Advertisement

ಪುಸ್ತಕ ಸಂಪಿಗೆ

ಚಂದ್ರಶೇಖರ ಕಂಬಾರರ ಕಾವ್ಯಲೋಕ

ಚಂದ್ರಶೇಖರ ಕಂಬಾರರ ಕಾವ್ಯಲೋಕ

ಜಗತ್ತಿನ ಬದಲಾಗಿ ಸಿಕ್ಕ ಭಾಷೆ-ಕಂಬಾರರ ಮಟ್ಟಿಗೆ ಹೇಳುವದಾದರೆ ಅವರಿಗೆ ದೊರೆತ ಜಾನಪದ ಕತೆ, ಕಾವ್ಯ, ಪುರಾಣಗಳು-ಅನೇಕ ಸಂಭಾವ್ಯತೆಗಳಿಂದ ಕೂಡಿರುತ್ತದೆ. ‘ಹೇಳತೇನ ಕೇಳ’ ಕವಿತೆಯ ಶಿವಾಪುರದಲ್ಲಿ ಹಳೆಯ ಗೌಡ ಗೌಡತಿಯರ ಆಳಿಕೆ ಮುಗಿಯುವಂತಾಗಿ ಹೊಸ ಜೀವನ ವ್ಯವಸ್ಥೆ ತಲೆಯೆತ್ತುತ್ತದೆ. ಹೊರಗಿನಿಂದ ಬಂದ ರಾಕ್ಷಸ ಗೌಡನನ್ನು ಕೊಂದು ತಾನೇ ಗೌಡನಾಗಿ ಊರಿನೊಳಗೆ ತಿರುಗಿ ಬರುತ್ತಾನೆ. ದೂರ ದೂರದವರೆಗೆ ಬೇರು ಬಿಳಲುಗಳನ್ನು ಚಾಚಿದ್ದ ಮರವನ್ನು ಕಡಿದು ಅದರ ಸ್ಥಳದಲ್ಲಿ ಹೊಸ ಶಾಲೆಯನ್ನು ಕಟ್ಟಿಸುತ್ತಾನೆ.
ಕೀರ್ತಿನಾಥ ಕುರ್ತಕೋಟಿಯವರು ಬರೆದಿದ್ದ “ಕಂಬಾರರ ಕಾವ್ಯ ಮತ್ತು ನಾಟಕಗಳು” ವಿಮರ್ಶಾ ಸಂಕಲನ ನಾಳೆ ಬಿಡುಗಡೆಯಾಗಲಿದ್ದು ಆ ಕೃತಿಯ ಒಂದು ಲೇಖನ ನಿಮ್ಮ ಓದಿಗೆ

read more
ಮಕ್ಕಳಾಟವನ್ನು ಭಗವಂತ ಕೂಡ ಆಡಲಾರನು

ಮಕ್ಕಳಾಟವನ್ನು ಭಗವಂತ ಕೂಡ ಆಡಲಾರನು

ಬೆಕ್ಕಿನ ಮರಿ, ಗುಬ್ಬಿಯ ಧ್ವನಿ, ಮ್ಯಾಚಿಂಗ್ ರಿಬ್ಬನ್ ಎಂಬೆಲ್ಲಾ ಬಣ್ಣದ ಲೋಕದೊಂದಿಗೆ ಬದುಕಿನ ಸತ್ಯವನ್ನು ಪರಿಚಯಿಸುವ ಸರಳ ಕವಿತೆಗಳನ್ನು ಬರೆದಿರುವ ಕೆ.ವಿ. ತಿರುಮಲೇಶ್ ಅವರು ಮಕ್ಕಳ ಮನೋಲೋಕದೊಳಗೆ ಸದ್ದಿಲ್ಲದೆ ಹೆಜ್ಜೆಯಿರಿಸಿದ್ದಾರೆ.
“ಚಿಕ್ಕಣಿ ರಾಜ” ಎಂಬ ಬಣ್ಣದ ಚಿತ್ರಗಳಿರುವ ಸುಂದರ ಕವಿತಾ ಸಂಕಲನದ ಅನನ್ಯತೆಯ ಕುರಿತು ಸುಮವೀಣಾ ಅವರು ಬರೆದ ಟಿಪ್ಪಣಿ ಇಲ್ಲಿದೆ.

read more
ಕನ್ನಡಿಯ ಮುಂದೆ ಆವರಣ ಕಳಚಿಕೊಳ್ಳುತ್ತ…..

ಕನ್ನಡಿಯ ಮುಂದೆ ಆವರಣ ಕಳಚಿಕೊಳ್ಳುತ್ತ…..

ಸೈದ್ಧಾಂತಿಕ ಹಠಮಾರಿತನವು ಚೌಕಟ್ಟುಗಳನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನಾಚೆ ಯೋಚಿಸುವ ಸಹನೆಯನ್ನೇ ಅದು ಕಳೆದುಕೊಳ್ಳುತ್ತದೆ. ತನ್ನ ಚೌಕಟ್ಟಿಗೆ ಒಗ್ಗದವರನ್ನು ಅದು ‘ಅನ್ಯ’ವಾಗಿಸುತ್ತ ಆ ‘ಅನ್ಯ’ವನ್ನು ದ್ವೇಷಿಸುತ್ತ ನಡೆಯುತ್ತದೆ. ಬಲಪಂಥ, ಎಡಪಂಥಗಳೆಂಬ ಚೌಕಟ್ಟುಗಳೂ ಹಾಗೆಯೇ ಕಾಣಿಸುತ್ತಿವೆ. ಅನೇಕರು ಬರಹಗಾರರನ್ನು ನಿರ್ದೇಶಿಸುವ ಪರಿ ಹೇಗಿದೆಯೆಂದರೆ, “ನೀವು ಆ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ, ಈ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ. ಸರಿಯಾಗಿ ನೀವದಕ್ಕೆ ಫಿಟ್ ಆಗದಿದ್ದರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ. ಚೌಕಟ್ಟಿಗೆ ತಕ್ಕಂತೆ ಮುದುರಿಕೊಳ್ಳಿ. ಆದರೆ ಚೌಕಟ್ಟು ಮಾತ್ರ ಅಲುಗಾಡಬಾರದು!” ಮನುಷ್ಯರಿಗಿಂತ ಚೌಕಟ್ಟುಗಳೇ ಮುಖ್ಯವಾಗುವ ವಿಪರ್ಯಾಸವಿದು.
ಇಂದು ಬಿಡುಗಡೆಯಾಗಲಿರುವ ಡಾ. ಗೀತಾ ವಸಂತ ಅವರ “ಅವಳ ಅರಿವು” ಅಂಕಣ ಬರಹಗಳ ಸಂಕಲನದ ಒಂದು ಲೇಖನ ನಿಮ್ಮ ಓದಿಗೆ

read more
ಇದು ಆಗುವುದೂ ಇಲ್ಲ, ಹೋಗುವುದೂ ಅಲ್ಲ…

ಇದು ಆಗುವುದೂ ಇಲ್ಲ, ಹೋಗುವುದೂ ಅಲ್ಲ…

ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಮೇರಿಯ ಮನೆಗೆ ಹೋಗಿದ್ದ.
ಡಾ. ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

read more
ಮೋಹಕ ಚಿತ್ರಕ ಶಕ್ತಿಯ ʻಪರವಶʼದ ಕತೆಗಳು

ಮೋಹಕ ಚಿತ್ರಕ ಶಕ್ತಿಯ ʻಪರವಶʼದ ಕತೆಗಳು

ಕುಮಾರ ಬೇಂದ್ರೆ ಅವರ ಕತೆಗಳ ವಿಶೇಷತೆ ಎಂದರೆ ಬಹಳ ಸುಲಭವಾಗಿ ಓದಿಸಿಕೊಳ್ಳುವಂತಹ ಗುಣ. ಓದುಗನಿಗೆ ಸಂವಹನದ ದೃಷ್ಟಿಯಿಂದ ಹೆಚ್ಚು ಸರಾಗವಾಗಿ, ಹೆಚ್ಚು ತೊಂದರೆ ಕೊಡದೇ ಓದಿಸಿಕೊಳ್ಳುವ ಗುಣ ಅವರ ಎಲ್ಲ ಕತೆಗಳಲ್ಲೂ ಇದೆ. ಇದನ್ನು ಒಂದು ಗುಣ ಎಂದೇ ಹೇಳಲು ನಾನು ಬಯಸುತ್ತೇನೆ. ಯಾಕೆಂದರೆ ಸರಳತೆ ಎನ್ನುವಂಥದ್ದು ಸುಲಭವಲ್ಲ, ಅದನ್ನು ಎಟಕಿಸಿಕೊಳ್ಳುವುದೂ ಕೂಡ ಸುಲಭವಲ್ಲ. ಸರಳವಾಗಿ ಬರೆಯುವುದು ಮತ್ತು ಸರಳವಾಗಿ ಸಂವಹನ ಮಾಡುವುದು ಯಾವಾಗಲೂ ಒಂದು ಸವಾಲು.
ಕುಮಾರ ಬೇಂದ್ರೆಯವರ “ಪರವಶ” ಕಥಾಸಂಕಲನದ ಕುರಿತು ರಘುನಾಥ ಚ.ಹ. ಅವರ ಮಾತುಗಳು

read more
ದಾರಿಯೂ ಬೆಳಕೂ ಆಗುವ ಕಾವ್ಯಧ್ಯಾನ

ದಾರಿಯೂ ಬೆಳಕೂ ಆಗುವ ಕಾವ್ಯಧ್ಯಾನ

ಹೊರಗಿನ ಮಾತುಗಳಿಗಿಂತ ಒಳಗಿನ ಅರಳುವಿಕೆ ಕವಿಗೆ ಮಹತ್ವದದ್ದೆನಿಸಿದೆ. ಆತ್ಮದ ಅರಳುವಿಕೆಯಲ್ಲಿ ಹಿಗ್ಗುತ್ತಿರುವ ವಿಕಾಸ ಭಾವವೊಂದು ಹೊರಲೋಕದ ಸುಳ್ಳುಸುಳ್ಳೇ ಚಹರೆಗಳನ್ನು ನೋಡಿ ವಿಹ್ವಲಗೊಳ್ಳುತ್ತದೆ. ಇಂದು ಜೊಳ್ಳುಗಳೇ ವಿಜೃಂಭಿಸುತ್ತಿರುವ ಕಾಲ. ವಿಚಾರ, ದರ್ಶನ, ಭಾವ ಬದುಕು ಎಲ್ಲವೂ ಜೊಳ್ಳು ಮಾದರಿಗಳ ಹಿಂದೆಬಿದ್ದಿದೆ. ಸ್ವರೂಪ ಮರೆಯಾಗಿ ನಾಮಫಲಕಗಳೇ ವಿಜೃಂಭಿಸುವುದು ನಮ್ಮ ಬದುಕಿನ ಅಂತಃಸತ್ವವೇ ತೀರಿಹೋಗಿರುವ ವ್ಯಂಗ್ಯವನ್ನು ಸೂಚಿಸುತ್ತದೆ. ಇಂಥ ಚಿತ್ರಗಳ ಮೂಲಕ ತಮ್ಮ ಹುಡುಕಾಟದ ನೆಲೆ ಏನೆಂಬುದನ್ನು ಅವರ ಕಾವ್ಯವು ನಮಗೆ ಕಾಣಿಸುತ್ತಿದೆ.
ಅಶೋಕ ಹೊಸಮನಿ ಕವನ ಸಂಕಲನ “ಹರವಿದಷ್ಟು ರೆಕ್ಕೆಗಳು” ಕೃತಿಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ

read more
ಕವಿತೆಯೂ ಉಪ್ಪು ನೀರಲ್ಲಿ ಹಾಕಿದ ಮಾವಿನ ಮಿಡಿ ಹೃದಯ

ಕವಿತೆಯೂ ಉಪ್ಪು ನೀರಲ್ಲಿ ಹಾಕಿದ ಮಾವಿನ ಮಿಡಿ ಹೃದಯ

ಸದ್ಯ ಬಹಳ ದಿನಗಳಿಂದ ನನ್ನ ಅಂತರಂಗಕ್ಕೆ ಸುರಿದುಕೊಂಡ ಕವಿತಾ ಅವರ ಕವಿತೆಗಳು ಕೊಟ್ಟ ಸಂವೇದನೆಗಳಿಗೆ ಇಲ್ಲಿ ಶಬ್ದ ರೂಪ ಕೊಡಲು ಕೂತಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದ ಕೇವಲ ಕವಿತೆಗಳನ್ನೆ ನಚ್ಚಿಕೊಂಡು ಕೂತ ನನಗೆ ಚೆನ್ನಾಗಿ ಬರೆವ ಹೊಸಬರ ಪದ್ಯಗಳು ಅವು ಪಠ್ಯವಾಗೇ ಕಾಣಿಸುತ್ತದೆ. ಗೋಚರಿಸದ ಲೋಕವೊಂದು ನನಗೆ ನೀಡಬಹುದಾದ ಅಸೀಮ ಅನುಭವಗಳಿಗೆ ಕಾಯುತ್ತಲೇ ಓದುತ್ತೇನೆ. ಕವಿತಾ ಹೆಗಡೆ ಅವರ ಇಲ್ಲಿನ ರಚನೆಗಳು ನನಗೆ ಹೊಸ ಪಠ್ಯವಾಗೇ ಅನುಭವಕ್ಕೆ ಬಂದವು.
ಕವಿತಾ ಹೆಗಡೆ ಅಭಯಂ ಅವರ “ಮಂಜಿನ ಮನೆ ಹೊಕ್ಕ ಮನ” ಕವನ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

read more
ಕಡಲು ನೋಡಲು ಹೋದವಳ ನವಿರು ಭಾವಗಳು

ಕಡಲು ನೋಡಲು ಹೋದವಳ ನವಿರು ಭಾವಗಳು

ಮರುದಿನ ಬೆಳಗಾದರೂ ಆ ಚೀತ್ಕಾರ ನನ್ನ ಕಿವಿಯಲ್ಲಿ ಇನ್ನೂ‌ ಮೊರೆದಂತಾಗುತ್ತಿತ್ತು, ಜಿಎಸ್ಎಸ್ ಅವರ ಕಾಣದ ಕಡಲಿನಂತೆ. ಕಾಲು ಸಾವಕಾಶವಾಗಿ ಆ ರೂಮಿನತ್ತ ಚಲಿಸಿದವು. ಮೆಲ್ಲನೆ ಬಾಗಿಲು ಬಡಿದು ಒಳ ಸರಿದೆ. ಒಂದು ಬದಿಗೆ ಸರಿದು ಮಲಗಿದ್ದ ಅಜ್ಜಿ ಸದ್ದಿಗೆ ಬೆಚ್ಚಿ ಬಿದ್ದವರಂತೆ ತಿರುಗಲು ಪ್ರಯತ್ನಿಸಿದರು, ವಿಚಿತ್ರ ವಾಸನೆಗೆ ಹೊಟ್ಟೆ ತೊಳಸಿದಂತಾಯಿತು. ತುಂಬಾ ಕಷ್ಟದಿಂದ ವಾಂತಿಯಾಗದಂತೆ ತಡೆದುಕೊಂಡೆ. ಒಂದು ಅಪನಂಬಿಕೆಯ ಎಳೆಯನ್ನು ಮಾತಲ್ಲಿಟ್ಟುಕೊಂಡೇ ಅಜ್ಜಿ ಮೇಜಿನ‌ ಮೇಲಿದ್ದ ಮುಸಂಬಿ ಕಡೆ ಕೈ ತೋರಿಸಿ “ಅದರ ಸಿಪ್ಪೆ ಬಿಡಿಸಿ ಕೊಡುತ್ತೀಯಾ?” ಕೇಳಿದರು.
ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

read more
ಸ್ತ್ರೀ ಸಂವೇದನೆಯ ಸರಳ ನಿರೂಪಣೆ

ಸ್ತ್ರೀ ಸಂವೇದನೆಯ ಸರಳ ನಿರೂಪಣೆ

ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುರಾಣಪ್ರಿಯರಾದವರಿಗೆ “ಗಾಂಧಾರಿ “ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ “ಮಿಂಚದ ಮಿಂಚು ” ಮೂಡಿ ಬಂದಿದೆ. ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ. ದಿವ್ಯಾಶ್ರೀಧರ್  ರಾವ್ ಅವರ ಹೊಸ ಕಿರುಕಾದಂಬರಿಗೆ ಜಗದೀಶ್ ಶೆಟ್ಟಿ ಬರೆದ ಮುನ್ನುಡಿ ಇಲ್ಲಿದೆ.

read more

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ