ಪ್ರಯೋಗಾಲಯದಲ್ಲಿ ಕೋಳಿಮೊಟ್ಟೆ ಸ್ವಾಹಾ
ಅಂಗಡಿಯ ಭಟ್ರಿಗೆ ಮೊಟ್ಟೆಕೊಂಡು ಹೋದವರು ಯಾರೆಂದು ಗುರುತಿಸುವುದೇ ಕಷ್ಟವಾಯಿತು. ರಫೀಕ್ ನನ್ನು ತೋರಿಸಿ, ‘ಇವನೇ ಕೊಂಡುಹೋಗಿದ್ದ’ ಎಂದರು. ‘ನಾನಲ್ಲ’ ಎಂಬ ಉತ್ತರ ಬಂದ ಕೂಡಲೇ ಶಫೀಕ್ ನನ್ನು ತೋರಿಸಿ, ‘ಇವನೇ ಇವನೇ’ ಎಂದರು. ಶಫೀಕ್ ಕೂಡ ನಾನಲ್ಲ ಎನ್ನಬೇಕೇ. ಅವಳಿಜವಳಿ ಮಕ್ಕಳು ಸೇರಿ ಅಂಗಡಿ ಭಟ್ರಿಗೆ ಚಳ್ಳೇಹಣ್ಣು ತಿನ್ನಿಸಿ ಓಡಿದ್ದರು.”
ʻಲೋಕ ಸಿನಿಮಾ ಟಾಕೀಸ್ʼ ನಲ್ಲಿ ತೈವಾನ್ ನ ʻಯಿ ಯಿʼ ಸಿನಿಮಾ
ಒಂದರಿಂದ ಬಿಡಿಸಿಕೊಂಡು ಮತ್ತೊಂದಕ್ಕೆ ಪ್ರವೇಶ ಮಾಡಲು ಸಾಧ್ಯವೇ ಎನ್ನುವುದರ ಗೊಂದಲ ಮತ್ತು ಆತಂಕ ಎಲ್ಲವೂ ಅವುಗಳ ಸೂಕ್ಷ್ಮ ಅಭಿನಯದಲ್ಲಿ ವ್ಯಕ್ತವಾಗುತ್ತದೆ. ಸದ್ಯದ ಸಂದರ್ಭದಲ್ಲಿ ಜೀವನದ ಒಂದು ನೆಲೆಯನ್ನು ಬದಿಗಿಟ್ಟು ಮತ್ತೊಂದನ್ನು ರೂಪಿಸಿಕೊಳ್ಳುವ ಶಕ್ತಿ ಮತ್ತು ಅದು ಎಟುಕುವ ರೀತಿಯಲ್ಲಿ ಇದೆಯೇ ಎನ್ನುವ ಪ್ರಶ್ನೆ ಅವಳಿಗೆ.”
ಜಾತಿಯೆಂಬ ತಡೆರೇಖೆಗಳನ್ನು ದಾಟಿಕೊಂಡು..
ಬಾಬು ಮಾಮಾನ ಗೆಳೆಯನೊಬ್ಬ ನನ್ನನ್ನು ಪ್ರೀತಿಯಿಂದ ಕಾಣುತ್ತಿದ್ದ. ಎತ್ತಿ ಆಡಿಸುತ್ತಿದ್ದ. ಆತನೊಮ್ಮೆ ಬಾವಿಯಿಂದ ನೀರು ತುಂಬಿಕೊಂಡು ಹೋಗುತ್ತಿದ್ದುದು ಕಾಣಿಸಿತು. ಅವನನ್ನು ಕಂಡೊಡನೆ ಖುಷಿಯಿಂದ ಅವನ ಹಿಂದೆ ಓಡಿದೆ. ಅವನ ಹಳದಿ ರುಮಾಲಿನ ಚುಂಗವನ್ನು ಹಿಡಿದು ‘ಮಾಮಾ’ ಎಂದು ಕೂಗಿದೆ. ಆತನಿಗೆ ಬಹಳ ಸಿಟ್ಟು ಬಂದಿತು. ನನ್ನ ಕಪಾಳಿಗೆ ಹೊಡೆದು ರಸ್ತೆ ಮೇಲೆ ನೀರು ಚೆಲ್ಲಿ ಮತ್ತೆ ಕೊಡ ತುಂಬಲು ಬಾವಿಯ ಮೆಟ್ಟಿಲುಗಳನ್ನು ಇಳಿಯ ತೊಡಗಿದ.”
ಪಾತ್ರೆಗಳ ರಾಶಿ, ಕಾಡುನಡುಗಿಸುವ ಹುಲಿಗರ್ಜನೆ
ಒಳಗೇನೋ ಕೆಲಸದಲ್ಲಿ ನಿರತರಾಗಿದ್ದ ಹಲೀಮಾರು ಪೆರ್ನುವನ್ನು ನೋಡಿ ಹೊರಗೆ ಬಂದರು. ಇದಿನಬ್ಬ ತನ್ನಕ್ಕನ ಮನೆಯಲ್ಲಿ ಇಲ್ಲ ಎಂಬ ವಿಷಯ ಕೇಳಿದ ಕೂಡಲೇ ಹಲೀಮಾ ಕುಸಿದು ಕುಳಿತರು. ಮಗನ ಮುಖ ಒಮ್ಮೆಯಾದರೂ ನೋಡಬೇಕು ಎಂಬ ಆಸೆಯಿಂದ ಅವರ ಮಾತೃಹೃದಯ ನೋಯತೊಡಗಿತು.
ಮುನವ್ವರ್ ಜೋಗಿಬೆಟ್ಟು ಬರೆಯುವ ‘ಡರ್ಬನ್ ಇದಿನಬ್ಬ’ ಕಿರು ಕಾದಂಬರಿಯ ಮೂರನೆಯ ಕಂತು.
ಅಚ್ಚಗನ್ನಡದ ಹರಿಕಾರ ಮುಳಿಯ ತಿಮ್ಮಪ್ಪಯ್ಯ
ತಮ್ಮ ವಿಮರ್ಶೆಯ ಕೃತಿಗಳಲ್ಲಿ ಮುಳಿಯ ತಿಮ್ಮಪ್ಪಯ್ಯನವರು ತೋರಿಸಿಕೊಟ್ಟ ದೇಸೀ ವಿಮರ್ಶೆಯ ಮಾರ್ಗದ ಮಹತ್ವವನ್ನು ಕೂಡ ಸರಿಯಾಗಿ ಗುರುತಿಸಲಾಗಿಲ್ಲ. ಉದಾಹರಣೆಗೆ ಅವರು ಪಂಪನ ‘ಆದಿಪುರಾಣ’ವು ರಸಕಾವ್ಯ, ‘ವಿಕ್ರಮಾರ್ಜುನ ವಿಜಯ’ವು ಶೀಲ ಪ್ರತಿಪಾದನೆಯ ಕಾವ್ಯ ಎಂದು ಗುರುತಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತೀಯ ಕಾವ್ಯಮೀಮಾಂಸೆಯನ್ನು ಅರಗಿಸಿಕೊಂಡವರ ಒಳನೋಟ ಇದು. ಅಲ್ಲದೆ ಅರಿಸ್ಟಾಟಲ್ ಕೂಡ ‘ಇಥೋಸ್’ ಅನ್ನುವುದನ್ನು…”
ಡಾಕ್ಟರ್ ಸೂರ್ಯ ಕುಮಾರ್ ನೆನಪುಗಳ ಮೆರವಣಿಗೆ ಇಂದಿನಿಂದ
ಜನನ ಮರಣಗಳನ್ನೆರಡನ್ನೂ ನೋಡುವ ವೈದ್ಯ ವೃತ್ತಿ ಇತರ ವೃತ್ತಿಗಳಿಂದ ವಿಭಿನ್ನವಾದುದು. ವಿಧಿ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರಂತೂ ಎಷ್ಟೋ ನ್ಯಾಯದಾನ ಪ್ರಕ್ರಿಯೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವವರು. ಕೊಡಗಿನ ವೈದ್ಯ ಡಾ. ಕೆ.ಬಿ. ಸೂರ್ಯಕುಮಾರ್ ಅಂತಹ ವೃತ್ತಿಯಲ್ಲಿ ಸಂತೋಷ ಕಾಣುವವರು. ಅವರು ‘ನೆನಪುಗಳ ಮೆರವಣಿಗೆ’ ಅಂಕಣದಲ್ಲಿ ವೈದ್ಯಲೋಕದ ಕಥೆ ಹೇಳಲಿದ್ದಾರೆ.
ಮಡಿ, ಮೈಲಿಗೆ ಹಾಗೂ ಮೂರು ದಿನದ ನರಕ
ಮಾಮೂಲಿನಂತೆಯೇ ಅತಿಯಾಗಿರುತ್ತಿದ್ದ ಮಡಿ ಇನ್ನು ಹಬ್ಬದ ದಿನಗಳಲ್ಲಂತೂ ಕೇಳುವಂತಿರಲಿಲ್ಲ! ಕೋಳಿ ಕೂಗುವುದಕ್ಕೆ ಮುನ್ನವೇ ಅರೆಬೆತ್ತಲ ಒದ್ದೆ ಬಟ್ಟೆಯ ಸ್ನಾನ ಸಂಧ್ಯಾವಂದನೆಗಳು, ಇಳಿ ಮಧ್ಯಾಹ್ನದವರೆಗೂ ನಡೆಯುತ್ತಿದ್ದ ಸುದೀರ್ಘ ಪೂಜಾಕೈಂಕರ್ಯಗಳು, ಮಡಿಯುಟ್ಟು ಅಡುಗೆಮನೆ ಹೊಕ್ಕರೆ ಸತ್ತರೂ ಹೊರಗೆ ಬರಲಾರದೆ ಬೆವರಿನ ಮುದ್ದೆಯಾಗಿ ಚಡಪಡಿಸುತ್ತಿದ್ದ ಮನೆಯ ಹೆಂಗಸರು..”
ಜಾತಿಗಿಂತ ನೀತಿಗೇ ಹೆಚ್ಚಿನ ಬೆಲೆಯಿದ್ದ ಕಾಲ
ಬಯಲಾಟದಲ್ಲಿ ದ್ರೌಪದಿ ಪಾತ್ರದ ಗಣಪು ಬಂದು ಒಂದಿಷ್ಟು ಕುಣಿದು ಮಾತನಾಡುವಾಗ ಆತನ ಧ್ವನಿ ಒಡೆದದ್ದು ಗೊತ್ತಾಯಿತು. ರಂಗತಾಲೀಮದಲ್ಲಿ ಮಾತಾಡಿ ಮಾತಾಡಿ ಆತ ಧ್ವನಿ ಕಳೆದುಕೊಂಡಿದ್ದಾನೆಂದು ಅಜ್ಜಿ ನನಗೆ ಹೇಳಿದಳು. ಅಜ್ಜಿಯ ಲಕ್ಷ್ಯ ಹೆಚ್ಚಾಗಿ ಅವನಿಗೆ ಹಾರ ಹಾಕಿ ಒಂದು ರೂಪಾಯಿ ಬಹುಮಾನ ಕೊಡುವುದರ ಕಡೆಗೆ ಇತ್ತು. ಎರಡನೇ ಸಲ ರಂಗದ ಮೇಲೆ ಬಂದಾಗ ಹಾರ ಹಾಕಿ ಬಹುಮಾನ ಕೊಡುವುದಕ್ಕಾಗಿ..”
ಅಪರಾಧ ಮತ್ತು ಶಿಕ್ಷೆ: ನಮ್ಮಪ್ಪ ಗ್ರೇಟಾ.. ನಿಮ್ಮಪ್ಪ ಗ್ರೇಟಾ?
ಅವಳ ಮನೆಗೆ ಬಂದಿದ್ದ ಅತಿಥಿಗಳಲ್ಲಿ ಅವನೊಬ್ಬನೇ ‘ಸುಶಿಕ್ಷಿತ’. ‘ಎಲ್ಲರಿಗೂ ಗೊತ್ತಿರುವ ಹಾಗೆ ಈ ಊರಿನ ವಿಶ್ವವಿದ್ಯಾಲಯದಲ್ಲಿ ಇನ್ನೆರಡು ವರ್ಷಗಳೊಳಗೆ ಪ್ರೊಫೆಸರ್ ಹುದ್ದೆ ಪಡೆಯುತ್ತಾನೆ.’ ಎರಡನೆಯದಾಗಿ ತನಗೆ ಎಷ್ಟೇ ಮನಸಿದ್ದರೂ ಅಂತ್ಯ ಸಂಸ್ಕಾರಕ್ಕೆ ಬರಲಾಗಲಿಲ್ಲವೆಂದು ಅವಳ ಕ್ಷಮೆ ಕೋರಿದ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.









