ನನ್ನೊಳಗಿನ ಜ್ವಾಲೆಗಳು

ನನ್ನೊಳಗೆ ಸದಾ ಉರಿಯುವ ಬೆಂಕಿಯಿಂದಾದ ಜ್ವಾಲೆಗಳು
ಬೇರೆ ಎಲ್ಲರನ್ನೂ ಬೆಚ್ಚಗಿಡಲು ಸಹಾ,
ನನ್ನ ಸನಿಹದ ಜ್ವಾಲೆಗಳ ಅರಿವಿಲ್ಲದೆ
ಎಲ್ಲೆಡೆ ಅರಸಿದೆ ಒಂದು ಅಪ್ಪುಗೆಗಾಗಿ

ಅರಿವಾಯಿತು ಒಂದು ದಿನ, ನಿಚ್ಚಳವಾಗಿ
ನನ್ನೊಳಗಿನ ಬೆಂಕಿಗೊಂದು ಬೆಳಕಿದೆ
ಎಲ್ಲರನ್ನೂ ಬೆಚ್ಚಗಿಡುವ ಜೊತೆಗೆ, ಬೆಳಕೂ ಆಗುತ್ತದೆ

ಎಲ್ಲರ ಹಾದಿ ಬೆಳಗುವ ಸನ್ನಾಹದಲಿ
ಜ್ವಾಲೆಗಳಿಗೆ ಉಸಿರಾಗುವ ನನ್ನ ನಂಬಿಕೆಗಳನ್ನು ಮರೆತೇಬಿಟ್ಟಿದ್ದೆ
ನಂಬಿಕೆಗಳೇ ಬೆಂಕಿಗೆ ಇಂಧನ
ನಂಬಿಕೆ ಗಟ್ಟಿ ಆದಷ್ಟೂ ಜ್ವಾಲೆ ಎತ್ತರಕ್ಕೆ ಹಾರುತ್ತವೆ

ಬೆಂಕಿ ಆರ್ಭಟಿಸಿತು, ಹೊಳಪಾಗಿ ಉರಿಯುತ್ತ
ಅಪ್ಪಿಕೊಳ್ಳುತ್ತ ನನ್ನ ಹತಾಶೆಗಳೆಲ್ಲವ
ನನ್ನ ಆಸೆಗಳ ಮರೆಸದೆ
ನಾನು ಎತ್ತರಕೆ ನಿಂತೆ ನನ್ನ ಆತ್ಮವ
ಹೊರಹೊಮ್ಮಲು ಬಿಟ್ಟು

ಒಳಗುರಿವ ಬೆಂಕಿ ಒಂದು ಸತ್ಯ
ನನ್ನ ಬಲದ ಮೂಲ
ಎಲ್ಲರ ಬೆಚ್ಚಗಿಡಲು ಮುಂದುವರೆಸಿದಂತೆ
ಜ್ವಾಲೆಗಳು ಎತ್ತರಕ್ಕೇರಿದವು

ಈಗಷ್ಟೇ ಅರಿವಾದ ಈ ಸತ್ಯದಿಂದ
ಬೆಂಕಿಯ ಮೂಲವ ಕೆದಕಿದ್ದೆ
ನನ್ನ ಕನಸು ಮತ್ತು ಬಯಕೆಗಳ ವಿಜೃಂಭಿಸಿ,
ಅದೇ ಬೆಚ್ಚಗಿನ ಸ್ಪರ್ಶ ಹಲವಾರು ಹೃದಯಗಳ ತಲಪಿರುವುದರ ಕಂಡು
ನನ್ನ ಆತ್ಮವ ನಾನೆ ಅಪ್ಪಿಕೊಂಡೆ
ನನ್ನ ಪಯಣಕ್ಕೆ ಕಿಡಿಯೊಂದನ್ನು ಹೊತ್ತಿಸುತ್ತಾ


ಎಂ.ವಿ. ಶಶಿಭೂಷಣ ರಾಜು, ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ

ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ ವಾಸಿ.
ಮೌನದ ಮೊರೆಹೊಕ್ಕಾಗ(ಕವನ ಸಂಕಲನ), ಐ ಸೀ ಯು  ಗಾಡ್, ಲೈಫ್, ಅಂಡ್ ಡೆತ್  (ಕವನ ಸಂಕಲನ), “ಇಮಿಗ್ರೇಷನ್ ದಿ ಪೈನ್ (ನಾಟಕ) ಪ್ರಕಟಿತ ಕೃತಿಗಳು.
“ಲಾಸ್ಟ್ ಲೈಫ್” ಕಥನ ಕವನ ಮತ್ತು “ದ್ವಂದ್ವ” ಕವನ ಸಂಕಲನ ಅಚ್ಚಿನಲ್ಲಿವೆ