ಕ್ಯಾಂಡಲ್ ಕ್ರಿಕೆಟ್: ಪೂರ್ಣೇಶ್ ಮತ್ತಾವರ ಸರಣಿ
ನಮ್ಮ ಅಭ್ಯಾಸ ಅದ್ಭುತವಾಗಿದ್ದರಿಂದ ಒಂದು ಬಾರಿ ಸಾಲದೆಂದು ಬೆಳ ಬೆಳಗ್ಗಿಯೇ ಮೂರು ಮೂರು ಬಾರಿ ನೆಟ್ ಪ್ರಾಕ್ಟಿಸ್ ನಡೆಸಿದ್ದರಿಂದ ಗೆಲುವು ನಮ್ಮದೇ ಆಗಲಿದೆ ಎಂಬ ವಿಶ್ವಾಸ ನಮ್ಮದಾಗಿತ್ತು. ಈ ವಿಶ್ವಾಸದಿಂದಲೇ ಆಟವನ್ನೇನೋ ಆರಂಭಿಸಿದೆವು. ಆದರೆ, ಪಂದ್ಯ ಸಾಗುತ್ತಲೇ ನಮ್ಮ ಎಣಿಕೆಗಳೆಲ್ಲಾ ತಲೆಕೆಳಗಾಗಲಾರಂಭಿಸಿದ್ದವು. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಆಟದ ಕೊರತೆ ಎಂಬುದಕ್ಕಿಂತ ನಿದ್ರೆಯ ಕೊರತೆಯೇ ಆಗಿತ್ತು. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದ ಪ್ರತಿಫಲವಾಗಿ ನಿದ್ದೆ ಎಲ್ಲರನ್ನೂ ಆವರಿಸಲಾರಂಭಿಸಿತ್ತು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಹನ್ನೊಂದನೆಯ ಬರಹ
ಊರ ಮಾರಮ್ಮನ ಪರಿಸೆ: ಸುಮಾ ಸತೀಶ್ ಸರಣಿ
ನಾವೂ ಚಿಕ್ಕವರಿರುವಾಗ ಸನಿ ಸನಿವಾರ ಈರಾಪುರಕ್ಕೆ ಕಾಯಮ್ಮಾಗಿ ಹೋಗ್ತಿದ್ವಿ. ಅಲ್ಲಿ ಅಕ್ಕ ಪಕ್ಕದ ಬೀದಿಗ್ಳಾಗೆ ಸನಿ ಮಾತ್ಮ ಮತ್ತೀಗ ಈರಬದ್ರಸೋಮಿ ಗುಡೀಗ್ಳೂ ಅವ್ವೆ. ಈರಬದ್ರನ ಗುಡೀನಾಗೇ ಸಾಮಿಗೆ ಪಂಚಲೋಹುದ್ದು ಕಣ್ಣು ಮೀಸೆ ಮೆತ್ತಿತ್ತು. ಅದ್ನ ನೋಡ್ತಿದ್ದಂಗೇ ಬೋ ಕ್ವಾಪ್ವಾಗವ್ನೆ ಅಂತ ಅನ್ನುಸ್ತಿತ್ತು. ಮುಂದ್ಕಿರಾ ಜಾಗ್ದಾಗೆ ಲಿಂಗಧೀರರ ಬಟ್ಟೆ ಬೊಂಬೇನೂ ಇಕ್ಕಿದ್ರು. ಕಣ್ ಅಳ್ಳಿಸಿಕಂಡು ನೋಡ್ತಿದ್ವು. ಪರಿಸೇನಾಗೆ ಅವ್ರ ಕುಣ್ತ ಕಂಡು ನಮ್ಗೆ ತೇಟು ಬೊಂಬೇನೇ ನೋಡ್ದಂಗಾಗಿ, ಅದೇ ಏನಾರಾ ಎದ್ದು ಬಂದೈತೋ ಏನೋ ಅಂಬಂಗಾಗ್ತಿತ್ತು. ಆದ್ರೆ ಅದು ಆಳೆತ್ರುಕ್ಕಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ನಿರ್ದಿಷ್ಟ ಗುರಿ ಹಾಗೂ ಸರಿಯಾದ ಗುರು ಇಲ್ಲದ ಪರಿಣಾಮ!!: ಬಸವನಗೌಡ ಹೆಬ್ಬಳಗೆರೆ ಸರಣಿ
ಆಗ ನನಗೆ ಒಂಥರಾ ಅನಿಸಿಬಿಡ್ತು. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ವೇಸ್ಟಾ… ಹಾಗಾದ್ರೆ ಡಿಗ್ರಿ ಬಿಟ್ಟು ಟಿಸಿಎಚ್ ಆದ್ರೂ ಓದಬಹುದಾ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡೋಕೆ ಶುರುವಾಯ್ತು. ಇಷ್ಟೇ ಅಲ್ಲದೇ ಆಗ ಟಿವಿಯಲ್ಲಿ ‘ದಂಡಪಿಂಡ’ಗಳು ಧಾರವಾಹಿ ಬೇರೆ ಬರ್ತಾ ಇತ್ತು. “ದಂಡಪಿಂಡಗಳು ಇವರು ದಂಡಪಿಂಡಗಳು ಬಿಎ, ಬಿಎಸ್ಸಿ ,ಬಿಕಾಂ ಮಾಡಿ…. ಕೆಲಸವೇ ಸಿಗದೇ ದಿನ ಅಲೆದಾಡಿ…” ಎಂಬ ಹಾಡಿನೊಂದಿಗೆ ಅದು ಶುರುವಾಗ್ತಾ ಇತ್ತು!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತೆರಡನೆಯ ಕಂತು ನಿಮ್ಮ ಓದಿಗೆ
ಸುಬ್ಬಮ್ಮನ್ ಇಂಗ್ಲಿಷೂ…. : ಸುಮಾವೀಣಾ ಸರಣಿ
“ಬರ ತಿಂಗ್ಳು ಆಲ್ ನಿಲ್ಲುಸ್ತೀನಿ. ನಮ್ ಅಸ ಗಬ್ಬಾಗೈತಿ. ಉಲ್ ತರಸ್ಬೇಕು. ಅಲ್ಲಿವರ್ಗೂ ಗೇಟ್ ಹಾಕಳಿ. ಆಕಾಸ್ವಾಣಿಲಿ ವಾರ್ತ್ ಬತ್ತೈತಿ. ಎಸೊಂದು ಟೇಮ್ ಆಗೈತಿ. ದ್ವಾಸ್ಗೆ ಹಾಕಿದ್ದೆ ಅಯ್ಯೋ! ಕ್ವಾಣೆಲಿ ಶಿಂಕ್ ಹತ್ರ ಕಾಪಿ ಇಟ್ಟಿದ್ದೆ ಎಲ್ಲ ಹಾರೋಗಿರ್ತೈತಿ” ಎಂದು ಮನೆಗೆ ಬೇಗ ಬೇಗನೆ ಹೋಗುತ್ತಾ ಇನ್ನೂ ಗೇಟ್ ಹತ್ತಿರವೆ “ಮೊಮ್ಮೊಗಳಿಗೆ ವ್ಯಾಸ್ಲೆಣ್ಣೆ ತತ್ತಾ. ಕಾಲ್ ಒಡದು ಸೀಳ್ ಬುಟ್ಟವೆ, ಸೆಟಾರ್ ಹಾಕಂಡು, ಕಾಲ್ಚೀಲ, ಕುವಾಲಿ, ಕೈಗ್ ಬ್ಲೌಸ್ ಇಕ್ಕಂಡ್ರು ತಪ್ನಿಲ್ಲ.” ಎನ್ನುವುದು ಜೋರಾಗಿ ಕೇಳಿಸಿತು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ
ಇದು ನಿಮ್ದೇ ಸೈಟು ತಾನೇ!: ಎಚ್. ಗೋಪಾಲಕೃಷ್ಣ ಸರಣಿ
ನಾವು ಮನೆ ಮುಗಿಸಿ ವಾಸಕ್ಕೆ ಅಂತ ಬಂದಮೇಲೂ ಸಹ ಈ ಮನೆ ಕೇಸು ತುಂಬಾ ದಿವಸ ಎಳೆಯಿತು. ಸೈಟಿನ ಮೂಲ ಓನರ್ ಪರ್ಯಾಯ ಸೈಟಿಗೆ ಒಪ್ಪಿಗೆ ಕೊಡದೇ ಇದ್ದದ್ದು ಮತ್ತು ಅದೇ ಸೈಟು ತಮಗೆ ಬೇಕು ಅಂತ ಇರಾದೆ ವ್ಯಕ್ತ ಪಡಿಸಿದ್ದು ಕೇಸು ಎಳೆಯಲು ಅವಕಾಶ ಆಯಿತು. ಸೊಸೈಟಿ ಮಧ್ಯೆ ಪ್ರವೇಶ ಮಾಡಿ ಅಲ್ಟರ್ನೇಟ್ ಸೈಟು ಕೊಡ್ತೀವಿ ಅಂದರೂ ಕೊಸರಾಟ ಮುಂದುವರೆದು ಸುಮಾರು ಇಪ್ಪತ್ತು ವರ್ಷ ಕೇಸು ನಡೆದು ಕೊನೆಗೆ ಒಂದು ಕಾಂಪ್ರಮೈಸ್ ಡೀಲ್ ಆಯ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ನಮ್ಮ ಪರಿಸೆಗಳು: ಸುಮಾ ಸತೀಶ್ ಸರಣಿ
ಬಂಗಾರುದ್ ಕಾಟುಮಲಿಂಗೇಶ್ವರುನ್ನ ವರ್ಸುಕ್ಕೆ ಎಲ್ಡು ದಪ ಮಾತ್ರ ತೆಗ್ದು ಊರಾಚೇಗ್ಳ ಗುಡೀಗೆ ತಕಾ ಬರ್ತಾರೆ. ಅದ್ಕೆ ಮುಂದ್ಲೇ ಆ ಲಿಂಗುದ್ ತೂಕ ಬರ್ದು ಮಡ್ಗಿ, ವಾಪ್ಸು ಇಕ್ಕಾ ಮದ್ಲು ಇನ್ನೊಂದು ದಪ ತೂಕ ನೋಡಿ ಮಡುಗ್ತಾರೆ. ಸಿವರಾತ್ರಿ ಪರಿಸೇ ಟೇಮ್ ನಾಗೆ ಒಂದು ಕಿತ, ಕಾರ್ತೀಕದಾಗೆ ಕೊನೇ ಸೋಮವಾರ ಇನ್ನೊಂದು ಕಿತ ದ್ಯಾವ್ರಿಗೆ ಹೊರುಕ್ ಬರಾಕೆ ಮೋಕ್ಷ ಸಿಕ್ತೈತೆ. ಜನುರ್ಗೂ ಕಣ್ ತುಂಬ್ಕಣಾಕೆ ಆಗ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ
ಗುರುತರ ಗುರಿಯೆಡೆಗೆ ಓಡಲಿ ಜಮೈಕಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ
ಜಮೈಕಾದ ಜನರು ಕಲೆಗಳ ಬಗೆಗೆ ಅತೀವ ಆಸಕ್ತಿಯನ್ನು ಹೊಂದಿದ್ದಾರೆ. ದೃಶ್ಯ ಕಲೆಗಳು ಮತ್ತು ಪ್ರದರ್ಶನ ಕಲೆಗಳು ಜಮೈಕಾದ ಜನರ ಬದುಕಿನ ಅವಿಭಾಜ್ಯ ಅಂಗಗಳು. ಕಲ್ಪನೆ, ಉತ್ಸುಕತೆ ಮತ್ತು ಸೃಜನಶೀಲತೆಗಳ ಮೂಲಕ ವಿವಿಧ ಕಲೆಗಳನ್ನು ರೂಪಿಸಿಕೊಂಡಿದೆ ಜಮೈಕಾ. ಕಲೆಗಳು ಅಲ್ಲಿಯ ಜನರ ಬದುಕಿನ ಸ್ಫೂರ್ತಿಯ ಸೆಲೆಯಾಗಿದೆ. ಬ್ಯಾರಿಂಗ್ಟನ್ ವ್ಯಾಟ್ಸನ್, ಆಲ್ಬರ್ಟ್ ಹುಯಿ ಇವರು ಜಮೈಕಾದ ಚಿತ್ರಕಲಾವಿದರು. ಎಡ್ನಾ ಮ್ಯಾನ್ಲಿ ಎನ್ನುವವರು ಪ್ರಸಿದ್ಧ ಶಿಲ್ಪಿಯಾಗಿದ್ದಾರೆ. ಇವರು ಜಮೈಕಾದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ
ಲಿಂಗಾಯತರು ಮತ್ತು ಲಿಂಗಾಯತ: ರಂಜಾನ್ ದರ್ಗಾ ಸರಣಿ
ಇಲ್ಲಿನ ಇಡೀ ವ್ಯವಸ್ಥೆ ಬಸವತತ್ತ್ವಕ್ಕೆ ವಿರುದ್ಧವಾಗಿದೆ. ಬಸವಧರ್ಮದಲ್ಲಿ ಯಜ್ಞಯಾಗಾದಿಗಳಿಲ್ಲ. ನವಗ್ರಹಗಳ ಪೂಜೆ ಇಲ್ಲ. ಮೂರ್ತಿ ಮಂದಿರಗಳೇ ಇಲ್ಲ. ಕರ್ಮಸಿದ್ಧಾಂತವಿಲ್ಲ. ಸ್ವರ್ಗ ನರಕ ಪುನರ್ಜನ್ಮಗಳಿಲ್ಲ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಜೀವಕಾರುಣ್ಯದ ಮೇಲೆ ಬಸವತತ್ತ್ವ ನಿಂತಿದೆ. ಯೋಗ್ಯ ಉತ್ಪಾದನೆಯ ಕಾಯಕ, ನಿಸರ್ಗ ಮತ್ತು ಮಾನವ ಉತ್ಪನ್ನದ ಯಾವುದೂ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಪ್ರಸಾದ ಪ್ರಜ್ಞೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯ ದಾಸೋಹ ಜ್ಞಾನ ಈ ಮೂರೂ ಬಸವತತ್ತ್ವದಲ್ಲಿ ಪ್ರಮುಖವಾಗಿವೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಸ್ಫೋಟಕ್ಕೆ ಬಲಿಯಾದ ಬದುಕು..: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಸೆಲ್ವಮ್ ದೇಹದ ಹತ್ತಿರ ಕನಕ, ಮಣಿ ಮತ್ತು ಸುಮತಿ ನಿಂತುಕೊಂಡು ರೋದನೆ ಮಾಡುತ್ತಿದ್ದರು. ಸಾರ್ವಜನಿಕರು, ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ಬಂದು ಸತ್ತವರಿಗೆ ಹೂಮಾಲೆಗಳನ್ನು ಅರ್ಪಿಸಿದರು. ಹೂಮಾಲೆಗಳು ಎತ್ತಿನ ಬಂಡಿಗಳು ತುಂಬುವಷ್ಟು ಬಿದ್ದಿದ್ದವು. ಕೊನೆಗೆ ಐದೂ ಮೃತ ದೇಹಗಳನ್ನು ಮೂರು ವ್ಯಾನ್ಗಳಲ್ಲಿ ಹಾಕಿಕೊಂಡು ಕುಪ್ಪಂ ರಸ್ತೆಯಲ್ಲಿ ರೋಜರಸ್ ಕ್ಯಾಂಪ್ ಹತ್ತಿರ ಇರುವ ಗಣಿ ಕಾರ್ಮಿಕರ ಸಮಾಧಿ ಕಡೆಗೆ ಮೆರವಣಿಗೆಯಲ್ಲಿ ಹೋಗಿ ಗೌರವಪೂರ್ವಕವಾಗಿ ಅವರವರ ಕುಟುಂಬಗಳಿದ್ದ ಸಮಾಧಿಗಳ ಮಧ್ಯೆ ಸಮಾಧಿ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ









