ಔಪಚಾರಿಕವಲ್ಲದ ಉಪಚಾರದ ಸೊಬಗಂದ್ರೇ…: ರೂಪಶ್ರೀ ಅಂಕಣ
“ಈ ಹೊತ್ತಿನಲ್ಲಿಯೂ ಹಳ್ಳಿ ಮನೆಗಳಿಗೆ ಹೋದರೆ ನಮಗೆ ಉಪಚರಿಸುವ ಬಗೆ ಹೇಗೆಲ್ಲ ಇರುತ್ತೆ ಅನ್ನುವುದರ ಪರಿಚಯವಾಗುತ್ತೆ. ‘ಮಳೆ ಬಂದ್ರೆ ಕೇಡಲ್ಲ, ಮಗ ಉಂಡರೆ ಕೇಡಲ್ಲ’ ಅನ್ನುವ ಗಾದೆಯಂತೆಯೇ ಮನೆಗೆ ಬಂದವರನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ.”
ಡಚ್ಚರ ನಾಡಿನ ಸುರಿನಾಮಿ ಹಿಂದೂಗಳ ಕಥನ: ಸೀಮಾ ಬರೆವ ಆ್ಯಮ್ಸ್ಟರ್ ಡ್ಯಾಮ್ ಪತ್ರ.
”ಭಾರತೀಯರು ಅಲ್ಲಿಯೇ ತಮ್ಮ ಅಸ್ಥಿತ್ವವನ್ನು, ಧರ್ಮವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರು. ರಾಮಾಯಣವನ್ನೇ ಜೀವಾಳವಾಗಿಸಿಕೊಂಡರು. ಹಬ್ಬಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರು.ಮಕ್ಕಳಿಗೆ ಭಾರತೀಯ ಹೆಸರುಗಳನ್ನೇ ಇಡುತ್ತಾರೆ. ಅಲ್ಲಿನ ಆಡಳಿತ ಭಾಷೆ ಡಚ್ ಆದರೂ ಹಿಂದಿ ಕೂಡ ಒಂದು ಮುಖ್ಯ ಭಾಷೆ.”
ಹವಾಮಾನ ಬದಲಾವಣೆ ಎಂಬ ಗೊಗ್ಗಯ್ಯ: ವಿನತೆ ಶರ್ಮಾ ಅಂಕಣ
ನಾವು ಈಗಲೂ ಪ್ರಜೆಗಳೇ, ಮುಂದೆಯೂ ಪ್ರಜೆಗಳೇ. ಈಗ ನಾವು ಕ್ರಮ ಕೈಗೊಳ್ಳದಿದ್ದರೆ ಈ ದಿನವೂ ಕೆಟ್ಟದ್ದೇ, ಮುಂದಿನ ದಿನಗಳಂತೂ ಇನ್ನೂ ಭಯಂಕರ. ನಮ್ಮ ಸರ್ಕಾರಗಳು, ಜನ ಪ್ರತಿನಿಧಿಗಳು ಈ ದಿನವನ್ನೂ, ನಾಳೆಯನ್ನೂ ಎರಡನ್ನೂ ಕುರಿತು ಆಲೋಚಿಸಬೇಕು, ಅಲ್ಲವೇ.”
ಕಡಲು ನೋಡಲು ಹೋದವಳು ಕಥೆ ಕೇಳಿಸಿಕೊಂಡು ಬಂದೆ
”ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಷಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ “ಇಲ್ಲ ಮಾರಾಯ್ತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ.
ರಜೆ ಎಂಬ ಸಿರಿತನ ಮತ್ತು ಬಡತನ:ಯೋಗೀಂದ್ರ ಮರವಂತೆ ಅಂಕಣ.
“ನಮ್ಮೂರಲ್ಲಿ ನದಿಯೂ ಇದೆ ಸಮುದ್ರವೂ ಇದೆ. ಮತ್ತೆ ಇವೆರಡರ ನಡುವೆ ಸಲ್ಲಾಪ ಸಂಗೀತ ಜಗಳ ಎಲ್ಲ ನಡೆಯುತ್ತದೆ.ಸಾವಿರಗಟ್ಟಲೆ ತೆಂಗಿನ ಮರಗಳೂ ಇವೆ. ಅವು ತಂಗಾಳಿಗೆ ತಮ್ಮ ಹೆಡೆಗಳನ್ನು ಬೀಸಿ ಬರುವವರನ್ನೆಲ್ಲ ಕರೆಯುತ್ತವೆ.ಮನೆಯ ಅಂಗಳದಲ್ಲಿ ನಿರ್ಭಯವಾಗಿ ತಿರುಗುವ ನವಿಲುಗಳು ಊರಿನ ರಾಣಿಯಂತೆ ಗತ್ತಿನಲ್ಲಿ ತಿರುಗುತ್ತವೆ.”
ಕಾಡ ಮಾಡಿನಲ್ಲಿ ನೆಲೆಸಿದ ಕುಟುಂಬದ ಕಥೆ: ಪ್ರಸಾದ್ ಶೆಣೈ ಕಥಾನಕ
“ನಾವು ಗದ್ದೆ ಕೆಲಸ ಮಾಡುತ್ತ ಹೋದಂತೆಲ್ಲಾ ಬಿಸಿಲು ಮತ್ತಷ್ಟು ಸುರಿಯುತ್ತಲೇ ಇತ್ತು. ಕೆಸರಿನ ಪರಿಮಳದಲ್ಲಿ ಪೇಟೆಯ ವಾಸನೆ ಮರೆತುಹೋಯ್ತು. ಬದುಕು ಎಷ್ಟು ಬೋರು, ಎಂದು ಬೇಜಾರು ಮಾಡಿಕೊಂಡಿದ್ದು, ಬದುಕಲ್ಲಿ ಹೊಸತನವೇ ಇಲ್ಲ ಅಂತ ನೊಂದುಕೊಂಡಿದ್ದು, ಟೆಕ್ನಾಲಜಿಗಳು ಅದೆಷ್ಟು ಸುಖಕೊಟ್ಟರೂ ಕೊನೆಗದು ಮೂಡಿಸುವ ಅಶಾಂತಿಗೆ ಬೆಂದು ತತ್ತರಿಸಿದ್ದು..”
ಒಂದು ಸಿನಿಮಾ ಹಲವು ಕಲೆಗಳ ಸಂಕೀರ್ಣ ಮಾಧ್ಯಮ:ಕೃಷ್ಣ ದೇವಾಂಗಮಠ ಅಂಕಣ
“ಈಗೀಗ ಮೂರು ಗಂಟೆಯ ನಮ್ಮ ಸಿನಿಮಾ ಎರಡು ಗಂಟೆಯವರೆಗೆ ಬಂದು ನಿಂತಿದೆ. ಆ ಎರಡು ಗಂಟೆಗಳ ಕಾಲವೂ ಪ್ರೇಕ್ಷಕನನ್ನ ಹಿಡಿದಿಡಲು ಒಂದು ತಂಡದ ಶ್ರಮ, ಪ್ರೀತಿ ಬಹಳವೇ ಇರುತ್ತದೆ. ಟಿವಿ, ಮೊಬೈಲ್, ಪೈರೆಸಿಗಳ ಪ್ರಭಾವದಿಂದಲೋ ಏನೋ ಮುಂಚೆ ಇದ್ದ ಪ್ರೆಕ್ಷಕರ ದಂಡು ಈಗ ಕ್ವೀಣಿಸಿರುವುದೂ ನಿಜ.”
ಕಡಲ ಭೋರ್ಗರೆತ ಮತ್ತು ಗೆಳತಿಯ ಪ್ರೇಮ ನೈರಾಶ್ಯ:ಫಾತಿಮಾ ರಲಿಯಾ ಅಂಕಣ
ಹಾಗಂತ ನಮ್ಮಿಬ್ಬರ ಬದುಕಿನಲ್ಲಿ ಗಂಭೀರತೆಗಳು ಇರಲೇ ಇಲ್ಲ ಅಂತಲ್ಲ. ಬೇಜಾವಾಬ್ದಾರೀ ಅಪ್ಪ, ಇಡೀ ಸಂಸಾರದ ಹೊಣೆಯನ್ನು ಹೆಗಲ ಮೇಲೆ ಹೊತ್ತ ಅಮ್ಮ, ಬೆನ್ನ ಹಿಂದೆ ಪುಟ್ಟ ತಮ್ಮ, ಮಾತಿನಿಂದಲೇ ತಿವಿಯುವ ಸಂಬಂಧಿಕರು, ಅವಳ ಹಾಡನ್ನೂ, ಕವಿತೆಯನ್ನೂ ಅನುಮಾನದ ಕಣ್ಣಿಂದಲೇ ನೋಡುವ ಸಮಾಜ, ತನ್ನ ಬದುಕನ್ನು ಯಾರ ಹಂಗೂ ಇಲ್ಲದೆ ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ..”
“ಒಂಟಿ” ಅಲೆಮಾರಿ ರಾಬಿನ್ ಡೇವಿಡ್ಸನ್: ವಿನತೆ ಶರ್ಮಾ ಅಂಕಣ
ತನ್ನ ಪಯಣದಲ್ಲಿ ನೆಲದ, ಮಣ್ಣಿನ ಜೊತೆ, ತನ್ನ ಸುತ್ತಲೂ ಇದ್ದ ‘ಎಲ್ಲದರ’ ಜೊತೆ ತಾನು ಒಂದಾಗಿ ನಾನು ಎನ್ನುವುದನ್ನ ಮರೆತು ಪ್ರಕೃತಿಯ ಸೌಂದರ್ಯವನ್ನು ಎಲ್ಲಾ ರೂಪಗಳಲ್ಲೂ ನೋಡುತ್ತಾ ಲೀನವಾಗಿ, ಬೆರೆತುಹೋಗುವ ಕ್ಷಣಗಳು ಅವರನ್ನು ಇನ್ನಷ್ಟು ಮತ್ತಷ್ಟು ಬಹಳಷ್ಟು ಪ್ರಭಾವಿಸಿತು.”









