸ್ತುತ ಪ್ರಶಸ್ತಿಯ ಜೊತೆಗಿರುವ ನಗದು ಬಹುಮಾನವು ತೀರಾ ಕಿರಿದಾಗಿದೆ. ಅದನ್ನು ಹೆಚ್ಚಿಸುವ ಅಥವಾ ಪ್ರಶಸ್ತಿಯ ವಿಧಾನವನ್ನು ಪರಿಷ್ಕರಿಸುವ ಪ್ರಯತ್ನಗಳಾಗಬೇಕು ಎಂಬ ನಿಟ್ಟಿನಲ್ಲಿ ಲೇಖನವೊಂದನ್ನು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿದ್ದಾರೆ.
ತನ್ನ ಪಾಡಿಗೆ ಬೆಳಗನ್ನು ಆನಂದಿಸುತ್ತಿದ್ದ ಕವಿಮನೆ
ಕವಿಶೈಲಕ್ಕೆ ಎಷ್ಟೊಂದು ಜನರು ಪ್ರವಾಸಿಗರಾಗಿ ಬಂದಿದ್ದರು ! ಬಂದಷ್ಟು ಜನರಲ್ಲಿ ಕೇವಲ ಒಂದು ಪರ್ಸೆಂಟ್ ನಷ್ಟು ಮಾತ್ರದವರು ಕೆಲಕಾಲ ಸುಮ್ಮನೆ ಇದ್ದು ಹೋದರು. ಬಹುತೇಕರು ಎಲ್ಲಿ ನಿಂತುಕೊಂಡರೆ ಫೋಟೋ ಚೆನ್ನಾಗಿ ಬರಬಹುದು? ರೀಲ್ಸ್ಗೆ ಯಾವ ಜಾಗ ಸೂಕ್ತ? ಅನ್ನುವ ಯೋಚನೆಯಲ್ಲಿದ್ದವರೇ. ಸುತ್ತಲಿನ ಮೌನವನ್ನು ಸವಿಯುವುದಕ್ಕೆ ಮುಂಜಾನೆ ಮಂಜಿನಲ್ಲಿ ಕುಪ್ಪಳಿಯ ಕವಿಮನೆ ಮತ್ತು ಕವಿಶೈಲಕ್ಕೆ ಭೇಟಿ ನೀಡಿದ ಒಂದು ಅನುಭವವನ್ನು ಪ್ರಸ್ತುತಪಡಿಸಿದ್ದಾರೆ ರೂಪಶ್ರೀ ಕಲ್ಲಿಗನೂರು.
ಸರಳ ಸತ್ಯಗಳ ಮರೆತು ಹಸಿರ ಹರಿಯುವ ನಾವು..
ಕಾಡನ್ನೇ ಆಶ್ರಯಿಸಿಕೊಂಡು ಬದುಕನ್ನು ಕಟ್ಟಿಕೊಂಡಿರುವ ಆದಿವಾಸಿ ಸಮುದಾಯಗಳು ಅರಣ್ಯ ಪರಿಸರದ ವಿಶಿಷ್ಟತೆಯನ್ನು ಕಾಪಿಟ್ಟುಕೊಳ್ಳುವಲ್ಲಿ ಮಹತ್ತರ ಪಾತ್ರವನ್ನು ಹೊಂದಿವೆ. ಔಪಚಾರಿಕ ಶಿಕ್ಷಣವನ್ನು ಪಡೆಯದೆಯೂ ಇಂತಹ ಸಮುದಾಯಗಳ ಜನರು ಹೊಂದಿರುವ ಜ್ಞಾನ ವಿಸ್ತಾರವಾದುದು. ಅವರಿಗೆ ದೊರೆತ ತಿಳಿವಳಿಕೆಯು ಅರಣ್ಯಜನ್ಯವಾದುದು. ಈ ಸಮುದಾಯಗಳ ಆಚರಣೆ- ನಂಬಿಕೆಗಳು ಅರಣ್ಯಕೇಂದ್ರಿತವಾಗಿವೆ ಮತ್ತು ಅರಣ್ಯಪರವಾಗಿವೆ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಪರಿಸರ ಕುರಿತ ಬರಹ
ಉಪದ್ರವಿ ಸಾಹಿತಿಗಳು ಬೇಕಾಗಿದ್ದಾರೆ: ಕುಂ. ವೀರಭದ್ರಪ್ಪ
ಬಳ್ಳಾರಿಯ ಕಡಕ್ ಭಾಷೆಯಲ್ಲಿ ಮಾತನಾಡುವ ಸಾಹಿತಿ ಕುಂ.ವೀರಭದ್ರಪ್ಪ ಅವರು, ಪ್ರತಿಭಟನೆ, ಪ್ರಶ್ನಿಸುವ ಮನೋಭಾವವನ್ನು ಇಷ್ಟಪಡುವವರು. ಸ್ವಭಾವಕ್ಕೆ ತಕ್ಕಂತೆ ಬಂಡಾಯವನ್ನು ಮೆಚ್ಚಿಕೊಂಡು ಸಾಹಿತ್ಯ ಕೃಷಿ ಮಾಡಿದ ಅವರು ಬರೆದ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಇತ್ತೀಚೆಗೆ ಅವರಿಗೆ ಜೀವಬೆದರಿಕೆಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರೊಡನೆ ಒಂದಿಷ್ಟು ಹೊತ್ತು ಮಾತನಾಡಿದಾಗ ಕನ್ನಡ ಸಾಹಿತ್ಯ ಲೋಕದ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು.
ಸೀರೆ ಎಂಬ ಮಾಯಾವಿನಿ
ಸೀರೆ ಎಂಬ ಈ ವಿಚಿತ್ರ. ವಿಶಿಷ್ಟ ಉಡುಪು ಯಾಕೆ ಮತ್ತು ಹೇಗೆ ರೂಪು ತಳೆದಿರಬಹುದು ಎಂದು ಯೋಚಿಸುತ್ತ ಹೋದ ಹಾಗೂ ಇದು ಪುರುಷ ಪ್ರಧಾನ ವ್ಯವಸ್ಥೆಯ ರಾಜಕಾರಣದ ಒಂದು ಭಾಗವಾಗಿ ಬೆಳೆದಿದೆ ಅನ್ನಿಸಿದೆ. ಸಂಸ್ಕೃತಿ, ಸಂಪ್ರದಾಯಗಳ ಹೆಸರಿನಲ್ಲಿ ನಮ್ಮ ದೇಶದ ಕೆಲಭಾಗಗಳ ಮಹಿಳೆಗೆ ಸೀರೆ ಉಡುವುದನ್ನು ಕಡ್ಡಾಯ ಮಾಡಲಾಗಿದೆ! ಕೆಲವು ಪ್ರದೇಶಗಳಲ್ಲಿ ಸೀರೆಯ ಸೆರಗನ್ನು ತಲೆಗೆ ಹೊದೆಯುವುದೂ ಕಡ್ಡಾಯ. ವಿಜಯಶ್ರೀ ಹಾಲಾಡಿ ಬರೆದ ಪ್ರಬಂಧ ನಿಮ್ಮ ಓದಿಗೆ
ಯುದ್ಧವು ರಸ್ತೆಬದಿಯಲ್ಲಿ ಮಲಗಿದೆ
ಲ್ಯಾಟ್ವಿಯಾ ದೇಶದ ಕವಿ ಅಮಾಂಡ ಐಜಪ್ಯುರಿಯೆತ್ರ, ಪತ್ರಿಕೆಗಳ ಸಾಹಿತ್ಯ ವಿಭಾಗದ ಸಂಪಾದಕರಾಗಿದ್ದರು. ಬಹಿಷ್ಕೃತರೆಂದು ಪರಿಗಣಿಸಲ್ಪಟ್ಟ ಅನೇಕ ಕವಿಗಳ ಕವನಗಳನ್ನು ಪ್ರಕಟಿಸಿದರು. ಅನಾಗರಿಕ ಜಗತ್ತಿನಲ್ಲಿ ಆವಾಗಾವಾಗ ಕಾಣುವ ಅಲ್ಪ ಸೌಂದರ್ಯವನ್ನು ಗುರುತಿಸಿ ತಾವೂ ಕವನಗಳನ್ನು ಬರೆದಿದ್ದಾರೆ. ಅವರ ಕವನಗಳಲ್ಲಿ ಕಾವ್ಯವಿಷಯದ ವಿಸ್ತಾರವಿದೆ. ಕಾವ್ಯಸೃಷ್ಟಿ, ಸ್ವ-ಮನನ, ಯುದ್ದದ ಭೀತಿ, ದಬ್ಬಾಳಿಕೆಯ ಆಡಳಿತದಡಿಯಲ್ಲಿನ ಬದುಕಿನ ಕುರಿತ ಪ್ರತಿಬಿಂಬಗಳಿವೆ. ಅವರ ಕವಿತೆಗಳು ಇಂಗ್ಲಿಷ್ ಗೆ ಅನುವಾದಗೊಂಡಿದ್ದು, ಇಂಗ್ಲಿಷ್ ಮೂಲದಿಂದ ಎಸ್. ಜಯಶ್ರೀನಿವಾಸ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಾಹಿತ್ಯ ಪುರವಣಿಗಳು ಅನುತ್ಪಾದಕವೇ?
ಕನ್ನಡ ಪತ್ರಿಕೋದ್ಯಮದಲ್ಲಿ ಸಾಹಿತ್ಯಪುರವಣಿಗಳು ಕ್ಷೀಣವಾಗಿವೆ, ಅಥವಾ ಕೆಲವು ಮಾಧ್ಯಮ ಸಂಸ್ಥೆಗಳು ಪುರವಣಿಯನ್ನೇ ನಿಲ್ಲಿಸಿಬಿಟ್ಟಿವೆ. ಎರಡು ವರ್ಷಗಳ ಹಿಂದೆ ಕೋವಿಡ್ ಸೋಂಕು ವ್ಯಾಪಿಸದಂತೆ ಹೇರಿದ್ದ ಲಾಕ್ ಡೌನ್ ಸಂದರ್ಭದಲ್ಲಿ ಮಾಧ್ಯಮ ಸಂಸ್ಥೆಗಳು ನಷ್ಟವನ್ನು ಭರಿಸಿಕೊಳ್ಳಲು ಅನೇಕ ಪುಟಗಳನ್ನು ಕಡಿತ ಮಾಡಿದವು. ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ಇಲ್ಲಿದೆ.
ನೆಮ್ಮದಿ ಎಂಬ ಕಾಂಚನ ಮೃಗದ ಬೆನ್ನಟ್ಟಿ
ನೆಮ್ಮದಿಯ ಬದುಕು ಎಲ್ಲರ ಕನಸೂ ಹೌದು. ಆದರೆ ನಾವು ಕಟ್ಟಿಕೊಂಡಿರುವ ಆಸೆಯ ಸೌಧದ ನಿರ್ಮಾಣ ಮುಗಿಯುವುದೇ ಇಲ್ಲ. ದಿನ ದಿನಕ್ಕೋ, ಇಲ್ಲ ಕ್ಷಣ ಕ್ಷಣಕ್ಕೋ ಅದರ ಗೋಡೆಗೆ ಇಟ್ಟಿಗೆ ಜೋಡಿಸುತ್ತಲೇ ಹೋಗುವವರು ನಾವು. ನಮ್ಮನೆಗೆ ಎರಡು ರೂಮು ಸಾಕೆನ್ನಿಸಿದರೂ, ಯಾವತ್ತೋ ಬಂದು ಹೋಗುವ ನೆಂಟರಿಗೊಂದು ಪ್ರತ್ಯೇಕ ಕೋಣೆ ಬೇಡವಾ ಎನ್ನುತ್ತದೆ ಮನಸ್ಸು. ರೂಪಶ್ರೀ ಕಲ್ಲಿಗನೂರ್ ಬರಹ
ಮುಗ್ಧತೆಯನ್ನೂ ತಾತ್ವಿಕತೆಯನ್ನೂ ಪೋಣಿಸಿಕೊಂಡ ರಶೀದ್ರ ಕತೆಗಳು
ಹೆಚ್ಚು ಪ್ರಯಾಸವಿಲ್ಲದೆ ಬರೆಯುವ ಶೈಲಿ ಕತೆಗಾರ ಅಬ್ದುಲ್ ರಶೀದ್ ಅವರಿಗೆ ಒಲಿದಿದೆ. ಅವರು ಹಾಗೆ ಬರೆದಂತಹ ಬರಹವು ತಿಳಿಹಾಸ್ಯದಿಂದ ಓದುಗರಿಗೆ ಕಚಗುಳಿ ಇಡುವುದು, ತನ್ನ ವಿಶಿಷ್ಟ ಕಾಣ್ಕೆಗಳಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು, ಕೆಲವು ಪಾತ್ರಗಳು ಹಾಗೂ ಪ್ರಸಂಗಗಳು ಮನಸ್ಸಿನ ಮೂಲೆಯಲ್ಲಿ ಮನೆ ಮಾಡುವುದು. ಎಂತಹ ಸಂದರ್ಭದಲ್ಲೂ ರಶೀದ್ ಅವರಲ್ಲಿನ ಕಥೆಗಾರ ಜಾಗೃತನಾಗಿರುತ್ತಾನೆ. ಸುಮತಿ ಮುದ್ದೇನಹಳ್ಳಿ ಬರಹ.









