ಅಮ್ಮ ಮತ್ತು ಹುಣ್ಣಿಮೆ: ಸುಧಾ ಆಡುಕಳ ಬರಹ
ಪ್ರತಿದಿನ ಸ್ನಾನಮಾಡಿ ಬಂದಕೂಡಲೇ ಅಮ್ಮ ಮುಖದ ತುಂಬ ಪಾಂಡ್ಸ್ ಪೌಡರನ್ನು ಢಾಳಾಗಿ ಹಚ್ಚಿಕೊಳ್ಳುತ್ತಿದ್ದಳು. ಅಶ್ವತ್ಥದ ಎಲೆಯಾಕಾರದಲ್ಲಿ ಕಾಡಿಗೆಯನ್ನು ಚಂದಗೆ ಬೊಟ್ಟಾಗಿಸುತ್ತಿದ್ದಳು. ಎಲ್ಲರಂತೆ ಕುಂಕುಮವನ್ನು ಹಣೆಗೆ, ತಾಳಿಗೆ ಹಚ್ಚಿಕೊಳ್ಳದೇ ತುಟಿಗೆ ನವಿರಾಗಿ ಲೇಪಿಸಿಕೊಳ್ಳುತ್ತಿದ್ದಳು. ಎಲ್ಲವೂ ಮುಗಿದು ಕನ್ನಡಿಯಲೊಮ್ಮೆ ಇಣುಕುವಾಗ ಅವಳ ಮುಖದಲ್ಲೊಂದು ಹೂ-ನಗೆಯಿರುತ್ತಿತ್ತು.
ಇಪ್ಪತ್ತೊಂಭತ್ತು ವರ್ಷಗಳ ಹಿಂದೆ ಹುಣ್ಣಿಮೆಯ ರಾತ್ರಿ ತೀರಿಕೊಂಡ ತಮ್ಮ ತಾಯಿಯ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ
ತಾಕಲಾಟಗಳ ಮೌನದಲ್ಲಿ ಮೂಡಿದ ವಸಂತ: ನಾರಾಯಣ ಯಾಜಿ ಬರಹ
ಚರ್ಚಿನಲ್ಲಿ ಹಾಡಿದ ಮಗಳು ರೈಲಿನ ಟಿಕೆಟ್ಟಿಗೆ ಹಣ ಕೂಡಿಟ್ಟಿದ್ದನ್ನು ತಿಳಿದಾಗ ಅದನ್ನು ದೆವ್ವವೆನ್ನುವಂತೆ ದೂರ ಎಸೆಯುವ ಅಸಹಾಯಕತೆ ಮತ್ತು ಉಮ್ಮಳಿಸುವ ದುಃಖ, ಕೋಪಬಂದರೂ ಅಜ್ಜನ ಭಾವನೆಯನ್ನು ಅರ್ಥಮಾಡಿಕೊಂಡು ಮೊಮ್ಮಗಳು ಒಳಗೊಳಗೇ ಅನುಭವಿಸುವ ತುಮುಲ ಇವೆಲ್ಲವನ್ನೂ ರಂಗದಲ್ಲಿ ತೆರೆದಿಡುವ ನಾಟಕದ ಕೊನೆಯಲ್ಲಿ ಮೊಮ್ಮಗಳು ಅಜ್ಜನನ್ನು ಒಪ್ಪಿಸಿ ಹೊರಟು ಹೋಗುವಾಗ ಮಗುವಿನ ಪ್ರತಿಭೆ ಕಾಡ ಬೆಳದಿಂಗಳಾಗಲಿಲ್ಲವಲ್ಲ ಎನ್ನುವ ನಿಟ್ಟಿಸಿರು, ಅಜ್ಜನ ಪಾಡು ಎಂಥದೋ ಎನ್ನುವ ನೋವು ಎರಡೂ ಕಾಡುತ್ತದೆ.
ಡಾ. ಶ್ರೀಪಾದ ಭಟ್ ನಿರ್ದೇಶನದ “ಮೌನ ಕಣಿವೆಯ ಹಾಡು” ನಾಟಕದ ಕುರಿತು ನಾರಾಯಣ ಯಾಜಿ ಬರಹ
ಮೌಲ್ಯಗಳು ಹಿಂದುಮುಂದಾಗುವ ಸಮಯದಲ್ಲಿ…: ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಬ್ಯಾಗ್ ತೆರೆದಾಗ ಅದರೊಳಗೆ ಕಂಡ ಕಂತೆ ಕಂತೆ ನೋಟುಗಳು ಒಂದು ಕ್ಷಣಕ್ಕೆ ಯೂಸುಫ್‌ನ ಅಂತರಂಗದ ನೈತಿಕತೆಯ ಪರೀಕ್ಷಾರಂಗವಾಗುತ್ತದೆ. ಈ ಹಣವನ್ನಿಟ್ಟುಕೊಂಡು ಮಗಳ ಮದುವೆ ಮಾಡಿಮುಗಿಸಬಹುದು ಎಂಬ ಯೋಚನೆ ಬಂದರೂ ಅದನ್ನು ಹತ್ತಿಕ್ಕಿಕೊಂಡು ಬ್ಯಾಗನ್ನು ಆ ಶ್ರೀಮಂತನಿಗೆ ಹಿಂದಿರುಗಿಸುವ ನಿರ್ಧಾರ ಮಾಡುತ್ತಾನೆ ಯೂಸುಫ್. ಅಂತೆಯೇ ಸಿರಿವಂತನ ಮನೆಯನ್ನು ಹುಡುಕಿಹೋಗಿ ಆ ಬ್ಯಾಗನ್ನು ಕೊಟ್ಟುಬರುತ್ತಾನೆ.
ಬದುಕಿನ ಮೌಲ್ಯಗಳ ಸುತ್ತ ಹೆಣೆದ ಕತೆಗಳ ಕುರಿತು ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ ನಿಮ್ಮ ಓದಿಗೆ
ಯುವಸಂಧಾನಕಿ ಅನಲೆ ಮತ್ತು ಯುದ್ಧವಿರೋಧಿ ಆ್ಯನ್: ಸುಮಾವೀಣಾ ಬರಹ
ನಮಗಿಲ್ಲಿ ಅನಲೆ ಯುದ್ಧದ ನೇರ ಭಾಗಿತ್ವದಿಂದ ನೋವನ್ನು ಅನುಭವಿಸಿ ಹೆಣ್ಣಿನ ಸಲುವಾದ ಹೋರಾಟವನ್ನು ಮಾಡಲು ಆಲೋಚಿಸಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ. ಆ್ಯನ್ ಫ್ರಾಂಕ್ ನೇರವಾಗಿ ಯುದ್ಧಕ್ಕೆ ಮುಖಾಮುಖಿಯಾಗದೆ ಇದ್ದರು ಎರಡನೆ ಮಹಾಯುದ್ಧದ ದುಷ್ಟಪರಿಣಾಮಕ್ಕೆ ಮುಖಾಮುಖಿಯಾಗುತ್ತಾಳೆ. ತನ್ನ ಜನಾಂಗಕ್ಕಾದ ಶೋಷಣೆಯನ್ನು ತನಗಾದ ಯಾತನೆಯನ್ನು ಅಳಿಸಲಾಗುವ ನಾಶಪಡಿಸಬಹುದಾದ ಕಾಗದದ ಮೆಲೆ ಭರವಸೆ ಇಟ್ಟು ಬರೆಯುವುದು ಸಾಧನೆಯೇ ಅನ್ನಿಸುತ್ತದೆ.
ಅನಲೆ ಹಾಗೂ ಆನ್ ಫ್ರಾಂಕ್ ಎಂಬ ಇಬ್ಬರು ವಿಶಿಷ್ಟ ವ್ಯಕ್ತಿಗಳ ಕುರಿತು ಸುಮಾವೀಣಾ ಬರಹ
“ಅವಳು….”: ಮಹಾಲಕ್ಷ್ಮೀ. ಕೆ. ಎನ್. ಬರಹ
ಅವಳಿಗೂ ಬುದ್ಧನಾಗುವ ಆಸೆ. ವೃಷ್ಟಿ ಅವಳು ಸಮಷ್ಟಿ, ಸೃಷ್ಟಿ ಉತ್ಪತ್ತಿಯ ಕಾರಣಕರ್ತೆ ಬುದ್ಧನಾದರೆ ಜಗವ ಪೋಷಿಸುವವರ್ಯಾರು? ತ್ಯಜಿಸಿ ಹೊರಟರೆ ಅಮ್ಮನಾಗಿ ಪಾಲಿಸುವವರ್ಯಾರು? ಒತ್ತಾಸೆಯಾಗುವ ಅವಳು ಹೊರಟುಬಿಟ್ಟರೆ ಭೂಮಿ ಬಂಜರಲ್ಲವೇ?
ಮಹಾಲಕ್ಷ್ಮೀ ಕೆ.ಎನ್. ಬರಹ ನಿಮ್ಮ ಓದಿಗೆ
ಸೋಲೋ, ಗೆಲುವೋ ಸಾಗುವುದೇ ಹಾದಿ: ಡಿ. ಯಶೋದಾ ಬರಹ
ಅವಳ ರಜೆ ಒಂದು ತಿಂಗಳು ಮುಗಿಯುತ್ತಿದ್ದಂತೆ ಕಚೇರಿಯಿಂದ ಫೋನ್ ಬರಲು ಶುರುವಾಯಿತು, ನೀವು ತಕ್ಷಣ ಬಂದು ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ಆದೇಶ. ಇವಳಿಗೆ ಆಶ್ಚರ್ಯ ತನ್ನ ಎರಡು ತಿಂಗಳ ರಜೆ ಇನ್ನೂ ಮುಗಿದಿಲ್ಲ, ಮಗುವಿಗೆ ಕೇವಲ ಒಂದೇ ಒಂದು ತಿಂಗಳು, ಈ ಪರಿಸ್ಥಿತಿಯಲ್ಲಿ ಮಗುವನ್ನು ಬಿಟ್ಟು ಹೋಗೋದು ಹೇಗೆ? ಕಡೇಪಕ್ಷ ಇನ್ನೊಂದು ತಿಂಗಳು ಕಳೆದರೆ ಅಷ್ಟರಲ್ಲಿ ತಾನು ಮಗುವಿನ ಆರೈಕೆಗೆ ಬೇರೆ ವ್ಯವಸ್ಥೆ ಮಾಡಿ ಕೆಲಸಕ್ಕೆ ಬರಬಹುದು ಎಂದುಕೊಂಡು ಅದನ್ನೇ ಕಂಪೆನಿಯ ಮುಖ್ಯಸ್ಥರಿಗೆ ತಿಳಿಸಿದಳು. ಆದರೆ ಅವರು ಒಪ್ಪಲಿಲ್ಲ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಉದ್ಯೋಗಸ್ಥ ಮಹಿಳೆಯರ ಪಾಡಿನ ಕುರಿತು ಡಿ. ಯಶೋದಾ ಬರಹ
Managing assets with :Ledger Live software :on desktop
Protecting Your Ledger Seed Phrase from Security Threats Ledger seed phrase security Store your Ledger seed phrase in a secure, offline location. Use a safe or a fireproof box to keep it away from potential theft or damage. Avoid situations where someone can access...
ಅನಾಯಾಸೇನ ಮರಣಂ……: ವಸಂತಕುಮಾರ್ ಕಲ್ಯಾಣಿ ಪ್ರಬಂಧ
ಹೊರಗೆ ಬಂದು, ರಿಸೆಪ್ಷನಿಸ್ಟ್ ಲೆಕ್ಕ ಹಾಕಿ, “ಇನ್ನು ಎಂಟುನೂರು ಕಟ್ಟಿ ಸಾಕು” ಎಂದು ಔದಾರ್ಯ ತೋರಿ, ಅದರಂತೆ ಮಾಡಿ ಹೊರ ಬಂದಾಗ ನನ್ನ ಹೆಂಡತಿ ತುಂಬಾ ಖುಷಿಯಲ್ಲಿದ್ದಳು. “ಸದ್ಯ ದೇವರು ಕಾಪಾಡಿದ, ನೀವು ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ. ಡಾಕ್ಟರ್ ತುಂಬಾ ಒಳ್ಳೆಯವರು, ಬೇರೆಯವರಿಗೂ ರೆಕಮೆಂಡ್ ಮಾಡಬಹುದು. ಇನ್ನು ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ.” ಹೀಗೆ ಸತತವಾಗಿ ಹೇಳಿ, ನಾನು ಎಲ್ಲದಕ್ಕೂ ತಲೆಯಾಡಿಸಿ “ಆರು ಸಾವಿರ ಅಂದಿದ್ದರೆ ಸುಮ್ಮನೆ ಕೊಡುತ್ತಿದ್ದೆವು, ಇನ್ನೂರು ಉಳಿದಿದೆಯಲ್ಲ ಅದರಲ್ಲಿ ಸ್ವೀಟ್ ತಗೊಂಡು ಹೋಗೋಣ” ಎಂದಾಗ ಅದಕ್ಕೂ ತಲೆಯಾಡಿಸಿದೆ.
ವಸಂತಕುಮಾರ್ ಕಲ್ಯಾಣಿ ಪ್ರಬಂಧ “ಅನಾಯಾಸೇನ ಮರಣಂ…”
ನಮ್ಮೂರ ಮಳೆಗಾಲದ ರಸದೌತಣ: ಭವ್ಯ ಟಿ.ಎಸ್. ಬರಹ
ವಿದ್ಯುತ್ ಇಲ್ಲದ ರಾತ್ರಿಗಳು, ನೆಟ್ವರ್ಕ್ ಇಲ್ಲದೆ ಲೋಕದ ಸಂಪರ್ಕ ಕಡಿದುಕೊಂಡ ಹಗಲುಗಳು. ಇದ್ದಕ್ಕಿದ್ದಂತೆ ಬೀಸುವ ಬಿರುಗಾಳಿ, ಉರುಳಿ ಬೀಳುವ ಮರಗಳು. ಕುಸಿದು ಬೀಳುವ ಗುಡ್ಡ. ಹೀಗೆ ಮಳೆ ಎಂದರೆ ಸಂತಸ, ಸೌಂದರ್ಯಗಳ ಜೊತೆಗೆ ಭಯಾನಕತೆಗಳ ಸಂಮಿಶ್ರಣ. ಕೆಲವೊಮ್ಮೆ ಈ ಮಳೆ ಜಿಗುಪ್ಸೆ ಬೇಸರವೆನಿಸಿದ್ದೂ ಇದೆ. ಆದರೆ ಮತ್ತೆ ಮತ್ತೆ ಈ ಮನ ಪ್ರತಿ ವರ್ಷದ ವರ್ಷಧಾರೆಗೆ ಹಪಹಪಿಸುತ್ತದೆ.
ಮಲೆನಾಡಿನ ಮಳೆಯ ದಿನಗಳ ಕುರಿತು ಭವ್ಯ ಟಿ.ಎಸ್. ಬರಹ ನಿಮ್ಮ ಓದಿಗೆ








