ಟೊಟೊ ಪುರಸ್ಕಾರ: ಅರ್ಜಿ ಸಲ್ಲಿಸಲು ಗಡುವು ವಿಸ್ತರಣೆ
ಸೃಜನಶೀಲ ಯುವ ಬರಹಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಆರಂಭಿಸಲಾದ ಟೊಟೊ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ನಿಯಮಗಳನ್ನು ಹಾಗೂ ಷರತ್ತುಗಳನ್ನು ಇಲ್ಲಿ ನೀಡಲಾಗಿದೆ. ಪ್ರವೇಶಗಳನ್ನು ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದಲ್ಲಿಯಾದರೂ ಕಳಿಸಬಹುದು.
ಉಸಿರು ನೀಡುವ ಗಣಪ ಮನೆಗೆ ಬರಲಿ
ಬಣ್ಣದ ಗಣೇಶ ಮೂರ್ತಿಯ ಆರಾಧನೆಯ ಪರಿಕಲ್ಪನೆಯಲ್ಲಿರುವ ತೊಡಕುಗಳು ಜನರ ಅರಿವಿಗೆ ಬರುತ್ತಿರುವಾಗ ಸಾವಯವ ಮೂರ್ತಿಗಳ ಕಡೆಗೆ ಜನರ ಒಲವು ಹೆಚ್ಚುತ್ತಿವೆ. ಹೀಗೆ ಆರಾಧಿಸುವ ಗಣೇಶ ಮೂರ್ತಿಗಳಲ್ಲಿ ಗಿಡಗಳ ಬೀಜಗಳನ್ನು ಇರಿಸಿದರೆ, ಹಬ್ಬ ಮುಗಿದು ನವರಾತ್ರಿಯನ್ನು ಎದುರು ನೋಡುವಾಗ, ಇತ್ತ ಅಂಗಳದಲ್ಲಿ ಗಿಡಗಳು ಹುಲುಸಾಗಿ ಬೆಳೆದಿರುತ್ತವೆ. -ಕೋಡಿಬೆಟ್ಟು ರಾಜಲಕ್ಷ್ಮಿ ಬರಹ ನಿಮ್ಮ ಓದಿಗಾಗಿ.
ಗಾಂಡಲೀನಳ ನೆಪದಲ್ಲಿ ಲಂಕೇಶ್ ಬರೆದ ಮಾತುಗಳು
‘ಪಿತೂರಿ ಪ್ರಿಯರಾದ ಕೆಲವರು ನೀನು ನನ್ನ ಹಾಗೆ ಪದ್ಯ ಬರೆಯುತ್ತಿ, ನನ್ನನ್ನು ಅನುಸರಿಸುತ್ತಿ ಎಂದು ಒಮ್ಮೆ ದೂರು ಕೊಟ್ಟಿದ್ದರು. ನನ್ನ ಪದ್ಯ ಇನ್ನೊಮ್ಮೆ ಓದುವ ಆಶೆಯಿಂದ ನಿನ್ನದನ್ನು ಓದಿದರೆ, ಅದು ನನ್ನ ಪದ್ಯಕ್ಕಿಂತ ಚೆನ್ನಾಗಿತ್ತು. ಬೇರೆ ರೀತಿಯದಾಗಿತ್ತು’ – ಪಿ.ಲಂಕೇಶ್ ಅವರು ‘ಗೋಪಿ ಮತ್ತು ಗಾಂಡಲೀನ’ ಕವನಸಂಕಲನಕ್ಕೆ ಬರೆದ ‘ಪರಿಚಯ’ ಬರಹದ ಸಾಲುಗಳಿವು.”
ಗೌಜು ಗದ್ದಲಗಳ ಶ್ರುತಿ ಬದಲಾಗಿದೆ ನೋಡಿ
ಅಷ್ಟಮಿ ಹಬ್ಬವು ತಕ್ಕಮಟ್ಟಿಗಿನ ಸಂಭ್ರಮದಲ್ಲಿ ಮುಕ್ತಾಯವಾಗುತ್ತಲೇ ಮತ್ತೊಂದು ಹಬ್ಬವನ್ನು ಸ್ವಾಗತಿಸಲು ಜನರು ಸಜ್ಜಾಗುತ್ತಿದ್ದಾರೆ. ಜೊತೆಗೆ ಶಾಲೆಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿ ಚರ್ಚೆಗಳು ನಡೆಯುತ್ತಿವೆ. ಕೆಲವು ತರಗತಿಗಳು ಅದಾಗಲೇ ಆರಂಭವಾಗಿವೆ. ನಮಗೆ ಸಮಾರಂಭಗಳು ಮುಖ್ಯವೇ ಅಥವಾ ಶಾಲೆಗಳು ಆರಂಭವಾಗುವುದು ಮುಖ್ಯವೇ ಎಂಬುದು ಸರಳವಾದ ಪ್ರಶ್ನೆ.”
ಶರಣೆಯರ ವಚನಗಳಲ್ಲಿ ಸ್ವಾತಂತ್ರ್ಯದ ಹೊಳಹು
ಹನ್ನೆರಡನೆಯ ಶತಮಾನದಲ್ಲಿ ನಡೆದ ಚರ್ಚೆಗಳು ಇಂದಿಗೂ ಅನೇಕ ಸಂದರ್ಭಗಳಲ್ಲಿ ಉಲ್ಲೇಖವಾಗುತ್ತವೆ. ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಗೆ ಹೆಚ್ಚು ಜೀವ ತುಂಬಿದ ಸಂದರ್ಭ ಅದಾಗಿತ್ತು. ಜಾತಿಗಳ ನಡುವಿನ ಅಂತರವನ್ನು, ವರ್ಗಗಳ ನಡುವಿನ ಅಂತರವನ್ನು ತೊಡೆದು ಹಾಕಬೇಕೆಂಬ ಆಶಯವು ಉಜ್ವಲವಾಗಿದ್ದ ಆ ಕಾಲದಲ್ಲಿ ಸ್ತ್ರೀಯರ ಕುರಿತೂ ಇರುವ ನಿಲುವುಗಳು ಬದಲಾಗಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು.”
ಲೌಕಿಕದ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವ ಕಾವ್ಯಪ್ರೀತಿ
ಅದಮ್ಯವಾದ ಕಾಮ, ಅನಿವಾರ್ಯವಾದ ಸಾವು ಮತ್ತು ಬಾಳಿನ ನಿರರ್ಥಕತೆ ಇವು ನನ್ನ ಕಾವ್ಯಕ್ಕೆ ಪ್ರೇರಕ ಶಕ್ತಿಗಳು ಎಂದು ಹೇಳುವ ಬಿ.ಆರ್. ಲಕ್ಷ್ಮಣರಾಯರ ಕವನಗಳಲ್ಲಿ ಗೇಯಗುಣವು ಸಹಜವಾಗಿ ಒಲಿದು ಬಂದಿದೆ. ಅವರ ಸಾಲುಗಳಲ್ಲಿ ವೈನೋದಿಕ ಶಕ್ತಿಯೂ ಸೇರಿಕೊಂಡಿದೆ. ಅವರು ಆ ಕಾಲಕ್ಕೆ ಅತ್ಯಂತ ಆಧುನಿಕ ವಿಷಯಗಳನ್ನೇ ಬರೆದರೂ…”
ಕಣ್ಣೆದುರು ಸಾಯುತ್ತಿರುವ ದೇವರುಗಳು
ಮೊನ್ನೆ ಮೊನ್ನೆಯಷ್ಟೇ ದಷ್ಟ ಪುಷ್ಟವಾದ ರೆಂಬೆ ಕೊಂಬೆಗಳನ್ನು ಅಗಲಿಸಿ ಸಾವಿರಾರು ಹಕ್ಕಿಗಳ ಹಕ್ಕಿನ ಮನೆಯಾಗಿದ್ದ ಆಲದ ಮರ, ಹುಣಸೆ ಮರ, ಹೊಸದಾಗಿ ನಿರ್ಮಾಣವಾದ ದೇಗುಲದ ಕಾಲಬುಡದಲ್ಲಿ ದಿಕ್ಕಾಪಾಲಾಗಿ ಬಿದ್ದಿರುವುದನ್ನು ನೋಡಿದರೆ ಕಣ್ಣು ತುಂಬಿ ಬರುತ್ತದೆ. ನಿಜವಾದ ದೇವರು ಹೀಗೆ ಅನಾಥವಾಗಿ ಬಿದ್ದಿರುವುದನ್ನು, ಆ ದೇವರು ಅಳುತ್ತಿರುವುದನ್ನು…”
ಗೋಪಿಗೆ ಎಪ್ಪತ್ತೈದು, ಗಾಂಡಲೀನಳಿಗೆ ಐವತ್ತಾಯ್ತು
ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ‘ಗೋಪಿ ಮತ್ತು ಗಾಂಡಲೀನ’ ಕವನ ಸಂಕಲನಕ್ಕೆ ಇದೀಗ 50 ವರ್ಷ. ಮೋಹವೂ, ನೀತಿಯೂ ಹದವಾಗಿ ಮೇಳೈಸಿರುವ ‘ಗೋಪಿ ಮತ್ತು ಗಾಂಡಲೀನ’ ಕೇವಲ ಕವಿತೆಯೆಂಬ ಚೌಕಟ್ಟಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ಪಾಶ್ಚಾತ್ಯ ಸಂಸ್ಕೃತಿಯೊಂದಕ್ಕೆ ಅದು ಪ್ರತಿಕ್ರಿಯೆ ಎಂದು ಕೆಲವರಿಗೆ ಅನಿಸಿದರೆ, ಹರೆಯದ ಭಾವಗಳನ್ನು ಬಂಧಿಸಿದ ಸಾಲುಗಳೆಂದು..”
ವಿಳಾಸ ಕಳೆದುಕೊಳ್ಳುವ ಪುಟ್ಟ ಮಕ್ಕಳು
ಕಳೆದವರ್ಷ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಹೇರಿದ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರಿ ವಸತಿ ಶಾಲೆಗಳಿಂದ ಮನೆಗೆ ಮರಳಿ ಮಕ್ಕಳು ಎಲ್ಲಿ ಹೋದರು.. ತುಸು ಬೆಚ್ಚನೆಯ ಮನೆಯಿದ್ದವರು ಅಪ್ಪಅಮ್ಮನ ಕಾಳಜಿಯಲ್ಲಿ ದಿನ ದೂಡುವುದು ಸಾಧ್ಯವಾದರೆ, ಲಾಕ್ ಡೌನ್ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಕಂಗಾಲಾದ ಕುಟುಂಬಗಳಲ್ಲಿ ಮಕ್ಕಳು ತಾವೂ ದುಡಿಮೆಗೆ ನಿಲ್ಲುವುದು ಅನಿವಾರ್ಯವಾಯಿತು.”









