ಐಕ್ಯಗಾನ ಮೊಳಗಿಸಿದ, ಜನಪರ ಕವಿ ಕಯ್ಯಾರ ಕಿಞ್ಞಣ್ಣ ರೈ
1933 ರ ಹೊತ್ತಿಗಾಗಲೇ ಹದಿನೆಂಟರ ಯುವಕ ಕಯ್ಯಾರರು ಒಳ್ಳೆಯ ಕವಿಯಾಗಿ ಗುರುತಿಸಿಕೊಂಡದ್ದಕ್ಕೆ ಒಂದು ಉದಾಹರಣೆ: ಪುತ್ತೂರಿನಲ್ಲಿ ಕಾರಂತರು ನಡೆಸುತ್ತಿದ್ದ ನಾಡಹಬ್ಬದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಅವರು ‘ಊರ್ಮಿಳಾ’ ಎಂಬ ಕವನ ಓದಿದರು. ಅದನ್ನು ಕೇಳಿದ ಬೇಂದ್ರೆಯವರು ಕಯ್ಯಾರ ಅವರಿಂದ ಇನ್ನೊಂದುಕವಿತೆಯನ್ನು ಓದಿಸಿದರು.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.
ಭರಣಿ ಕೃತಿಕೆ ನಂಬಿದ ಅಪ್ಪ, ಪಡಿಪಾಟಲು ಅನುಭವಿಸಿದ ನಾನು
ಊರಿನಿಂದ ಬೆಳಿಗ್ಗೆ ಪ್ರಯಾಣಮಾಡಿ ಕಾಲೇಜಿನಲ್ಲಿ ಓಡಾಟ, ಹಾಸ್ಟೆಲ್ಲಿನ ಜಂಜಾಟ, ಎಲ್ಲಾ ಆಗುವಾಗ ಅಂದು ರಾತ್ರಿ ನನಗೆ ಬಂದದ್ದು ತಡೆಯಲಾರದ ತಲೆನೋವು. ಪರಿಚಯ ಇಲ್ಲದ ಜನ, ಗೊತ್ತಿಲ್ಲದ ಮನೆ.. ಇತ್ತ ತಲೆನೋವು ಜೋರಾಗಿ ವಾಂತಿ ಬರುತ್ತಿದೆ. ಯಾರಲ್ಲಿ ಹೇಳಿಕೊಳ್ಳುವುದು ನನ್ನ ಪರಿಸ್ಥಿತಿ. ಬಾತ್ರೂಮಿನಲ್ಲಿ ಹೋಗಿ ವಾಂತಿ ಮಾಡುತ್ತಿದ್ದ ನನ್ನನ್ನು ಕಂಡ ದೊಡ್ಡಗೌಡ್ರು ಕೂಡಲೇ ಬಂದು ನನ್ನ ತಲೆಯನ್ನು ಹಿಡಿದುಕೊಂಡರು. ಸ್ವಲ್ಪ ಹೊತ್ತಿಗೆ ವಾಂತಿ ಆಗಿ ತಲೆನೋವು ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಪಾಪದ ಜನ ಅವರು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’
ಸ್ನೇಹದ ದೋಣಿಯಲಿ ಆನೆಗಳ ನೆನಪಿನ ಪಯಣ
ಜೆನ್ನಿ ಮತ್ತು ಷರ್ಲಿ ಒಂದೇ ಲಾಯದಲ್ಲಿದ್ದರೂ, ಅಕ್ಕ-ಪಕ್ಕದ ಸ್ಟಾಲ್ಗಳಲ್ಲಿ ಇರಲಿಲ್ಲ. ಮಧ್ಯದಲ್ಲಿ ಕಬ್ಬಿಣದ ಗೇಟುಗಳು ಇದ್ದವು. ಜೆನ್ನಿಯ ಚಡಪಡಿಕೆಯನ್ನು ಕೇಳಿದ ಷರ್ಲಿ ತಾನೂ ಚಡಪಡಿಸತೊಡಗಿದಳು. ತಮ್ಮ ಸ್ಟಾಲ್ಗಳ ನಡುವೆ ಇದ್ದ ಗೇಟುಗಳ ಸಂದಿಗಳ ಮೂಲಕ ತಮ್ಮ ಸೊಂಡಿಲುಗಳನ್ನು ಚಾಚಿ ಹೇಗಾದರೂ ಮಾಡಿ ಒಂದನ್ನೊಂದು ಮುಟ್ಟಲು ಎರಡೂ ಆನೆಗಳು ಪ್ರಯತ್ನ ಪಡಲಾರಂಭಿಸಿದವು. ಗೇಟುಗಳ ತಳ್ಳುವಿಕೆ, ಜೋರಾದ ಘರ್ಜನೆ-ಘೀಳಿಡುವಿಕೆಗಳೂ ಪ್ರಾರಂಭವಾದವು.
ಅಲ್ಲೀಬಾದಿಯ ಋಣ ತೀರಿತು
ಹಳ್ಳಿಯ ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚಿಗೆ ದುಡಿಯುತ್ತಿದ್ದರು. ಅವರು ಹೊಲದ ಕೆಲಸದ ಜೊತೆ ಮನೆಯ ಕೆಲಸವನ್ನೂ ಮಾಡಬೇಕಾಗಿತ್ತು. ತುರಿಸಿಕೊಳ್ಳಲೂ ಸಮಯವಿಲ್ಲದ ಬದುಕು ಅವರದು. ರಾತ್ರಿಯಲ್ಲಿ ಅವರು ಬೇರೆ ಹೆಂಗಸರ ಜೊತೆಗೂಡಿ ಬಯಲುಕಡೆಗೆ ಹೊರಟಾಗ ಮಾತ್ರ ಊರ ಸುದ್ದಿ ಮಾಡನಾಡಲು ಅವಕಾಶ ಸಿಗುತ್ತಿತ್ತು! ಜೊತೆಗೂಡಿ ಗುಡಿಗೆ ಇಲ್ಲವೆ ದರ್ಗಾಕ್ಕೆ ಹೋಗುವುದು ಅವರ ಖಾಸಗಿತನಕ್ಕೆ ಪೂರಕವಾಗಿತ್ತು. ಮನೆಗೆ‘ಅರಿಷಿಣ ಕುಂಕುಮ’ ಕೊಡಲು ಹೋಗುವ ಸಂದರ್ಭದಲಿ ಅವರು ತಮ್ಮ ಓರಿಗೆಯ ಹೆಣ್ಣುಮಕ್ಕಳನ್ನು ಭೇಟಿಯಾಗುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ಸರಣಿಯ ಎಂಟನೆಯ ಕಂತು.
ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಫ್ರಾನ್ಸ್ ನ ʻಕ್ಯಾಶ್ʼ ಸಿನಿಮಾ
ಈ ಚಿತ್ರದ ಕಥಾಹಂದರ ನವೀನ ಮತ್ತು ಸಂಕೀರ್ಣ ಸ್ವರೂಪದ್ದು. ಪ್ಯಾರಿಸ್ನಲ್ಲಿ ಟಿವಿ ಕಂಪೆನಿಯಲ್ಲಿ ಸಾಹಿತ್ಯ ವಲಯದಲ್ಲಿನ ಪುಸ್ತಕಗಳನ್ನು ಕುರಿತಂತೆ ಕೆಲಸ ಮಾಡುವ ಜಾರ್ಜ್, ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಂಡತಿ ಆನ್ ಮತ್ತು ಮಗ ಫಿರಟ್ ಜತೆಗೂಡಿ ಮಧ್ಯಮ ದರ್ಜೆಯ ಮೇಲ್ವರ್ಗದ ಜೀವನ ನಡೆಸುತ್ತಿರುತ್ತಾನೆ. ಅವನಿಗೆ ಯಾರೋ ಗುಪ್ತವಾಗಿರಿಸಿದ ಕ್ಯಾಮೆರಾದಿಂದ ಅವನ ಮನೆ ಇತ್ಯಾದಿಯ ವಿಡಿಯೋ ಟೇಪುಗಳನ್ನು ಕಳಿಸುತ್ತಿರುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಫ್ರಾನ್ಸ್ ನ ʻಕ್ಯಾಶ್ʼ(ಹಿಡನ್) ಸಿನಿಮಾದ ವಿಶ್ಲೇಷಣೆ
ಚಂದ್ರನ ಬೆಳಕು ಜೀರುಂಡೆಯ ಜೋಗುಳದಲ್ಲೊಂದು ನಿದ್ದೆ
ಎರಡ್ಮೂರು ಬಾರಿ ಆ ಶಬ್ದ ಆವರ್ತನೆಯಾಯಿತು. ಹಿಂದಿರುಗಿ ನೋಡಿದ. ಮತ್ತೆ “ಶ್ಶ್-ಶ್ಶ್” ಶಬ್ದ ಮತ್ತೆ ಕೇಳುತ್ತಿದೆ. ಇದಿನಬ್ಬನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವ. ಇನ್ನೇನು ಮಾಡುವುದೆಂದು ತೋಚದೆ ಕತ್ತಲಲ್ಲಿ ಬೆಕ್ಕಿನಂತೆ ಮೆಲ್ಲಗೆ ಮುಂದಡಿಟ್ಟ. ಆಗ ಕಂಡ ದೃಶ್ಯ ಎಂಥವನ ಎದೆಯಲ್ಲೂ ನಡುಕ ಹುಟ್ಟಿಸುವಷ್ಟು ಭಯಾನಕವಾಗಿತ್ತು. ಹೆಬ್ಬಾವಿನ ಗಾತ್ರದ ಕೊಳಕು ಮಂಡಲ ಹಾವೊಂದು ಲಾಟೀನು ಬೆಳಕಿಗೆ ಬುಸುಗುಡುತ್ತಿದೆ. -ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಾದಂಬರಿಯ ಆರನೇ ಕಂತು.
ಅಪರಾಧ ಮತ್ತು ಶಿಕ್ಷೆ: ಮಾಡಿದ ಪಾಪಕ್ಕೆ….
ರಾಸ್ಕೋಲ್ನಿಕೋವ್ ಗುರಿ ಇಲ್ಲದೆ ಅಲೆದ. ಸೂರ್ಯ ಮುಳುಗುತ್ತಿದ್ದ. ಎಂಥದೋ ದುಃಖ ಅವನನ್ನು ಇತ್ತೀಚೆಗೆ ಕಾಡುತ್ತಿತ್ತು ಅದೊಂದು ಥರ ದುಶ್ಶಕುನದಂಥ ದುಃಖ. ಒಂದು ಚದರಗಜ ಜಾಗದಲ್ಲಿ ನಿಂತು ಕೊನೆಯಿರದ ದುಃಖವನ್ನು ಅನಂತವಾಗಿ ಅನುಭವಿಸುತ್ತಲೇ ಇರಬೇಕಾದೀತು ಅನ್ನುವಂಥ ಕೆಟ್ಟಶಕುನ ನುಡಿಯುತ್ತಿದೆ ಅನಿಸುವಂಥ ದುಃಖ. ಸಂಜೆಯ ಹೊತ್ತಿನಲ್ಲಿ ಇಂಥ ಭಾವ ಸಾಮಾನ್ಯವಾಗಿ ಅವನ ಮನಸ್ಸನ್ನು ಕವಿದುಕೊಳ್ಳುತ್ತಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.
ಕೋಮಲ ಗಾಂಧಾರ ಮತ್ತು ಪರ್ದಾ
ಕರೀಂ ಖಾನ್ ಮತ್ತು ಮಕ್ಕಳು ಬಳಸುವ ಸಿತಾರ್ನಲ್ಲಿ ೧೯ ಪರ್ದಾಗಳೇ ಇವೆ. ಯಾಕೆ ಇವರು ಇನ್ನೂ ಆಧುನಿಕತೆಯನ್ನು ಒಪ್ಪಿಕೊಂಡಿಲ್ಲ ಎಂದು ಎಲ್ಲರೂ ಕೇಳತೊಡಗಿದ್ದರು. ಕರೀಂ ಖಾನರಿಗೆ ಈ ಪ್ರಶ್ನೆ ಇಷ್ಟವಾಗುತ್ತಿರಲಿಲ್ಲ. ಆದರೆ ರಫೀಕ್ ಮತ್ತು ಶಫೀಕ್ ಈ ಕುರಿತು ಬಹಳಷ್ಟು ಚರ್ಚೆ, ಅಧ್ಯಯನ, ಪ್ರಯೋಗಗಳನ್ನು ಮಾಡಿದರು. ಹೊಸವಿಧಾನವನ್ನು ಒಪ್ಪಿಕೊಳ್ಳುವುದು ಸರಳವಾದ ವಿಚಾರ ಆಗಿರಲಿಲ್ಲ.
ಶೇಣಿ ಮುರಳಿ ಬರೆದ ರಫೀಕ್ ಖಾನ್ ಜೀವನ ಚರಿತ್ರೆ ‘ಖಾನ್ ಕಾಂಪೌಂಡ್’ ಕೃತಿಯ ಒಂದು ಅಧ್ಯಾಯ
ಮದುವೆ, ಮಜಾ ಹಾಗೂ ಮೂವತ್ತು ದಾಟಿದ ಜವ್ವನಿಗರು
ಸಂತಿಯೇನೂ ತಾನು ಮದುವೆಯಾಗಲ್ಲ ಎಂದವನಲ್ಲ, ಆದರೆ ಕೇರಿಯೊಳಗೆ ಇನ್ನೇನು ನಾಳೆಯೋ ನಾಡಿದ್ದೋ ಬಿದ್ದು ಹೋಗುವುದೆಂಬಷ್ಟು ಹಳೆಯ ಮನೆಯೊಂದನ್ನು ಬಿಟ್ಟು ಯಾವುದೇ ಆಸ್ತಿಪಾಸ್ತಿ ಇಲ್ಲದ, ನೋಡಲು ತೊಳೆದ ಕೆಂಡದಂತೆ ಮುಟ್ಟಿದರೆ ಕೈಗೆ ಹತ್ತುವಷ್ಟು ಕಪ್ಪುಬಣ್ಣಕ್ಕಿದ್ದ. ಸಂತಿಗೆ ಸರಿಯಾದ ಕೆಲಸವೂ ಇರಲಿಲ್ಲವಲ್ಲಾ.. ಹೀಗೆ ಎಲ್ಲದರಲ್ಲೂ ನಪಾಸಾದ ಸಂತಿಯ ಕರ್ಮಕ್ಕೆ ಕಲಶವಿಟ್ಟಂತೆ ನಕ್ಕರೆ ಮುಂದಿದ್ದವರಿಗೆ ಚುಚ್ಚುವಷ್ಟು ಉಬ್ಬುಹಲ್ಲು ಬೇರೆ!
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ









