ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ
“ಆ ಧೂಪದ ಹೈಕಳನ್ನು ಯಾರೂ ಹತ್ತಿಸಿಕೊಂಡು ಹೊಬ್ಗ್ಯಾಡ್ರಿ” ಎಂದು ಹೇಳಿದರೆ; ಎರಡು ದಿನ ಹೈಕಳು ಇಸ್ಕೂಲಿಗೆ ಬಂದರೆ ಮೂರನೆ ದಿನಕ್ಕೆ ಮತ್ತೆ ಅದೇ ರಾಗ ಅದೇ ಹಾಡು. ರೋಸಿ ಹೋದ ಮೇಷ್ಟ್ರು ಒಮ್ಮೆ ಬೆಟ್ಟದ ಇನ್ಸಪೆಕ್ಟ್ರು ಊರಿಗೆ ಬಂದಾಗ “ಯಾರಿಗೂ ಹೆದರದ ಇವರು ಪೋಲಿಸ್ನೋರ‍್ಗೆ ಖರೇ ಹೆದ್ರೂದು” ಎಂದು ಸ್ವಾಲಿಗ್ರ ಕೇರಿಗೆ, ಹೊಲೇರಕೇರಿಗೆ ಕರ್ಕೊಂಡೋಗಿ “ಮಕ್ಕಳನ್ನ ತಾಳುಬೆಟ್ಟಕ್ಕೆ ಧೂಪ ಮಾರುವುದಕ್ಕೆ ಕಳುಹಿಸಿದರೆ ಜೇಲಿಗೆ ಹಾಕಿಸ್ತೀನಿ ಎಂದು ರೋಪ್ ಹೊಡೆಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ “ಧೂಪದ ಮಕ್ಕಳು”
ಶ್ರೀಲೋಲ ಸೋಮಯಾಜಿ ಬರೆದ ಈ ಭಾನುವಾರದ ಕತೆ
ಕುಟುಂಬಕ್ಕೆ ಆಗಮಿಸಿದ ಹೊಸ ಸದಸ್ಯೆಯ ಆಗಮನದ ಸಂತೋಷ ಬರಿಯ ಹದಿನೈದು ದಿನಗಳಲ್ಲಿ ಕಮರಿಹೋಯಿತು. ಆಸ್ಪತ್ರೆಯಿಂದ ಹೊರಬರುವ ಮೊದಲೇ ಮೊದಲ ಬಾರಿಗೆ ದಪ್ಪ ಸೂಜಿಯಿಂದ ಚುಚ್ಚಿಸಿಕೊಂಡು ರಕ್ತವನ್ನು ದೇಹದ ಒಳಗೆ ದಾಟಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅಳುತ್ತಿದ್ದ ಮಗುವನ್ನು ನೋಡಲಾಗದ ರಮ್ಯಾ ಕೋಣೆಯಿಂದ ಹೊರಗೆ ಓಡಿಬಂದು ಬಿಕ್ಕಿಬಿಕ್ಕಿ ಅಳತೊಡಗಿದಳು.
ಶ್ರೀಲೋಲ ಸೋಮಯಾಜಿ ಬರೆದ “ಮೊನಾಲಿಸಾಳ ನಗು” ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ
ಒಂದು ದಿನ ಕ್ಯಾಂಪಸ್ಸಿಗೆ ಬಂದ ಚಂದ್ರಮೌಳಿ ಸಂಜೆ ಸುಧಾಳೊಂದಿಗೆ ಟೀ ಕುಡಿಯುತ್ತಾ “ನೋಡು, ನಾನು ಕಲ್ಕತ್ತಾಗೆ ಹೋಗ್ತಿದ್ದೀನಿ. ಈ ಹೋರಾಟ ಎಲ್ಲ ಶಕ್ತಿಗುಂದುತ್ತಾ ಇದೆ. ಇದ್ರಿಂದೆಲ್ಲ ಏನಾದ್ರೂ ಆಗುತ್ತೆ ಅನ್ನೋ ನಂಬಿಕೆನೂ ನನಗಿಲ್ಲ. ಒಂದು ಅಮೆರಿಕನ್ ಕಂಪೆನಿಯಿಂದ ಒಳ್ಳೆ ಆಫರ್ ಇದೆ. ಎರಡು ವರ್ಷದ ಮೇಲೆ ಸ್ಟೇಟ್ಸ್‌ಗೆ ಹೋಗೋ ಛಾನ್ಸೂ ಇದೆ. ನಿಂಗೆ ಇದು ದ್ರೋಹದ ಥರ ಕಾಣಿಸಬಹುದು, ಪರ್ಸನಲ್ ಲೆವೆಲ್‌ನಲ್ಲೂ…
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ “ಯಾರಲ್ಲಿ, ಕಳೆದಿರುಳು….” ನಿಮ್ಮ ಈ ಭಾನುವಾರದ ಓದಿಗೆ
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ ಕತೆ
ಪಕ್ಕದ ಮನೆಯ ಹುಡುಗಿ ವಿಹಿತಾ ತರಗತಿಗೆ ಫಸ್ಟ್ ಬಂದಿದ್ದಳು. ಲಚ್ಚಿಗೆ ಎರಡನೇ ಸ್ಥಾನ. ಈ ವಿಷಯ ತಿಳಿದಾಗಲೇ ಸೀಮಾ ಅಪ್‌ಸೆಟ್ ಆಗಿದ್ದಳು. ವಿಹಿತಾಳ ತಾಯಿಯ ಜೊತೆಗೆ ಸರಿಯಾಗಿ ಮಾತನಾಡುವುದಕ್ಕೂ ಆಗಿರಲಿಲ್ಲ ಅವಳಿಗೆ. ಅಕ್ಕನ ಮಗಳು ನಾಲ್ಕು ವರ್ಷಗಳಿಂದಲೂ ತರಗತಿಗೆ ಫಸ್ಟ್ ಬರುತ್ತಲೇ ಇದ್ದಾಳೆ. ಸ್ನೇಹಿತೆಯ ಮಗ ವಿಹಾನ್ ಕೀಬೋರ್ಡ್ ತರಗತಿಗೆ ಹೋಗುತ್ತಲೇ ಕಲಿಕೆಯಲ್ಲೂ ಎರಡನೇ ಸ್ಥಾನ ಪಡೆಯುತ್ತಿದ್ದಾನೆ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕತೆ “ಲಚ್ಚಿಯ ಒಂದು ದಿನ” ನಿಮ್ಮ ಓದಿಗೆ
ಬದುಕಿನ ತಿರುವುಗಳು….: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಬೀದಿಯಲ್ಲಿ ಬರುವವರು ಹೋಗುವವರು ಹುಡುಗಿಯರನ್ನು ನೋಡಿಕೊಂಡು ಹೋಗುತ್ತಿದ್ದರು. ಕೆಲವು ಹೆಣ್ಣುಮಕ್ಕಳು ಅವರಿಬ್ಬರ ಸುತ್ತಲೂ ನಿಂತುಕೊಂಡು ಹೂವಿನ ಜಡೆಗಳನ್ನು ಮತ್ತು ಅವರಿಬ್ಬರನ್ನೂ ನೋಡಿ ಒಳಗೊಳಗೆ ನಾವೂ ಇಂತಹ ಮಲ್ಲಿಗೆ ಮೊಗ್ಗಿನ ಜಡೆಗಳನ್ನ ಹಾಕಿಕೊಂಡರೆ ಹೇಗಿರುತ್ತದೆ ಎನ್ನುವ ಕನಸಿನಲ್ಲಿ ನಿಂತಕಡೆಯೇ ತೇಲಾಡುತ್ತಿದ್ದರು. ಪಕ್ಕದ ಮನೆಗಳ ಕೆಲವು ಮಹಿಳೆಯರು ಬಂದು “ಯಾರು ಈ ಮೊಗ್ಗಿನ ಜಡೆಗಳನ್ನು ಹಾಕಿದ್ದು?” ಎಂದಾಗ ಪಕ್ಕದಲ್ಲಿದ್ದ ಮಹಿಳೆಯೊಬ್ಬರು “ಇನ್ಯಾರು ಅಲಮೇಲು. ವೆಲ್ಲೂರು ಕಡೆಯವರು ಹೂಕಟ್ಟುವುದರಲ್ಲಿ ತುಂಬಾ ಫೇಮಸ್ ಅಲ್ಲವೇ?” ಎಂದಳು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಹತ್ತನೆಯ ಕಂತು ನಿಮ್ಮ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಕತೆ
ಅಪ್ಪ- ಮಗ ಮತ್ತೆ ಎಂದಿನಂತೆ ಕೂದಲು ಕತ್ತರಿಸಿಕೊಳ್ಳಲು ಹೋದರು. ಅಲ್ಲಿಗೆ ಹೋದಾಗ ಪ್ರಭಾತ ಅವಾಕ್ಕಾದ. ಯಾವಾಗಲೂ ಕಚಾಕಚ್ ತುಂಬಿರುತ್ತಿದ್ದ ಮನಿಷಾ ಹೇರ್ ಆರ್ಟ್ ಖಾಲಿಯಾಗಿತ್ತು. ಅದರ ಗಾಜುಗಳೆಲ್ಲ ಛಿದ್ರವಾಗಿ ಅವಶೇಷಗಳು ಮಾತ್ರ ಕಾಣುತ್ತಿದ್ದವು. ಒಂದೇಒಂದು ಕನ್ನಡಿ, ಒಂದು ಎತ್ತರದ ಕುರ್ಚಿ ಹಾಗೂ ನೆಲದ ಮೇಲೆ ಕುಕ್ಕರಗಾಲಿನಲ್ಲಿ ಕೂತಿದ್ದ ಕಳಾಹೀನ ಮುಖದ ಒಂಟಿ ವ್ಯಕ್ತಿ. ಅವನ ಮುಖ ನೋಡಿದಾಗ ಪ್ರಭಾತನಿಗೆ ನೆನಪಾಯಿತು – ಅಷ್ಟೂ ದಿನ ತಮ್ಮಿಂದ ಹಣ ಪಡೆಯುತ್ತಿದ್ದ ವ್ಯಕ್ತಿ ಈತನೇ. ಮೊದಲು ಮಗ, ನಂತರ ಅಪ್ಪ ಹೀಗೆ ಇಬ್ಬರೂ ಒಬ್ಬರಾದ ನಂತರ ಒಬ್ಬರು ಕತ್ತರಿಗೆ ತಲೆಯನ್ನೊಡ್ಡಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಕತೆ “ತೇಲ್ ಮಾಲಿಶ್”
ಕಲ್ಲುಬಂಡೆ ಮೇಲೆ ಕುಳಿತಿದ್ದ ಸೆಲ್ವಂ, ಸತ್ತುಹೋದನು: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಮಣಿಗೂ ಅವರು ಹೇಳುವುದು ಸರಿ ಎನಿಸಿತು. ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಒಂದೇ ದಿನದಲ್ಲಿ ಮಣಿಯ ಹೆಗಲಿಗೆ ಜಾರಿಬಿದ್ದಿತ್ತು. ಸುಮತಿಯ ಮದುವೆಯನ್ನೂ ಮಾಡಬೇಕಾಗಿತ್ತು. ಕಾರ್ಮಿಕ ಮುಖಂಡರು, ಮಣಿ ಮತ್ತು ಕನಕಳಿಗೆ ಸಾಂತ್ವನ ಹೇಳಿ ಮಣಿಗೆ ಕೆಲಸಕ್ಕೆ ಅರ್ಜಿ ಹಾಕಲು ಎಲ್ಲ ಕಾಗದ ಪತ್ರಗಳನ್ನು ಬೇಗನೆ ತಯಾರುಮಾಡಿ ಕೊಡುವಂತೆ ಹೇಳಿ ಹೊರಟುಹೋದರು. ಆರ್ಮುಗಮ್, ಮಣಿಗೆ ಆದಷ್ಟು ಬೇಗನೆ ಕೆಲಸ ಮಾಡಿಕೊಡುವಂತೆ ಅಯ್ಯಪ್ಪನಿಗೆ ಹೋಗುವ ಮುಂಚೆ ಕೇಳಿಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಒಂಭತ್ತನೆಯ ಕಂತು ನಿಮ್ಮ ಓದಿಗೆ
ಕೂರಾಪುರಾಣ ೧೨: ಹಿಡಿ ಪ್ರೀತಿಗೆ ಹಂಬಲಿಸುತ್ತ, ಹೃದಯ ಕರಗುವಷ್ಟು ಪ್ರೀತಿಸುತ್ತ..
ಬೆನ್ನು ಸವರತೊಡಗಿದರೆ ಅಡ್ಡ ಬಿದ್ದು ಹೊಟ್ಟೆಯನ್ನು ಕೆರೆ ಎಂಬಂತೆ ಮುಂದಿನ ಎರಡು ಕಾಲುಗಳನ್ನು ಮಡಚಿದಾಗ ಮುದ್ದುಕ್ಕದೇ ಹೇಗೆ ಸಾಧ್ಯ? ಒಂದು ವೇಳೆ ನಾನು ಏಳುವುದು ತಡವಾದರೆ ನನ್ನ ಹಾಸಿಗೆಯ ಪಕ್ಕದಲ್ಲಿ ಬಂದು ಬಾಲ ಅಲ್ಲಾಡಿಸುತ್ತ ಕೂತು ಬಿಡುತ್ತಿದ್ದ. ಬೆಳಿಗ್ಗೆ ಎದ್ದ ಕೂಡಲೇ ಇವನದೇ ದಿವ್ಯದರ್ಶನ. ಈಗ ಹಾಗಿಲ್ಲ, ದೊಡ್ಡವನಾಗಿದ್ದಾನೆ. ಎದ್ದು ತನ್ನ ಕೆಲಸಗಳತ್ತ ಗಮನ ಕೊಡುತ್ತಾನೆ. ಆದರೆ ಆಗಾಗ ಮೈ ಕೆರೆಸಿಕೊಳ್ಳುವುದು, ಕಿವಿಗಳನ್ನು ಮಸಾಜ್ ಮಾಡಿಸಿಕೊಳ್ಳುವುದನ್ನು ಬಿಟ್ಟಿಲ್ಲ. ನಾವಷ್ಟೇ ಅಲ್ಲ, ನಮ್ಮ ಮನೆಗೆ ಯಾರೇ ಬಂದರೂ ಅವರು ಸಹ ಅದನ್ನೆಲ್ಲ ಮಾಡಲೇಬೇಕು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ
ವೃದ್ಧಾಶ್ರಮದ ಅಂಗಳ ತಮ್ಮ ಮನೆ. ಆವತ್ತು ಭಾವನಾಳೊಡನೆ ಮನೆ ಬಿಟ್ಟು ಹೋಗುವಾಗ ಅಪ್ಪ ಆರಾಮ ಕುರ್ಚಿಯ ಮೇಲೆ ನಿರ್ಲಿಪ್ತವಾಗಿ ಕೂತಿದ್ದರು. ಅಮ್ಮ ಕಣ್ಣಿನಲ್ಲಿ ನೀರು ತುಂಬಿಕೊಂಡು ನೋಡುತ್ತ ನಿಂತಿದ್ದರು. ಹದಿಮೂರು ಜನ ವೃದ್ಧ-ವೃದ್ಧೆಯರೂ ನಮ್ಮನ್ನೆ ನೋಡುತ್ತ ನಿಂತಿದ್ದರು. ಏಕೋ ನನ್ನಲ್ಲಿ ಅಳುಕು. ಭಾವನಾ ಸರಸರನೇ ಹೆಜ್ಜೆ ಹಾಕಿ ಕಾರಿನಲ್ಲಿ ಕುಳಿತುಬಿಟ್ಟಿದ್ದಳು. ಲಚ್ಚಿ ಆಗ ಗರ್ಭಿಣಿ. ನನ್ನೆಡೆಗೆ ದುರದುರನೆ ದಿಟ್ಟಿಸುತ್ತಿದ್ದಳು.
ವೀರೇಶ ಶಿವಲಿಂಗಪ್ಪ ಸಜ್ಜನ ಬರೆದ ಈ ಭಾನುವಾರದ ಕತೆ “ಕ್ಕೊ ಕ್ಕೊ ಕ್ಕೊ…” ನಿಮ್ಮ ಓದಿಗೆ









