ಬೇಡ ಆಯುಧ
ಅವಳ ಕುಡಿನೋಟ
ಕತ್ತಿಯ ಅಂಚು
ಚಿತ್ರ ಬೇಕಿಲ್ಲ
ಮಗುವಿನ ನಗುವೇ
ದೇವರ ಮೊಗ
ಹೋಲಿಕೆ ಬೇಡ
ಅವಳ ನಡಿಗೆಯೇ
ನಾಟ್ಯ ಪ್ರಕಾರ
ಜಲಪಾತದಂತೆ
ಅವಳೆರಡು ಜಡೆ
ದುಮ್ಮಿಕ್ಕುತ್ತಿವೆ
ಅವಳು ನದಿ
ಕವಲು ಜಲಪಾತ
ಎರಡು ಜಡೆ
ಬರವಣಿಗೆ
ಬೆತ್ತಲಾದ ಆತ್ಮದ
ಮೆರವಣಿಗೆ
ಕೊಳೆಯಾಗಲಿಲ್ಲ
ಕೆಸರಲಿ ನಿಂತರೂ
ಕಮಲದ ಹೂ
ಅವಳ ಕಣ್ಣು
ಕಡು ಕತ್ತಲಿನಲಿ
ಹಚ್ಚಿಟ್ಟ ದೀಪ
ಕಾಮನಬಿಲ್ಲು
ಆಕಾಶ ಸುಂದರಿಯ
ಮೂಗಿನ ನತ್ತು
ಕನಸುಗಳು
ನಿದ್ರೆ ಮಡಿಲಿನಿಂದ
ಎದ್ದ ಮಕ್ಕಳು
ಬೆಳ್ಳಿ ಓಡ್ಯಾಣ
ಬಳುಕಿ ಉಳುಕುವ
ಸೊಂಟದ ಬಂದಿ
ನಿನ್ನದೇ ನಗು
ಹೂವು ಅರಳಿದಾಗ
ಮೂಡಿದ ಸದ್ದು
ನಿನ್ನೀ ಬೈತಲೆ
ನನ್ನ ಕನಸುಗಳ
ಒಂಟಿ ಹೆದ್ದಾರಿ
ಚಲ್ಲಿದ ಚುಕ್ಕಿ
ಮಗುವಿನ ಕೈಯಲ್ಲಿ
ಗಿಲಕಿ ಗೆಜ್ಜೆ.

ಸ್ವಾಮಿ ಪೊನ್ನಾಚಿ (ಮಹದೇವಸ್ವಾಮಿ ಕೆ.ಎಸ್) ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯವರು. ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. “ಸಾವೊಂದನ್ನು ಬಿಟ್ಟು” (ಕವನ ಸಂಕಲನ), ಧೂಪದ ಮಕ್ಕಳು (ಕಥಾ ಸಂಕಲನ), ಕಾಡು ಹುಡುಗನ ಹಾಡುಪಾಡು (ಅನುಭವ ಕಥನ) ಇವರ ಪ್ರಕಟಿತ ಕೃತಿಗಳು. ಇವರಿಗೆ ಪಾಪು ಕಥಾ ಪುರಸ್ಕಾರ ಹಾಗೂ ಛಂದ ಪ್ರಕಾಶನ ಕೊಡಮಾಡುವ ಛಂದ ಪುಸ್ತಕ ಬಹುಮಾನ ದೊರೆತಿದೆ.

