“ಹಳೆಯ ಪುಟಗಳಿಂದ…” ಸರಣಿಯಲ್ಲಿ ರಹಮತ್ ತರೀಕೆರೆ ಬರಹ
ಆದರೆ ಆ ಕುಣಿತದಲ್ಲಿ ದಲಿತ ತರುಣರು ಭಾಗವಹಿಸಿರಲಿಲ್ಲ. ಕುಣಿಯುವಾಗ ಮೈಕೈ ತಾಗುತ್ತದೆಯೆಂದೇ? ಇಡೀ ಊರು ಒಟ್ಟಾಗಿ ಸಂಭ್ರಮದಿಂದ ಹಬ್ಬ ಆಚರಿಸುತ್ತದೆ ಎಂಬುದು ಅರೆಸತ್ಯವಲ್ಲವೆ? ಊರ ಹೋಟೆಲು, ಗುಡಿಗಳಲ್ಲಿ ಇರುವಂತೆ ಮೊಹರಂ ಮಸೂತಿಯಲ್ಲೂ ಅವರಿಗೆ ಒಳಗಿನತನಕ ಪ್ರವೇಶವಿರಲಿಲ್ಲ. ಒಂದು ಅಂತರದಲ್ಲಿ ನಿಂತು ಎಡೆ ಮಾಡಿಸಿಕೊಂಡು ಹೋಗುತಿದ್ದರು. ಹಿಂದೆ ದಲಿತರು ಹೋಟೆಲುಗಳಲ್ಲಿ ತಮಗೂ ಸರಿಸಮವಾಗಿ ಚಹ ತಿಂಡಿ ಕೊಡಬೇಕೆಂದು ಒತ್ತಾಯಿಸಿದ್ದರು. ಅದು ಸಾಧ್ಯವಾಗಿರಲಿಲ್ಲ. ನಮಗೆ ಸಮಾನತೆ ಇಲ್ಲದಿದ್ದರೆ, ನಾವು ತಮಟೆ ಬಾರಿಸುವುದಿಲ್ಲ ಎಂದು ಅವರು ನಿರಾಕರಿಸಿದ್ದರಿಂದ, ಬಳ್ಳಾರಿ ಜಿಲ್ಲೆಯ ಮೂವತ್ತಕ್ಕೂ ಹೆಚ್ಚಿನ ಊರುಗಳಲ್ಲಿ ಮೊಹರಂ ಸಂಭ್ರಮ ಕಡಿಮೆಯಾಗಿದೆ.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ರಹಮತ್ ತರೀಕೆರೆ ಬರಹ
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಬರಹ
ಮೊದಲಿಗೆ ಬ್ರಿಟಿಷ್ ರಾಜನ ಚಿತ್ರದ ಜಾಗದಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಹಾಕಬೇಕೆಂದು ಯೋಜನೆ ತಯಾರಿಸಿದರೂ ಹಾಕಿದ್ದು ಅಶೋಕನ ಸಿಂಹಗಳನ್ನು! ಆ ನಂತರ ತಂಜಾವೂರಿನ ದೇವಸ್ಥಾನದ ಚಿತ್ರದ ಸಾವಿರ ರೂಪಾಯಿನ ನೋಟು, ಗೇಟ್‍ವೇ ಚಿತ್ರವಿದ್ದ ಐದು ಸಾವಿರ ರೂಪಾಯಿನ ನೋಟನ್ನು ಛಾಪಿಸಲಾಯಿತು. ಮಹಾತ್ಮಾ ಗಾಂಧಿಯ ಚಿತ್ರ ಹಾಕಿ ನೋಟುಗಳನ್ನು ಮೊದಲ ಬಾರಿಗೆ ಛಾಪಿಸಿದಾಗ ಅನೇಕರು ಅದನ್ನು ನಿಜವಾದ ರೂಪಾಯಿಗಳೆಂದು ಒಪ್ಪಲಿಲ್ಲವಂತೆ! ಅದು ನಿಜಕ್ಕೂ ಜಾಲಿ ನೋಟಲ್ಲ ಎನ್ನುವ ಪ್ರಚಾರವನ್ನು ಸರಕಾರ ಕೈಗೊಳ್ಳಬೇಕಾಯಿತು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಬರಹ
ರಿಯಾಜು ಮಾಡದ ಭಾಷೆ ಮೊಂಡಾಗುತ್ತದೆ: ಡಾ. ಲಕ್ಷ್ಮಣ ವಿ ಎ ಬರಹ
ಅತಿಯಾದ ಓದು ಕೆಲವೊಮ್ಮೆ ಸೃಜನಶೀಲತೆಗೆ ಮಾರಕವಾಗಬಹುದು ಎಂಬ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ನಿರಂತರವಾಗಿ ಇತರರ ಧ್ವನಿಗಳನ್ನು ಮಾತ್ರ ಕೇಳುತ್ತಾ ಹೋದರೆ, ನಮ್ಮ ಒಳಧ್ವನಿ ನಿಧಾನವಾಗಿ ಮೌನವಾಗಬಹುದು. ಅತಿಯಾಗಿ ಓದುವ ಕೆಲ ಲೇಖಕರು ಒಂದು ಹಂತದ ನಂತರ ತಮ್ಮದೇ ಭಾಷೆಯನ್ನು ಕಳೆದುಕೊಳ್ಳುತ್ತಾರೆ. ಅವರ ವಾಕ್ಯಗಳಲ್ಲಿ ತಮ್ಮ ಉಸಿರಿಗಿಂತ ಇತರರ ನೆರಳು ಹೆಚ್ಚು ಕಾಣುತ್ತದೆ. ಅವರು ಬರೆಯುವುದಿಲ್ಲ — ಓದಿದವರ ಪ್ರತಿಧ್ವನಿಯನ್ನು ಮರುಸೃಷ್ಟಿಸುತ್ತಾರೆ. ಆದರೆ ಓದದೇ ಇರುವ ಲೇಖಕನ ಸ್ಥಿತಿಯೂ ಅಪಾಯಕರವೇ. ಓದಿಲ್ಲದ ಬರಹ ಹಲವೊಮ್ಮೆ ಆಳವಿಲ್ಲದ ಭಾವೋದ್ರೇಕವಾಗಿ ಉಳಿಯುತ್ತದೆ.
ಓದು-ಬರಹದ ಕುರಿತು ಡಾ. ಲಕ್ಷ್ಮಣ ವಿ.ಎ. ಬರಹ ನಿಮ್ಮ ಓದಿಗೆ
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಬರಹ
ಯಾವುದೇ ಹೊಸ ರೀತಿಯಲ್ಲಿ ಹಣವನ್ನು ಚಲಾವಣೆ ಮಾಡಬೇಕಾದರೆ – ಜನರಿಗೆ ಅಭ್ಯಾಸವಾಗುವವರೆಗೂ ಹಳೆಯದರ ನಂಟನ್ನು ಮುಂದುವರೆಸಬೇಕು. ಹೀಗಾಗಿ ಹೈದರಾಲಿ ಟಂಕಿಸಿದ ನಾಣ್ಯಗಳಲ್ಲಿ ವಿಜಯನಗರ, ಮೈಸೂರು ಸಂಸ್ಥಾನದವರು ಉಪಯೋಗಿಸುತ್ತಿದ್ದ ಶಿವ-ಪಾರ್ವತಿಯರ ಚಿತ್ರ ಒಂದು ಬದಿಗೆ, ತನ್ನ ಹೆಸರು ಇನ್ನೂಂದು ಬದಿಗೆ ಬರುವಂತೆ ಟಂಕಿಸಿದ್ದ. ಟಿಪ್ಪುವಿನ ನಾಣ್ಯಗಳಲ್ಲಿ ಕನ್ನಡವಿರಲಿಲ್ಲ!
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಂ.ಎಸ್. ಶ್ರೀರಾಮ್ ಬರಹ ನಿಮ್ಮ ಓದಿಗೆ
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಪೆಜತ್ತಾಯರ ಆತ್ಮಕತೆಯ ಪುಟ
ಅವರು ತೋಟಗಳಲ್ಲಿ ಕೆಲಸ ಮಾಡಿದ ದಿನಗಳ ಕಥೆಗಳನ್ನು ನನಗೆ ಹೇಳುತ್ತಿದ್ದರು. ಆ ದಿನಗಳ ಹುಲಿ ಶಿಖಾರಿಯ ಕಥೆಗಳನ್ನು ನನಗೆ ವರ್ಣಿಸಿ ಹೇಳುವರು. ಅವರು ಘಟ್ಟದ ಜ್ವರ ಎಂಬ `ಮಲೇರಿಯಾ’ ಜ್ವರದಿಂದ ಪಟ್ಟ ಪಾಡು ವಿವರಿಸಿ ಹೇಳುತ್ತಿದ್ದರು. ಸದಾ ಮಳೆ, ಮಂಜು ಮತ್ತು ಮೋಡಗಳಿಂದ ಆವೃತ್ತವಾದ ಕಾಡುಗಳ ಮಧ್ಯೆ ಸಾಗಿದ ಅವರ ಜೀವನದ ಬಗ್ಗೆಯೇ ಅವರ ಮಾತುಗಳು ಸಾಗುತ್ತಿದ್ದುವು. ಅವರು ತಮ್ಮ ಜೀವನದಲ್ಲಿ ನೆಟ್ಟು ಆರೈಕೆ ಮಾಡಿದ ಆ ಲಕ್ಷಾಂತರ ಕಾಫಿ ಗಿಡಗಳ ಕಥೆ ಮತ್ತು ಅವರು ತಮ್ಮ ಕೆಲಸದಲ್ಲಿ ಕಂಡ `ಜೀವನದ ಸಾರ್ಥಕ್ಯ’ ಇವುಗಳ ಬಗೆಗಿನ ವಿವರಣೆಗಳಲ್ಲೇ ನಮ್ಮ ಹೆಚ್ಚಿನ ಭಾನುವಾರಗಳ ಮುಂಜಾನೆಗಳು ಕಳೆಯುತ್ತಿದ್ದುವು.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಸ್.ಎಂ. ಪೆಜತ್ತಾಯರ ಬರಹ ನಿಮ್ಮ ಓದಿಗೆ
ಭವದ ಮೆರವಣಿಗೆಯಲ್ಲಿ ಭಕ್ತಿ ಮತ್ತು ಭಜನೆ: ದೇವಿಕಾ ನಾಗೇಶ್ ಬರಹ
ಭಕ್ತಿ ಪಂಥವು ಸೇವೆಯ ಉದ್ದೇಶಕ್ಕಾಗಿ ದೇವಸ್ಥಾನ, ಗುರು ಶಾಲೆ ಅಥವಾ ಸಮುದಾಯಭವನಗಳಿವೆ ಎಂದು ತಿಳಿದಿತ್ತು. ಭಾರತದಲ್ಲಿ ದೇವಾಲಯ, ಮಠ, ಮಂದಿರಗಳು, ಚರ್ಚ್, ಮಸೀದಿಗಳು ನೈಸರ್ಗಿಕ ವಿಕೋಪದ ನಂತರ ಸಂತ್ರಸ್ತರಿಗೆ ಪರಿಹಾರ, ಬಡ ಮತ್ತು ಕನಿಷ್ಠ ರೈತರಿಗೆ ಸಹಾಯ ಮಾಡುವುದು, ಬಡವರಿಗೆ ಮನೆಗಳನ್ನು ನೀಡುವುದು, ಬಡ ಮಕ್ಕಳಿಗೆ ಉಚಿತ ಹಾಸ್ಟೆಲ್… ಇತ್ಯಾದಿ ಸೇವಾ ಕೈಂಕರ್ಯ ಕ್ಕೆ ತೊಡಗಿಕೊಳ್ಳುವುದು ಇವತ್ತಿಗೂ ಮಾಡುತ್ತಿದೆ.
ಭಕ್ತಿ ಚಳವಳಿಯ ಕುರಿತು ದೇವಿಕಾ ನಾಗೇಶ್ ಬರಹ ನಿಮ್ಮ ಓದಿಗೆ
ಕಾರಣ ಕೇಳಿ ನೋಟಿಸ್: ವಿನಾಯಕ ಎಸ್. ನಾಯಕ ಬರಹ
ಪತ್ರ ಓದುತ್ತಿದ್ದಂತೆ ಪಾಪ ಆ ಮಹಿಳೆ ಕಛೇರಿಯಲ್ಲೆ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಿಸಲಾಯಿತಂತೆ. ಆ ಮಹಿಳೆಗೆ ಮೂರು ದಿನಗಳ ಕಾಲ ಬಿ.ಪಿ,ಶುಗರೆಲ್ಲಾ ಜಾಸ್ತಿಯಾಗಿ ಹೇಗೋ ವೈದ್ಯರ ಆರೈಕೆಯಲ್ಲಿ ದೇಹಸ್ಥಿತಿ ಸುಧಾರಿಸಿ ಐದು ದಿನದ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕಳುಹಿಸಲಾಯಿತಂತೆ. ಆದರೆ ನಂತರ ನಡೆದದ್ದೆ ಬೇರೆ ಬಿ.ಜಯಂತ ಎಂಬ ಸಹಕಾರಿ ಸಂಘದ ನಿರ್ದೆಶಕನಿಗೆ ಕಳುಹಿಸುವ ಪತ್ರವನ್ನು ಬಿ.ಜಯಂತಿ ಹೆಸರಿಗೆ ಕಳುಹಿಸಿದ್ದೆ ಇಷ್ಟೆಲ್ಲ ಗಂಡಾಂತರಕ್ಕೆ ಕಾರಣವಾಯಿತೆಂದು ಆ ನಂತರ ತಿಳಿದು ಬಂದು ಬಿ.ಜಯಂತಿಗೆ ಜಯ ಸಿಕ್ಕಷ್ಟು ಸಮಾಧಾನವಾಯಿತೆಂದು ನನ್ನ ಸ್ನೇಹಿತ ಹೇಳಿದ್ದು ಈ ಕಾರಣಕೇಳಿ ನೋಟಿಸಿನ ಗಂಭೀರತೆಗೆ ಸಾಕ್ಷಿ.
ವಿನಾಯಕ ಎಸ್. ನಾಯಕ ಬರಹ ನಿಮ್ಮ ಬರಹ
ಅಪ್ಪನ ಅಂಗೈಯಲ್ಲಿ ತಿರುಗುವ ಚಕ್ರಗಳು…: ಲೈಲಾ ಪರ್ವೀನ್ ಬರಹ
ಬಾಬಾ ಎಲ್ಲಿಗೆ ಬೇಕಾದರೂ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದರು. ಅದು ಕಾಡಾಗಲಿ, ಸಣ್ಣ ಹಳುವಾಗಲಿ, ಗದ್ದೆ ಅಂಚಾಗಲಿ, ಕಲ್ಲುಗೊಜ್ಜಿನ ರಸ್ತೆಯಾಗಲಿ, ಯಾರ ಮನೆಯಂಗಳವೇ ಆಗಲಿ, ಯಾವ ರೀತಿಯ ಏರು ತಗ್ಗುಗಳಿರಲಿ, ಗುಂಡಿಗಳಿರಲಿ, ಬಂಡೆಕಲ್ಲೇ ಇರಲಿ ಎಲ್ಲದರ ಮೇಲೂ ಸೈಕಲ್ ಓಡಿಸುವ ಛಾತಿಯಿತ್ತು ಅವರಿಗೆ. ಹೇಳಿ ಕೇಳಿ ಸೈಕಲ್ಲುಗಳ ನಾಡಿಮಿಡಿತ ಬಲ್ಲ ವೈದ್ಯರಲ್ಲವೇ? ಸೈಕಲ್ಲು ಎಲ್ಲಿ ಹೇಗೆ ಹೋಗಬಲ್ಲುದು ಹಾಗೂ ಎಲ್ಲಿ ಹೋಗಲಾರದೆಂಬುದನ್ನು ಅವರಿಗಿಂತ ಚೆನ್ನಾಗಿ ಬಲ್ಲವರಿಲ್ಲ.
ತಮ್ಮ ತಂದೆಯವರ ಸೈಕಲ್ ಪ್ರೇಮದ ಕುರಿತು ಲೈಲಾ ಪರ್ವೀನ್ ಬರಹ ನಿಮ್ಮ ಓದಿಗೆ
ಮಿಸ್ಟರ್ ಇಡ್ಲಿಯ ಮನಸಿನ ಮಾತು… : ಗುರುರಾಜ ಕುಲಕರ್ಣಿ ಪ್ರಬಂಧ
ಒಂದು ಕಾಲ್ಪನಿಕ ಸಂದರ್ಭದಲ್ಲಿ ಜಗತ್ತಿನ ಎಲ್ಲರೂ ಅಳಿದು, ಒಬ್ಬನೇ ಮನುಷ್ಯನು ಉಳಿದನೆಂದು ಕಲ್ಪಿಸಿಕೊಳ್ಳಿ. ಅವನಿಗೆ ‘ಸರಳ ತಿನಿಸಾದ’ ಇಡ್ಲಿಯನ್ನು ತಯಾರಿಸಲು ಸಾಧ್ಯವಾಗುತ್ತದೆಯಾ? ಊಹೂಂ.. ಇಲ್ಲ. ಯಾಕೆಂದರೆ ನನ್ನ ತಯಾರಿಕೆಯ ಪೂರ್ಣ ಚಿತ್ರಣ ಒಬ್ಬನಿಗೂ ಪೂರ್ತಿಯಾಗಿ ತಿಳಿದಿಲ್ಲ. ಎಲ್ಲರಿಗೂ ತಮ್ಮ ಭಾಗ ಮಾತ್ರ ಗೊತ್ತು.. ರೈತನಿಗೆ ಇಡ್ಲಿ ತಟ್ಟೆಯ ತಯಾರಿಕೆ ತಿಳಿದಿಲ್ಲ, ಗಣಿಗಾರನಿಗೆ ಸಾಂಬಾರಿನ ಮಸಾಲೆಯ ಕತೆ ಗೊತ್ತಿಲ್ಲ, ಇಂಧನ ಒದಗಿಸಿದವನಿಗೆ ಹುಳಿಯಾಗುವಿಕೆಯ ವಿಜ್ಞಾನ ತಿಳಿದಿಲ್ಲ. ಕೆಲವರಿಗೆ ಇಡ್ಲಿಯೆಂದರೆ ಏನೆಂದೇ ಗೊತ್ತಿಲ್ಲ! ಈ ಜನರು ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಾರೆ, ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ, ವಿಭಿನ್ನ ಧರ್ಮಗಳನ್ನು ಪಾಲಿಸುತ್ತಾರೆ.
ಗುರುರಾಜ್ ಕೆ. ಕುಲಕರ್ಣಿ ಪ್ರಬಂಧ ನಿಮ್ಮ ಓದಿಗೆ









