ಈ ದಿನದ ವಿಶೇಷ: ಚಿತ್ತಾಲರ ಹೊಸ ಕಾದಂಬರಿಯ ಒಂದು ತುಣುಕು
‘ದಿಲ್ ಖುಶ್’ ನ ಆಕರ್ಷಣೆಯೆಂದರೆ ಅವರ ಎದುರಿನ ಸಮುದ್ರ ಹಾಗೂ ಕಪ್ಪು ಬಂಡೆಗಳಿಂದ ಆಚ್ಛಾದಿತವಾದ ಅದರ ದಂಡೆ. ದಕ್ಷಿಣ ದಿಕ್ಕಿನ ನೀರಿನಲ್ಲಿ ಸೊಕ್ಕಿದ ಗೂಳಿಯಂತೆ ಮುನ್ನುಗ್ಗಿದ ಈ ದಂಡೆಯ ತುತ್ತತುದಿ ‘ಲ್ಯಾಂಡ್ಸ್ ಎಂಡ್’ ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿದೆ.
ಎಸ್ ಮಂಜುನಾಥ್ ಲಹರಿ: ಅಜ್ಞಾನ ಪ್ರಿಯ ದೇವರು
ಪದ್ಯ ಚೆಂದವಿದೆ ಎಂದು ನನಗೇ ಖುಷಿ ಹತ್ತತೊಡಗಿತು. ಆ ಖುಷಿಯ ನಡುವೆಯೇ ನಾನು ಮೊನ್ನೆ ದೇವರನ್ನು ಕೊಂದಿದ್ದೊಂದು ನೆನಪಿಗೆ ಬಂತು. ಅಡುಗೆ ಮನೆಯೊಳಗೆ ಒಂದು ದೊಡ್ಡ ಜರಿ ಬಂದಾಗ ನನ್ನ ಮಗಳು ಕಿರುಚಿ ಕೂಗಿದ್ದಳು.
ಭಾರತ ಗಣರಾಜ್ಯೋತ್ಸವ ವಿಶೇಷ:ಕೆಲವು ಗಟ್ಟಿ ಚಿಂತನೆಗಳು
ಕನಿಷ್ಟ ಈ ಎರಡು ದಿನಗಳಾದರೂ ‘ಜನಶಿಕ್ಷಣ ದಿನ’ಗಳಾಗಿ ರಾಷ್ಟ್ರೀಯ ಮಟ್ಟದ ಹಬ್ಬದ ದಿನಗಳಾಗಬೇಕು. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಅದೇ ರಿಪಬ್ಲಿಕ್ ಡೇ ಪರೇಡನ್ನು ಸೋಫದಲ್ಲಿ ಒರಗಿ ಕುಳಿತು ಟೀವಿಯಲ್ಲಿ ನೋಡುವ ಮೂಲಕ ತಿಳಿದುಕೊಳ್ಳುವುದು ಏನೂ ಇಲ್ಲ.
ಪೆಜತ್ತಾಯರ ಮೇಡ್ ಇನ್ ಅಮೇರಿಕಾ ಪಾಕೆಟ್ ಚಾಕು ಪುರಾಣ
ನಮ್ಮ ಅಮೆರಿಕಾ ಪ್ರವಾಸದ ಕೊನೆಯ ಹಂತದಲ್ಲಿ ಸ್ಯಾನ್ ಡಿಯಾಗೋ ಶಹರದ ಒಂದು ಕ್ಯೂರಿಯೋ ಶಾಪ್ ಹೊಕ್ಕೆವು. ಆ ಅಂಗಡಿಯ ಮಾಲಕಿ ಒಬ್ಬ ಹಿರೇ ಪ್ರಾಯದ ಅಮೆರಿಕನ್ ಮಹಿಳೆ. ನಗು ನಗುತ್ತಾ ನಮ್ಮನ್ನು ಸ್ವಾಗತಿಸಿದರು.
ದೇವರೇ ಇಲ್ಲದ ದೀಪಾವಳಿ!:ಪೆಜತ್ತಾಯರ ಪಟಾಕಿ ನೆನಪುಗಳು
ಪೂಜೆ ದನಗಳಿಗೆ ಮಾತ್ರ ಯಾಕೆ? ಎಮ್ಮೆಗಳಿಗೆ ಏಕಿಲ್ಲ? -ಅಂತ. ಅವಕ್ಕೆ ಸಮಾನ ನ್ಯಾಯ ಒದಗಿಸಲು ನನ್ನ ಮನ ತುಡಿಯುತ್ತಾ ಇತ್ತು. ಚೋಟುದ್ದದ ಹುಡುಗನಾದ ನನಗೆ ದೊಡ್ದ ಗಾತ್ರದ ಎಮ್ಮೆಗಳ ಬಳಿಗೆ ಹೋಗಲು ಹೆದರಿಕೆ.
ನನ್ನ ಪ್ರೀತಿಯ ಮಂದಿರ: ಪೆಜತ್ತಾಯ ಬರಹ
ಬ್ರಿಟಿಷರ “ಡಿವೈಡ್ ಅಂಡ್ ರೂಲ್” ಎಂಬ ಪುರಾತನ ನೀತಿಸಂಹಿತೆಯ ಅಡಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತಂತೆ! ದೇಶ ವಿಭಜನೆಯಾದಾಗ ಹರಿದ ರಕ್ತದ ಕೋಡಿಯನ್ನು ಇನ್ನೂ ಉಭಯದೇಶಗಳ ಹಳೆಯ ತಲೆಗಳು ನೆನಪಿಸಿಕೊಳ್ಳುತ್ತಿವೆ.
ತ್ರಿಚಕ್ರಿ ಗೋವಿಂದ ಭಟ್ಟರ ಕಥೆ: ಪೆಜತ್ತಾಯರ ಬರಹ
ಇಂದು ಐವತ್ತೆರಡರ ಹರೆಯದ ಶ್ರೀ ಗೋವಿಂದ ಭಟ್ಟರು ಸೈಕಲಿನಲ್ಲೇ ಪ್ರಪಂಚ ಸುತ್ತಿ ಬಂದ ಸಾಹಸಿಯಾದರೂ, ಪವರ್ಡ್ ಹ್ಯಾಂಗ್ ಗ್ಲೈಡರ್ ಹಾರಿಸುವಾಗ ಅವಘಡಕ್ಕೊಳಗಾಗಿ ಬೆನ್ನು ಮೂಳೆಗೆ ಪೆಟ್ಟು ಬಿತ್ತು, ಅವರ ಮೇಲೆ ನಡೆದ ಹಲವು ಆಪರೇಶನ್ ಗಳು ನಿರೀಕ್ಷಿತ ಫಲ ನೀಡದೇಹೋದುವು!
ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
ಇಂದು ಹಳ್ಳಿಗಳಲ್ಲಿ ಕನ್ನಡ ಶಾಲೆಯಲ್ಲಿ ಓದುವ ಮಕ್ಕಳು ಅತೀ ನಿಕೃಷ್ಟ ಜೀವಿಗಳು ಎಂಬ ಅಭಿಪ್ರಾಯ ಸರ್ವತ್ರವಾಗಿ ಹಬ್ಬುತ್ತಿದೆ. ‘ಕಾನ್ವೆಂಟ್' ಎಂಬ ಅಪಭ್ರಂಶ ಹೆಸರಿನಿಂದ ಗುರುತಿಸಿಕೊಳ್ಳುವ ಇಂಗ್ಲಿಷ್ ಮಾಧ್ಯಮದ ದುಬಾರಿ ಖಾಸಗಿ ಶಾಲೆಗಳು ಪ್ರತೀ ಹೋಬಳಿಗಳಲ್ಲೂ ತಲೆ ಎತ್ತಿವೆ. ಇಂತಹಾ ಶಾಲೆಗಳು ಮಾತ್ರ ನಮ್ಮ ಗ್ರಾಮೀಣ ಮಕ್ಕಳಿಗೆ...
ಪತಿ ತೇಜಸ್ವಿ ಹುಟ್ಟಿದ ದಿನ: ರಾಜೇಶ್ವರಿ ನೆನಪುಗಳು
ಹೀಗೆ ಬಿಡುವು ಮಾಡಿಕೊಂಡು ಆರಾಮಾಗಿ ಒಂದು ವಾರ ಮೈಸೂರಿನಲ್ಲಿದ್ದು ತಿರುಗಾಡಿಕೊಂಡು ತೋಟಕ್ಕೆ ಹಿಂದಿರುಗಿದೆವು. (ಸಾಮಾನ್ಯವಾಗಿ ನಾವು ಮೂಡಿಗೆರೆಗೆ ಹೋಗುವಾಗ ತೇಜಸ್ವಿಗೆ ಮನೆಗೆ ಬೀಗ ಹಾಕಿಕೊಂಡು ಹೋಗುವುದು ಕಷ್ಟವೆನಿಸುತ್ತಿತ್ತು. ಹಾಗೇ ಹೋಗುತ್ತಿದ್ದೆವು.









