ಅತಿಯಾದರೆ ಮುದ್ದೂ ವಿಷ…: ಅನುಸೂಯ ಯತೀಶ್ ಸರಣಿ
ರಸ್ತೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿದ್ದರೆ ಇವನು ಒಳಗೆ ಕುಳಿತು ಕಿಟಕಿಯಿಂದ ನೋಡಿ ಸಂಭ್ರಮಿಸುತ್ತಿದ್ದ. ಇದನ್ನೆಲ್ಲಾ ಇವನು ಕಣ್ಣಾರೆ ಕಂಡರೆ ನಾನು ಆಟದ ಬಯಲಿಗೆ ಹೋಗಬೇಕು, ಆಟವಾಡಬೇಕು ಎಂದು ಹಠ ಮಾಡುವನೆಂದು ಕಿಟಕಿ ಬಾಗಿಲುಗಳನ್ನು ಭದ್ರಪಡಿಸಿದೆವು. ನಾಲ್ಕು ಗೋಡೆಗಳ ನಡುವೆ ಬದುಕಿದ ಇವನಿಗೆ ಮೂರು ನಾಲ್ಕು ವರ್ಷವಾದರೂ ಹೊರ ಜಗತ್ತಿನ ಪರಿಚಯವಾಗಲಿಲ್ಲ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ
ಸರಳ ಮತ್ತು ನಿಷ್ಕಪಟ ಸ್ವರದ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ
ಅವರ ಅನೇಕ ಕವನಗಳ ಸರಳ ಮತ್ತು ನಿಷ್ಕಪಟ ಸ್ವರವು ಕಾಲ್ಪನಿಕ ಕಥೆಗಳು ಮತ್ತು ದಂತಕಥೆಗಳಿಗೆ ಹೆಚ್ಚು ಋಣಿಯಾಗಿದೆ, ಆದರೆ ಇತರ ಕವನಗಳಲ್ಲಿ ಇದು ನೇರವಾದ ಆದರೆ ಅತ್ಯಂತ ಸಾಮಾನ್ಯ ವಿಷಯಗಳ ಸೂಕ್ಷ್ಮ ವಿವರಣೆಯಾಗಿ ಮಾರ್ಪಡುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಸ್ವೀಡನ್ ದೇಶದ ಕವಿ ವೇರ್ನರ್ ಆಸ್ಪೆನ್‌ಸ್ತ್ರೋಮ್-ರ (Werner Aspenström, 1918–1997) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಮದ್ದು-ಗುಂಡುಗಳು ಮತ್ತು ಮಾಫಿಯಾ!: ಗುರುಪ್ರಸಾದ ಕುರ್ತಕೋಟಿ ಸರಣಿ
ನನಗಿಂತ ಎಷ್ಟೋ ವರ್ಷಗಳು ಕಿರಿಯನಾಗಿದ್ದರೂ ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿಂದ ಮಾತಾಡುತ್ತಿದ್ದ. ಒಳ್ಳೆಯ ಹೃದಯದವನೂ ಹೌದು. ಅವನ ಹೆಂಡತಿ ನಮ್ಮ ಹುಬ್ಬಳ್ಳಿಯವಳು.. ಹೀಗೆ ಗುಂಡಿನ ಹೊರತಾದ ಹಲವಾರು ಅಂಶಗಳೂ ನಮ್ಮನ್ನು ಬೆಸೆದಿದ್ದವು. ಚಾ ಕುಡಿಯೋಣ ಬಾ ಗುರಣ್ಣ ಅಂತ ಕರೆದರೆ ಟಕ್ ಅಂತ ಅವರ ಮನೆಗೆ ಹೋಗಿಬಿಡುತ್ತಿದ್ದೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ ಸರಣಿ
ನೆಮ್ಮದಿಗೆ ಭಂಗ ತಂದ ಪಚ್ಚಿಯ ಪ್ರಸಂಗ!!: ಬಸವನಗೌಡ ಹೆಬ್ಬಳಗೆರೆ ಸರಣಿ
ಸಮಯ ಸಂಜೆಯಾಗ್ತಾ ಬಂದಿತ್ತು. ಊಟ ಮುಗಿಸಿ ಅವನಿದ್ದ ಸ್ಥಳದ ಹತ್ತಿರ ಹೋದಾಗ ಅಲ್ಲಿ ಅವನಿರಲಿಲ್ಲ. ಆಗ ನಾನು ನನ್ನ ಪಾಡಿಗೆ ಗಾಯತ್ರಿ ಬಸ್ಸಿಗೆ ಬಂದೆ. ರಾತ್ರಿ ಸರಿಸುಮಾರು ಎಂಟು ಘಂಟೆಗೆ ಪಚ್ಚಿಯ ಆಂಟಿ ಮನೆಗೆ ಬಂದು ಪಚ್ಚಿಯ ಬಗ್ಗೆ ವಿಚಾರಿಸಿದರು. ನಡೆದ ಘಟನೆಯನ್ನು ವಿವರಿಸಿದೆ. ಆದರೆ ಅವರು ಅದನ್ನು ಕೇಳೋ ಪರಿಸ್ಥಿತೀಲಿ ಇರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಎಂಟನೆಯ ಕಂತು ನಿಮ್ಮ ಓದಿಗೆ
ಹೀಗಿದ್ದರು ನಮ್ಮ ಕೆ.ಎಚ್. ರಂಗನಾಥ: ರಂಜಾನ್ ದರ್ಗಾ ಸರಣಿ
ಅವರಿಗೆ ಸ್ವಂತ ಕಾರು ಇರಲಿಲ್ಲ. ಅವರ ಮಕ್ಕಳು ಸರ್ಕಾರಿ ಕಾರಿನಲ್ಲಿ ಎಂದೂ ಶಾಲೆಗೆ ಹೋಗಲಿಲ್ಲ. ನಾನು ಸೇರಿದ ಒಂದು ವರ್ಷದಲ್ಲಿ ಅವರು ಒಂದು ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರು ಕೊಂಡರು. ಆಗ ಅವರ ಮನೆಮಂದಿಯೆಲ್ಲ ಸಂಭ್ರಮಪಟ್ಟಿದ್ದು ಇಂದಿಗೂ ನೆನಪಿದೆ. ಅನೇಕ ವರ್ಷಗಳಿಂದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಅವರು ಮೊದಲ ಬಾರಿಗೆ ಕೊಂಡದ್ದು ಒಂದು ಹಳೆಯ ಕಾರನ್ನು!
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ
ಸೀರೆ ಎನ್ನುವ ಬೆರಗು: ಚಂದ್ರಮತಿ ಸೋಂದಾ ಸರಣಿ
ಜಗಳಕ್ಕೂ ಸೀರೆಗೂ ಏನು ಸಂಬಂಧ? ಸೀರೆಯ ಪ್ರಸ್ತಾಪ ಯಾಕಾಗಿ ಆಗುತ್ತದೆ? ಅವರಿಬ್ಬರ ಜಗಳಕ್ಕೆ ಮಾತ್ರ ಸೀರೆಯ ಪ್ರಸ್ತಾಪ ಸೀಮಿತವಲ್ಲ. ಕೆಲವೊಮ್ಮೆ ರಾಜಕಾರಣಿಗಳೂ ಹೀಗೆ ʻನಾನೇನು ಸೀರೆಯುಟ್ಟಿಲ್ಲʼ ಎಂದು ಹೇಳುವುದಿದೆ. ಹಾಗಾದರೆ ಸೀರೆ ಉಡುವುದು ಅವಮಾನವೇ? ಸೀರೆಗೂ ಪೌರುಷಕ್ಕೂ ಪರಸ್ಪರ ವಿರೋಧವೇ?
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹದಿನೈದನೆಯ ಕಂತಿನಲ್ಲಿ ಸೀರೆಯ ಕುರಿತ ಬರಹ ನಿಮ್ಮ ಓದಿಗೆ
ಮರೆಯಾದ ಮತ್ತಷ್ಟು ಕೆರೆಗಳ ಕತೆಗಳು: ಎಚ್. ಗೋಪಾಲಕೃಷ್ಣ ಸರಣಿ
ಈ ಹಳ್ಳದಲ್ಲಿ ಅಥವಾ ಕೆರೆಯಲ್ಲಿ ನೀರು ಇದ್ದದ್ದು ಈಗ ಬದುಕಿರುವವರಲ್ಲಿ ಯಾರೂ ನೋಡಿದ ಹಾಗೇ ಇಲ್ಲ. ಒಂದು ಮಾಹಿತಿ ಪ್ರಕಾರ ೧೯೩೦ ರಲ್ಲಿ ಇಲ್ಲಿಗೆ ನೀರು ಬರುವುದು ನಿಂತು ಹೋಯಿತು. ಯಾತಕ್ಕೆ ನಿಂತು ಹೋಯಿತು, ಯಾರು ನಿಲ್ಲಿಸಿದರು ಎನ್ನುವುದನ್ನು ಪತ್ತೆ ಮಾಡಬೇಕು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ
ಒಂದು “ಆಕ್ಸಿಡೆಂಟ್” ಕತೆ : ರಾಮ್ ಪ್ರಕಾಶ್ ರೈ ಕೆ. ಸರಣಿ
ಮೆದುಳು ಮತ್ತು ದೇಹದ ನಡುವಿನ ಸಂಪರ್ಕ ಕಡಿಮೆಯಾಗುತ್ತಿದ್ದಂತೆಯೇ, ವಾಹನದ ಹೆಜ್ಜೆ ಗಡಿ ರೇಖೆಗಳ ಎಲ್ಲೆ ಮೀರಿ ಸಾಗುತ್ತದೆ. ಕೊನೆಗೆ ಪಾದಚಾರಿ ಮಾರ್ಗದತ್ತ ಯಮನ ಅಮೂರ್ತರೂಪವಾಗಿ ನುಗ್ಗುತ್ತದೆ. ಅಲ್ಲಿ ಮಲಗಿದ್ದ, ಬೆವರಿನ ಮಳೆಯಲ್ಲೇ ಬದುಕು ಕಟ್ಟಿಕೊಳ್ಳುವ, ಅಂಗಿಗೆ ಕಿಸೆ ಸದಾ ಅಂಟಿಕೊಂಡೇ ಇರುವ ಜೀವಗಳ ಉಸಿರು ಅರೆಕ್ಷಣದಲ್ಲಿ ನಿಂತು ಹೋಗುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ
ಪುಷ್ಪನಗರಿ ಮಡಿಕೇರಿ: ಸುಮಾವೀಣಾ ಸರಣಿ
ದೇಸೀ ಹೂವಿನ ಬೆಳೆ ಈಗ ಸಾಕಷ್ಟು ಕಡಿಮೆಯಾಗಿದೆ. ಆದರೆ ಬೇಡಿಕೆ ಹೆಚ್ಚಾಗಿದೆ. ಹೀಗೆ ಮುಂದುವರೆದರೆ ಕೆಲವು ಪ್ರಾಣಿಗಳನ್ನು ಚಿತ್ರಗಳಲ್ಲಿ ನೋಡಬೇಕಾದ ಪರಿಸ್ಥಿತಿ ಬಂದಿರುವಂತೆ ಹೂಗಳಿಗೂ ಬರುತ್ತದೆ. ಹೂ ತೋಟದ ಕಲ್ಪನೆ ಗೌಣವಾಗಿದೆ. ಈಗ ಹೂ ಬಿಡದ ಗಿಡಗಳ ಅಲಂಕಾರ ಸೌಸವವಿಲ್ಲದ ಗಿಡಗಳ ಬಗ್ಗೆ ಒಲವು ಹೆಚ್ಚಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ









