Advertisement

ಅಂಕಣ

ಐರಿಷ್ ಅಜ್ಜನ ಧರ್ಮಪಾಠಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

ಐರಿಷ್ ಅಜ್ಜನ ಧರ್ಮಪಾಠಗಳು:ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ಐರಿಷರಿಗೂ ಆಂಗ್ಲರಿಗೂ ಇರುವ ಚಾರಿತ್ರಿಕ ವೈಷಮ್ಯಕ್ಕೋ ಅಥವಾ ಅವನ್ನು ಮೀರಿ ವಿಮರ್ಶಿಸುವ ಸಾಮರ್ಥ್ಯ ಈತನಿಗಿರಬಹುದಾದದ್ದಕ್ಕೋ ಗೊತ್ತಿಲ್ಲ, ಈತನಿಂದ ಹೆಚ್ಚು ಟೀಕೆಗೊಳಗಾಗುವವರು ಆಂಗ್ಲರು ಮತ್ತೆ ಲಂಡನ್ ಸಂಸತ್ತಿನಲ್ಲಿ ಕುಳಿತು ಆಡಳಿತ ನಡೆಸುವವರು. ಇವನಿಂದ ಪಾಠ ಹೇಳಿಸಿಕೊಳ್ಳಬೇಕಾದ ಆಂಗ್ಲರು ಯಾರೂ ಇವನ ಸುತ್ತಮುತ್ತ ಇಲ್ಲದ ಕಾರಣ ಇವನ ನೀತಿ ಧರ್ಮ ಭೋದೆ ಎಲ್ಲವೂ ಪರದೇಸಿ, ವಲಸಿಗ ನನ್ನ ಮೇಲೆಯೇ ಕರುಣಿಸಲ್ಪಡುತ್ತದೆ.”

read more
ಸಿಡ್ನಿ ಮಾರ್ಡಿ ಗ್ರಾ- “ಒಂದು ಭಿನ್ನ ಹಾದಿ”:     ಡಾ. ವಿನತೆ ಶರ್ಮಾ ಅಂಕಣ

ಸಿಡ್ನಿ ಮಾರ್ಡಿ ಗ್ರಾ- “ಒಂದು ಭಿನ್ನ ಹಾದಿ”: ಡಾ. ವಿನತೆ ಶರ್ಮಾ ಅಂಕಣ

“ಎಲ್ಲರಿಂದಲೂ ಬೇರ್ಪಟ್ಟು ಒಬ್ಬಂಟಿಯಾಗಿ ನಿಂತದ್ದು ಆ ವ್ಯಕ್ತಿ. ಏಕೆಂದರೆ ಅದು ಆ ವ್ಯಕ್ತಿ ಅವನು ಎಂಬ ವ್ಯಕ್ತಿತ್ವನ್ನು, ಅಸ್ಮಿತೆಯನ್ನು ಬಿಟ್ಟು ಅವಳು ಎಂದು ಆಗಲು ಮಾರ್ಪಾಡಾಗುತ್ತಿದ್ದ ಹಂತದ ಕಥೆ. ಆ ಒಂದು ವಿಶಿಷ್ಟ ಹಂತದಲ್ಲಿ ಅವಳು ಸಹಾಯ ಬಯಸಿ ಪ್ರಾಜೆಕ್ಟ್ ಸೇರಿದ್ದಳು. ಇನ್ನೂ ಹರೆಯದ ವಯಸ್ಸು. ಕಾನೂನು ಪ್ರಕಾರ ಇನ್ನೂ ಅವನು ಎಂಬ ಲಿಂಗವೇ ಚಾಲ್ತಿಯಲ್ಲಿತ್ತು.”

read more
ಕಾಯುತ್ತಲೇ ಇರುವ ಸ್ವರ್ಗದ ಬಾಗಿಲು: ಇ ಆರ್ ರಾಮಚಂದ್ರನ್ ಕಥಾನಕ

ಕಾಯುತ್ತಲೇ ಇರುವ ಸ್ವರ್ಗದ ಬಾಗಿಲು: ಇ ಆರ್ ರಾಮಚಂದ್ರನ್ ಕಥಾನಕ

“ರಾತ್ರಿ 1 ಗಂಟೆಯ ಸಮಯಕ್ಕೆ ನಮ್ಮ ಟೆಲಿಫೋನ್ ಕೂಗಿತು. ಅಷ್ಟು ಹೊತ್ತಿಗೆ ಬಂದ ಕಾಲ್ ಗೆ ಹೆದರಿ ಹಲೋ ಅಂದೆ. ಸಿನ್ಹಾ ಲೈನಿನಲ್ಲಿ. ಆತ ಗಾಭರಿಯಿಂದ , ‘ಸರ್ಕಾರ್ ಗೆ ಹಾರ್ಟ ಅಟ್ಯಾಕ್ ಆಗಿದೆ. ಬೇಗ ಬನ್ನಿ’ ಎಂದ. ಎಂತಹ ಪರಿಸ್ಥಿತಿಗೆ ತಯಾರಾಗಿದ್ದರೂ ಜೀವನದಲ್ಲಿ ಎಷ್ಟೋ ಸಲ ಅನೀರೀಕ್ಷಿತವಾಗಿ, ತಿರುವು ಬರುತ್ತೆ; ಜೊತೆಗೆ ಜಂಘಾಬಲ ಉಡುಗಿಹೋಗುತ್ತೆ.”

read more
ನಡೆದಷ್ಟೂ ಮುಗಿಯದ ದಾರಿಯ ಬೆನ್ನೇರಿ…: ರೂಪಶ್ರೀ ಕಲ್ಲಿಗನೂರ್ ಅಂಕಣ

ನಡೆದಷ್ಟೂ ಮುಗಿಯದ ದಾರಿಯ ಬೆನ್ನೇರಿ…: ರೂಪಶ್ರೀ ಕಲ್ಲಿಗನೂರ್ ಅಂಕಣ

“ಬಿಸಿಲಿನ ದಂಡನೆಯನ್ನು ಲೆಕ್ಕಿಸದೇ ಹಾಗೆ ನಿಂತಿದ್ದ ನನಗೆ ನನ್ನ ಇರವಿನ ಇರವಿರ ಅರಿವು ಬಂದದ್ದು ಪಾದಗಳು ಉರಿಯತೊಡಗಿದಾಗಲೇ. ಆ ಸಮುದ್ರಕ್ಕೆ ನನ್ನ ಮೇಲೆ ಅದೆಷ್ಟು ಒಲವೋ. ಕೆಂಡದಂತಾಗಿದ್ದ ಪಾದಗಳನ್ನು ಕಡಲೇ ಬಂದು ಆಗಾಗ ಮುಟ್ಟಿ, ತಣ್ಣನೆಯ ಮುತ್ತಿಟ್ಟು ಹೋಗುತ್ತಿತ್ತು. “ಅಬ್ಬಾ ಇಂಥದ್ದೊಂದು ಸಮುದ್ರಾನ ನೋಡದೇ ಸತ್ತವನೇ ಪಾಪಿ ಇರಬಹುದೇನೋ” ಅಂದುಕೊಂಡೆವು ನಾವಿಬ್ಬರೂ.”

read more
ಜಾತಿ ಕೆಟ್ಟ ಅಳಿಲಿನ ಅಂತ್ಯ:ಮುನವ್ವರ್ ಪರಿಸರ ಕಥನ

ಜಾತಿ ಕೆಟ್ಟ ಅಳಿಲಿನ ಅಂತ್ಯ:ಮುನವ್ವರ್ ಪರಿಸರ ಕಥನ

“ಒಮ್ಮೆ ಮನೆಯಲ್ಲಿ ಕಿಟಕಿಯ ಹೊರಗೆ ನೋಡುತ್ತ ಕುಳಿತಿದ್ದ ನನಗೆ ಆ ದೃಶ್ಯ ಕಂಡಿತ್ತು. ಮನೆಯ ಬೇಲಿಗೆ ಬಾಗಿ ನಿಂತ ಹಲಸಿನ ಮರದಲ್ಲಿ ಒಂದು ಹಣ್ಣಿನೆಡೆಯಿಂದ ಸಣ್ಣಗಿನ ತಲೆ ಆಗಾಗ ಇಣುಕಿದಂತೆ ಕಾಣುತ್ತಿತ್ತು. ಯಾವುದೋ ಹಾವು ಇರಬೇಕೇನೋ ಅಂದು ಕೊಂಡು ಸಾಕಷ್ಟು ಹತ್ತಿರ ಹೋದೆ. ನೋಡಿದರೆ ಹಣ್ಣಾಗಿದ್ದ ಹಲಸನ್ನು ಒಂದು ತೂತು ಮಾಡಿ, ಎರಡು ಅಳಿಲುಗಳು ತಿಂದು ಹಾಕಿ ಎರಡು ರಂಧ್ರಕೊರೆದು ಇಣುಕುತ್ತಿದ್ದವು.”

read more
ಮಜವೆನಿಸುತ್ತಿರುವ ಬಿಡುಗಡೆಯ ಜ್ಞಾನೋದಯ: ವೈಶಾಲಿ ಅಂಕಣ

ಮಜವೆನಿಸುತ್ತಿರುವ ಬಿಡುಗಡೆಯ ಜ್ಞಾನೋದಯ: ವೈಶಾಲಿ ಅಂಕಣ

“ಇಂಟರ್ವ್ಯೂಗೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಕೆಲಸಕ್ಕೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಮಕ್ಕಳನ್ನು ಶಾಲೆಗೆ ಸೇರಿಸಲು ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು ಇವನ್ನೆಲ್ಲ ನೀವು ಓದಿದರೆ, ಅಲ್ಲಿರುವ ಈ ಅತ್ಯಮೂಲ್ಯ ಸೂಚನೆಗಳೆಲ್ಲ ಇರುವುದು ಹೆಂಗಸರಿಗೆ! ಏನಿದರರ್ಥ?”

read more
ಬ್ರಿಟನ್ನಿನ ಬಿಸಿಲು ಹಬ್ಬ,ಬೈಂದೂರಿನ ಬಿಸಿಲ ಮೆರವಣಿಗೆ

ಬ್ರಿಟನ್ನಿನ ಬಿಸಿಲು ಹಬ್ಬ,ಬೈಂದೂರಿನ ಬಿಸಿಲ ಮೆರವಣಿಗೆ

“ಬಿಸಿಲಿನ ಮಟ್ಟಿಗೂ ನಿತ್ಯ ಬೀಳುವ ಊರಲ್ಲಿ ಸಿಗದ ಸ್ವಾಗತ ಇಲ್ಲಿ ದೊರೆಯುವಾಗ ಆನಂದ ಆಗಬಹದು. ಬ್ರಿಟಿಷರನ್ನು ಏನಾದರೂ ವರ ಬೇಕೋ ಎಂದು ಭಗವಂತ ಕೇಳಿದರೆ ತಮಗೆ ಬೆಚ್ಚಗಿನ ಬಿಸಿಲು ಅನವರತ ಕೊಡು ದೇವರೇ ಎಂದು ಕೇಳುವ ಸಾಧ್ಯತೆಯೇ ಹೆಚ್ಚು. ಬ್ರಿಟನ್ ಎಂದೆಂದಿಗೂ ಬಿಸಿಲಿಗಾಗಿ ಹಸಿದ ಪ್ರೇಮಿಗಳ ನಾಡು.”

read more
“ಪಾಯಿಖಾನೆ ಒಲ್ಲೆ ಎನ್ನುವ ಹೆಣ್ಣುಮಕ್ಕಳು”: ರೂಪಶ್ರೀ ಕಲ್ಲಿಗನೂರ್ ಅಂಕಣ

“ಪಾಯಿಖಾನೆ ಒಲ್ಲೆ ಎನ್ನುವ ಹೆಣ್ಣುಮಕ್ಕಳು”: ರೂಪಶ್ರೀ ಕಲ್ಲಿಗನೂರ್ ಅಂಕಣ

“ಆವತ್ತು ನಾನು ಮತ್ತೆ ಅಕ್ಕಾ ಒತ್ತಾಯಿಸಿದ್ದೆವು ಅಂತ ಅಣ್ಣ ಪಾಯಿಖಾನೆ ಹಾಕಿಸಿದ್ದ. ಆದರೆ ಹೀಗೆ ನಾವು ಬೆಂಗಳೂರಿನ ಕಡೆ ಮುಖಮಾಡಿದ್ದೇ ಅದಕ್ಕೆ ಬೀಗ ಬಿದ್ದಿತ್ತು! ನಾವೀಗ ಮತ್ತೆ ಅಲ್ಲಿಗೆ ಬರೋ ಸುದ್ದಿ ಕೇಳಿದ ಮೇಲೆ, ಅದರ ಬೀಗವನ್ನು ತೆರೆಯಲಾಗಿತ್ತು. ಮನೆಯ ಗಂಡಸರಿರಲೀ, ಅಥವಾ ದೊಡ್ಡಮ್ಮ ಅದನ್ನು ಬಳಸುವ ಮಾತು ಹಾಗಿರಲಿ, ಮನೆಯ ಯಾವ ಹೆಣ್ಮಕ್ಕಳಿಗೂ ಆ “ಪಾಯಖಾನೆ”ಯ ಸುದ್ದಿಯೇ ಬೇಡ.”

read more
ವನ್ಯಮೃಗಗಳ ಸಂರಕ್ಷಣೆ ಮತ್ತು ಟೂರಿಸಂ ನಡುವಿನ ದ್ವಂದ್ವಗಳು: ಡಾ. ವಿನತೆ ಶರ್ಮಾ ಅಂಕಣ

ವನ್ಯಮೃಗಗಳ ಸಂರಕ್ಷಣೆ ಮತ್ತು ಟೂರಿಸಂ ನಡುವಿನ ದ್ವಂದ್ವಗಳು: ಡಾ. ವಿನತೆ ಶರ್ಮಾ ಅಂಕಣ

“ಒಂದು ನಿಸರ್ಗದಲ್ಲಿ ಸ್ವತಂತ್ರವಾಗಿ ಜೀವಿಸುತ್ತಿರುವ ಆನೆಗಳು ನಶಿಸುತ್ತಿರುವುದು. ಮತ್ತೊಂದು, ಮಾನವರ ಪೋಷಣೆಯಲ್ಲಿರುವ ಬಂಧಿತ ಮತ್ತು ಪಳಗಿದ ಆನೆಗಳನ್ನು ನಾವುಗಳು ಬಳಸಿಕೊಳ್ಳುತ್ತಿರುವ ಕ್ರೂರ ವಿಧಾನಗಳು, ಧೋರಣೆಗಳು, ಮತ್ತು ಅವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಸಲಹಿ ಪೋಷಿಸುವ ಮಾವುತರನ್ನು ನಿರ್ಲಕ್ಷಿಸಿರುವುದು. ಈ ಅಪಾಯಕಾರಿ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಆನೆಗಳ ಸಂತತಿಯನ್ನು ಕಾಪಾಡಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲಿಫೆಂಟ್ ಟೂರಿಸಂ ಚರ್ಚೆಗಳು ವ್ಯಾಪಕವಾಗಿವೆ. “

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ