ನಾಟಕ ಕಂಪನಿ ಮತ್ತು ಒಲವಿನ ಪತ್ರ: ಜುಲೇಖಾ ಬೇಗಂ ಜೀವನ ವೃತ್ತಾಂತ
ಅಪ್ಪನನ್ನು ಚಹಾ ಕುಡಿಯೋಣವೆಂದು ಊರಿನ ಕೆಲವರೆಲ್ಲ ಸೇರಿ ಕರೆದುಕೊಂಡು ಹೋದರು. ಚಹಾ ಕುಡಿಯುವುದರಲ್ಲೇನಿದೆ? ಎಂದು ಅಪ್ಪನಿಗೂ ಅನ್ನಿಸಿ, ಜೊತೆ ನಡೆದರು. ಆ ಚಹಾ ಅಂಗಡಿಯಲ್ಲಿ ಅವರೆಲ್ಲ ಒಟ್ಟು ಸೇರಿ, ಅಪ್ಪನ ಕಾಲಿಗೆರಗಿ ಗೋಗರೆದರು. ‘ಇಲ್ಲಂತ ಹೇಳ್‌ಬ್ಯಾಡ್ರಿ. ಕಂಪೆನಿ ಕಟ್ಟೋ ಆಸಿನೇ ಇರ್ಲಿಲ್ರಿ. ನಿಮ್ ಮಗ್ಳ ಅಭಿನಯ ಕಂಡ್ಮೇಲೆ ಅನ್ಸ್ತು ಅಜ್ಜಾರ’ ಎಂದು ಅಲವತ್ತುಕೊಂಡರು. ಅವರೆಲ್ಲ ತನ್ನ ಕಾಲಡಿ ಕೂತು ಹೀಗೆ ಕೇಳುವಾಗ ಅಪ್ಪನ ಮನಸ್ಸಿಗೆ ಅದೇನು ಎನಿಸಿತೋ? ಹೂಂಗುಟ್ಟಿದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಇಪ್ಪತ್ನಾಲ್ಕನೆಯ ಕಂತು
ಮುಗುದನೊಬ್ಬನ ಮುನಿಸು ಮತ್ತು ನೆಲದ ನೆರಳ ಹಂಬಲದವರು: ಎಸ್. ಗಂಗಾಧರಯ್ಯ ಅನುಭವ ಕಥನ
ಸುಮ್ಮನೇ ಅತ್ತ ನೋಡಿದೆ. ಅದಕ್ಕಾಗೇ ಕಾಯುತ್ತಿದ್ದೆ ಅನ್ನುವಂತೆ ಮಾದು ಸೀದಾ ನನ್ನ ಬಳಿಗೆ ಬಂದರು. ತಮ್ಮ ಬೊಚ್ಚು ಬಾಯಿಂದ ಹೇಳ ಹೊರಟ ಮಾತುಗಳೆಲ್ಲಾ ಬಿಕ್ಕಳಿಕೆಗಳಾದವು. ಮೂಳೆ ಬಿಟ್ಟುಕೊಂಡಿದ್ದ ಅವರ ಮುಖದಲ್ಲಿನ ಕಣ್ಣೀರು ಮಾತಾಡತೊಡಗಿದವು. ಗೆಳೆಯನ ಸಾವು ಅವರನ್ನು ದಿಕ್ಕೆಡಿಸಿತ್ತು. ಅದಾದ ನಂತರ ನಾವಿಬ್ಬರೂ ಮುಂಚಿನ ಥರವೇ ಗೆಳೆಯರಾಗಿದ್ದೆವು. ಮಾದು ಮೆತ್ತಗಾಗತೊಡಗಿದ್ದರು. ವಯಸ್ಸು ದೇಹವನ್ನು ಜಪ್ಪುತ್ತಿತ್ತು. ಆದರೆ ಆ ಮುಗ್ಧ ನಗು, ಆ ತಾಳ್ಮೆ, ನಿಷ್ಕಲ್ಮಷ ಪ್ರೀತಿ, ಆ ತಮಾಷೆ ಮಾತ್ರ ಹಂಗೇ ಇದ್ದವು. `
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿಮೂರನೆಯ ಕಂತು
ಕಷ್ಟ ಸುಖದವರು ಬೇಕು: ಕೆ. ಸತ್ಯನಾರಾಯಣ ಕಥಾ ಸರಣಿ
ಇಲ್ಲಿ ಬಿಡಿಸಿ ಹೇಳುವುದು ಏನಿದೆ? ಅಥವಾ ಇದನ್ನೂ ಕೂಡ ಬಿಡಿಸಿ ಹೇಳಬೇಕಾಗಿ ಬಂದಿರುವುದು ನಮ್ಮ ಸಮಸ್ಯೆ ಇರಬಹುದು. ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆ ಮಾತನಾಡಬಹುದು, ಮಾತನಾಡುತ್ತಾರೆ. ಯುದ್ಧ, ಕ್ಷಾಮ, ಭಕ್ತಿ, ದೇವರು, ಶಿಕ್ಷಣ ನೀತಿ, ಬಾಹ್ಯಾಕಾಶ, ಕಾಡ್ಗಿಚ್ಚು, ಕ್ರಿಕೆಟ್ ಸ್ಕೋರ್. ಆದರೆ ಅವರ ದಿನನಿತ್ಯದ ಕಷ್ಟ ಸುಖ ಇರುತ್ತಲ್ಲ, ಅದನ್ನು ಹೇಳಿಕೋಬೇಕು. ಅದನ್ನು ಇನ್ನೊಬ್ಬರು ಹೇಳುವಾಗ ಕೇಳಿಸಿಕೊಳ್ಳಬೇಕು. ಇನ್ನೊಬ್ಬರಿಂದ ಇದನ್ನೆಲ್ಲ ಹೇಳಿಸುವ, ಹೊರಡಿಸುವ ಕಲೆ ಗೊತ್ತಿರಬೇಕು. ಈಗ ಅಂತಹವರು ಇಲ್ಲವೇ ಇಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಮಾತೇನೋ ಸರಿಯಿತ್ತು, ಹೇಳಬಾರದಾಗಿತ್ತು: ಕೆ. ಸತ್ಯನಾರಾಯಣ ಕಥಾ ಸರಣಿ
ನನಗೇನು ಹಾಗೆನಿಸಲಿಲ್ಲ. ಏಕೆಂದರೆ, ನಾನೆಂದೂ ಆತ್ಮಸಾಕ್ಷಾತ್ಕಾರವನ್ನು ನನ್ನ ಜೀವನದ ಗತಿ ಎಂದು ಭಾವಿಸಿಕೊಂಡಿರಲಿಲ್ಲ. ಜೀವನಕ್ಕೆ ಒಂದು ಗುರಿ ಇರಬೇಕೆನ್ನುವುದು ನಾವು ಮೂಡಿಸಿಕೊಂಡ ತಿಳುವಳಿಕೆ. ಇನ್ನೊಬ್ಬರು ಹೇಳಿಕೊಟ್ಟ ಗಿಣಿ ಮಾತು. ಇದೆಲ್ಲ ಸಹಜವಾಗಿ ಮೂಡಲು ನಮ್ಮ ತಂದೆ ತಾಯಿಗಳು ನಮ್ಮನ್ನು ಕೇಳಿ, ನಂತರ ನಮ್ಮನ್ನು ಹುಟ್ಟಿಸಿರುವುದಿಲ್ಲ. ಅವರಿಗೂ ನಮ್ಮ ಜೀವನಕ್ಕೆ ಒಂದು ದಿಕ್ಕು, ಗುರಿ ಇರಬೇಕು ಎಂದೇನು ಅನಿಸಿರುವುದಿಲ್ಲ. ನಮಗೂ ಗೊತ್ತಾಗುವುದಿಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಪರಿಮಳದ ಹೊಲಮಾಳಗಳು, ಹಲಸಿನ ಮರದ ಕರಡಿ ಹಾಗೂ ಹೆಣ ಕುಯ್ಯುವ ಮರ: ಎಸ್. ಗಂಗಾಧರಯ್ಯ ಅನುಭವ ಕಥನ
ಮೆಲ್ಲಗೆ ಮೇಲಿಂದ ಏನೋ ಗೊರಗುಡುವ ಸದ್ದು ಕೇಳಿಸಿದೆ. ಮರದ ಎಲೆಗಳು ತುಂಬಾ ಕತ್ರಾಗಿದ್ದರಿಂದ ಮೇಲೆ ನೋಡಿದ್ದಾರೆ. ಏನೂ ಕಂಡಿಲ್ಲ. ಮತ್ತೊಂದೆರಡು ಮಾರು ಹತ್ತಿದ್ದಾರೆ. ಅಷ್ಟರೊಳಗೆ ಆ ಗೊರಗುಡುವ ಸದ್ದು ಕೊಂಚ ಜೋರಾಗಿದೆ. ಕೆಂಪ್ಲಿಂಗಜ್ಜನಿಗೆ ಅನುಮಾನ ಬಂದು ನಿಂತಲ್ಲಿಯೇ ತುಂಬಾ ಸೂಕ್ಷ್ಮವಾಗಿ ಸುತ್ತಲೂ ಕಣ್ಣಾಡಿಸಿದ್ದಾರೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹನ್ನೆರಡನೆಯ ಕಂತು
ಎಡಿಟರಾದ ನಾನು… ಮತ್ತು ನರಿ ತಿಂದ ನಸುಗುನ್ನಿಕಾಯಿ…: ಎಚ್. ಗೋಪಾಲಕೃಷ್ಣ ಸರಣಿ
ವಿವರಣೆ ಕೊಟ್ಟೆ ಹೀಗೆ… ಈಗ ನೋಡಿ ನೀವು ಇಷ್ಟು ಇದೀರಿ. ನಾನು ಹೀಗಿದ್ದೀನಿ. ಎರಡನ್ನೂ ಸೇರಿಸಲು ಸಾಧ್ಯವೇ…..?” ಅಂದೆ. ಅವರಿಗೆ ತಾನು ಕುಳ್ಳು ಎನ್ನುವ ಹೆರೆಡಿಟರಿ ಸುಪಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಎನ್ನುವುದು ಆಗ ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಈ ಎಕ್ಸಾಂಪಲ್ ಕೊಡ್ತಾ ಇರ್ಲಿಲ್ಲ. ಇದು ಆಮೇಲೆ ಯಾವಾಗಲೋ ಗೊತ್ತಾಗಿದ್ದು. ಪಾಪ ಅವರಿಗೆ ಅಷ್ಟೊಂದು ಜನರೆದುರು ನೆತ್ತಿ ಮೇಲೆ ಮೊಟಕಿದ ಹಾಗಾಗಿರಬೇಕು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೨ನೇ ಬರಹ ನಿಮ್ಮ ಓದಿಗೆ
ಗುಬ್ಬಚ್ಚಿ: ಡಾ. ಎಸ್.ವಿ. ನರಸಿಂಹನ್ ಸರಣಿ
ಗುಬ್ಬಚ್ಚಿಯ ಕೂಗು ಸಣ್ಣ ಸಣ್ಣ ಚಿಲಿಪಿಲಿ ಧ್ವನಿಗಳು. ಗುಂಪಾಗಿ ಹಾರಾಡುವಾಗ, ಪರಸ್ಪರ ಸಂಪರ್ಕಕ್ಕಾಗಿ ಮತ್ತು ಎಚ್ಚರಿಸಲು ಅಥವಾ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಚಿರ್.ಪ್, ಟಿಶ್.ಲ್ಪ್.. ಅಥವಾ ಫಿಲ್.ಪ್ ಮುಂತಾದ ಕೂಗುಗಳ ಮೂಲಕ ಸಂಪರ್ಕಿಸುತ್ತವೆ. ಅಲ್ಲದೆ, ಗೂಡಿನ ಮಾಲೀಕತ್ವವನ್ನು ಘೋಷಿಸಲು ಮತ್ತು ಸಂತಾನವೃದ್ಧಿ ಋತುವಿನಲ್ಲಿ ಸಂಗಾತಿಯನ್ನು ಆಕರ್ಷಿಸಲು ಗಂಡು ಗುಬ್ಬಚ್ಚಿ ಇಂತಹ ಕರೆಗಳನ್ನು ಪುನಃ ಪುನಃ ಮತ್ತು ವೇಗದೊಂದಿಗೆ ಕೂಗುತ್ತದೆ. ಗುಬ್ಬಚ್ಚಿಗಳು ರಾತ್ರಿ ಎಲೆಭರಿತ ಮರಗಳು, ಮುಳ್ಳು ಪೊದೆಗಳಲ್ಲಿ ವಿಶ್ರಾಂತಿ ಪಡೆಯುತ್ತವೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಗುಬ್ಬಚ್ಚಿ” ಹಕ್ಕಿಯ ಕುರಿತ ಬರಹ ಇಲ್ಲಿದೆ
ಪತ್ತೇದಾರಿ ಇಲಾಖೆಯೇ ಬೇಡವೆಂದ ಗೃಹಸಚಿವ: ಕೆ. ಸತ್ಯನಾರಾಯಣ ಕಥಾ ಸರಣಿ
ಸಮಾಜವನ್ನು ಸರಿಯಾದ ಹಾದಿಗೆ ಹಾಕುತ್ತಿದ್ದೇವೆ ಎಂದು ತೋರಿಸಲು, ನಂಬಿಕೆ ಹುಟ್ಟಿಸಲು ನಮ್ಮ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಒಂದು ಹಂತದ ತನಕ ನಮ್ಮ ಇಲಾಖೆ, ಪತ್ತೇದಾರರು, ವಕೀಲರು ಇದನ್ನೆಲ್ಲ ಗಮನಿಸಬಹುದು, ನಿರ್ವಹಿಸಬಹುದು. ಈಗ ಹಾಗಿಲ್ಲ. ಇದೇ ಸಮಾಜದ ಮುಖ್ಯವಾಹಿನಿಯೂ, ಜೀವನಶೈಲಿಯೂ ಆಗಿರುವುದರಿಂದ, ನಮ್ಮ ಇಲಾಖೆಯ ಅಗತ್ಯವಿಲ್ಲವೆನಿಸುತ್ತದೆ. ಅಂದರೆ ಇದು ಒಟ್ಟು ಸಮಾಜಕ್ಕೆ ಸೇರಿದ ಜವಾಬ್ದಾರಿ. ಹಾಗಾಗಿ ನಾನಾಗಲೀ, ನಮ್ಮ ಇಲಾಖೆಯಾಗಲೀ ಮುಂದುವರೆಯುವ ಅಗತ್ಯವಿಲ್ಲ. ಬರಕಾಸ್ತು ಮಾಡುವುದೇ ಒಳ್ಳೆಯದು. ಹಾಗೆಂದು ಈ ಸಮ್ಮೇಳನದ ಮೂಲಕ ಕರೆ ಕೊಡುತ್ತಿದ್ದೇನೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”
ಚಿಕ್ಕಯನಾಕನಹಳ್ಳಿಯ ತಾತಯ್ಯನ ಗೋರಿ ಮತ್ತದರ ಕುದುರೆ: ಎಸ್. ಗಂಗಾಧರಯ್ಯ ಅನುಭವ ಕಥನ
ನಮ್ಮ ಇಂಥ ದೈನೇಸಿ ಸ್ಥಿತಿಯ ಅರಿವಾಯಿತು ಎಂಬಂತೆ ಹುಚ್ಚೆದ್ದು ಓಡುತ್ತಿದ್ದ ಕುದುರೆ ಓಟದ ಬಿರುವನ್ನು ಕೊಂಚ ಕುಗ್ಗಿಸಿಕೊಂಡು ಎತ್ತಿ ಕುಕ್ಕಿದಂತೆ ಒಮ್ಮೆಗೇ ಕೆನೆದು ಮತ್ತೆ ಮಾಮೂಲಿ ಓಟಕ್ಕಿಟ್ಟುಕೊಂಡಿತು. ಇದನ್ನು ನಿರೀಕ್ಷಿಸದಿದ್ದ ಹಿಂದೆ ಕುಳಿತಿದ್ದ ನಾನು ಹೇಳದೇ ಕೇಳದೇ ಅಂತಾರಲ್ಲ ಹಂಗೆ ದೊಪ್ಪನೆ ಕೆಳಗೆ ಬಿದ್ದುಬಿಟ್ಟೆ. ಬಿದ್ದ ರಭಸಕ್ಕೆ ಕುಂಡಿಗಳನ್ನು ಗುಂಡು ಕಲ್ಲೊಂದರಿಂದ ಜಜ್ಜಿದಂತಾಯ್ತು. ತಕ್ಷಣ ಏನು ಮಾಡಬೇಕೆಂದು ತೋಚದೆ ಕೂತಲ್ಲೇ ಬಿಕ್ಕಳಿಸತೊಡಗಿದೆ.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹನ್ನೊಂದನೆಯ ಕಂತು










