“ನನ್ನ ಜೀವದ ಕಷ್ಟ ಯಾಕೆ ಕೇಳುತ್ತೀಯ ಸಾಖಿ, ಆ ಗೊರವನ ಹಳ್ಳಿಯ ದೈವದ ಕೋಲ ಮಾಡುವ ಬ್ಯಾರನ ಮನಸ್ಥಿತಿ. ಓಡಿಹೋಗಿ ಕೆಂಡದ ಹೊಂಡದಲ್ಲಿ ಬಿದ್ದು ಮೈಸುಟ್ಟುಕೊಂಡ ಹಾಗೆ ಅನುಭವ. ನೋಡುವವರ ಕಣ್ಣಿಗೆ ದೇವರಾಟ. ಅವನು ಹೇಳೋದೆಲ್ಲ ಸತ್ಯ. ದೇವರೇ ಅವನ ಒಡಲಲ್ಲಿ ನಿಂತು ಎಲ್ಲರ ಜೀವನದ ಬಗ್ಗೆ ನುಡಿದುಬಿಡುತ್ತದೆ ಎಂಬ ಭಾವನೆ ಹುಟ್ಟಿಸುವ ಹಾಗೆ. ಆದರೆ ಮುಂದಿನ ದಿನ ಅವನ ಗಾಯ ಬೊಬ್ಬೆ ಹೊಡೆದು ಕೊಂಡು, ಕೀವು ಕಟ್ಟಿದರೂ ಒಂದು ಚಿಟಕಿ ಬೆಣ್ಣೆ ಹಚ್ಚುವವರ ಗತಿ ಇರದು, ಅದು ಯಾರಿಗು ಬೇಕಾಗಿಲ್ಲ ಕೂಡ. ಬೆಣ್ಣೆ ಸವರಲು ಬಾರದು; ಅದು ದೇವರು ಕೊಟ್ಟ ಗಾಯ ನೋಡು.”
ಡಯಾನಾ ಕುಶಾಲಪ್ಪ ಬರೆದ ಲೇಖನ

 

ಅದೇ ಹಳೆಯ ಮುಂಜಾವನ್ನು ಧಿಕ್ಕರಿಸಿ ಏಳುತ್ತೇನೆ. ಎದ್ದು, ಕನ್ನಡಿಯ ಮುಂದೆ ನಿಲ್ಲುತ್ತೇನೆ! ನಿಂತು ಕಣ್ಣಗಲಿಸಿಕೊಳ್ಳುತ್ತೇನೆ. ಕಣ್ಣಗಲಿಸಿ, ನಾನು ಕಂಡ ನೆನ್ನೆ ಮೊನ್ನೆ ಬದಕನ್ನು ತಣ್ಣೀರಿನಲ್ಲಿ ತೇವಗೊಳಿಸುತ್ತೇನೆ. ತೇವಗೊಳಿಸಿ ಅದಕ್ಕಂಟಿದ ಕಲೆಯನ್ನು ತಿಕ್ಕುತ್ತೇನೆ! ಅಲ್ಲೇ ಮನಸ್ಸಿನ ಮೂಲೆಯಲ್ಲಿ ಕುಳಿತುಕೊಳ್ಳುತ್ತೇನೆ. ಕುಳಿತು, ಅನಾವರಣಗೊಳಿಸದೆ ಬಂಧಿಸಿಟ್ಟ ಹಲವು ತರಹದ ತನ್ನನ್ನು, ಅವನನ್ನು, ಅವಳನ್ನು, ಓಲೈಸುತ್ತೇನೆ! ಓಲೈಸಿ, ಈ ಬದುಕನ್ನು, ಭಾವನೆಗಳನ್ನು ಈ ಷರತ್ತಿನ ಜಗತ್ತಿನಿಂದ ಬಿಡುಗಡೆಗೊಳಿಸಿಬಿಡಬೇಕು ಎಂದು ಲೇಖನಿಯ ಮೇಲೆ ಒತ್ತಡ ಹೇರುತ್ತೇನೆ!

ಒತ್ತಡಕ್ಕೆ ಮಣಿದ ಲೇಖನಿ ಮೂಕ ಪ್ರಾಣಿ; ಹುಟ್ಟಿದ್ದೆ, ಕವಿಗಾಗಿ ಮಡಿಯಲು. ತನ್ನ ತನವನ್ನು ತ್ಯಜಿಸಿ ಕವಿಯ ಹುಟ್ಟಿಗೆ ಕಾರಣನಾಗಲು. ಲೇಖನಿಯು ಕಿರು ಜೇಬಿನಿಂದ ಬಿಡಿಸಿಕೊಂಡು ಕಾಗದದ ಗೆರೆಗಳ ಮೇಲೆ ತನ್ನ ಭಾವನೆಗಳನ್ನು ಇಳಿಸಿ, ಬದುಕನ್ನು ಬಿಡುಗಡೆಗೊಳಿಸಿಬಿಡುವ ವೇಳೆಗೆ ತಿಳಿದದ್ದು; ಭಾವನೆಗಳು ಹುಟ್ಟಿದ್ದು ಮೂಕವಾಗಿ; ಅದಕ್ಕೆ ಮಾತು ಬಾರದು, ಕಿವಿಯು ಕೇಳದು. ಲೇಖನಿಗೆ ಮತ್ತೊಮ್ಮೆ ಕುಂಭ ನಿದಿರೆ.

ಶಾಹಿಯು ತೀರದೆ, ಕಾಗದ ತುಂಬದೆ ಬದುಕೀಗ ಇಬ್ಬರಿಗು ನಿರರ್ಥ. ಖಾಲಿ ಹಾಳೆಯ ಖಾಲಿ ಬದುಕಿಗೆ ಪದವೊಂದು ಬೇಕಿದೆ, ಪ್ರೀತಿ ತುಂಬಿದ ಲೇಖನಿಯ ಶಾಹಿಗೆ ಕವಿಯೊಂದು ಬೇಕಿದೆ, ಕವಿಗೆ ಬಿಡುಗಡೆ ಬೇಕಿದೆ.. ಹಾಗಾದರೆ ಕವಿತೆಗೆ…?ಅಲ್ಲ, ಅದು ಹಾಗಲ್ಲ.. ಸಾಖಿ ನನ್ನ ಪ್ರಪಂಚದಲ್ಲಿ ಹುಟ್ಟಲು ಎಲ್ಲರಿಗೂ ಒಂದು ಅವಕಾಶ ಬೇಕು. ಅಲ್ಲಿ ಪಾತ್ರಕ್ಕೆ ಬಿಡುಗಡೆ ಬೇಕು.

ಆದರೆ ನಿನ್ನ ಈ ಪ್ರಪಂಚದಲ್ಲಿ ಬದುಕಲು ಕಾರಣಗಳು ಬೇಕು. ಈ ಪ್ರಪಂಚದಲ್ಲಿ ಕಾರಣಗಳಿಲ್ಲದೆ ಬದುಕುವುದು ಒಂದು ಅಪರಾಧವಂತೆ. ಯಾವುದಾದರು ಕಾರಣಕ್ಕೆ ಹುಟ್ಟು, ಕಾರಣಕ್ಕೆ ಬದುಕು, ಯಾವುದೊ ಕಾರಣಕ್ಕೆ ಸಾವು. ಅದು ಹೇಗೆಂದರೆ ಅದು ಯಾವುದೋ ಒಂದು ಗುಂಪು ಸಭಿಕರನ್ನು ಸೇರಿಸಿಕೊಂಡು, ಮೈಕು ಹಾಕಿಕೊಂಡು ಜೋರಾಗಿ ಅರಚಿಕೊಳ್ಳುತ್ತಾ, ‘ಕಾರಣಾಂತರದಿಂದ ನಮ್ಮ ಮುಖ್ಯ ಅಥಿತಿಗಳು ಬರಲಾಗುತ್ತಿಲ್ಲ. ಇಲ್ಲಿ ಬರಲು ಕಾರಣಗಳ ಕಡಿಮೆ ಇದೆ’ ಎಂದು ಹೇಳಿದಂತಿದೆ. ಸೋ, ಕಾರಣಗಳಿಲ್ಲದೆ ಬದಕು ನಿರರ್ಥ, ಈ ನಿನ್ನ ಜನಸಂದಣಿ ಇಂದ ತುಳುಕುತ್ತಿರುವ ಲೋಕದಲ್ಲಿ, ನಿನ್ನ ಪ್ರಪಂಚದಲ್ಲಿ ಇಷ್ಟು ಕಾರಣಗಳಿದೆ ಎಂದು ನನಗೆ ತಿಳಿದಿರಲಿಲ್ಲ.

ಸುಮ್ಮನೆ ಬದುಕಾಟ ನಡೆಸಲೇಬಾರದು. ಬೆಳಗ್ಗೆ ಎದ್ದು, ಸುಮ್ಮನೆ ಇದ್ದು, ರಾತ್ರಿ ಸುಮ್ಮನೆ ಮಲಗಿ ಬಿಟ್ಟರೆ, ಅವನಿಗೆ ಸೊಂಬೇರಿ ಎಂದು ನಾಮಾಂಕಿತವಾಗಿ ಹೋಗುತ್ತದೆ. ಹಾಗೇನಾದರು ಆದರೆ ಅದು ದುರಂತದ ಬದುಕು. ಅವನನ್ನು ಸರಿಪಡಿಸಲು, ನಾಲ್ಕಾರು ಯೋಗ ಸೆಂಟರ್ ಗಳು, ಹತ್ತು ಜನ ಹಿತೈಷಿಗಳು ಅವನ ಸುತ್ತ ಹುಟ್ಟಿಕೊಳ್ಳುತ್ತಾರೆ. ಅದೇ! ಅವನನ್ನು ಕಾರಣದ ಬದುಕಿಗೆ ಬದ್ಧ ಪಡಿಸಲು…. ನಿನ್ನ ಪ್ರಪಂಚದ ಎಲ್ಲರೂ ಒಂದು ‘ಗಾಗಿ’ ಗೆ ಬದುಕುತ್ತಿರುತ್ತಾರೆ; ಸಾಧನೆ, ಸಾಲ, ಓದು, ಸಂಸಾರ, ವಂಶ, ಪ್ರೀತಿ, ಧ್ಯಾನ, ಪ್ರೀತಿ, ರಾಜ, ರಾಜ್ಯ, ಜಾತಿ, ಮಕ್ಕಳು, ಹೀಗೆ.. ಹಲವು.

ಆದರೆ ‘ಬದುಕಿ’ಗಾಗಿ, ಹುಟ್ಟಿದ ಅವಕಾಶಕ್ಕಾಗಿ ಯಾರಾದರು ಬದುಕುತ್ತಿರುವವರನ್ನು ತೋರಿಸು ಎಂದರೆ, ನಿನಗೆ ಏನೋ ಮುನಿಸು. ವೇದದ ಪಾಠ ಹೇಳಬೇಡ ಎಂದು ಗೊಣಗೊಣ ಮಾಡುತ್ತೀಯ. ಅಲ್ಲ, ವೇದದ ಪಾಠ ಎಂದು ಮೂಗು ಮುರಿಯುತ್ತೀಯ, ಅದರಲ್ಲಿ ಇರುವುದು ಈ ಪ್ರಪಂಚ ಹೇಗೆ ಸೃಷ್ಟಿಯಾಯಿತು ಅಂತಲ್ಲವೇ, ನಿನಗೆ ತಿಳಿದಿಲ್ಲವೇ? ಅದು ಇರಲಿ ಬಿಡು.

ಆದ್ರೆ ನನ್ನ ಪುಟಗಳ ಪ್ರಪಂಚದಲ್ಲಿ ಪಾತ್ರಗಳು ಹುಟ್ಟಲು, ಬೆಳೆಯಲು ಅವಕಾಶ ಹುಡುಕುತ್ತಲೆ ಇವೆ. ಹುಟ್ಟಿದ ಪಾತ್ರಗಳು ಅಲ್ಲಿ ತನ್ನ ಕೆಲಸ ಮಾಡಲೇಬೇಕು, ಕಾರಣಗಳಿಲ್ಲದಿದ್ದರೂ ಪರವಾಗಿಲ್ಲ. ಕಾರಣಗಳಿಗೆ ಪರಾವಲಂಬಿಯಾಗಿ ಬದುಕಾಟ ನಡೆಸುವುದಿಲ್ಲ. ಗೊತ್ತಿಲ್ಲದೆ, ಒಂದು ಕ್ಷಣ ಹೀಗೆ ಹಾಗೆ ನಾನು ಹೇಳಿದಂತೆ ಮಾಡಿ ಸದ್ದಿಲ್ಲದೆ ನಡೆದುಬಿಡುತ್ತವೆ.

ಒತ್ತಡಕ್ಕೆ ಮಣಿದ ಲೇಖನಿ ಮೂಕ ಪ್ರಾಣಿ; ಹುಟ್ಟಿದ್ದೆ, ಕವಿಗಾಗಿ ಮಡಿಯಲು. ತನ್ನ ತನವನ್ನು ತ್ಯಜಿಸಿ ಕವಿಯ ಹುಟ್ಟಿಗೆ ಕಾರಣನಾಗಲು. ಲೇಖನಿಯು ಕಿರು ಜೇಬಿನಿಂದ ಬಿಡಿಸಿಕೊಂಡು ಕಾಗದದ ಗೆರೆಗಳ ಮೇಲೆ ತನ್ನ ಭಾವನೆಗಳನ್ನು ಇಳಿಸಿ, ಬದುಕನ್ನು ಬಿಡುಗಡೆಗೊಳಿಸಿಬಿಡುವ ವೇಳೆಗೆ ತಿಳಿದದ್ದು

ನಾನು ಬರೆದ ಯಾವುದೇ ಸನ್ನಿವೇಶ ನೆನೆದು, ಆಕಾಶ ನೋಡಿಕೊಂಡು ‘ಅಯ್ಯೋ’ ಮಾಡುವುದಿಲ್ಲ.

ಪಾತ್ರಗಳು ಹುಟ್ಟಬೇಕು, ಈ ನನ್ನ ಪುಟಗಳ ನೆಲದಲ್ಲಿ ಓಡಾಡಲು ಅಂಗಲಾಚುತ್ತವೆ. ಅದು ಎಲ್ಲರಿಗು ಸಿಗುವ ಭಾಗ್ಯವಲ್ಲ ನೋಡು, ಅದಕ್ಕಾಗಿ, ಅನುಭವಿಸಬೇಕು, ನಾನು ಸೃಷ್ಟಿಸುವ ಪ್ರತಿ ಮಜಲುಗಳನ್ನು ಅನುಭವಿಸಬೇಕು, ನಂತರ ಬಿಡುಗಡೆಗೊಳ್ಳಬೇಕು. ಅದೇ ಅವುಗಳ ಕಾರಣ.

ನನ್ನಿಂದ ಶಾಹಿ ಬಿಡುಗಡೆಯನ್ನು ಅಂಗಲಾಚುತ್ತದೆ. ನಾನು ಮಣಿಯುತ್ತೇನೆ. ಅಲ್ಲೆಲೋ ಹುಟ್ಟಿರುವ ಪಾತ್ರವನ್ನು ಪುಟಕ್ಕೆ ಇಳಿಸುತ್ತೇನೆ. ಅದು ಬಿಡುಗಡೆಯ ಸುಖವನ್ನೆ ಬಯಸುತ್ತದೆ. ನಾನು ಬಿಡುಗಡೆಗೊಳಿಸುತ್ತೇನೆ. ಆಮೇಲೆ ಆ ಪಾತ್ರಗಳು ಹುಟ್ಟುವುದು ಇಲ್ಲ, ಸಾಯುವುದು ಇಲ್ಲ. ನಿರಂತರ ಬದುಕಿಗೆ ನಾಂದಿ ಹಾಡುತ್ತದೆ.

ಅಲ್ಲ, ಅದು ಹಾಗಲ್ಲ.. ಸಾಖಿ ನನ್ನ ಪ್ರಪಂಚದಲ್ಲಿ ಹುಟ್ಟಲು ಎಲ್ಲರಿಗೂ ಒಂದು ಅವಕಾಶ ಬೇಕು. ಅಲ್ಲಿ ಪಾತ್ರಕ್ಕೆ ಬಿಡುಗಡೆ ಬೇಕು.

ಆದರೆ ನಿನ್ನ ಈ ಪ್ರಪಂಚದಲ್ಲಿ ಬದುಕಲು ಕಾರಣಗಳು ಬೇಕು. ಈ ಪ್ರಪಂಚದಲ್ಲಿ ಕಾರಣಗಳಿಲ್ಲದೆ ಬದುಕುವುದು ಒಂದು ಅಪರಾಧವಂತೆ. ಯಾವುದಾದರು ಕಾರಣಕ್ಕೆ ಹುಟ್ಟು, ಕಾರಣಕ್ಕೆ ಬದುಕು, ಯಾವುದೊ ಕಾರಣಕ್ಕೆ ಸಾವು. ಅದು ಹೇಗೆಂದರೆ ಅದು ಯಾವುದೋ ಒಂದು ಗುಂಪು ಸಭಿಕರನ್ನು ಸೇರಿಸಿಕೊಂಡು, ಮೈಕು ಹಾಕಿಕೊಂಡು ಜೋರಾಗಿ ಅರಚಿಕೊಳ್ಳುತ್ತಾ ,
‘ಕಾರಣಾಂತರದಿಂದ ನಮ್ಮ ಮುಖ್ಯ ಅಥಿತಿಗಳು ಬರಲಾಗುತ್ತಿಲ್ಲ. ಇಲ್ಲಿ ಬರಲು ಕಾರಣಗಳ ಕಡಿಮೆ ಇದೆ’ ಎಂದು ಹೇಳಿದಂತಿದೆ.

ಸೋ, ಕಾರಣಗಳಿಲ್ಲದೆ ಬದಕು ನಿರರ್ಥ, ಈ ನಿನ್ನ ಜನಸಂದಣಿ ಇಂದ ತುಳುಕುತ್ತಿರುವ ಲೋಕದಲ್ಲಿ. ನಿನ್ನ ಪ್ರಪಂಚದಲ್ಲಿ ಇಷ್ಟು ಕಾರಣಗಳಿದೆ ಎಂದು ನನಗೆ ತಿಳಿದಿರಲಿಲ್ಲ.

ಸುಮ್ಮನೆ ಬದುಕಾಟ ನಡೆಸಲೇ ಬಾರದು. ಬೆಳಗ್ಗೆ ಎದ್ದು, ಸುಮ್ಮನೆ ಇದ್ದು, ರಾತ್ರಿ ಸುಮ್ಮನೆ ಮಲಗಿ ಬಿಟ್ಟರೆ, ಅವನಿಗೆ ಸೊಂಬೇರಿ ಎಂದು ನಾಮಾಂಕಿತವಾಗಿ ಹೋಗುತ್ತದೆ.

ಹಾಗೇನಾದರು ಆದರೆ ಅದು ದುರಂತದ ಬದುಕು. ಅವನನ್ನು ಸರಿ ಪಡಿಸಲು, ನಾಲ್ಕಾರು ಯೋಗ ಸೆಂಟರ್ ಗಳು, ಹತ್ತು ಜನ ಹಿತೈಷಿಗಳು ಅವನ ಸುತ್ತ ಹುಟ್ಟಿಕೊಳ್ಳುತ್ತಾರೆ. ಅದೇ! ಅವನನ್ನು ಕಾರಣದ ಬದುಕಿಗೆ ಬದ್ಧ ಪಡಿಸಲು. ನಿನ್ನ ಪ್ರಪಂಚದ ಎಲ್ಲರೂ ಒಂದು ‘ಗಾಗಿ’ ಗೆ ಬದುಕುತ್ತಿರುತ್ತಾರೆ; ಸಾಧನೆ, ಸಾಲ, ಓದು, ಸಂಸಾರ, ವಂಶ, ಪ್ರೀತಿ, ಧ್ಯಾನ, ಪ್ರೀತಿ, ರಾಜ, ರಾಜ್ಯ, ಜಾತಿ, ಮಕ್ಕಳು, ಹೀಗೆ..ಹಲವು.

ಆದರೆ ‘ಬದುಕಿ’ಗಾಗಿ, ಹುಟ್ಟಿದ ಅವಕಾಶಕ್ಕಾಗಿ ಯಾರದರು ಬದುಕುತ್ತಿರುವವರನ್ನು ತೋರಿಸು ಎಂದರೆ, ನಿನಗೆ ಏನೋ ಮುನಿಸು. ವೇದದ ಪಾಠ ಹೇಳಬೇಡ ಎಂದು ಗೊಣಗೊಣ ಮಾಡುತ್ತೀಯ. ಅಲ್ಲ, ವೇದದ ಪಾಠ ಎಂದು ಮೂಗು ಮುರಿಯುತ್ತೀಯ, ಅದರಲ್ಲಿ ಇರುವುದು ಈ ಪ್ರಪಂಚ ಹೇಗೆ ಸೃಷ್ಟಿಯಾಯಿತು ಅಂತಲ್ಲವೇ, ನಿನಗೆ ತಿಳಿದಿಲ್ಲವೇ? ಅದು ಇರಲಿ ಬಿಡು.

ಆದ್ರೆ ನನ್ನ ಪುಟಗಳ ಪ್ರಪಂಚದಲ್ಲಿ ಪಾತ್ರಗಳು ಹುಟ್ಟಲು , ಬೆಳೆಯಲು ಅವಕಾಶ ಹುಡುಕುತ್ತಲೆ ಇವೆ. ಹುಟ್ಟಿದ ಪಾತ್ರಗಳು ಅಲ್ಲಿ ತನ್ನ ಕೆಲಸ ಮಾಡಲೇ ಬೇಕು, ಕಾರಣಗಳಿಲ್ಲದಿದ್ದರು ಪರವಾಗಿಲ್ಲ. ಕಾರಣಗಳಿಗೆ ಪರಾವಲಂಬಿಯಾಗಿ ಬದುಕಾಟ ನಡೆಸುವುದಿಲ್ಲ. ಗೊತ್ತಿಲ್ಲದೆ, ಒಂದು ಕ್ಷಣ ಹೀಗೆ ಹಾಗೆ ನಾನು ಹೇಳಿದಂತೆ ಮಾಡಿ ಸದ್ದಿಲ್ಲದೆ ನಡೆದುಬಿಡುತ್ತವೆ.

ನಾನು ಬರೆದ ಯಾವುದೇ ಸನ್ನಿವೇಶ ನೆನೆದು, ಆಕಾಶನೋಡಿಕೊಂಡು ‘ಅಯ್ಯೋ’ ಮಾಡುವುದಿಲ್ಲ. ಪಾತ್ರಗಳು ಹುಟ್ಟಬೇಕು, ಈ ನನ್ನ ಪುಟಗಳ ನೆಲದಲ್ಲಿ ಓಡಾಡಲು ಅಂಗಲಾಚುತ್ತವೆ. ಅದು ಎಲ್ಲರಿಗು ಸಿಗುವ ಭಾಗ್ಯವಲ್ಲ ನೋಡು, ಅದಕಾಗಿ. ಅನುಭವಿಸಬೇಕು, ನಾನು ಸೃಷ್ಟಿಸುವ ಪ್ರತಿ ಮಜಲುಗಳನ್ನು ಅನುಭವಿಸಬೇಕು, ನಂತರ ಬಿಡುಗಡೆಗೊಳ್ಳಬೇಕು.

ಅದೇ ಅವುಗಳ ಕಾರಣ. ನನಿಂದ ಶಾಹಿ ಬಿಡುಗಡೆಯನ್ನು ಅಂಗಲಾಚುತ್ತದೆ. ನಾನು ಮಣಿಯುತ್ತೇನೆ. ಅಲ್ಲೆಲೋ ಹುಟ್ಟಿರುವ ಪಾತ್ರವನ್ನು ಪುಟಕ್ಕೆ ಇಳಿಸುತ್ತೇನೆ. ಅದು ಬಿಡುಗಡೆಯ ಸುಖವನ್ನೆ ಬಯಸುತ್ತದೆ. ನಾನು ಬಿಡುಗಡೆಗೊಳಿಸುತ್ತೇನೆ. ಆಮೇಲೆ ಆ ಪಾತ್ರಗಳು ಹುಟ್ಟುವುದು ಇಲ್ಲ, ಸಾಯುವುದು ಇಲ್ಲ. ನಿರಂತರ ಬದುಕಿಗೆ ನಾಂದಿ ಹಾಡುತ್ತದೆ.

ಸಾಖಿ.. ಒಂದೊಂದು ಬಾರಿ ಹುಚ್ಚು ಕವಿತೆ ನನ್ನ ಬೆನ್ನೇರಿ ಬಿಡುತ್ತದೆ. ನನಗೆ ಆ ದಿನವನ್ನು ತಳ್ಳಿ ಅದರಿಂದ ಪಾರಾಗಬೇಕು ಎಂದು ಪ್ರಯತ್ನ ಪಡುತ್ತೇನೆ. ಆದರೆ ಅದು ನನ್ನ ವಿಚಾರಗಳ ಚಲನೆಯೇ ಇಲ್ಲದಂತೆ ಮಾಡಿಬಿಡುತ್ತದೆ. ಉಸಿರುಕಟ್ಟಿ ‘ಕವಿತಾಧೀನನಾಗಿ’ ಹೋಗುತ್ತೇನೆ.

ಕವಿತೆಗೆ ಜೀವನ ಹಾಗು ಈ ಪ್ರಪಂಚ ಹೆಚ್ಚು ಪರಿಚಯವಂತೆ; ಅದಂತೆ, ಇದಂತೆ. ಹೀಗೆಲ್ಲಾ ಮೆಲ್ಲನೆ ಕಿವಿಯಲ್ಲಿ ಪಿಸುಗುಟ್ಟುವ ಹಾಗೆ ಮಾಡಿ ನನ್ನ ಸಮ್ಮೋಹಿಸಿಬಿಡುತ್ತದೆ. ನನ್ನ ಪುಟಗಳಲ್ಲಿ ತನ್ನನ್ನೇ ಗೀಚಿಸಿಕೊಳ್ಳುವ ಮಸಲತ್ತು ನಡೆಸಿಬಿಡುತ್ತದೆ.

ಎಷ್ಟೇ ಗೀಚಿದರು, ಅದನ್ನು ಚಿದ್ರಗೊಳಿಸಿದರು ಪುನಃ ಕಾಡಿಸುತ್ತದೆ. ನಾನೆ ಸತ್ಯ ಎನ್ನುವ ಭಾವ ಹುಟ್ಟಿಸಿಬಿಡುತ್ತದೆ. ನನ್ನ ಜೀವದ ಕಷ್ಟ ಯಾಕೆ ಕೇಳುತ್ತೀಯ ಸಾಖಿ, ಆ ಗೊರವನ ಹಳ್ಳಿಯ ದೈವದ ಕೋಲ ಮಾಡುವ ಬ್ಯಾರನ ಮನಸ್ಥಿತಿ. ಓಡಿಹೋಗಿ ಕೆಂಡದ ಹೊಂಡದಲ್ಲಿ ಬಿದ್ದು ಮೈಸುಟ್ಟುಕೊಂಡ ಹಾಗೆ ಅನುಭವ. ನೋಡುವವರ ಕಣ್ಣಿಗೆ ದೇವರಾಟ. ಅವನು ಹೇಳೋದೆಲ್ಲ ಸತ್ಯ. ದೇವರೇ ಅವನ ಒಡಲಲ್ಲಿ ನಿಂತು ಎಲ್ಲರ ಜೀವನದ ಬಗ್ಗೆ ನುಡಿದುಬಿಡುತ್ತದೆ ಎಂಬ ಭಾವನೆ ಹುಟ್ಟಿಸುವ ಹಾಗೆ. ಆದರೆ ಮುಂದಿನ ದಿನ ಅವನ ಗಾಯ ಬೊಬ್ಬೆ ಹೊಡೆದು ಕೊಂಡು, ಕೀವು ಕಟ್ಟಿದರೂ ಒಂದು ಚಿಟಕಿ ಬೆಣ್ಣೆ ಹಚ್ಚುವವರ ಗತಿ ಇರದು, ಅದು ಯಾರಿಗು ಬೇಕಾಗಿಲ್ಲ ಕೂಡ. ಬೆಣ್ಣೆ ಸವರಲು ಬಾರದು; ಅದು ದೇವರು ಕೊಟ್ಟ ಗಾಯ ನೋಡು. ಹಾಗೆ ನನ್ನ ಗತಿ ಕೂಡ. ಎಲ್ಲರಿಗು ಪ್ರಪಂಚವನ್ನು ತೋರಿಸುತ್ತಾ, ನಾನು ಪ್ರಪಂಚವನ್ನು ಕಾಣುವ ಬಗೆಯೇ ಬೇರೆಯಾಗಿ ಹೋಗುತ್ತದೆ. ನನ್ನ ಕಣ್ಣಿನಲ್ಲಿ ಕುಳಿತು ಎಲ್ಲವನ್ನು ನೋಡುವ ಆ ಹುಚ್ಚು ಕವಿತೆಗೆ ನನ್ನ ಭಾವನೆಗಳು ಪರಿವಿಲ್ಲ.

ಆ ಹಾಳಾದ ಕವಿತೆಗೆ ಎಲ್ಲರ ಮನಸ್ಸಿನ ಮನೆಗೆ ಓರೆಗಣ್ಣಲ್ಲಿ ಕಿಟಕಿಯಿಂದ ಇಣುಕಿನೋಡುವ ಕೆಟ್ಟ ಚಾಳಿ. ಇದು ಎಲ್ಲಿಂದ ಕಲಿತದ್ದೊ ಕಾಣೆ. ಪಕ್ಕದ ಪುಟದ ಮತ್ತೊಂದು ಕವಿತೆಯ ಕುಮ್ಮಕ್ಕು ಇದೆಲ್ಲಾ. ನನಗೆ ತಿಳಿದಿದೆ. ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ. ಈ ಕವಿತೆ ಎಪಿಡೆಮಿಕ್ ಡಿಸೀಸ್ ಹಾಗೆ.

ಮೊದೆಲೆಲ್ಲ ರಾತ್ರಿ ಕಾಡುತ್ತಿತ್ತು. ಈಗ ಬೆಳಗ್ಗೆ ಕೂಡ. ನನಗಂತು ಮನೋರೋಗವೇ ಹಿಡಿದಂತೆ ಆಗಿಹೋಗಿದೆ ಸಾಖಿ. ನನ್ನ ಪುಟದ ತುಂಬೆಲ್ಲಾ ಅದರದ್ದೆ ಕಾರುಬಾರು. ನನಗೆ ಪೊಸೆಸಿವ್ ಅನ್ನಿಸಿಬಿಡಿತ್ತದೆ. ನನ್ನ ಮಾತುಗಳಿಗೆ ಒಂದಷ್ಟು ಗೆರೆ ಖಾಲಿ ಬಿಡುವುದಿಲ್ಲ. ನನ್ನ ಹಾಗು ಪುಟದ ಮಧ್ಯ ಇದು ಸವತಿಯ ಹಾಗೆ. ಪುಟಕಂತು ಸ್ವಲ್ಪವು ಬುದ್ದಿಯಿಲ್ಲ. ಇರಲಿ ಬಿಡು ಎಂದು ಬಿಡುತ್ತದೆ.